Advertisment

ಜಾಲಿವುಡ್​ ಸ್ಟುಡಿಯೋಗೆ ಬೀಗ ಜಡಿದ ತಹಶೀಲ್ದಾರ್.. ಬಿಗ್​ ಬಾಸ್​ನಿಂದ ಹೊರ ಬಂದ ಎಲ್ಲ ಕಂಟೆಸ್ಟೆಂಟ್ಸ್​

ಜಾಲಿವುಡ್​ ಸ್ಟುಡಿಯೋಸ್ ಮತ್ತು ಎಂಟರ್​​ಟೇನ್​ಮೆಂಟ್ ಪ್ರೈವೇಟ್ ಲಿಮಿಟೆಡ್​ ಕಂಪನಿಯ ಮೇನ್​ ಡೋರ್​​ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದವರು ಬೀಗ ಹಾಕಿದ್ದಾರೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್​ ಸ್ಟುಡಿಯೋಸ್​ ಇದೆ.

author-image
Bhimappa
BIGG_BOSS_BEEGA
Advertisment

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​- 12 ಶೋ ನಡೆಸುತ್ತಿದ್ದ ಜಾಲಿವುಡ್​ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ಜಾಲಿವುಡ್​ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ಇದೀಗ ಸ್ಟುಡಿಯೋಗೆ ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಬೀಗ ಜಡಿದಿದ್ದಾರೆ. ಬಿಗ್ ಬಾಸ್​- 12ರ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಬರಲಾಗಿದೆ. 

Advertisment

BBK12

ಬಿಗ್​ ಬಾಸ್​ ಸೀಸನ್​- 12 ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕುತ್ತಿದ್ದಂತೆ ಸ್ಪರ್ಧಿಗಳಾದ ಕಾವ್ಯ ಶೈವ, ಗಿಲ್ಲಿ ನಟ, ಡಾಗ್​ ಸತೀಶ್,​ ಚಂದ್ರಪ್ರಭ, ಅಭಿಷೇಕ್​​, ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ, ಮಂಜು ಭಾಷಿಣಿ, ರಾಶಿಕಾ, ಕಾಕ್ರೋಚ್​ ಸುಧಿ, ಮಲ್ಲಮ್ಮ, ನಿರೂಪಕಿ ಜಾಹ್ನವಿ, ಧನುಷ್​ ಗೌಡ, ಮುದ್ದು ಲಕ್ಷ್ಮೀ ಖ್ಯಾತಿಯ ನಟ ಧ್ರುವಂತ್​, ನಟಿ ಅಶ್ವಿನಿ ಗೌಡ ಸೇರಿ ಎಲ್ಲರೂ ಒಬ್ಬೊಬ್ಬರೇ ಮನೆಯಿಂದ ಹೊರ ಬಂದಿದ್ದಾರೆ. 

ಇದನ್ನೂ ಓದಿ:ಡ್ಯಾಂ ನೀರಿಗೆ ಇಳಿದಿದ್ದ ಒಂದೇ ಕುಟುಂಬದ 8 ಜನ.. ಇಬ್ಬರ ಮೃತದೇಹ ಪತ್ತೆ, ನಾಲ್ವರು ಕಣ್ಮರೆ

ಜಾಲಿವುಡ್​ ಸ್ಟುಡಿಯೋಸ್ ಮತ್ತು ಎಂಟರ್​​ಟೇನ್​ಮೆಂಟ್ ಪ್ರೈವೇಟ್ ಲಿಮಿಟೆಡ್​ ಕಂಪನಿಯ ಮೇನ್​ ಡೋರ್​​ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದವರು ಬೀಗ ಹಾಕಿದ್ದಾರೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್​ ಸ್ಟುಡಿಯೋಸ್​ ಇದೆ. ಆದರೆ ಪರಿಸರ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ರಾಮನಗರದ ತಹಶೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿಯಲಾಗಿದೆ.  

Advertisment

varthuru and tansha

ಜಾಲಿವುಡ್​ನವರು ಬಿಗ್​ಬಾಸ್​ ಹಾಗೂ ಎಂಡೋಮಾಲ್, ಕಲರ್ಸ್​ ಅವರ ಜೊತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎನ್ನಲಾಗಿದೆ. ದೊಡ್ಡ ಬಜೆಟ್​ನಲ್ಲಿ ಮಾಡುವ ಕಾರ್ಯಕ್ರಮದ ಬಗ್ಗೆ ಕಲರ್ಸ್​ ಅವರು ಎಚ್ಚರಿಕೆ ವಹಿಸಬೇಕಿತ್ತು. ಇಂತಹ ಘಟನೆ ಯಾವಾಗಲೂ ನಡೆದಿರಲಿಲ್ಲ. ಕಳೆದ ಬಾರಿ ಸೀಸನ್​ 11ರಲ್ಲಿ ಹುಲಿ ಉಗುರು ಧರಿಸಿದ ಸಂಬಂಧ ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದರು. ಆದರೆ ಈ ಬಾರಿ ಎಲ್ಲ ಕಂಟೆಸ್ಟೆಂಟ್​ಗಳನ್ನು ದೊಡ್ಮನೆಯಿಂದ ಹೊರಗೆ ಹಾಕಲಾಗಿದೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kichcha Sudeepa Bigg Boss Kannada 12
Advertisment
Advertisment
Advertisment