ಬಿಗ್​ಬಾಸ್​ ಸೀಸನ್ 12 ಆರಂಭವಾದ ಬೆನ್ನಲ್ಲೇ ರಾಮನಗರ ಜಿಲ್ಲಾಡಳಿತ, ಜಾಲಿವುಡ್​​ಗೆ ಬೀಗ ಹಾಕಿತ್ತು.. ಇದರಿಂದ ಸ್ಪರ್ಧಿಗಳೆಲ್ಲ ಆತಂಕಕ್ಕೆ ಒಳಗಾಗಿದ್ದರು. ಮಾತ್ರವಲ್ಲ, ಅವರನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್​​ಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಸ್ಪರ್ಧಿಗಳಿಗೆ ಆದ ಆತಂಕ ಏನು ಅನ್ನೋದನ್ನು ಮಂಜು ಭಾಷಣಿ ಹೇಳಿದ್ದಾರೆ. ಕಳೆದ ವಾರ ಎಲಿಮೇಟ್ ಆದ ಬಳಿಕ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನಲ್ಲಿ ಅವರು ಮಾತನ್ನಾಡಿದ್ದಾರೆ. ಮಂಜು ಭಾಷಿಣಿಗೆ ಆಗಿರುವ ಅನುಭವ ಏನೆಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಬಿಗ್‌ಬಾಸ್ ಶೋ ನಡೀತಾ ಇದ್ದಿದ್ದು ರಾಮನಗರದಲ್ಲಿರೋ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ. ಆದ್ರೆ ಜಾಲಿವುಡ್‌ನವರು ಪರಿಸರ ಇಲಾಖೆಯ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸ್ತಿದ್ರು. ಗ್ರೀನ್​​ ಜೋನ್​​​ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಣೆಯೇ ಮಾಡ್ತಿರ್ಲಿಲ್ಲ. ಹೀಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧಿತ ಹಲವು ಕಾರಣಗಳಿಗಾಗಿ ಒಂದು ವರ್ಷಕ್ಕಿಂತ ಹಿಂದೇನೇ ಜಾಲಿವುಡ್‌ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಯಾವುದೇ ನೋಟಿಸ್‌ಗೆ ಉತ್ತರಿಸದೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ರಾಮನಗರ ತಾಲೂಕು ಆಡಳಿತ ಜಾಲಿವುಡ್‌ನ ಸೀಲ್ ಮಾಡಿತ್ತು.
ಇದನ್ನೂ ಓದಿ: ಬಿಗ್​ಬಾಸ್​ನಲ್ಲಿ ಜಾಹ್ನವಿ ಅತ್ತಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us