/newsfirstlive-kannada/media/media_files/2025/10/22/jahnvi-2025-10-22-14-46-15.jpg)
ಬಿಗ್​ಬಾಸ್ (Bigg Boss) ಶೋ ಎಪಿಸೋಡ್​ನಲ್ಲಿ ನಿನ್ನೆಯ ದಿನ ಜಾಹ್ನವಿ ಕಣ್ಣೀರು ಇಟ್ಟಿದ್ದಾರೆ. ಅದಕ್ಕೆ ಕಾರಣ ರಕ್ಷಿತಾ ಶೆಟ್ಟಿ ಜೊತೆ ನಡೆದುಕೊಂಡ ರೀತಿ. ತಮ್ಮ ತಪ್ಪಿನ ಅರಿವು ಆಗಿದೆ ಎಂದು ಅತ್ತಿದ್ದಾರೆ. ಅಲ್ಲದೇ ಮನಸ್ಸಿನಲ್ಲಿ ಆಗುತ್ತಿರುವ ಸಂಕಟವನ್ನು ಕಾವ್ಯ ಶೈವ ಮತ್ತು ಅಶ್ವಿನಿ ಗೌಡ ಮುಂದೆ ಮನಬಿಚ್ಚಿ ಹೇಳಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ‘ರಾಯರಿದ್ದಾರೆ’ ಎಂದ ಡಿಕೆ ಶಿವಕುಮಾರ್.. ಹಬ್ಬದ ದಿನ ಇನ್ನೂ ಏನು ಹೇಳಿದರು?
ಜಾಹ್ನವಿ ಕಣ್ಣೀರ ಕತೆ ಏನು..?
ನನಗೆ ಒಂದೇ ಒಂದು ಬೇಜಾರು ಅಂದರೆ.. ನಾವು ಗೊತ್ತಿದ್ದೂ, ಗೊತ್ತಿದ್ದೂ ತಪ್ಪು ಮಾಡಿಬಿಟ್ವಿ ಅನ್ನೋದು. ಬಿಗ್ಬಾಸ್ ಮನೆಗೆ ಬರುವಾಗ ಎಲ್ಲರೂ ಸಪೋರ್ಟ್ ಮಾಡಿದರು. ಶಾಪಿಂಗ್ ಸೇರಿದಂತೆ ಎಲ್ಲರೂ ಸಹಕಾರ ನೀಡಿದರು. ನೀನು ಹೋಗು, ನೀನು ಆಡು ಎಂದು ಪುಷ್ ಮಾಡಿ ಕಳುಹಿಸಿದರು.
ಆದರೆ ನಾವು ಮನೆಯಿಂದ ಆಚೆ ಹೋಗುವಾಗ ಎಲ್ಲಾ ನೆಗೆಟೀವ್ ಮಾಡಿಕೊಂಡು ಹೋದರೆ ಅದೆಲ್ಲ ಅದೆಲ್ಲ ವೇಸ್ಟ್ ಆಗುತ್ತದೆ. ನನ್ನ ಬಗ್ಗೆ ನಾನು ಯೋಚನೆ ಮಾಡಲ್ಲ. ಗೊತ್ತಿಲ್ಲದೇ ಇದ್ದಾಗ ತಪ್ಪು ನಡೆದರೆ ಸರಿ. ಆದರೆ ನಾವು ಗೊತ್ತಿದ್ದೂ ಮಾಡಿದ್ವಿ. ನಮ್ಮ ಗುಂಡಿಯನ್ನು ನಾವೇ ತೋಡಿಕೊಂಡೆವು.
ಈಗ ನಾನು ಮನೆಯಿಂದ ಆಚೆ ಹೋಗುವ ನೆಗೆಟೀವ್ ಮಾಡಿಕೊಂಡು ಹೊದರೆ ಸಹಿಸೋದು ಕಷ್ಟ. ನನ್ನ ನೆಗೆಟೀವ್ ಅಮ್ಮಂಗೆ ಹೇಗೆ ಅನಿಸುತ್ತೋ ಏನೋ. ಅದನ್ನು ಅವರು ಹೇಳಂಗಿಲ್ಲ, ಬಿಡಂಗಿಲ್ಲ. ನನ್ನ ಫ್ರೆಂಡ್ ಎಲ್ಲರೂ ಬೇಜಾರು ಮಾಡಿಕೊಳ್ತಾರೆ. ಬಿಗ್ಬಾಸ್ ಮನೆಯಲ್ಲಿ ಇದ್ದೂ ಏನೂ ಮಾಡದೇ ಹೋದರೆ ಅದೊಂದು ರೀತಿ.
ನಮ್ಮ ಅಣ್ಣ ಕೂಡ ಬೇಜಾರು ಮಾಡಿಕೊಳ್ತಾನೆ. ನಮ್ಮ ಅಣ್ಣ ಹೇಗೆ ಅಂದರೆ.. ಬೇಗ ಬಂದರೂ ಪರ್ವಾಗಿಲ್ಲ. ಕೆಟ್ಟ ಹೆಸರು ತೆಗೆದುಕೊಂಡು ಬರಬೇಡ ಎಂದಿದ್ದಾನೆ. ಯಾರೂ ಇದನ್ನೂ ಸಹಿಸೋದಿಲ್ಲ. ಆ ಹುಡುಗಿಯನ್ನ ಹಾಗೆ ಮಾಡಿದ್ರಲ್ಲ ಎಂದು ಕೇಳ್ತಾನೆ. ಯಾಕೆ ಹೀಗೆ ಮಾಡಿದೆ ಎಂದು ಕೇಳ್ತಾನೆ. ನಾವು ಗೊತ್ತಿದ್ದೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿಬಿಟ್ವಿ. ಬೆಳಗ್ಗೆ ಎದ್ದು ಸ್ನಾನಕ್ಕೆ ಹೋದಾಗ ತುಂಬಾನೇ ಅತ್ತಿದ್ದೀನಿ ಎಂದು ಕಣ್ಣೀರಿಟ್ಟಿದ್ದಾರೆ. ಇನ್ನು ಕಾವ್ಯ ಮತ್ತು ಅಶ್ವಿನಿ ಗೌಡ ಜಾಹ್ನವಿಯನ್ನು ಸುಮ್ಮನಿರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us