/newsfirstlive-kannada/media/media_files/2025/10/31/bbk12-4-2025-10-31-08-34-24.jpg)
ಬಿಬಿಕೆ12 ಸೀಸನ್​ ದೊಡ್ಮನೆಯಲ್ಲಿ ಹೊಸ ಹೊಸ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಬಿಗ್​ಬಾಸ್​ನಿಂದ ಈ ವಾರ ಹೊರ ಹೋಗಲಿರುವ ಸ್ಪರ್ಧಿಗಳ ಪಟ್ಟಿ ಘೋಷಣೆ ಮಾಡಲಾಗಿದೆ.​ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಯಾರು ಹೊರ ಹೋಗಬಹುದು ಎಂದು ನಾಮಿನೇಟ್ ಆದವರ ಎದೆಯ ಬಡಿತ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್​ ಮನೆಯ ಸದಸ್ಯರಿಗೆ ಹೊಸದೊಂದು ಟಾಸ್ಕ್​ ಕೊಟ್ಟಿದ್ದಾರೆ.
ಬಿಗ್ ಬಾಸ್ ಸ್ಟುಡೆಂಟ್​ ಆಫ್​ ದೀ ವೀಕ್ ಟಾಸ್ಕ್​ ನೀಡಿದ್ದಾರೆ. ಈ ಟಾಸ್ಕ್​ನಲ್ಲಿ ಕಂಟೆಸ್ಟೆಂಟ್​ಗಳು ತಮ್ಮ ಎರಡು ಭಾವಚಿತ್ರಗಳನ್ನು ತೆಗೆದುಕೊಂಡು ಬೇರೆ ಯಾರಿಗೂ ಸಿಗದಂತೆ ಬಚ್ಚಿಡಬೇಕು. ಈ ಬಚ್ಚಿಟ್ಟ ಫೋಟೋಗಳನ್ನು ನಾಲ್ಕು ಬೆಂಬಲಿತ ಅಭ್ಯರ್ಥಿಗಳು ಹುಡುಕಿ ಎಕ್ಸ್​ ಗುರುತಿನ ಫ್ರೇಮ್​ ಒಳಗೆ ಇಡಬೇಕು. ಖಾಲಿ ಫ್ರೇಮ್​ನಲ್ಲಿ ತನ್ನ ಭಾವಚಿತ್ರ ಹೊಂದಿದ ಅಭ್ಯರ್ಥಿ, ಸ್ಟುಡೆಂಟ್​ ಆಫ್​ ದೀ ವೀಕ್ ಆಗುತ್ತಾರೆ.
ಇದನ್ನೂ ಓದಿ:ಸಂಭ್ರಮದಲ್ಲಿ ಶೋಕ.. ಇವತ್ತೇ ಮದುವೆ ಆಗಬೇಕಿದ್ದ ವಧು ಹೃದಯಾಘಾತಕ್ಕೆ ಬಲಿ
/filters:format(webp)/newsfirstlive-kannada/media/media_files/2025/10/31/bbk12_spandana-2025-10-31-08-34-37.jpg)
ಸದ್ಯ ಈ ಟಾಸ್ಕ್ ಕೊಡಲಾಗಿದ್ದು ಕಾವ್ಯ, ಗಿಲ್ಲಿ ನಟ, ಇನ್ನೊಬ್ಬ ಸ್ಪರ್ಧಿ ಸೇರಿ ಮೂವರು ತಮ್ಮ ತಮ್ಮ ಫೋಟೋಗಳನ್ನು ತೆಗೆದುಕೊಂಡು ಯಾರಿಗೂ ಕಾಣದಂತೆ ಬಚ್ಚಿಟ್ಟಿದ್ದಾರೆ. ಆದರೆ ಈ ಫೋಟೋಗಳು ಎಲ್ಲಿವೆ ಎಂದು ಸೂರಜ್, ಬಾಳು, ರಕ್ಷಿತಾ ಹಾಗೂ ಧ್ರುವಂತ್ ಹುಡುಕಾಡಿದ್ದಾರೆ. ಫೋಟೋ ತೆಗೆದುಕೊಂಡು ಬಂದು ಎಕ್ಸ್ ಎಕ್ಸ್​ ಗುರುತಿನ ಫ್ರೇಮ್​ ಒಳಗೆ ಇಟ್ಟಿದ್ದಾರೆ.
ಆದರೆ ಧ್ರುವಂತ್ ಫೋಟೋ ತೆಗೆದುಕೊಂಡು ಓಡುವಾಗ ಬಾಳು ಅವರು ಕಾಲು ಹಿಡಿದು ನಿಲ್ಲಿಸಿದ್ದಾರೆ. ಸೂರಜ್ ಕೂಡ ಧ್ರುವಂತ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇಬ್ಬರು ಸೇರಿ ಧ್ರುವಂತ್ ಬಳಿ ಇರುವ ಫೋಟೋ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಪ್ಲೀಸ್​ ಕುತ್ತಿಗೆ ಬಿಡಿ ಎಂದು ಧ್ರುವಂತ್ ಕೂಗಿದ್ದಾರೆ. ಆದರೆ ಕೊನೆಯಲ್ಲಿ ಯಾರು ಗೆದ್ದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


