Advertisment

ಸಂಭ್ರಮದಲ್ಲಿ ಶೋಕ.. ಇವತ್ತೇ ಮದುವೆ ಆಗಬೇಕಿದ್ದ ವಧು ಹೃದಯಾಘಾತಕ್ಕೆ ಬಲಿ

ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಹೊತ್ತಿಗೆ ಲೋ ಬ್ಲಡ್ ಪ್ರೆಶರ್​ನಿಂದ ಹೃದಯಘಾತ ಉಂಟಾಗಿ ಶೃತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

author-image
Bhimappa
CKM_BRIDE_1
Advertisment

ಅವರೆಲ್ಲಾ ಮದುವೆ ಸಂಭ್ರಮ ಅಂತ ಖುಷಿಯಿಂದ ಓಡಾಡ್ತಾ ಇದ್ರು. ಅಡುಗೆ ಮನೆಯಲ್ಲಿ ಬಗೆ ಬಗೆಯ ಅಡುಗೆ ತಯಾರಾಗ್ತ ಇತ್ತು. ಹಾಲ್​​ನಲ್ಲಿ ಅಲಂಕಾರವು ಜೋರಾಗಿ ಸಾಗ್ತ ಇತ್ತು. ಆದ್ರೆ ಅದೊಂದು ಕೆಟ್ಟ ಗಳಿಗೆ ಇಡಿ ಮನೆಯನ್ನೆ ಮೌನವಾಗಿಸಿಬಿಟ್ಟಿದೆ. ಎಲ್ಲಾರನ್ನು ಜೀವನ ಪರ್ಯಂತ ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ.

Advertisment

ನೂರಾರು ಕನಸುಗಳನ್ನು ಹೊತ್ತು ವಧು-ವರ ಮದುವೆಗೆ ರೆಡಿಯಾಗುತ್ತಿದ್ದರು. ಎರಡು ಕುಟುಂಬದಲ್ಲಿ‌ ಸಂಭ್ರಮ, ಸಂತಸ ಮನೆ ಮಾಡಿತ್ತು. ಆದ್ರೆ ಮದುವೆಯ ಸಂಭ್ರಮದಲ್ಲಿದ್ದ ಮನೆಯವರಿಗೆ ಸೂತಕದ ವಾತಾವರಣ ಎದುರಾಗಿದೆ.

Chikkamagaluru Shruti case (1)
ಮೃತ ಮದುಮಗಳು

ಮದುವೆ ಹಿಂದಿನ ದಿನವೇ ಹೃದಯಾಘಾತಕ್ಕೆ ಯುವತಿ ಬಲಿ

ಹಸೆಮಣೆ ಏರಬೇಕಾಗಿದ್ದ ಯುವತಿ ಮಸಣ ಸೇರಿರೋ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ‌ಮತ್ತು ಗೀತಾ ಅವರ ಎರಡನೇ ಮಗಳೇ ಶೃತಿ ಎಂಬಾಕೆಗೆ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ.
 
ಶೃತಿಗೆ ಹೃದಯಾಘಾತ

ಶೃತಿ ಲೋ ಬ್ಲಡ್ ಪ್ರೆಶರ್​​ನಿಂದ‌ ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಹೊತ್ತಿಗೆ ಲೋ ಬ್ಲಡ್ ಪ್ರೆಶರ್​ನಿಂದ ಹೃದಯಘಾತ ಉಂಟಾಗಿ ಶೃತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇಂದು ಮೃತ ಶೃತಿಯ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ ನಡೆಯಬೇಕಿತ್ತು. ಪಟ್ಟಣದ ಅನ್ನಪೂರ್ಣ ಸಮುದಾಯ ಭವನದಲ್ಲಿ‌ ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿತ್ತು. ನಿನ್ನೆ ಸಂಜೆ ವಧು ವರರ ರಿಸೆಪ್ಶನ್ ನಡೆಸಿ ಇಂದು ಮದುವೆಗೂ ಸಿದ್ಧತೆಗಳು ಪೂರ್ಣಗೊಂಡಿತ್ತು. ಇನ್ನು ಬಾಕಿ ಉಳಿದ ಮದುವೆಯ ಎಲ್ಲಾ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗಲೇ ಈ ದುರ್ಘಟನೆ ನಡೆದಿದೆ.

Advertisment

ಇದನ್ನೂ ಓದಿ: 20 ವಿದ್ಯಾರ್ಥಿಗಳನ್ನ ಒತ್ತೆಯಾಳಾಗಿರಿಸಿದ್ದ ಕೇಸ್​.. ಆರೋಪಿ ರೋಹಿತ್ ಆರ್ಯ ಫಿನೀಶ್

Chikkamagaluru Shruti case

ಮೃತ ಶೃತಿಯ ಮರಣೋತ್ತರ ಪರೀಕ್ಷೆ ನಡೆಸಿ ತಡರಾತ್ರಿಯೇ ಅಂತ್ಯಕ್ರಿಯೆಯನ್ನ ಕುಟುಂಬಸ್ಥರು ನೆರವೇರಿಸಿದ್ದಾರೆ. ಶೃತಿ ಸಾವಿನಿಂದ ವರ ಕುಟುಂಬದವರಿಗೆ ಶಾಕ್​ಗೆ ಒಳಾಗಿದ್ದಾರೆ. ವಧು ವರರ ಫ್ರೀ ವೆಡ್ಡಿಂಗ್ ಶೂಟ್ ಸೇರಿದಂತೆ ವಧುವಿಗಾಗಿ ಖರೀದಿ ಮಾಡಿದ್ದ ಬಟ್ಟೆಗಳು ಅನಾಥವಾಗಿವೆ. ಶೃತಿ ಸಾವಿನಿಂದ ಎರಡು ಕುಟುಂಬಕ್ಕೂ ತುಂಬಲಾರದ ನಷ್ಟ ಉಂಟಾಗಿದೆ.

ಶೃತಿ ಸಾವಿನ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರು ಹಾಗೂ ಬಂಧುಬಳಗದವರು ಶೃತಿ ಸಾವಿನ ನೋವನ್ನ ನುಂಗಲಾರದೇ ಕಂಗಾಲಾಗಿದ್ದಾರೆ. ಮದುವೆ ಹಿಂದಿನ ದಿನವೇ ಇಂತಹ ದುರಂತ ಸಂಭವಿಸಿರುವುದು ಎರಡೂ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkamagaluru news Chikkamagaluru case
Advertisment
Advertisment
Advertisment