/newsfirstlive-kannada/media/media_files/2025/10/29/rashika_raghu-2025-10-29-12-33-55.jpg)
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಹೊಸ ಟಾಸ್ಕ್‌ಗಳು ಆರಂಭವಾಗಿದೆ. ಮನೆ ಈಗ ಕಾಲೇಜು ಕ್ಯಾಂಪಸ್ ಆಗಿದ್ದು ಇಲ್ಲಿ ವಿದ್ಯಾರ್ಥಿಗಳ ಹಾವಳಿಗಿಂತ ಹೆಚ್ಚಾಗಿ ಮನೆಯವರ ಮಾತಿಗೇ ಪ್ರಿನ್ಸಿಪಾಲ್ ಉತ್ತರ ನೀಡದಂತಾಗಿದ್ದಾರೆ.
ಬಿಗ್‌ಬಾಸ್ ಮನೆ ಈಗ ಬಿಬಿ ಕ್ಯಾಂಪಸ್ ಆಗಿ ಬದಲಾಗಿದ್ದು, ಇಲ್ಲಿನ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ವಿವಿಧ ಟಾಸ್ಕ್‌ಗಳನ್ನು ನೀಡಲಾಗ್ತಿದೆ. ಹೀಗೆ ನೀಡಿದ ಟಾಸ್ಕ್‌ನಲ್ಲಿ ಚರ್ಚೆ ಸ್ಪರ್ಧೆಯೂ ಒಂದು. ಇದರಲ್ಲಿ ಸೋತ ಸ್ಪರ್ಧಿಗಳು ಯಾರು ಎಂದು ನಿರ್ಣಯಿಸುವ ಅಧಿಕಾರವನ್ನು ಕ್ಯಾಪ್ಟನ್, ಬಿಬಿ ಕ್ಯಾಂಪಸ್‌ನ ಪ್ರಿನ್ಸಿಪಾಲ್ ರಘು ಅವರಿಗೆ ನೀಡಲಾಗಿತ್ತು.
ರಘು ಸ್ಪರ್ಧೆಯಲ್ಲಿ ಸೋತ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದರು. ಇದೆಲ್ಲವೂ ಸ್ಪರ್ಧೆಯ ಒಂದು ಭಾಗವಾಗಿದ್ರೆ ಇದರಲ್ಲಿ ತುಂಬಾ ಇಂಟರೆಸ್ಟಿಂಗ್ ಅನಿಸಿದ್ದು ಪೇರೆಂಟ್ಸ್ ಟೀಚರ್ಸ್ ಮೀಟಿಂಗ್. ರಘು ಸೋತ ಸ್ಪರ್ಧಿಯ ಮನೆಯವರೊಂದಿಗೆ ಮಾತನಾಡಬೇಕಿತ್ತು ಸ್ಪರ್ಧಿ ಯಾಕೆ ಸೋತಿದ್ದಾನೆ ಎನ್ನುವುದನ್ನು ಮನೆಯವರೊಂದಿಗೆ ಹೇಳಬೇಕಿತ್ತು.
ರಘು ಜೋಶ್‌ನಿಂದಲೇ ಕೆಲಸ ಆರಂಭಿಸಿದ್ದರು. ಆದ್ರೆ ಪ್ರಿನ್ಸಿಪಾಲ್ ರಘುನ ಮೀಟರ್ ಆಫ್ ಆಗುವಂತೆ ಮಾಡಿದ್ದು ರಾಶಿಕಾ ತಮ್ಮ ಹಾಗೂ ಮಾಳು ಪತ್ನಿ. ರಘು ರಾಶಿಕಾ ಸೋತಿದ್ಯಾಕೆ ಅನ್ನೋದಕ್ಕೆ ನೀಡಿದ್ದ ಕಾರಣ ಎಂದರೆ ರಾಶಿಕಾ ಮನೆಯಲ್ಲಿ ಎಲ್ಲೋ ಕಳೆದು ಹೋದ ಹಾಗೆ ಇರ್ತಾಳೆ. ಸರಿಯಾದ ಇನ್‌ವಾಲ್ವ್‌ಮೆಂಟ್ ಇರಲ್ಲ ಅನ್ನೋದು.
/filters:format(webp)/newsfirstlive-kannada/media/media_files/2025/10/27/bbk12_college-2025-10-27-14-41-29.jpg)
ಇದನ್ನು ಖಡಾಖಂಡಿತವಾಗಿ ಧಿಕ್ಕರಿಸೋ ರಾಶಿಕಾ ತಮ್ಮ, ಅವಳು ಚೆನ್ನಾಗೇ ಆಟ ಆಡ್ತಿದ್ದಾಳೆ ಎಲ್ಲೂ ಕಳೆದು ಹೋಗಿಲ್ಲ. ಅವಳು ಟಫ್ ಕಾಂಪಿಟೇಟರ್ ಅನ್ನೋದ್ರಲ್ಲಿ ಅನುಮಾನನೇ ಇಲ್ಲ. ಅವಳು ಒಬ್ಬಂಟಿಯಾಗಿಯೇ ಟಾಸ್ಕ್ ಆಡಿ ಮೊದಲ ಗ್ರ್ಯಾಂಡ್ ಫಿನಾಲೆಯ ಫೈನಲಿಸ್ಟ್ ಆಗಿದ್ದಳು. ಇದಕ್ಕಿಂತ ಸಾಕ್ಷಿ ಬೇಕಾ ಎಂದಿದ್ದ. ಇದಕ್ಕೆ ಪ್ರಿನ್ಸಿಪಾಲ್ ಬಳಿ ಉತ್ತರವೇ ಇರಲಿಲ್ಲ.
ಇನ್ನು ಮಾಳು ಪತ್ನಿಯೂ ಅಷ್ಟೆ ಹೆಚ್ಚೇನು ಮಾತನಾಡದೇ ಇದ್ರೂ ಆಡಿದ ಒಂದೆರಡು ಮಾತಿಗೇ ಪ್ರಿನ್ಸಿಪಾಲ್ ಸುಸ್ತು ಹೊಡೆದಿದರು. ಮಾಳು ಚೆನ್ನಾಗಿ ಆಡುತ್ತಿಲ್ಲ ಎಂದು ಕಾರಣ ನೀಡಿದ್ದಕ್ಕೆ ಸರಿಯಾದ ಉತ್ತರವನ್ನೇ ನೀಡಿದ್ದ ಪತ್ನಿ, ಅವರ ಭಾಷೆ ಎಲ್ಲರಿಗೂ ಅರ್ಥವಾಗಲ್ಲ ಅಂತ ಸೈಲೆಂಟ್ ಇದ್ದಾರೆ. ಅದು ಅವರ ತಪ್ಪಲ್ಲ. ನಿಮ್ಮ ಮಾತಿನ ಅರ್ಥ ಅವರು ಕಾಲುಕೆರೆದುಕೊಂಡು ಜಗಳಕ್ಕೆ ಹೋಗುತ್ತಿರಬೇಕಾ ಎಂದು ಕೇಳಿದ್ದಾರೆ. ಇದಕ್ಕೂ ರಘು ಬಳಿ ಉತ್ತರವೇ ಇರಲಿಲ್ಲ.
ಪೇರೆಂಟ್ಸ್, ಟೀಚರ್ಸ್ ಮೀಟಿಂಗ್‌ನಲ್ಲಿ ಸಾಮಾನ್ಯವಾಗಿ ಮಕ್ಕಳ ಬಗ್ಗೆ ಟೀಚರ್ಸ್ ದೂರುತ್ತಾರೆ ಪೇರೆಂಟ್ಸ್ ಅವರನ್ನು ತಿದ್ದುವ ಪ್ರಯತ್ನ ಮಾಡುವುದಾಗಿ ಹೇಳುತ್ತಾರೆ. ಇಲ್ಲಿ ಆಗಿದ್ದೆ ಉಲ್ಟಾ ಪೇರೆಂಟ್ಸ್ ಪ್ರಶ್ನೆಗೆ ಪ್ರಿನ್ಸಿಪಾಲೇ ಕಂಗೆಟ್ಟು ಹೋಗಿದ್ದರು. ಏನು ಉತ್ತರ ಕೊಡಲಿ ಅನ್ನೋದೇ ತಿಳಿಯದೆ ಸುಮ್ಮನಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us