/newsfirstlive-kannada/media/media_files/2025/09/30/jahnavi_gill-2025-09-30-18-45-37.jpg)
ಬಿಗ್​ ಬಾಸ್​ ಸೀಸನ್​-12ರ ಮನೆಯಲ್ಲಿ ಜಂಟಿಗಳು ನಿಯಮ ಪಾಲನೆ ಮಾಡದಿದ್ದಕ್ಕೆ ಒಂಟಿಗಳಿಗೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ. ಇನ್ನೊಂದು ದೊಡ್ಡ ಶಾಕ್ ಎಂದರೆ ಒಂಟಿಗಳು ಗೆದ್ದಿದ್ದ ದಿನಸಿ ಸಾಮಾಗ್ರಿಗಳನ್ನು ವಾಪಸ್ ಪಡೆಯಲಾಗಿದೆ. ಇದರಿಂದ ಒಂಟಿಗಳಿಗೆ ಉಪವಾಸದಲ್ಲೇ ಉಳಿಯುವಂತೆ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲ ಜಂಟಿಗಳು ತಾವು ಮಲಗುವ ಹಾಗೂ ಬಳಸುವ ಸಮಯ ಹೊರತು ಪಡಿಸಿ ಉಳಿದೆಲ್ಲ ಸಮಯದಲ್ಲಿ ಜಂಟಿ ಆಗಿ ಇರಬೇಕು ಎಂಬ ನಿಯಮ ಇದೆ. ಆದರೆ, ಜಂಟಿಗಳು ಇದನ್ನು ಮರೆತು ತಪ್ಪು ಮಾಡಿದ್ದಾರೆ. ಹಗ್ಗ ಕಟ್ಟಿಕೊಳ್ಳದೇ ಒಂಟೊಂಟಿಯಾಗಿ ಸುತ್ತಾಡಿದ್ದಾರೆ. ಮನೆಯಲ್ಲಿ ಈ ಜಂಟಿಗಳನ್ನು ಒಂಟಿಗಳು ನೋಡಿಕೊಳ್ಳಬೇಕು. ಆದರೆ ಒಂಟಿಗಳು ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಜಂಟಿಗಳು ಹೀಗೆ ಮಾಡಿದ್ದಾರೆ ಎನ್ನುವುದು ಬಿಗ್ ಬಾಸ್ ಕೋಪವಾಗಿದೆ. ಹೀಗಾಗಿಯೇ ಜಂಟಿಗಳಿಗೆ ಶಿಕ್ಷೆ ನೀಡಿದ್ದಾರೆ.
ಇದನ್ನೂ ಓದಿ:BBK12; ದೊಡ್ಮನೆಯಿಂದ ಮೊಟ್ಟ ಮೊದಲ ಕಂಟೆಸ್ಟೆಂಟ್ ಔಟ್​..​ ಇವರು ಯಾರು?
ಸದ್ಯ ಬಿಗ್​ ಬಾಸ್ ಮನೆಯಲ್ಲಿ 6 ಕಂಟೆಸ್ಟೆಂಟ್​ಗಳು ಒಂಟಿಗಳು ಇದ್ದು 12 ಸ್ಪರ್ಧಿಗಳು ಜಂಟಿಗಳಾಗಿದ್ದಾರೆ. ಇದರಲ್ಲಿ ಒಂದು ರೀತಿ ಒಂಟಿಗಳು ರಾಜನಂತೆ ಅಧಿಕಾರ ಇರುತ್ತದೆ. ಇವರ ಅಡಿಯಾಳುಗಳಾಗಿ ಜಂಟಿಗಳು ಇರಬೇಕು. ಆದರೆ ಹಗ್ಗ ಕಟ್ಟಿಕೊಂಡಿರಬೇಕಾದವರು ಬಿಡಿ ಬಿಡಿಯಾಗಿ ಓಡಾಡುತ್ತಿರುವುದು ಬಿಗ್​ ಬಾಸ್​ಗೆ ಸಿಟ್ಟು ತರಿಸಿದೆ. ಇದರಿಂದ ಒಂಟಿಗಳಿಗೆ ಶಿಕ್ಷೆ ಆಗಿದೆ.
ತಪ್ಪು ಮಾಡಿದ್ದು ಜಂಟಿಗಳಾದರೂ ಶಿಕ್ಷೆ ಮಾತ್ರ ಒಂಟಿಗಳಿಗೆ. ನಿನ್ನೆ ರಾತ್ರಿ ಒಂಟಿಗಳು ಗಳಿಸಿದ್ದ 14 ದಿನಸಿಗಳ ಪೈಕಿ 11 ದಿನಸಿ ಸಾಮಾಗ್ರಿಗಳನ್ನು ಈ ಕೂಡಲೇ ಸ್ಟೋರ್​ ರೂಮ್​ಗೆ ತಂದಿಡಬೇಕು ಎಂದು ಬಿಗ್​ ಬಾಸ್ ಆದೇಶಿಸಿದ್ದಾರೆ. ಬಿಗ್ ಬಾಸ್ ಇದನ್ನು ಹೇಳುವಾಗ ಗಿಲ್ಲಿ ನಟ ಮಾತ್ರ ಸಖತ್ ಖುಷಿಯಲ್ಲಿ ನಗುತ್ತಿದ್ದನು. ಉಳಿದಂತೆ ಎಲ್ಲರೂ ಅಪ್​ಸೆಟ್ ಆಗಿದ್ದರು. ಜಾಹ್ನವಿ ಅಂತೂ ಹಣೆಗೆ ಕೈ ಇಟ್ಟುಕೊಂಡರು. ಚಂದ್ರಪ್ರಭ, ರಾಶಿಕಾ, ಸ್ಪಂದನಾ, ಮಲ್ಲಮ್ಮ, ಅಭಿಷೇಕ್​, ಧ್ರುವ್, ಆಶ್ವಿನ್​ ಸೇರಿ ಎಲ್ಲರೂ ಫುಲ್ ಡಲ್ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ