Advertisment

‘ಓ ದೇವರೇ..’ ಅತಿಥಿಗಳ ವಿರುದ್ಧ ಸಿಡಿದ ಅಶ್ವಿನಿ ಗೌಡ..! VIDEO

ಗಿಲ್ಲಿ ಮಾತ್ರವಲ್ಲ, ಅತಿಥಿಗಳ ವಿರುದ್ಧ ಈಗ ಅಶ್ವಿನಿ ಗೌಡ ಕೂಡ ಗರಂ ಆಗಿದ್ದಾರೆ. ಬಿಗ್​ ಬಾಸ್ ಪ್ಯಾಲೆಸ್​ನಲ್ಲಿ ಅತಿಥಿಗಳ ಕ್ವಾಟ್ಲೆ ಜೊರಾಗಿದೆ. ಒಂದಷ್ಟು ಸ್ಪರ್ಧಿಗಳು, ಅತಿಥಿಗಳು ಹೇಳಿದಂತೆ ಕೋಲೆ ಬಸವ ಥರಾ ಆಗಿದ್ದಾರೆ. ಆದರೆ ಅದಕ್ಕೆ ಅಶ್ವಿನಿ ಗೌಡ ಒಪ್ಪಿಲ್ಲ.

author-image
Ganesh Kerekuli
Ashwini gowda and chaitra kundapura
Advertisment

ಗಿಲ್ಲಿ ಮಾತ್ರವಲ್ಲ, ಅತಿಥಿಗಳ ವಿರುದ್ಧ ಈಗ ಅಶ್ವಿನಿ ಗೌಡ ಕೂಡ ಗರಂ ಆಗಿದ್ದಾರೆ. ಬಿಗ್​ ಬಾಸ್ ಪ್ಯಾಲೆಸ್​ನಲ್ಲಿ ಅತಿಥಿಗಳ ಕ್ವಾಟ್ಲೆ ಜೊರಾಗಿದೆ. ಒಂದಷ್ಟು ಸ್ಪರ್ಧಿಗಳು, ಅತಿಥಿಗಳು ಹೇಳಿದಂತೆ ಕೋಲೆ ಬಸವ ಥರಾ ಆಗಿದ್ದಾರೆ. ಆದರೆ ಅದಕ್ಕೆ ಅಶ್ವಿನಿ ಗೌಡ ಒಪ್ಪಿಲ್ಲ.

Advertisment

ಆಗಿದ್ದೇನು..? 

ಬಿಗ್​ ಬಾಸ್ ಮನೆಯ ಡೈನಿಂಗ್ ಟೇಬಲ್​ ಮೇಲೆ ಅತಿಥಿಗಳು ಕೂತಿದ್ದಾರೆ. ಅವರನ್ನು ಉಪಚರಿಸಲು ಸ್ಪಂದನಾ ಮತ್ತು ಕಾವ್ಯ ಗೌಡ ಬಂದಿದ್ದಾರೆ. ಈ ವೇಳೆ ಚೈತ್ರಾ ಕುಂದಾಪುರ, ಮನೆಯಲ್ಲಿರುವ ಆ ಗೊಂಬೆಯ ಹೆಸರು ಏನೆಂದು ಕೇಳಿದ್ದಾರೆ. ಅದಕ್ಕೆ ಇಬ್ಬರಿಂದಲೂ ಉತ್ತರ ಇಲ್ಲ.

ಅಷ್ಟಕ್ಕೇ ಕೋಪಿಸಿಕೊಳ್ಳುವ ಚೈತ್ರಾ ಕುಂದಾಪುರ, ತಲೆಯಲ್ಲಿ ಬುದ್ಧಿ ಇಲ್ಲ ಎಂದು ಎಲ್ಲಾ  ​ಸ್ಪರ್ಧಿಗಳು ಹೇಳಬೇಕು ಎಂದು ತಾಕೀತು ಮಾಡಿದ್ದಾರೆ. ಅದರಂತೆ ಗಿಲ್ಲಿ ನಟ, ರಘು, ಮಾಳು, ಧನುಷ್ ಎಲ್ಲರೂ ಕೇಳಿದ್ದಾರೆ.

ಇದನ್ನೂ ಓದಿ:ದೇವಿ ಹೊತ್ತು ಅಬ್ಬರಿಸಿದ ದೈವಿಪುತ್ರ ಶಿವು.. ‘ಅಣ್ಣಯ್ಯ’ನ ಮೇಕಿಂಗ್ ಝಲಕ್ Photos

Advertisment

ಮ್ಯಾನೇಜರ್ ಅಭಿಷೇಕ್ ಕೂಡ ಬುದ್ಧಿ ಇಲ್ಲ ಎಂದು ಹೇಳಿ.. ಅಶ್ವಿನಿ ಗೌಡಗೂ ಹೇಳುವಂತೆ ಕೇಳಿಕೊಳ್ತಾರೆ. ಅದಕ್ಕೆ ಅಶ್ವಿನಿ ಗೌಡ ಒಪ್ಪಲ್ಲ. ಆ ಪದ ಬಳಕೆಗೆ ನನ್ನ ವಿರೋಧ ಇದೆ. ಅದನ್ನು ನಾನು ಮಾಡೋಕೆ ಆಗಲ್ಲ. ಅದಕ್ಕೆ ಉಗ್ರಂ ಮಂಜು ಅದನ್ನು ನೀವು ಕೇಳ್ತೀರೋ, ಕೇಳಲ್ವೋ ಎಂದು ಧಮ್ಕಿ ಹಾಕಿದ್ದಾರೆ. 

ಅದಕ್ಕೆ ನೀವು ಅತಿಥಿ ಅಂದ ಮಾತ್ರಕ್ಕೆ ಕ್ಷಮೆ ಕೇಳಬೇಕು ಅಂತೇನೂ ಇಲ್ಲ. ನಿಮಗೆ ಬುದ್ಧಿ ಇಲ್ಲದೇ ಇರಬಹುದು, ನೀವು ಕೇಳ್ಕೊಂಡು ಬಂದಿದ್ದೀರಾ. ನಾನು ಕೇಳಲ್ಲ ಎಂದು ಸಹ ಸ್ಪರ್ಧಿಗಳಿಗೆ ದಬಾಯಿಸುತ್ತಾರೆ. ಅದಕ್ಕೆ ಕೌಂಟರ್ ಆಗಿ ರಜತ್, ನಿಮಗೆ ಈಗೋ ದೊಡ್ಡದು ಅಂದರೆ ನಾವು ಪಾಯಿಂಟ್ಸ್ ಕೊಡಲ್ಲ ಎಂದಿದ್ದಾರೆ. ಅದಕ್ಕೆ ರೊಚ್ಚಿಗೇಳುವ ಅಶ್ವಿನಿ ಗೌಡ ನಿಮಗೆ ಬುದ್ಧಿ ಇಲ್ಲ ಅಂತಾ ನೀವು ಒಪ್ಕೊಳ್ಳಿ. ನಾನು ಯಾಕೆ ಒಪ್ಕೋಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: BREAKING NEWS: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep BBK12 Ashwini Gowda Bigg Boss Gilli Nata Ashwini Gowda
Advertisment
Advertisment
Advertisment