/newsfirstlive-kannada/media/media_files/2025/10/20/jahnvi-and-ashwini-gowda-2025-10-20-22-39-19.jpg)
ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡಿರುವ ಮ್ಯೂಟಂಟ್ ರಘು ವಿರುದ್ಧ ಅಶ್ವಿನಿ ಗೌಡ ಹಾಗೂ ಜಾಹ್ನವಿ ರೊಚ್ಚಿಗೆದ್ದಿದ್ದಾರೆ. ಏಕವಚನದಲ್ಲಿ ಮಾತನ್ನಾಡಿದ್ದಕ್ಕೆ ರಘುಗೆ ಜೊತೆ ವಾಗ್ಯುದ್ಧ ನಡೆದಿದೆ.
ಜಾಹ್ನವಿ ಹಾಗೂ ಅಶ್ವಿನಿಯ ಎಚ್ಚರಿಕೆಗೆ ಜಗ್ಗದ ರಘು, ಜಪ್ಪಯ್ಯ ಅಂದ್ರೂ ಅವರಿಬ್ಬರಿಗೆ ನಾನು ಮರ್ಯಾದೆ ಕೊಟ್ಟು ಮಾತನ್ನಾಡಲ್ಲ ಎಂದು ಶಪಥ ಮಾಡಿದ್ದಾರೆ. ಇದೇ ವಿಚಾರ ಇವತ್ತಿನ ಎಪಿಸೋಡ್​ನಲ್ಲಿ ಡ್ರ್ಯಾಗ್ ಆಗಿದ್ದು, ಸನ್ನಿವೇಶ ಒಂದರಲ್ಲಿ ಜಾಹ್ನವಿ ರಘು ಅವರನ್ನು ಕಿಚಾಯಿಸಿದ್ದಾರೆ.
ಯಾಱರಿಗೋ ಹೆದರಿಲ್ಲ. ಬಾಡಿ ನೋಡಿ ಹೆದರ್ತೀವಾ? ಬಾಡಿ ಇಟ್ಕೊಂಡ ತಕ್ಷಣ ಯಾರೂ ಡಾನ್ ಆಗಲ್ಲ. ಮರ್ಯಾದಿ ಕೊಡೋದನ್ನ ಕಲಿತುಕೊಳ್ಳಬೇಕು. ಶರೀರ ಬೆಳೆಸಿಕೊಳ್ಳೋದಲ್ಲ. ಮರ್ಯಾದೆ ಕೊಟ್ಟಿಲ್ಲ ಅಂದ್ರೆ ಕೊಡೋದನ್ನ ಕಲಿಸ್ತೀವಿ ಎಂದು ವಾರ್ನ್ ಮಾಡಿದ್ದಾರೆ.
ಇನ್ನೊಂದು ಸಂದರ್ಭದಲ್ಲಿ ಕವನ ಓದಿರುವ ಜಾಹ್ನವಿ.. ರಘು, ನೀನಿನ್ನೂ ಮಗು. ಸುಮ್ ಸುಮ್ನೆ ನೀನ್ಯಾಕೆ ಆಗ್ತೀಯಾ ರಾಂಗು. ಏಕವಚನದಲ್ಲಿ ಮಾತಾಡಿ ನೀನಾದೆ ಗುಗ್ಗು.. ಬಟ್ಟೆ ಪ್ಯಾಕ್ ಮಾಡಿಕೊಂಡು ಸೀದಾ ಮನೆ ಕಡೆಗೆ ಹೋಗು ಎಂದಿದ್ದಾರೆ..
ಇದನ್ನೂ ಓದಿ: ಸೂರಜ್​ ಮೈಮಾಟಕ್ಕೆ ಕಳೆದುಹೋದ ಹೆಣ್ಣೈಕ್ಳು.. ನಾಚಿ ನೀರಾದ ವಿಡಿಯೋ ಇಲ್ಲಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ