ಬಿಗ್​ ಬಾಸ್​ ಸೀಸನ್ 12 ರನ್ನರ್​ ಅಪ್ ರಕ್ಷಿತಾ ಶೆಟ್ಟಿ, ನ್ಯೂಸ್​ ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಅವರು ಬಿಗ್ ಬಾಸ್ ಮನೆಯ ಅನಭವ ಹಂಚಿಕೊಂಡಿದ್ದಾರೆ. ಬಿಗ್ ಬಾಸ್​ ಅಂದ್ರೆ ಒಂದು ಜೀವನ. ಅಲ್ಲಿ ಒಂದು ಲೈಫ್ ಇತ್ತು. ನನಗೆ ಬಿಗ್ ಬಾಸ್​ ಅಂದ್ರೆ ಒಂದು ಮನೆಯ ಫೀಲ್ ಆಗಿತ್ತು. ನಾನು ಅದನ್ನು ಕಾಂಪಿಟೇಷನ್ ಆಗಿ ನೋಡಲಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಚಿಕ್ಕಮ್ಮ, ಅಜ್ಜಿ ಅನ್ನೋ ರೀತಿಯ ರಿಲೇಷನ್​ಶಿಪ್ ಬಿಲ್ಡ್​ ಆಯಿತು.
ಅಮ್ಮನ ಸ್ಥಾನ ಅಶ್ವಿನಿ ಮೇಡಂ, ಅಪ್ಪನ ಸ್ಥಾನ ರಘು ಅಣ್ಣನಿಗೆ, ಅಣ್ಣನ ಸ್ಥಾನವನ್ನ ಮಾಳುಗೆ, ಸಿಸ್ಟರ್​​ ಅಂದ್ರೆ ರಾಶಿಕಾ ಶೆಟ್ಟಿ. ರಾಶಿಕಾ ಶೆಟ್ಟಿ ಜೊತೆ ತುಂಬಾ ಗಲಾಟೆ ಆಗಿದೆ. ಬಡ ಬಡ ಮಾತು ಅಷ್ಟೇ, ಆಮೇಲೆ ಏನೂ ಇಲ್ಲ. ಸ್ನೇಹಿತ ಅಂದ್ರೆ ಗಿಲ್ಲಿ.
ಗಿಲ್ಲಿ ಮೇಲೆ ಲವ್​ ಅಂತೇನೂ ಇಲ್ಲ. ಒಂದು ಫ್ರೆಂಡ್ ಲವ್ ಉಂಟು. ಗಿಲ್ಲಿಯ ಕೆಲವು ವಿಚಾರಗಳು ನನಗೆ ಆಗೋದಿಲ್ಲ. ಆದರೆ ಅವರು ಯಾಕೆ ನನಗೆ ಇಷ್ಟ ಅಂದ್ರೆ.. ಗಿಲ್ಲಿ ತುಂಬಾ ಲೈವ್ಲಿ ಪರ್ಸನ್.. ಓಪನ್ ಹಾರ್ಟೆಡ್​.. ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶ ಕೂಡ ಇಲ್ಲ ಅನ್ಕೋತಿನಿ.. ನನಗೆ ಅವರು ಮಸ್ತಿ ಮಸ್ತಿಯಲ್ಲಿ ಬೈತಿದ್ರು. ಹೊಡೆಯುತ್ತಿದ್ದರೂ. ಹಾಗಿದ್ದೂ ನನಗೆ ಗಿಲ್ಲಿ ಜೊತೆ ಒಳ್ಳೆಯ ಕನೆಕ್ಷನ್ ಇತ್ತು. ರಕ್ಷಿತಾ ಶೆಟ್ಟಿ ಏನೆಂದು ಹೇಳಿದ್ದಾರೆ ತಿಳಿದುಕೊಳ್ಳಲು ವಿಡಿಯೋ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಮೊದಲ ಮಹಿಳಾ ರನರ್ ಅಪ್ ನಾನೇ.. ರಕ್ಷಿತಾ ಮೊದಲ ಮಾತು..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us