/newsfirstlive-kannada/media/media_files/2026/01/13/rashika-dhruvanta-2026-01-13-12-45-54.jpg)
ಬಿಗ್​ ಬಾಸ್​​ನಿಂದ ಹೊರ ಬಂದಿರುವ ರಾಶಿಕಾ ಶೆಟ್ಟಿ, ಬಿಗ್​ ಬಾಸ್ ಮನೆಯ ಅನುಭವಗಳನ್ನು ಎಳೆಎಳೆಯಾಗಿ ನ್ಯೂಸ್​ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ. ಈ ವೇಳೆ ಧ್ರುವಂತ್ ಮಾಡಿದ ಆರೋಪಗಳಿಗೂ ಪ್ರತಿಕ್ರಿಯಿಸಿದ್ದಾರೆ.
ಏನಂದ್ರು ರಾಶಿಕಾ ಶೆಟ್ಟಿ..?
ಬಿಗ್ ಬಾಸ್ ಮನೆಗೆ ಹೋದ ಒಂದು ವಾರಕ್ಕೆ ನಾನು ಧ್ರುವಂತ್​ ಅವರಿಗೆ ಹೇಳಿದ್ದೆ. ನೀವು ತುಂಬಾ ಸ್ವೀಟ್ ಆಗಿ ಕಾಣ್ತೀರಾ ಎಂದು. ಆಗ ಅವರು ಮಲ್ಲಮ್ಮ ಜೊತೆ ತುಂಬಾ ಕನೆಕ್ಟ್ ಆಗಿದ್ದರು. ಮಲ್ಲಮ್ಮ ಜೊತೆಗಿನ ಬಾಂಡಿಂಗ್ ನೋಡಿ ನನಗೆ ಹಾಗನಿಸಿತ್ತು. ಕೋಪ ಬಂದಾಗ ಮಾತ್ರ ಕಿರುಚಾಡುತ್ತಾರೆ ಅಂದುಕೊಂಡಿದ್ದೆ.
ಎರಡನೇ ವಾರಕ್ಕೆ ನನಗೂ ಅವರಿಗೂ ಯಾವುದೋ ವಿಚಾರಕ್ಕೆ ಜಗಳ ಆಗಿದೆ. ಅಲ್ಲಿಂದ ಅವರು ಮತ್ತು ನನ್ನ ಮಧ್ಯೆ ಶುರುವಾಗಿದ್ದು. ನಾನು ಏನೇ ಮಾತನ್ನಾಡಿದರೂ ಅವರಿಗೆ ರೂಢ ಆಗಿ ಕಾಣುತ್ತಿತ್ತು. ನಾನು ಮಾತನ್ನಾಡಿದಾಗಲೆಲ್ಲ ತುಂಬಾ ರೂಢ ಆಗಿ ಮಾತನ್ನಾಡುತ್ತಾಳೆ ಎನ್ನುತ್ತಿದ್ದರು. ಅದು ಹಾಗೆಯೇ ಮುಂದುವರಿಯಿತು.
ಇದನ್ನೂ ಓದಿ:‘ನಲ್ಲಿ ಮೂಳೆ’ ತಿಂದು ಮಲಗಬೇಕು, ಆಗ ನಾಯಿ ಬೊಗಳಬಾರದು -ಗಿಲ್ಲಿ ಆಸೆ ಕೇಳಿ ನಕ್ಕ ಬಿಗ್​ಬಾಸ್..!
ಮನೆಯಲ್ಲಿ ಎಷ್ಟೇ ಆಗಳವಾದರೂ ನಾವು ಕುಟುಂಬದಿಂದ ದೂರ ಇರುತ್ತೇವೆ. ಜಸ್ಟ್ ಒಂದು ಫೈನ್ ಎಂಬ ಪದ ಕೇಳಿದ್ರೆ ನಮಗೆ ಅದೇ ಚೆನ್ನಾಗಿ ಕಾಣಿಸುತ್ತೆ. ಅದ್ಯಾಕೋ ನಮ್ಮಿಬ್ಬರ ಮಧ್ಯೆ ಅದು ಆಗಿಬರಲಿಲ್ಲ. ಇದರ ಮಧ್ಯೆ ಅವರು ಒಂದು ಸ್ಟೇಟ್​ಮೆಂಟ್ ಪಾಸ್ ಮಾಡಿ ಬಿಡ್ತಾರೆ. ಆಗ ನನಗೆ ಅನಿಸಿತು. ಇವರು ತಾನು ಹೇಳಿದ್ದೇ ಸರಿ ಅನ್ನೋ ವ್ಯಕ್ತಿ. ಈತನಿಂದ ದೂರ ಇರೋದೇ ಬೆಸ್ಟ್​ ಎನಿಸಿತು.
ಆಗ ಧ್ರುವಂತ್ ಮತ್ತೊಂದು ಸ್ಟೇಟ್​ಮೆಂಟ್ ಪಾಸ್ ಮಾಡಿದರು. ಆಗಾಗ ಟ್ರ್ಯಾಕ್ ಚೇಂಜ್ ಆಗುತ್ತೆ ಎಂದು ಬಿಟ್ಟರು. ಅಭಿ ನನಗೆ ಮೊದಲಿನಿಂದಲೂ ಗೊತ್ತಿತ್ತು. ಆದರೆ ಆರಂಭದಲ್ಲಿ ಮಾತನ್ನಾಡಲು ಸಾಧ್ಯವಾಗಿರಲಿಲ್ಲ. ಅಭಿ ನನಗೆ ಸೀರಿಯಲ್ ಗೊತ್ತಿರೋ ವ್ಯಕ್ತಿ ಆಗಿತ್ತು.
ಕೊನೆಗೆ ನನಗೂ ಟ್ರೈ ಮಾಡಿದ್ರು ರಾಶಿಕಾ ಎಂದು ಧ್ರುವಂತ್ ಹೇಳಿದರು. ನಾನು ಧ್ರುವಂತ್ ಅವರನ್ನು ಆ ದೃಷ್ಟಿಯಿಂದ ನೋಡಿಯೇ ಇಲ್ಲ. ಬೆಲ್ಟ್ ವಿಚಾರವನ್ನು ತೆಗೆದು ಹಾಗೆ ಹೇಳಿದರು. ಅವರ ಹೇಳಿಕೆಯಿಂದ ನನಗೆ ತುಂಬಾ ನೋವು ಆಯಿತು. ನಾನು ಬೆಲ್ಟ್ ಅನ್ನು ಫನ್ನಾಗಿ ಎತ್ತಟ್ಟಿದ್ದೆ. ಅದನ್ನು ಅವರು ಆ ರೀತಿ ಬದಲಾಯಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡಿಗ KL ರಾಹುಲ್ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ ಇದು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us