‘ನಲ್ಲಿ ಮೂಳೆ’ ತಿಂದು ಮಲಗಬೇಕು, ಆಗ ನಾಯಿ ಬೊಗಳಬಾರದು -ಗಿಲ್ಲಿ ಆಸೆ ಕೇಳಿ ನಕ್ಕ ಬಿಗ್​ಬಾಸ್..!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಸೆ ಈಡೇರಿಸಲು ಬಿಗ್ ಬಾಸ್ ಮುಂದಾಗಿದ್ದಾರೆ. ಅಂತೆಯೇ ಪ್ರತಿ ಸ್ಪರ್ಧಿಗಳಿಗೆ ತಮ್ಮ ಮೂರು ಆಸೆಗಳನ್ನ ವ್ಯಕ್ತಪಡಿಸುವಂತೆ ಸೂಚಿಸಿದ್ದು, ಗಿಲ್ಲಿ ಅವರ ಕನಸು ಮಜವಾಗಿದೆ.

author-image
Ganesh Kerekuli
Gilli Nata (27)
Advertisment

ಬಿಗ್​​ ಬಾಸ್​ ಅಂತಿಮ ಘಟ್ಟ ತಲುಪುತ್ತಿದೆ. ಮಿಡ್​ ವೀಕ್ ಎಲಿಮಿನೇಷನ್ ಟೆನ್ಷನ್ ಮಧ್ಯೆ ಸ್ಪರ್ಧಿಗಳ ಆಸೆಯನ್ನು ಈಡೇರಿಸಲು ಬಿಗ್​ಬಾಸ್ ಮುಂದಾಗಿದ್ದಾರೆ. 

ನಿಮ್ಮ ಯಾವ ಆಸೆ ಈಡೇರಿಸಬೇಕು ಎಂದು ಬಿಗ್ ಬಾಸ್ ಈಗಾಗಲೇ ಕೇಳಿದ್ದಾರೆ. ಪ್ರತಿ ಸ್ಪರ್ಧಿಗಳಿಗೆ ಬಿಗ್​ ಬಾಸ್ ಮನೆಯಲ್ಲಿ ಈಡೇರಬೇಕು ಎಂದು ಹೇಳಿ. ನಿಮ್ಮ ಮೂರು ಕನಸುಗಳನ್ನ ಪತ್ರದಲ್ಲಿ ಬರೆದು ತಿಳಿಸಿ. ಅದರಲ್ಲಿ ಒಂದನ್ನು ಬಿಗ್ ಬಾಸ್ ಈಡೇರಿಸುತ್ತಾರೆ ಎಂದು ಸೂಚಿಸಲಾಗಿದೆ. 

ಇದನ್ನೂ ಓದಿ: ಅಶ್ವಿನಿ ಕಿರಿಕ್​.. ಗಿಲ್ಲಿ ಲೇಸಿ.. ಗಿಲ್ಲಿಗೆ ಸರಿಯಾದ ಎದುರಾಳಿ ಅಶ್ವಿನಿ.. ನಿಂತಿಲ್ಲ ಫೈಟ್​!

ಅಂತೆಯೇ ನಿನ್ನೆ ಎಲ್ಲಾ ಸ್ಪರ್ಧಿಗಳು, ಬಿಗ್​ ಬಾಸ್ ಮನೆಯಲ್ಲಿ ತಾವು ಅಂದುಕೊಂಡಿದ್ದನ್ನು ಈಡೇರಿಸುವಂತೆ ಪತ್ರ ಬರೆದು ಕ್ಯಾಮೆರಾ ಮುಂದೆ ಓದಿ ತಿಳಿಸಿದ್ದಾರೆ. ಅದರಲ್ಲಿ ಗಿಲ್ಲಿ ನಟನ ಮೂರು ಆಸೆಗಳು ಹೀಗಿವೆ.. 

ಗಿಲ್ಲಿ ಆಸೆ..!

  • ಬಿಗ್​ ಬಾಸ್​ ಮನೆಯ ಟಿವಿಯಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕು
  • ಬಿಗ್ ಬಾಸ್ ಮನೆಯಲ್ಲಿರುವ ಆನೆ ಮೇಲೆ ಒಮ್ಮೆ ಕೂತ್ಕೋಬೇಕು
  • ನನಗೆ ‘ನಲ್ಲಿ ಮೂಳೆ’ ಅಂದ್ರೆ ತುಂಬಾ ಇಷ್ಟ, ಅದನ್ನ ಹೊಟ್ಟೆ ತುಂಬಾ ತಿನ್ನಬೇಕು. ತಿಂದ ಬಳಿಕ ಒಂದು ಗಂಟೆ ಮಲಗಲು ಅವಕಾಶ ಕೊಡಬೇಕು. ಮಲಗಿದಾಗ ನಾಯಿ ಬೊಗಳುವ ಸೌಂಡ್ ಬರಬಾರದು ಎಂದು ಬೇಡಿಕೆ ಇಟ್ಟಿದ್ದಾರೆ. 

ಇದನ್ನೂ ಓದಿ: ಬೆಂಗಳೂರಲ್ಲಿ ಜೈ ಬಾಂಗ್ಲಾ ಎಂದು ಘೋಷಣೆ‌ ಕೂಗಿದ್ದ ಮಹಿಳೆ ಅರೆಸ್ಟ್ ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata Bigg boss
Advertisment