/newsfirstlive-kannada/media/media_files/2026/01/10/ashwini-gowda-and-gilli-nata-3-2026-01-10-13-52-57.jpg)
ಒಬ್ಬ ಒಳ್ಳೆ ಫ್ರೆಂಡ್​ ಇದ್ರೆ, ನಮ್​ ಕ್ಯಾರೆಕ್ಟರ್​ ಏನೂ ಅಂತ ಅರ್ಥವಾಗುತ್ತೆ. ಅದೇ ಖಡಕ್​ ಆಗಿರೋ ಎನಿಮಿ.. ಶತ್ರು ಇದ್ರೆ.. ನಮ್​ ಕೆಪಾಸಿಟಿ ಏನೂ ಅಂತ ಅರ್ಥವಾಗಿಬಿಡುತ್ತೆ. ಸದ್ಯಕ್ಕೆ ಬಿಗ್​ಬಾಸ್​ ಮನೆಯಲ್ಲಿ ಕ್ಯಾರೆಕ್ಟರ್​ಗೂ, ಕೆಪಾಸಿಟಿಗೂ ಯುದ್ಧ ನಡೀತಿದೆ. ಸ್ಟ್ರೆಂಥು, ವೀಕ್ನೆಸ್​ಗಳ ಚರ್ಚೆ ಆಗ್ತಿದೆ. ಇಡೀ 12ರ ಸೀಸನ್​ಗೆ ಗಿಲ್ಲಿ ಅಶ್ವಿನಿ ಗೌಡ ಸೆಂಟರ್​ ಅಟ್ರ್ಯಾಕ್ಷನ್​. ಬಟ್ ಸ್ಟ್ರಾಂಗ್​​​ ಆಗಿರೋ​ ಅವ್ರಲ್ಲೂ ಕೆಲ ವೀಕ್ನೆಸ್​ಗಳಿವೆ.
ಈಗಿನ ಬಿಗ್​ ಬಾಸ್ ಮನೆಯಲ್ಲೂ ಅಷ್ಟೇ. ಕಿರುಚಾಟಗಳು, ಕಿತ್ತಾಟಗಳು, ಚಾಲೆಂಜ್​ಗಳು, ಬೈಗುಳ.. ಸ್ಟಾಟರ್ಜಿ ಎನರ್ಜಿ ಎಲ್ಲಾ ಕಂಡ್ರೂ ಏನೋ ಒಂದ್ರೀತಿ ಬ್ಯೂಟಿ ಇದ್ದೆ ಇರುತ್ತೆ. ಅಶ್ವಿನಿಯ ಕೋಪದ ಧಗ.. ಕಾವ್ಯ ಗಿಲ್ಲಿಯ ಮೌನರಾಗ. ರಕ್ಷಿತಾಳ ಭಾಷೆಯ ಮಾತಿನ ಭಾಗ. ಧ್ರುವಂತ್​,ರಘು, ಧನುರ ಆಟದ ವೇಗ.. ಹೀಗೆ ಒಂದಾ ಎರಡಾ. ಇದೆಲ್ಲದ್ರ ಜೊತೆಗೆ.. ಮನೆಯಲ್ಲಿ ಇಬ್ಬರಿಗೆ ಇಬ್ಬರೇ ಅನ್ನುವಂತೆ ಇರೋರು.. ನಾನಾ ನೀನಾ ಅನ್ನುವಂತೆ ಭುಸುಗುಟ್ಟೋರು.. ತೊಡೆ ತಟ್ಟಿ ಸವಾಲೆಸೆಯೋರು.. ಮಾತಿನಿಂದಲೇ ಈಟೆ ಚುಚ್ಚಿ ಮಜಾ ನೋಡೋರು. ಟಕ್ಕರ್​ಗೆ ಟಕ್ಕರ್​.. ಪಂಚ್​ಗೆ ಪಂಚ್​.. ನನ್ನ ನೀನು ಗೆಲ್ಲಲಾರೆ ಅನ್ನೋ ರೇಂಜ್​ಗೆ ಟಫ್​ ಚಾಲೆಂಜ್​ ಕೊಡ್ತಿರೋರು ಗಿಲ್ಲಿ, ಅಶ್ವಿನಿ ಗೌಡ. ​​
ಇದನ್ನೂ ಓದಿ:ಡಲ್ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್ ಚೇಂಜರ್ ಆದ್ರಾ ಅಶ್ವಿನಿ ಗೌಡ..?
/filters:format(webp)/newsfirstlive-kannada/media/media_files/2026/01/10/ashwini-gowda-and-gilli-nata-2-2026-01-10-13-56-53.jpg)
ಬಿಗ್​ಬಾಸ್​ ಸೀಸನ್​ 12. ಯಾವ ಬಿಗ್​ಬಾಸ್​ ಶೋ ಚರ್ಚೆ ಆಗದಷ್ಟು ಚರ್ಚೆ ಈ ಸೀಸನ್​ ಮಾಡಿದೆ. ಅದಕ್ಕೆ ಕಾರಣ ಗಿಲ್ಲಿ. ಬಟ್​ ಈಗೀಗ ಅಶ್ವಿನಿ ಗೌಡ ಬೆಸ್ಟ್​ ಚಾಲೆಂಜ್ ಕೊಡ್ತಾ​.. ಗಿಲ್ಲಿಯ ಓಟಕ್ಕೆ ಬ್ರೇಕ್​ ಹಾಕ್ತಾ.. ನನ್ನ ಮಾತೇ ಶಾಸನ ಅಂತ ಡೈಲಾಗ್​ ಹೊಡೆಯೋ ಶಿವಗಾಮಿ ರೀತಿ ರೆಡಿಯಾಗಿದ್ದಾರೆ. ಇಬ್ಬರು ಮನೆಯನ್ನ ಆಳ್ತಿದ್ದಾರೆ. ಇಡೀ ಕ್ಯಾಮೆರಾಗಳನ್ನ ತಿರುಗಿಸ್ಕೊಂಡು, ಫೂಟೆಜ್​​ ನುಂಗಾಕ್ತಿದಿದ್ದಾರೆ ಅಂದ್ರೆ.. ಹೌದು ಸ್ವಾಮಿ ಅನ್ಲೇಬೇಕು.
ಬಿಗ್​ಬಾಸ್ ಶೋ ಅರ್ಥ.. ಬಿಗ್​ ಮನೆಯ ಸ್ಟಾಟರ್ಜಿ.. ಗಿಲ್ಲಿಗೆ ಅರ್ಥವಾಗಿತ್ತು. ಅದು ಅಶ್ವಿನಿ ಗೌಡಗೂ ಅರ್ಥವಾಗಿದೆ. ಅರ್ಥ ಮಾಡಿಕೊಳ್ಳೋನಿಗೆ ಸಣ್ಣ ಹಿಂಟ್​ ಕೊಟ್ರೂ ಸಾಕು ಅನ್ನೋ ಈ ಮಾತು. ಸದ್ಯಕ್ಕೆ ಇಬ್ಬರ ನಡುವೆ ಥಗ್​ ಫೈಟ್​ಗೆ ಕಾರಣವಾಗಿದೆ. ಈ ಇಬ್ಬರ ಸ್ಟ್ರೆಂಥ್​ ಅಂತ ಹೇಳ್ಬೋದು.. ಬಟ್​ ಈ ಇಬ್ಬರಲ್ಲೂ ಕೆಲ ವೀಕ್ನೆಸ್​ಗಳಿವೆ.
ಇದನ್ನೂ ಓದಿ:ಬಿಗ್ ಬಾಸ್‌ಗೆ ಮುನ್ನ 80 ಸಾವಿರ, ಈಗ 1 ಮಿಲಿಯನ್ ಫಾಲೋವರ್ಸ್ ಗಿಟ್ಟಿಸಿದ ಗಿಲ್ಲಿ ನಟ!
/filters:format(webp)/newsfirstlive-kannada/media/media_files/2026/01/10/ashwini-gowda-and-gilli-nata-2026-01-10-13-56-35.jpg)
ಟಿಕೆಟ್​ ಟೂ ಟಾಕ್​ ಸಿಕ್ಸ್​ ಕಂಟೆಂಡರ್​ ಓಟಕ್ಕೆ. ನಾಲ್ನೇ ಟಾಸ್ಕ್​ ಕೊಟ್ಟಿತ್ತು. ಇದು ಧ್ರುವಂತ್​ ಮತ್ತು ಅಶ್ವಿನಿ ಗೌಡಗೆ ಹೇಳಿ ಮಾಡಿಸಿದ್ದ ಗೇಮ್. ಇದ್ರಲ್ಲಿ ಅವ್ರಿಬ್ಬರಿಗೂ ಅಕ್ಷರಗಳ ಸೂಜಿಗಳಿಂದ.. ಕಂಟೆಂಸ್ಟಂಟ್​ ಕೊಟ್ಟ ಪದಗಳ ಪೆಟ್ಟು.. ಈ ಗೇಮ್​ ಆದ ಮೇಲೆ ಗಿಲ್ಲಿ ಅಶ್ವಿನಿ ಇಬ್ಬರ ಸ್ಟ್ರೆಂಥು ವೀಕ್ನೆಸ್ಸು ಕಾಣ್ತಾ ಹೋಗಿದೆ. ಅಶ್ವಿನಿ ಗೌಡ ಅವ್ರಿಗೆ ಒಂದು ಮೆಟ್ಟಿಲು ಮೇಲೆ ಹತ್ತಿಸಿದೆ. ಬಟ್​ ಈ ಆಟ ಗೆದ್ದ ಮೇಲೂ ಅಶ್ವಿನಿಗೆ ಸಮಾಧಾನ ಇಲ್ಲ ಯಾಕೆ ಗೊತ್ತಾ? ಕಂಟೆಸ್ಟಂಟ್ಸ್​​​ ಆಕೆಗೆ ಕೊಟ್ಟಿದ್ದ ಪದಗಳು.
ಧ್ರುವಂತ್​-ಅಶ್ವಿನಿ ಕಿರಿಕ್​..
ಇಲ್ಲಿ ಗಿಲ್ಲಿಗೆ ಒಂದು ಖುಷಿಯ ಇನ್ಸಿಡೆಂಟ್​ ನಡೆದಿದೆ. ಅದೆನಂದ್ರೆ ಯಾವಾಗ್ಲೂ ಅಶ್ವಿನಿಗೆ ಸಪೋರ್ಟ್​ ಆಗಿ ನಿಲ್ತಿದ್ದ ಧ್ರುವಂತ್​.. ಒಂದು ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಯ್ತು.. ಅದನ್ನ ನೋಡಿದ್ದ ಗಿಲ್ಲಿ ಫುಲ್​ ಥ್ರಿಲ್​ ಆಗಿಬಿಟ್ಟಿದ್ದ.
ಇದೇ ಗಿಲ್ಲಿಗಿರೋ ಏಕೈಕ ವೀಕ್ನೆಸ್​. ಯಾವಾಗ್ಲೋ ನಿನ್ನ ಬಿಟ್ಟುಕೊಡಲ್ಲ ಅಂತ ಹೇಳಿದಾಗಿನಿಂದ. ಗಿಲ್ಲಿ ಕಾವ್ಯ ಪರವೇ ಇದ್ದಾರೆ. ಒಂದು ಟೈಮ್​ನಲ್ಲಿ ಕಿಚ್ಚ ಸುದೀಪ್​​ ಅವ್ರು ಗಿಲ್ಲಿ ನೀವು ಗೆಲ್ಲಿ ಆದ್ರೆ.. ನಿಮ್ಮಿಂದಲೇ ಕಾವ್ಯ ದೋಣಿ ಮುಳುಗ್ಬೋದು ಅಂತ ಹೇಳಿದ್ರು. ಇದನ್ನ ನೋಡ್ತಿದ್ರೆ ಅದು ನಿಜವೇ ಆಗ್ಬೋದು ಅನಿಸ್ತಿದೆ. ಇದು ಗಿಲ್ಲಿಗೆ ವೀಕ್ನೆಸ್ಸು. ಉಳಿದವರಿಗೆ ಪ್ಲಸ್​. ಇದಿಷ್ಟೇ ಅಲ್ಲ ಅಶ್ವಿನಿಗೆ ಗಿಲ್ಲಿಗೆ ಇಂಥವು ಹತ್ತಾರು ಸ್ಟ್ರೆಂತು ವೀಕ್ನೆಸ್​ಗಳಿವೆ. ಅವು ಕೇಳಿದ್ರೆ ಹೌದಲ್ವಾ ಅಂತ ಒಪ್ಲೇಬೇಕಾಗುತ್ತದೆ..
ಇದನ್ನೂ ಓದಿ: ಸಪ್ಪೆ ಮುಖ ಇಟ್ಟ ಗಿಲ್ಲಿ.. ಹಿರಿಹಿರಿ ಹಿಗ್ಗಿದ ಅಶ್ವಿನಿ ಗೌಡ..! ಮುಂದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us