/newsfirstlive-kannada/media/media_files/2026/01/08/gilli-7-2026-01-08-12-15-33.jpg)
ಫೇಸ್​ಬುಕ್​ ಲೈವ್​ನಲ್ಲಿ ಪಂಚಿಂಗ್​ ಪಂಟರ್​. ಡಿಕೆಡಿಯಲ್ಲಿ ಪಕ್ಕಾ ಎಂಟರ್​​ಟೈನರ್​​. ಭರ್ಜರಿ ಬ್ಯಾಚ್ಯುಲರ್​ನಲ್ಲಿ ಫನ್​ ಕ್ರೀಯೇಟರ್​. ಬಿಗ್​ಬಾಸ್​ ಹೌಸ್​​ನಲ್ಲಿ ಕಲಾ ಪಂಟರ್​ಗಳ ಹಂಟರ್​. ಗಿಲ್ಲಿ ಎಲ್ಲಿದ್ರೆ ಅಲ್ಲಿ ಗೆಲ್ಲಿ ಅನ್ನೋ ಗಾಳಿ ಬೀಸ್ತಲೇ ಇದೆ. ಬಟ್​ ಇತ್ತೀಚೆಗೆ ಬಿಗ್​​ಮನೆಯಲ್ಲಿ ಗಿಲ್ಲಿ, ಒಂದು ಟಾಸ್ಕ್​ನಲ್ಲಿ ಸೋತಿದ್ದ. ಈಗೇನ್ಮಾಡ್ತಾನೆ ನಿಮ್​ ಹೀರೋ ಅನ್ನೋ ಡೈಲಾಗ್ಸ್​​ ಕೇಳಿ ಬಂದಿದ್ವು.
ಅಸಲೀ ಆಟ ಈಗ ಶುರುವಾಗಿದೆ. ಇಷ್ಟು ದಿನ ಒಂದು ಲೆಕ್ಕ ಈಗಿಂದ ಒಂದು ಲೆಕ್ಕಾ. ಗಿಲ್ಲಿಯ ಒಂದು ಸೋಲು ಇಷ್ಟು ದಿನದ ಅಬ್ಬರವನ್ನ ಕಡಿಮೆ ಮಾಡುತ್ತಾ? ಟ್ಯಾಲೆಂಟ್​ ಇದ್ರೆ ಎಂಥಾ ಕಲಾ ಪಂಟರ್​ಗಳಿದ್ರೂ, ಅಖಾಡದಲ್ಲಿ ಅದೆಂಥಾ ಘಟಾನುಘಟಿಗಳಿದ್ರೂ, ಇಡೀ ಬಿಗ್​ ಮನೆಯ ಕ್ಯಾಮೆರಾಗಳ ಫೋಕಸ್,​ ತನ್ನತ್ತ ತಿರುಗಿಸಿಬಿಡ್ಬೋದು ಅನ್ನೋದಕ್ಕೆ ಈ ಸೀಸನ್​ನಲ್ಲಿ ಗಿಲ್ಲಿ ಸಾಕ್ಷಿ. ಬಟ್​​ ಗಿಲ್ಲಿ ಹವಾ ಕಮ್ಮಿ ಮಾಡೋಕೆ ಸ್ಪರ್ಧಿಗಳ ಜಿದ್ದಾಟ ನಡೀತಲೇ ಇದೆ.
ಈ ಬಾರಿಯ ಬಿಗ್​ಬಾಸ್ ಶೋ​​.. ಇಂಥಾದೊಂದು ಶೋ ಇದೆ ಅನ್ನೋದೇ ತಿಳಿಯದ ಜನರಿಗೆ ತಲುಪಿದೆ. ಯಾಕಂದ್ರೆ ಗಿಲ್ಲಿ ಅನ್ನೋ ಹಳ್ಳಿಹುಡುಗನ ಜಾಯಿಕಾಯಿ ಜಜ್ಜನಕ ಆಟಕ್ಕೆ.. ಇಡೀ ಮನೆಯ ಕಂಟೆಸ್ಟಂಟ್ಸನ್ನ ಕ್ರಾಸ್​ ಮಾಡ್ತಿರೋದಕ್ಕೆ.. ಆತನ ಟೈಮಿಂಗ್​.. ಪಂಚಿಂಗ್​​ ನೋಡಿ ಜನ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಅಶ್ವಿನಿ-ಧ್ರುವಂತ್ vs ಇತರೆ ಸ್ಪರ್ಧಿಗಳು.. ಗಿಲ್ಲಿಗೆ ಕಾಡಿದ ಆ ಭಯ ಏನು..?
/filters:format(webp)/newsfirstlive-kannada/media/media_files/2026/01/06/gilli-nata-23-2026-01-06-12-41-33.jpg)
ಗಿಲ್ಲಿ ಗೆಲ್ಲೋ ಕುದುರೆನಾ?
ಬಿಗ್​ಬಾಸ್​ ಸೀಸನ್​ 12 ರಲ್ಲಿ.. ಸದ್ಯಕ್ಕೆ ಗೆಲ್ಲುವ ಕುದುರೆಗಳ ಲಿಸ್ಟ್​ನಲ್ಲಿ ಮೊದಲು ಗಿಲ್ಲಿ ಇದ್ದಾನೆ ತಪ್ಪಾಗೋದಿಲ್ವೇನೋ.. ನೆಕ್ಸ್​​ಟ್​ ಗೆಲ್ಲೋ ಕುದುರೆ ಅಶ್ವಿನಿ. ಈ ಇಬ್ಬರ ನಡುವೆ ಇರೋ ಟಗ್​ ವಾರ್​ ಎಂಥಾದ್ದು ಅಂತ ನಿಮ್ಗೆ ಗೊತ್ತೇ ಇದೆ. ಈ ಇಬ್ಬರು ಎದುರಾದ್ರೂ, ಟಾಸ್ಕ್​ನಲ್ಲಿದ್ರೂ.. ಒಬ್ರು ಕ್ಯಾಪ್ಟನ್​ ಆಗಿ ಇನ್ನೋಬ್ರು ಅವ್ರ ಕೈನಲ್ಲಿದ್ರೂ.. ಒಂದು ವೈಬ್ರೇಷನ್​ ಇದ್ದೇ ಇರುತ್ತೆ.
ಇದೇ ಸ್ಪೀಡ್​ ಜೋಶ್​.. ಒಬ್ಬರು ಅಬ್ಬರದಿಂದ ಅಬ್ಬರಿಸಿದ್ರೆ.. ಮತ್ತೊಬ್ಬರು ಸೈಲೆಂಟಾಗಿ ಪಂಚ್​ ಕೊಟ್ಟು ಮಕಾಡೆ ಬೀಳಿಸಿಬಿಡ್ತಾರೆ. ಶತ್ರುತ್ವ ಬೆಳೆಸಿಕೊಳ್ಳೋಕೂ ಸರಿಯಾದ ವ್ಯಕ್ತಿಯನ್ನೇ ಆಯ್ಕೆ ಮಾಡ್ಕೊಳ್ಬೇಕಂತೆ. ಯಾಕಂದ್ರೆ ತನ್ನ ಕೆಪಾಸಿಟಿಗೆ ತಕ್ಕಂತೆ ಎದುರಾಳಿ ಇದ್ರೆ ಅಲ್ವಾ.. ಅಸಲೀ ಗೆಲುವಿನ ರುಚಿ ಗೊತ್ತಾಗೋದು. ಈ ಬಾರಿಯ ಬಿಗ್​​ಬಾಸ್​ ಮನೆಯ ಸರಿಯಾದ ಎದುರಾಳಿಗಳು ಗಿಲ್ಲಿ ಅಶ್ವಿನಿ.
ಇದನ್ನೂ ಓದಿ: ಗಿಲ್ಲಿ ಬಿಗ್​ ಗೇಮ್​ನಲ್ಲಿ ಪರಕಾಯ ಪ್ರವೇಶ.. ಆಟದ ರಹಸ್ಯ ಬಿಟ್ಟುಕೊಟ್ಟ ಗಿಲ್ಲಿ..!
/filters:format(webp)/newsfirstlive-kannada/media/media_files/2026/01/06/gilli-nata-20-2026-01-06-12-36-45.jpg)
ಬಿಗ್​ಬಾಸ್​​ ಹೌಸ್​ನಲ್ಲಿ ಗಿಲ್ಲಿಗೆ ಸರಿಯಾದ ಎದುರಾಳಿ. ಯಾರು ಮನೆಯಲ್ಲಿರ್ಬೇಕು ಯಾರನ್ನ ಓಡಿಸ್ಬೇಕು ಅಂತ ಜಿದ್ದಿಗೆ ಬೀಳೋದ್ರಲ್ಲಿ ಅವ್ರಿಬ್ಬರಿಗೆ ಅವ್ರಿಬ್ಬರೇ ಸಾಟಿ. ಬಟ್​ ಸದ್ಯಕ್ಕೆ ಹೌಸ್​ನರೋ ಎಂಟು ಜನರಲ್ಲಿ.. ಯಾರು ಸ್ಟ್ರಾಂಗ್​.. ಅಂಥಾ ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳನ್ನ ಗಿಲ್ಲಿ ಹೇಗೆ ಸರಿಗಟ್ಟಿದ್ದ.
ಗಿಲ್ಲಿ ‘ದಾಂಡು’ ಯಾತ್ರೆ!
ಅಶ್ವಿನಿ ಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ಚಾಪು ಮೂಡಿಸಿರೋ ನಟಿ, ನಿರ್ಮಾಪಕಿ. ಇವ್ರು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿ ಕೂಡ. ಜೊತೆಗೆ ಇವ್ರಿಗೆ ಎ.ಎಂ.ಜಿ ಅನ್ನೋ ಪ್ರೊಡಕ್ಷನ್ ಹೌಸ್ ಕೂಡ ಇದೆ. ಅಶ್ವಿನಿ ನಕ್ಷತ್ರ, ಮಹಾಪರ್ವ ಅನ್ನೋ ಸೀರಿಯಲ್​ಗಳಿಂದ, ಸುಮಾರು 15ಕ್ಕೂ ಹೆಚ್ಚು ಸೀರಿಯಲ್​ಗಳಲ್ಲಿ ನಟಿಸಿ ಗುರುತಿಸಿಕೊಂಡ ನಟಿ ಅಶ್ವಿನಿ ಗೌಡ. ಇಷ್ಟೇನಾ.. ಇನ್ನೂ ಇದೆ. ಚಡ್ಡಿ ದೋಸ್ತ್, ರಾಜಾಹುಲಿ, ಹ್ಯಾಪಿ ಬರ್ತಡೇ ಸೇರಿ ಸುಮಾರು 45ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಾಹುಲಿಯಲ್ಲಿ ಯಶ್ ಅತ್ತೆ ಮಗಳ ಪಾತ್ರ ಅಶ್ವಿನಿಗೆ ಮೈಲೇಜ್​ ಕೊಡ್ತು ಅಂದ್ರೆ ಒಪ್ಪಿಕೊಳ್ಳೇಬೇಕು.
ಇದನ್ನೂ ಓದಿ: ಕಿಚ್ಚ ಕೇಳಿದಾಗ ಗಿಲ್ಲಿ ಬಾಯಿಯಿಂದ ಬಂತು ಕುತೂಹಲಕಾರಿ ಅಸಲಿ ವಿಷಯಗಳು..!
/filters:format(webp)/newsfirstlive-kannada/media/media_files/2026/01/03/gilli-and-ashwini-2026-01-03-19-44-29.jpg)
ಮೋಸ್ಟ್​ ಟಾಪ್​ ಆರ್ಟಿಸ್ಟಾದ ಅಶ್ವಿನಿ ಗೌಡರನ್ನೇ ಕ್ರಾಸ್​ ಮಾಡ್ತಿರೋ ಗಿಲ್ಲಿ ಇನ್ನೆಂಥಾ ಪಂಟರ್​ ಇರ್ಬೋದು ಅನ್ನೋದೇ ಈಗ ಚರ್ಚೆ. ಸಣ್ಣದಾಗಿ ಫೇಸ್​ಬುಕ್​ನಲ್ಲಿ ಲೈವ್​ ಸ್ಟಾರ್ಟ್​ ಮಾಡಿದ್ದ ಹುಡುಗ.. ದಶಕಗಳಿಂದ ಇಂಡಸ್ಟ್ರಿಯಲ್ಲಿರೋ ಅಶ್ವಿನಿ ಗೌಡಾಗೆ ಟಾಂಗ್​ ಕೊಡ್ತಿದ್ದಾನೆ ಅಂದ್ರೆ.. ವಿಷ್ಯ ಇದೆ ಅಂತಿದ್ದಾರೆ ಜನ.
ಬಿಗ್​ಬಾಸ್​ ಸ್ಪರ್ಧಿ - ಧ್ರುವಂತ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮತ್ತೊಬ್ಬ ಸ್ಟ್ರಾಂಗ್​ ಕಂಟೆಸ್ಟಂಟ್​ ಅಂದ್ರೆ ಅದು ಧ್ರುವಂತ್. ಈತನ ಅಸಲೀ ಹೆಸ್ರು ಚರಿತ್​ ಬಾಳಪ್ಪ. ಮುದ್ದು ಲಕ್ಷ್ಮಿ​ ಧಾರಾವಾಹಿಯಲ್ಲಿ ಡಾಕ್ಟರ್​ ಧ್ರುವಂತ್​ ಅನ್ನೋ ಪಾತ್ರ ಇವ್ರಿಗೆ ಹೆಸರು ತಂದುಕೊಟ್ಟಿತ್ತು.. ಹಾಗಾಗಿ ಅದೇ ಹೆಸ್ರನ್ನ ಕ್ಯಾರಿ ಮಾಡ್ತಿದ್ದಾರೆ. ಧ್ರುವಂತ್​ ಕೇವಲ ನಟ ಅಷ್ಟೇ ಅಲ್ಲ.. ಮಾಡೆಲಿಂಗ್​.. ಎಚ್​​ಎಸ್​ಬಿಸಿಯಲ್ಲಿ ಕೆಲ್ಸ ಮಾಡಿದ್ದಾರೆ. ಜೆಟ್​ ಏರ್​ವೇಸ್​ನಲ್ಲಿ ಫ್ಲೈಟ್​ ಅಟೆಂಡೆಂಟ್ ಆಗಿನೂ ಕೆಲ್ಸ ಮಾಡಿದಾರೆ. ಇನ್ನೂ ಒಳ್ಳೇ ಸಂಬಳ ಇದ್ರೂ ನಟನೆ ಮೇಲೆ ಮೋಹ ಬೆಳೆದು ಇತ್ತ ವಾಲಿದ್ದ ಆತ.. ಲವಲವಿಕೆ, ಅಮ್ಮ, ಸರ್ಪ ಸಂಬಂಧ, ಮುದ್ದುಲಕ್ಷ್ಮೀ ಸೀರಿಯಲ್​ಗಳಲ್ಲಿ ನಟಿಸಿದ್ರು. ಸಿನಿಮಾಗಳಲ್ಲೂ ನಟಿಸೋ ಆಸೆ ಇದೆ. ಅದು ಒಲಿದು ಬರೋ ಚಾನ್ಸ್​ ಕೂಡ ಇದೆ. ಹೀಗೆ ಎಷ್ಟೋ ಕ್ಷೇತ್ರಗಳಲ್ಲಿ ಪಂಟರ್ ಆಗಿರೋ ಧ್ರುವಂತ್​ರನ್ನೂ ಗಿಲ್ಲಿ ಓವರ್​​ಟೇಕ್​ ಮಾಡ್ತಿದ್ದಾನೆ.
ಇದನ್ನೂ ಓದಿ:ಗಿಲ್ಲಿ, ಅಶ್ವಿನಿ, ಧನು.. ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯೋಱರು?
/filters:format(webp)/newsfirstlive-kannada/media/media_files/2025/12/28/gilli-nata-12-2025-12-28-14-30-09.jpg)
ಮ್ಯುಟೆಂಟ್ ರಘು
ಮ್ಯುಟೆಂಟ್ ರಘು.. ಇವ್ರ ಪೂರ್ತಿ ಹೆಸ್ರು ರಾಘವೇಂದ್ರ ಎಸ್ ಹೊಂಡಕೇರಿ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಕ್ವಾಟ್ಲೆ ಕಿಚನ್ ಶೋನಲ್ಲಿ ವಿನ್ನರ್ ಆಗಿದ್ರು. ಈತ ಪವರ್ ಲಿಫ್ಟಿಂಗ್ ಸ್ಪೋರ್ಟ್ಸ್​​ನಲ್ಲಿ ಕರ್ನಾಟಕ ಮತ್ತು ಭಾರತದ ಹೆಸರನ್ನ ನ್ಯಾಷನಲ್ ಲೆವೆಲ್​ನಲ್ಲಿ ಬೆಳಗಿಸಿದ್ದಾತ. ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿನ್ನರ್​​ ಕೂಡ. ಇದೇ ಪವರ್​ ಲಿಫ್ಟಿಂಗ್​​ನಲ್ಲಿ 25 ವರ್ಷ ಎಕ್ಸ್​ಪೀರಿಯನ್ಸ್ ಇರೋ ರಘು.. ಗಿಲ್ಲಿ ಮುಂದೆ ಮುಗ್ಧ.
ಪವರ್ ಲಿಫ್ಟಿಂಗ್‌ನಲ್ಲಿ ರಘು ವರ್ಲ್ಡ್ ಚಾಂಪಿಯನ್.. ಸೆಲೆಬ್ರಿಟಿ ಕೋಚ್ ಕಮ್ ನಟ ಸಹ.. ಈತ ಸೆಲೆಬ್ರಿಟಿಗಳಿಗೆ ಜಿಮ್ ಕೋಚ್ ಮಾಡ್ತಿರ್ತಾರೆ. ಕಾಟೇರ, ಕ್ರಾಂತಿ ಸಿನಿಮಾಗಳಲ್ಲಿ ವಿಲನ್ ಪಾತ್ರ.. ಇತ್ತೀಚೆಗೆ ಬಂದ ಮಳಯಾಳಂನ ವೃಷಭ ಚಿತ್ರದಲ್ಲಿ ಮಿಂಚಿದ್ರು.. ಅಷ್ಟೇ ಅಲ್ಲ ಕಾಂತಾರ ಚಾಪ್ಟರ್ 1ರಲ್ಲೂ ವಿಲನ್ ಆಗಿ ನಟಿಸಿದ್ದಂಥವರು. 12 ವರ್ಷಗಳ ಐಟಿ ಕ್ಷೇತ್ರದಲ್ಲಿ ಆನಿಮೇಷನ್ ವಿಭಾಗದಲ್ಲಿ ಕೆಲಸ ಮಾಡಿದ್ದ ರಘು, ಲಕ್ಷ ಲಕ್ಷ ಸಂಬಳ ಬಿಟ್ಟು ಈ ಕಲಾ ಪ್ರಪಂಚಕ್ಕೆ ಬಂದಿದ್ರು. ಇಂಥಾ ಪಂಟರನ್ನ ಗಿಲ್ಲಿ ಮಗು ಥರ ಮಾಡಿ ಆಟ ಆಡ್ತಿದ್ದಾನೆ.
ಇದನ್ನೂ ಓದಿ: ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?
/filters:format(webp)/newsfirstlive-kannada/media/media_files/2026/01/06/gilli-nata-24-2026-01-06-12-41-49.jpg)
ಧನುಷ್ ಗೌಡ
ಈಗಲೂ ಸೀರಿಯಲ್​ಗಳಲ್ಲಿ ಮಿಂಚ್ತಿರೋ ನಟ, ಓಡುವ ಕುದುರೆ ಧನುಷ್​ ಗೌಡ. ಗೀತಾ ಅನ್ನೋ ಸೀರಿಯಲ್​ನಿಂದ ಧನುಷ್​​​ ಇಡೀ ಕನ್ನಡಿಗರಿಗೆ ಅಚ್ಚುಮೆಚ್ಚು. ಪುಟ್ಟಕ್ಕನ ಮಕ್ಕಳು ಸೀರಿಯಲ್​ ಪಾತ್ರದಿಂದ ಧನುಷ್ ಗೌಡ ಮತ್ತಷ್ಟು ಫೇಮಸ್​​ ಆಗಿದಾರೆ. ಈತ ಬಿಗ್ ಬಾಸ್ ಮಿನಿ-ಸೀಸನ್‌ನಲ್ಲೂ ಕಾಣಿಸಿಕೊಂಡಿದ್ರು. ಇದೇ ಧನುಷ್​ಗೆ ರಿಯಾಲಿಟಿ ಶೋ ಡೈನಾಮಿಕ್ಸ್ ಟೇಸ್ಟ್​​ ತಿಳಿಸಿತ್ತು. ಫ್ಯಾಷನ್​.. ಮಾಡೆಲಿಂಗ್​ನಂಥ ಕ್ಷೇತ್ರಗಳಲ್ಲೂ ಧನುಷ್​ ಪಳಗಿರೋ ಕುದುರೇನೇ. ಸದ್ಯಕ್ಕೆ ಧನುಷ್ ಗೌಡ ಸಹ ಬಿಗ್ ಬಾಸ್ ಕನ್ನಡ ಸೀಸನ್ 12 ರ ಪಂಟರ್​ ಕಂಟೆಸ್ಟಂಟ್. ಇಂಥಾ ಘಟಾನುಘಟಿರನ್ನೂ ಗಿಲ್ಲಿ ಸೈಡ್​ ಟ್ರ್ಯಾಕ್​ನಲ್ಲಿ ನಿಲ್ಲಿಸಿದ್ದು ಅಚ್ಚರಿ ಅಂತಿದ್ದಾರೆ ಜನ.
ಇದನ್ನೂ ಓದಿ:ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?
/filters:format(webp)/newsfirstlive-kannada/media/media_files/2025/12/09/ashwini-gowda-10-2025-12-09-14-47-21.jpg)
ಸಪ್ಪೆ ಮುಖ ಇಟ್ಟ ಗಿಲ್ಲಿ..
99 ದಿನದ ಬಿಗ್​ಬಾಸ್​​ ಹೌಸ್​ ಡೇಸ್​ನಲ್ಲಿ. ಗಿಲ್ಲಿಗೆ ಒಂದು ಅಗ್ನಿ ಪರೀಕ್ಷೆ ಎದುರಾಗಿತ್ತು. ಬಿಗ್ ಬಾಸ್ ಕೊಟ್ಟ ಈ ಆಟದ ಕೊನೇ ಹಂತದಲ್ಲಿ ಗಿಲ್ಲಿ ನಟ ಎಡವಿದ್ನಾ ಅನ್ನೋ ಪ್ರಶ್ನೆ ಬರುತ್ತೆ. ಈ ಆಟದಿಂದಲೇ ಗಿಲ್ಲಿ ಫ್ಯಾನ್ಸ್​ಗೆ ಚೂರು ಬೇಜಾರಾಗಿರ್ಬೋದು. ಟಾಸ್ಕ್​ ಇಷ್ಟೇ.. ‘ಟಿಕೆಟ್ ಟು ಟಾಪ್ 6’. ಈ ಟಾಸ್ಕ್​ನಲ್ಲಿ ಧ್ರುವಂತ್.. ಗಿಲ್ಲಿ ನಟ ನಡುವೆ ಭಾರಿ ಪೈಪೋಟಿ ನಡೆದಿತ್ತು.
ಇದೇ ಚುಚ್ಚೋದೇ ನನ್ನ ಬಿಸ್​ನೆಸ್ಸು ಅನ್ನೋ ಟಾಸ್ಕ್​​ನಲ್ಲಿ ಗಿಲ್ಲಿ ಎಡವಿದ್ದ. ಇದೊಂದರು ರೀತಿ ಧ್ರುವಂತ್​ಗೆ ವರ ಇದ್ದಂತೆ. ಯಾಕಂದ್ರೆ ಇಲ್ಲಿ ಗೆಲ್ಲೇಬೇಕು ಅನ್ನೋ ಹಠ ಧ್ರುವಂತ್​​ನಲ್ಲಿತ್ತು. ಬಟ್​ ಗಿಲ್ಲಿಗೂ ಧ್ರುವಂತ್​ಗೂ ಬಿದ್ದ ಈ ಜಿದ್ದಲ್ಲಿ ಗೆದ್ದಿದ್ದು ಧ್ರುವಂತ ಅವ್ರೇ. ಗಿಲ್ಲಿ ಫೈನಲ್​ ತುದಿಯಲ್ಲಿ ಯಡವಿದ್ದಾರೆ. ಧ್ರುವಂತ್​ ಮುಂದೆ ಸೋತಿರೋ ಗಿಲ್ಲಿಯನ್ನ ಕಂಡು.. ಅಶ್ವಿನಿ ಗೌಡಗೆ ಫುಲ್​ ಖುಷಿಯಾಗಿದೆ. ಈಗೇನ್ಮಾಡ್ತಾನೆ ನಿಮ್​ ಹೀರೋ. ವಿಲ್​ ಹಿಮ್​ ಗಿವ್​​ ಅಪ್​? ಇಲ್ಲಿಂದ ಶುರುವಾಗಿದ್ದೇ ಅಸಲೀ ಆಟ. ಜನ ಇರೋದು ಗಿಲ್ಲಿಯತ್ತ. ಅನ್ನೋ ಕೂಗು ಕೇಳಿಸ್ತಿದೆ.
ಇದನ್ನೂ ಓದಿ: ಕಿಚ್ಚ ಕೇಳಿದಾಗ ಗಿಲ್ಲಿ ಬಾಯಿಯಿಂದ ಬಂತು ಕುತೂಹಲಕಾರಿ ಅಸಲಿ ವಿಷಯಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us