ಕಿಚ್ಚ ಕೇಳಿದಾಗ ಗಿಲ್ಲಿ ಬಾಯಿಯಿಂದ ಬಂತು ಕುತೂಹಲಕಾರಿ ಅಸಲಿ ವಿಷಯಗಳು..!

ಬಿಗ್​ಬಾಸ್​​ನ ಆ ಇಬ್ಬರು ವಿನ್ನರ್​ಗಳೇ ‘ಗಿಲ್ಲಿ’ಯ ಸ್ಟ್ರೆಂಥಾ? ಬನಿಯನ್​ನಲ್ಲಿದ್ರೂ ಗಿಲ್ಲಿ ‘ರಾಜ’.. ಕಿಚ್ಚ ಹೀಗೆ ಹೇಳಿದ್ಯಾಕೆ? ಗಿಲ್ಲಿ ಆಡಿದ್ದೇ ಅಸಲೀ ಗೇಮಾ? ಗಿಲ್ಲಿ ಸ್ಟ್ರಾಟರ್ಜಿ ಎಂಥಾದ್ದು? ಇಂಟ್ರೆಸ್ಟಿಂಗ್ ಸ್ಟೋರಿ..

author-image
Ganesh Kerekuli
GillI Nata (20)
Advertisment
  • ಬಿಗ್​ಬಾಸ್​​ನ ಆ ಇಬ್ಬರು ವಿನ್ನರ್​ಗಳೇ ‘ಗಿಲ್ಲಿ’ಯ ಸ್ಟ್ರೆಂಥಾ?
  • ಗಿಲ್ಲಿ ಆಡಿದ್ದೇ ಅಸಲೀ ಗೇಮಾ? ಗಿಲ್ಲಿ ಸ್ಟ್ರಾಟರ್ಜಿ ಎಂಥಾದ್ದು?
  • ಆ 2 ಸೀಸನ್​ಗಳನ್ನ ನೋಡಿಕೊಂಡೇ ಬಿಗ್​ಬಾಸ್​ಗೆ ಎಂಟ್ರಿ?

ಬಿಗ್​ ಬಾಸ್​​ ಮನೆಯಲ್ಲಿ ಕೆಲವ್ರು ದೀಪ ಆಗ್ಬೇಕು ಅಂತಿದ್ರೆ.. ಒಬ್ಬ ಮಾತ್ರ ದೀಪವಾಗಿ ಉರಿತಾ ಉಳಿದವರನ್ನ ಎಣ್ಣೆಯಂತೆ ಬಳಸ್ಕೊಳ್ತಿದ್ದಾನಂತೆ. ಬಿಗ್​ ಮನೆಗೆ ಏನ್ ಬೇಕು.. ಅಲ್ಲಿ ಹೇಗಿರ್ಬೇಕು ಅಂತ ತಿಳ್ಕೊಂಡು ಪಕ್ಕಾ ಪ್ರೀ ಪ್ಲ್ಯಾನ್ಡಾಗಿ ಎಂಟ್ರಿ ಕೊಟ್ಟಿದಾನಂತೆ. ಅದು ಬೇರೆ ಯಾರೂ ಅಲ್ಲ.. ಮಾತುಗಳ ಮಾಂತ್ರಿಕ ಗಿಲ್ಲಿ. ಈ ಹಿಂದೆ ಇದೇ ಬಿಗ್​ ಮನೆಯಲ್ಲಿ ಗೆದ್ದ ಆ ಇಬ್ಬರನ್ನ ಇನ್ಸ್​​ಪಿರೇಷನ್​ ಆಗಿ ತಗೊಂಡು, ಗೂಗ್ಲಿ ಹಾರಿಸ್ತಿರೋ ಗಿಲ್ಲಿಯ ಸ್ಟ್ರಾಟರ್ಜಿ ಎಂಥದ್ದು? ಆ ಇಬ್ಬರು ಯಾರು?

ಈ ವಾರದ ಕಥೆ ಕಿಚ್ಚನ ಜೊತೆ ನಡೆದ ಪಂಚಾಯಿತಿಯಲ್ಲಿ ಕೆಲ ಆಸಕ್ತಿಕರ ವಿಷ್ಯಗಳು ಹೊರಬಿದ್ದಿವೆ. ಗಿಲ್ಲಿಯ ಗೂಗ್ಲಿ ಆಟಕ್ಕೆ ಇಬ್ಬರ ಆಟ ಸ್ಟ್ರೆಂಥಾಗಿದೆ. ಒಲಂಪಿಕ್ಸ್​ಗೆ ಹೋಗೋಕೂ ಮುಂಚೆ.. ಯಾವ ರೀತಿಯಲ್ಲಿ ಕಸರತ್ತು ಮಾಡ್ಬೇಕೋ ಎಲ್ಲಾವನ್ನೂ ಮಾಡ್ಕೊಂಡೇ ಹೋಗ್ತಾರೆ. ಬಟ್​ ಬಿಗ್​ಬಾಸ್​ ಮನೆಯಲ್ಲಿ ಆಡೋಕೆ, ಯಾವ ಟೈಮ್​ನಲ್ಲಿ ಅಲ್ಲಿ ಹೇಗೆ ಆಡ್ಬೇಕು ಅನ್ನೋ ಕನ್​ಫ್ಯೂಸ್​ ಇದ್ದೇ ಇರುತ್ತೆ. ಬಟ್​ ಗಿಲ್ಲಿನಟ ಮಾತ್ರ ಹೊರಗೆ ಇದ್ದುಕೊಂಡೇ ಬಿಗ್​ಬಾಸ್​ ಮನೆಯಲ್ಲಿ ಹೇಗಿರ್ಬೇಕು.. ಹೇಗೆ​ ಆಡ್ಬೇಕು.. ಏನೇಲ್ಲಾ ಸ್ಟ್ರಾಟರ್ಜಿ ಮಾಡ್ಬೇಕು ಅಂತ ಪ್ಲ್ಯಾನ್​ ಮಾಡ್ಕೊಂಡು ಎಂಟ್ರಿಯಾಗಿದ್ದಾರಂತೆ. 

ಕಳೆದ ವಾರ ಗಿಲ್ಲಿಯ ಹವಾ ಪೀಕ್ಸ್​ನಲ್ಲಿತ್ತು.. ಗಿಲ್ಲಿ ಕ್ಯಾಪ್ಟನ್​ ಆಗಿದ್ದಾಗ ಒಂದು ರೇಂಜ್​ ಇತ್ತು. ಬಟ್​ ಯಾವಾಗ ಅಶ್ವಿನಿ ಅವ್ರನ್ನ ಕೋ ಕ್ಯಾಪ್ಟನ್​ ಆಗಿ ಮಾಡ್ಕೊಂಡ್ರೋ.. ಅಲ್ಲಿಂದ ಗಿಲ್ಲಿ ಚೂರು ದಾರಿ ತಪ್ಪಿದ ಅನಿಸಿತ್ತು. ಕಳೆದ ವಾರದ ಅಶ್ವಿನಿ ಮತ್ತು ಗಿಲ್ಲಿಯ ಟಗ್​ ವಾರ್​ ಬೇರೆ ಲೆವೆಲ್​ನಲ್ಲಿತ್ತು. ಬಟ್​ ಗಿಲ್ಲಿ ಕ್ಯಾಪ್ಟನ್​ ಆಗಿದ್ದಾಗ ಅಶ್ವಿನಿ ಅವ್ರನ್ನ ಕಾಡಿಸಿದ್ದು.. ಮಲಗಿದ್ದವರನ್ನ ನಿದ್ದೆಗೆಡಿಸಿದ್ದು.. ಕೆಲ್ಸ ಮಾಡ್ಲೇಬೇಕು ಅಂತ ಹಠ ಹಿಡಿದಿದ್ದು.. ಕಿಚ್ಚನ ಪಂಚಾಯಿತಿಯಲ್ಲಿ ಪ್ರಸ್ತಾವನೆ ಬಂದಿತ್ತು. 

ಇದನ್ನೂ ಓದಿ:ಗಿಲ್ಲಿ, ಅಶ್ವಿನಿ, ಧನು.. ಬಿಗ್‌ಬಾಸ್‌ ಟ್ರೋಫಿ ಎತ್ತಿ ಹಿಡಿಯೋಱರು?

Gilli Nata (23)

ಕ್ಯಾಪ್ಟನ್ಸಿಯಲ್ಲಿ ಗಿಲ್ಲಿನೇ ಬೆಸ್ಟಾ? ಅನ್ನೋ ಥಿಂಕಿಂಗ್​ ವಾರದ ಪಂಚಾಯಿತಿಯಲ್ಲಿ ಸೇರಿದ್ದವರ ಮೈಂಡ್​ನಲ್ಲಿ ಓಡಾಡ್ತಾ ಇತ್ತು. ಬಿಗ್​ಬಾಸನ್ನ ಗಿಲ್ಲಿ ಬಿಟ್ಟು ಬೇರೆ ಯಾರೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅನ್ನೋ ಕಿಚ್ಚನ ಮಾತು ಇಡೀ ಕಂಟೆಸ್ಟಂಟ್ಸ್​ಗೆ ದಂಗುಬಡಿಸಿದ್ದು ಸುಳ್ಳಲ್ಲ.

ಗಿಲ್ಲಿಯ ಗೂಗ್ಲಿ ಯಾರಿಗೆಲ್ಲಾ ಟಾಂಗ್​ ಕೊಟ್ಟಿದೆ?

ಗಿಲ್ಲಿ ಕ್ಯಾವ್ಯ ಆಡಿದ್ದ ಗೇಮ್​ನಲ್ಲಿ ಸ್ಟ್ರಾಟರ್ಜಿ ಇತ್ತು. ಹಾಗೆ ಗಿಲ್ಲಿ ಆಡೋ ಆಟದಲ್ಲೂ ಸ್ಟ್ರಾಟರ್ಜಿ ಇರ್ತಿತ್ತು. ಬಟ್​ ಇದೆಲ್ಲಾ ಗೊತ್ತಿದ್ದ ಕಂಟೆಸ್ಟಂಟ್​ಗಳು. ಯಾರೊಬ್ಬರೂ ಗಿಲ್ಲಿ ಎದುರು ನಿಂತು ಇದು ತಪ್ಪು ಅಂತ ಹೇಳೇ ಇಲ್ಲ. ಅದೇ ಗಿಲ್ಲಿಗೆ ಬ್ರಹ್ಮಾಸ್ತ್ರವಾಗ್ತಿದೆ. ಅದಕ್ಕಾಗಿನೇ ಕಿಚ್ಚ ಸುದೀಪ್​ ನೀವು ದೀಪ ಆಗಿರ್ತೀರೋ ಅಥವಾ ಬೇರೆ ದೀಪಕ್ಕೆ ಎಣ್ಣೆಯಾಗಿರ್ತೀರೋ ಅಂದಿದ್ದು.

ಇದನ್ನೂ ಓದಿ:ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?

Gilli Nata (24)

ಕಾವ್ಯ ಆಡಿದ್ದ ನೀರು ಮತ್ತು ಸ್ಪಾಂಜ್​ ಗೇಮಲ್ಲಿ ಆಕೆಯ ಬಕೆಟ್​ನಲ್ಲಿ ನೀರು ಕಡಿಮೆ ಇದ್ದದ್ದು, ಇಡೀ ಕಂಟೆಸ್ಟಂಟ್ಸ್​ಗೆ ಗೊತ್ತಿತ್ತು.. ನೋಡೋ ಜನರಿಗೆ ಗೊತ್ತಿತ್ತು.. ಹಾಗೆ ಕಾವ್ಯಗೂ ಗೊತ್ತಿತ್ತು ಬಟ್​ ಅದನ್ನ ಗಿಲ್ಲಿ ಒಪ್ಪಿಕೊಳ್ಳೋಕೆ ರೆಡಿ ಇರ್ಲಿಲ್ಲ. ಯಾಕಂದ್ರೆ ಗಿಲ್ಲಿ ಕಾವ್ಯಳಿಗೆ ಕೊಟ್ಟ ಮಾತಿಗೆ ಬದ್ಧನಾಗಿದ್ದ. ಹಾಗಂತ ಯಾರೊಬ್ಬ ಕಂಟೆಸ್ಟಂಟ್​ ಜೋರು ಧ್ವನಿಯಲ್ಲಿ ತಪ್ಪನ್ನ ತಪ್ಪು ಅಂತ ಹೇಳಿಲ್ಲ.. ಅದೇ ಕಿಚ್ಚನ ಪ್ರಶ್ನೆಯೂ ಆಗಿತ್ತು.

ಇನ್ನೇನು ಇನ್ನು ಎರಡೇ ವಾರಗಳಲ್ಲಿ ಬಿಗ್​ಬಾಸ್​ಗೆ ಎಂಡ್​ ಕಾರ್ಡ್​ ಬೀಳಲಿದೆ. ಇಡೀ ಮನೆಯಲ್ಲಿ ಎಲ್ಲಾರೂ ಅವ್ರದ್ದೇ ಆದ ಸ್ಟ್ರಾಟರ್ಜಿ ಶುರು ಮಾಡೋಕೆ ಪ್ಲ್ಯಾನ್​ ಮಾಡ್ತಿದಾರೆ. ಬಟ್​ ಗಿಲ್ಲಿ ಆಡ್ತಿರೋ ಸ್ಟ್ರಾಟರ್ಜಿಗೆ ಯಾರೋಬ್ಬರೂ ಪ್ರಶ್ನೆ ಮಾಡದೇ ಇರೋದು ಇಲ್ಲಿ ಕಿಚ್ಚನಿಗೆ ಅಚ್ಚರಿ ಮೂಡಿಸಿದೆ. ಕಾವ್ಯಳನ್ನ ಗಿಲ್ಲಿ ಸೇಫ್​ ಮಾಡ್ತಿರೋದಕ್ಕೆ.. ಆಕೆಯನ್ನ ಎಲಿಮಿನೇಟ್​ ಮಾಡೋಕೆ ಇಡೀ ಕಂಟೆಸ್ಟಂಟ್​ಗಳ ಬಳಿ ಅಲ್ಲ.. ಸ್ವತಃ ಗಿಲ್ಲಿ ಬಳಿಯೇ ಕಾರಣಗಳಿಲ್ಲವಂತೆ. ಅದಕ್ಕಾಗಿ ಕಿಚ್ಚ ಕಾವ್ಯಳ ಎಲಿಮಿನೇಟ್​ ಮಾಡೋಕೆ ಗಿಲ್ಲಿ ಬಳಿಯೇ ಐದು ಕಾರಣ ಕೇಳಿದ್ದಾರೆ.
ಈ ಬಾರಿಯ ಸೀಸನ್​ನಲ್ಲಿ ಗಿಲ್ಲಿ ಕೊಟ್ಟ ಎಂಟರ್​ಟೈನ್​ಮೆಂಟ್​ ಬಗ್ಗೆ ಮಾತನಾಡೋಕೆ ಏನೂ ಇಲ್ಲ.. ಬಟ್​ ಗಿಲ್ಲಿ ಕಾವ್ಯ ಪರ ನಿಂತಿದ್ದು ಆತನ ಪರವಾಗಿಯೂ ಕೆಲವರು ಇದ್ದಾರೆ. ಆತನ ವಿರುದ್ಧವೂ ಇದ್ದಾರೆ. ಹಾಗಂತ ಎಲ್ಲಾ ಟೈಮ್​ನಲ್ಲೂ ಗಿಲ್ಲಿ ಕಾವ್ಯ ಪರ ನಿಲ್ಲೋದು ಸರಿಯಲ್ಲ ಅಂತ ಕೆಲ ಜನರ ಅಭಿಪ್ರಾಯ.. ಸ್ವತಃ ಕಿಚ್ಚನದ್ದೂ ಕೂಡ.

ಇದನ್ನೂ ಓದಿ:ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತಿದ್ದಾರಾ ಗಿಲ್ಲಿ..?

Gilli Nata (26)

ಬಿಗ್​ಬಾಸ್​ ಮನೆಯಲ್ಲಿ ಈಗ ಖಡಕ್​ ಕಂಟೆಸ್ಟಂಟ್ಸ್​ ಅಂದ್ರೆ ಅಶ್ವಿನಿ, ಗಿಲ್ಲಿ. ಈ ಇಬ್ಬರಿಗೂ ಬಿದ್ದ ಕಾಂಪಿಟೇಷನ್​ ದಿನದಿಂದ ದಿನಕ್ಕೆ ಮತ್ತೊಂದು ಹಂತಕ್ಕೆ ತಲುಪುತ್ತಲೇ ಇತ್ತು. ಬಟ್​ ಈಗ ಗಿಲ್ಲಿ ಆಟದ ಬಗ್ಗೆ ಆಗ್ಲಿ.. ಆತ ಆಡಿದ್ದ ಸ್ಟ್ರಾಟರ್ಜಿ ಬಗ್ಗೆ ಆಗ್ಲೀ ಕಿಚ್ಚ ಹೆಚ್ಚು ಮಾತನಾಡಿಲ್ಲ.. ಕಾರಣ ಆ ಸ್ಟ್ರಾಟರ್ಜಿ ಬಗ್ಗೆ ಮನೆಯಲ್ಲಿದ್ದ ಕಂಟೆಸ್ಟಂಟ್ಸ್​ಗೆನೇ ಅರ್ಥವಾಗಿಲ್ಲ.

ಗಿಲ್ಲಿಯ ಗೂಗ್ಲಿಗಳು ಅರ್ಥವಾಗದೇ ಇದ್ದಾಗ, ಕೆಲ ಕಂಟೆಸ್ಟಂಟ್ಸ್​ ಗಿಲ್ಲಿಗೆ ಸರಂಡರ್​ ಆಗ್ಬಿಟ್ರಾ ಅನ್ನೋ ಪ್ರಶ್ನೆ ಬಂದಿದೆ. ಸುದೀಪ್​ ಅವ್ರು ಕೊಟ್ಟ ಸಲಹೆ.. ಕಂಟೆಸ್ಟಂಟ್ಸ್​ಗೆ ಹಿಂಟ್​​ ಆಗಿದೆ. ಅದು ಅವ್ರಿಗೆ ಅರ್ಥವಾಗುತ್ತೋ ಇಲ್ವೋ ಮುಂದೆ ಗೊತ್ತಾಗುತ್ತೆ. ಬಟ್​ ಈ ನಡುವೆ.. ಗಿಲ್ಲಿ ಈ ಬಾರಿಯ ಬಿಗ್​ಬಾಸ್​ಗೆ ಬರೋಕೂ ಮುನ್ನ.. ನಾಲ್ಕನೇ ಸೀಸನ್ ವಿನ್ನರ್​ ಪ್ರಥಮ್​.. ಹನ್ನೊಂದನೇ ಸೀಸನ್​ ವಿನ್ನರ್​ ಹನುಮಂತ ಸ್ಟ್ರೆಂಥಾಗಿದ್ದಾರಂತೆ. ಕಿಚ್ಚ ಗಿಲ್ಲಿಯ ಬಾಯಿ ಬಿಡಿಸಿದಾಗ ಕೆಲ ಕುತೂಹಲಕಾರಿ ವಿಷ್ಯಗಳು ಬಯಲಾಗಿವೆ.

ಇದನ್ನೂ ಓದಿ:ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg Boss Kannada 12 Hanumantha Lamani Gilli Nata Bigg boss
Advertisment