ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?

ಬಿಗ್‌ಬಾಸ್‌ ಪಕ್ಕಾ ವ್ಯಕ್ತಿತ್ವದ ಆಟ. ಅದನ್ನ ನೋಡಿಯೇ ಜನ ವೋಟ್‌ ಮಾಡೋದು. ಟಾಸ್ಕ್‌ ಚೆನ್ನಾಗಿ ಆಡದಿದ್ರೂ ಜನ ಇಷ್ಟಪಡೋ ವ್ಯಕ್ತಿತ್ವ ಇದ್ರೆ ಸಾಕು ಗೇಮ್‌ ಗೆಲ್ಲೋದು ಸುಲಭ. ಇಲ್ಲಿಯವರೆಗೂ ಟಾಪ್‌ನಲ್ಲಿದ್ದ ಗಿಲ್ಲಿಗೆ ಕಾವ್ಯಾ ಫ್ರೆಂಡ್‌ಶಿಪ್‌ ಮುಳ್ಳಾಗ್ತಾ ಇದೆಯಾ? ಅಶ್ವಿನಿಯನ್ನ ಜನ ಇಷ್ಟಪಡ್ತಾ ಇರೋದು ಯಾಕಾಗಿ?

author-image
Ganesh Kerekuli
Kavya and Gilli
Advertisment
  • ಅಂತಿಮ ಕ್ಷಣದಲ್ಲಿ ಗಿಲ್ಲಿಗೆ ಮುಳುವಾಗ್ತಾ ಇರೋದೇನು?
  • ಬಿಗ್‌ ಮನೆಯಲ್ಲಿ ನಿಧಾನಕ್ಕೆ ಅಶ್ವಿನಿ ಅಲೆ ಶುರುವಾಯ್ತಾ?
  • ಕಾವ್ಯ ಪರ ಸ್ಟ್ಯಾಂಡ್‌..ಗಿಲ್ಲಿಗೆ ಅದು ಮೈನಸ್‌ ಆಗುತ್ತಾ?

ಬಿಗ್‌ಬಾಸ್‌ ಮನೆಯಲ್ಲಿ ಸುತ್ತಮುತ್ತ ಕ್ಯಾಮರಾಗಳೇ ಇರುತ್ತವೆ. ಹೀಗಾಗಿ ಪ್ರತಿಯೊಂದು ದಿನ ಪ್ರತಿಯೊಂದು ಕ್ಷಣವೂ ಮುಖ್ಯವಾಗಿರುತ್ತೆ. ಸ್ವಲ್ಪ ಎಡವಿದ್ರೂ ವೀಕ್ಷಕರ ಕಣ್ಣಲ್ಲಿ ರಾತ್ರಿ ಬೆಳಗಾಗೋದ್ರಲ್ಲಿ ವಿನಲ್‌ ಆಗ್ಬೇಕಾಗುತ್ತೆ. ಸ್ವಲ್ಪ ಜಾಣ್ಮೆ ತೋರಿಸಿದ್ರೂ ರಾತ್ರಿ ಬೆಳಗಾಗೋದ್ರಲ್ಲಿ ಸ್ಟಾರ್‌ ಆಗೋ ಅವಕಾಶವೂ ಇರುತ್ತೆ. ಅಷ್ಟಕ್ಕೂ ಗಿಲ್ಲಿಗೆ ಕಾವ್ಯಾ ಫ್ರೆಂಡ್‌ ಶಿಪ್‌ ಮುಳ್ಳಾಗ್ತಾ ಇದೆಯಾ? ಅಶ್ವಿನಿ ಗೌಡ ಹವಾ ಸ್ಟಾರ್ಟ್‌ ಆಗಿದ್ದು ಯಾಕೆ? 

ಇದನ್ನೂ ಓದಿ: ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವಿದ ‘ಕೀ ಮಾಸ್ಟರ್‌’ ಗಿಲ್ಲಿ..!

ಬಿಗ್‌ಬಾಸ್‌ ಆರಂಭವಾದಾಗಿಂದಲೂ ಗಿಲ್ಲಿ ಇಟ್ಟಿದ್ದೇ ಹೆಜ್ಜೆ. ನಡೆದಿದ್ದೇ ದಾರಿ ಅನ್ನೋ ಹಾಗಿತ್ತು. ಕಾರಣ ಆತನ ಕಾಮೆಡಿ ಸಖತ್‌ ವರ್ಕೌಟ್‌ ಆಗಿತ್ತು. ಬಿಗ್‌ಬಾಸ್‌ ಮನೆಯಲ್ಲಿ ಇದ್ದವರಿಗೆ ಅದು ಅತೀರೇಕ ಅನಿಸಿದ್ರೂ, ಕಿರಿಕಿರಿಯಾಗಿದ್ರೂ ವೀಕ್ಷಕರಿಗೆ ಮಾತ್ರ ಸಖಕ್‌ ಖುಷಿ ನೀಡುತ್ತಿತ್ತು. ಹೀಗಾಗಿ ಗಿಲ್ಲಿ ಗೆಲ್ಬೇಕು ಅಂತ ಅಭಿಮಾನಿಗಳು ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿದ್ರು. ದೇವರಿಗೆ ವಿಶೇಷ ಪೂಜೆ ಮಾಡಿಸಿದ್ರು. ದೇವರಲ್ಲಿ ಪ್ರಸಾದ ಕೇಳಿದ್ರು, ಆದರೆ ಇನ್ನೇನು ಬಿಗ್‌ ಬಾಸ್‌ ಮುಗೀತಾ ಬಂತು ಅನ್ನೋ ಟೈಮ್‌ನಲ್ಲಿ ಗಿಲ್ಲಿ ಎಡವುತ್ತಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ:  ಬರೀ ಜಗಳ ಒಂದೇ ಅಲ್ಲ.. ಗಿಲ್ಲಿ, ಅಶ್ವಿನಿ ಜೋಡಿ ವೀಕ್ಷಕರ ಹೃದಯ ಗೆದ್ದಿದ್ದು ಹೇಗೆ..?

Kavya Shaiva

ಕಾವ್ಯಾಳನ್ಯ ಸೇಫ್‌ ಮಾಡಿದ್ದು ಗಿಲ್ಲಿಗೆ ಮೈನಸ್‌ ಆಯ್ತಾ?

ಬಿಗ್‌ಬಾಸ್‌ ಮನೆಗೆ ಗಿಲ್ಲಿ ಕಾಲ್‌ ಇಟ್ಟಿದ್ದೇ ಕಾವ್ಯ ಜೊತೆ ಜಂಟಿಯಾಗಿ, ಉಳಿದೆಲ್ಲ ಜಂಟಿಗಳಿಗಿಂತ ಈ ಜಂಟಿ ಜೋಡಿ ವಿಭಿನ್ನವಾಗಿ ಕಾಣಿಸ್ಕೊಂಡಿತ್ತು. ಅದ್ರಲ್ಲಿಯೂ ಕಾವು ಕಾವು ಅಂತ ಗಿಲ್ಲಿ ಹೇಳ್ತಾ ಇದ್ದಿದ್ದಕ್ಕೇ ಈ ಜೋಡಿಗೆ ಭರ್ಜರಿ ಮೈಲೇಜ್‌ ಸಿಕ್ಕಿತ್ತು. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಬಂದಾಗಲೂ ಈ ಜೋಡಿಯನ್ನ ಮಾತಿಗೆ ಎಳೆದುತ್ತಿದ್ರು. ಗಿಲ್ಲಿ ಮಾಡ್ತಿದ್ದ ಕಾಮೆಡಿ ನೋಡಿ ಸುದೀಪ್‌ ಅದೆಷ್ಟೋ ಬಾರಿ ಬಿದ್ದು ಬಿದ್ದು ನಕ್ಕಿದ್ದಾರೆ.

ಗಿಲ್ಲಿ ಆರಂಭದಲ್ಲಿ ಒಂದು ಮಾತು ಹೇಳಿದ್ದ. ನಾನು ನಿನ್ನ ಕೈ ಹಿಡಿದು ಒಳಗೆ ಬಂದಿದ್ದೇನೆ. ನಾನು ಯಾವತ್ತೂ ಕೈ ಬಿಡೋದಿಲ್ಲ ಅಂತ. ಅದರಂತೆ ನಡೆದುಕೊಂಡಿದ್ದಾನೆ. ಯಾವುದೇ ಗೇಮ್‌ ಇರ್ಬಹುದು. ಅಶ್ವಿನಿ ಗೌಡ ಜೊತೆ ಜಗಳ ಆಗಿರ್ಬಹುದು. ಎಲ್ಲಾ ಸಂದರ್ಭದಲ್ಲಿಯೂ ಕಾವ್ಯಾಗೆ ಸ್ಟ್ಯಾಂಟ್‌ ತೆಗೆದುಕೊಂಡಿದ್ದೇ ಗಿಲ್ಲಿ. ಆದ್ರೆ, ಗಿಲ್ಲಿ ಕ್ಯಾಪ್ಟನ್‌ ಆದ್ಮೇಲೂ ಕಾವ್ಯಾಗೆ ಸ್ಟ್ಯಾಂಡ್‌ ತೆಗೆದುತೊಂಡಿದ್ದು. ಮೂರು ಮೂರು ಬಾರಿ ನಾಮಿನೇಟ್‌ ಮಾಡೋದಕ್ಕೆ ಅವಕಾಶ ಇದ್ರೂ ಕಾವ್ಯಾನ ಸೇಫ್‌ ಮಾಡಿದ್ದು ಬಿಗ್‌ಬಾಸ್‌ ವೀಕ್ಷಕರಲ್ಲಿ ಗಿಲ್ಲಿ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಬರ್ತಿದೆ. ಕಾವ್ಯಾಗಾಗಿ ತನ್ನ ಆಟ ಹಾಳು ಮಾಡಿಕೊಳ್ತಿದ್ದಾನೆ ಅಂತ ಜನ ಆಡಿಕೊಳ್ತಿದ್ದಾರೆ.

ಇದನ್ನೂ ಓದಿ:  ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!

GillI Nata (21)

ಮೂರು ಬಾರಿ ಬಾವುಟ ತೆಗೆದ್ಕೊಂಡಿದ್ದ ರಕ್ಷಿತ ಮೂರು ಬಾರಿಯೂ ಕಾವ್ಯಾಳನ್ನ ನಾಮಿನೇಟ್‌ಗೆ ನಿಲ್ಲಿಸ್ತಾಳೆ. ಆದ್ರೆ ಮೂರು ಬಾರಿಯೂ ಕಾವ್ಯಾಳನ್ನ ಸೇಫ್‌ ಮಾಡಿ ನಾಮಿನೇಟ್‌ನಿಂದ ಪಾರು ಮಾಡ್ತಾನೆ ಗಿಲ್ಲಿ. ಇಲ್ಲಿ ಇನ್ನೊಂದು ವಿಚಾರವೂ ಕೇಳಿ ಬರುತ್ತೆ. ಅದೇನು ಅಂದ್ರೆ ಕಾವ್ಯಾಳ ನಾಮಿನೇಟ್‌ಗೆ ಸೂಕ್ತ ಕಾರಣ ಕೊಟ್ಟಿಲ್ಲ ಅನ್ನೋದು. ಅದನ್ನ ಗಿಲ್ಲಿ ಸಹ ಕಾವ್ಯಾಳ ಬಳಿ ಕೇಳಿಕೊಳ್ತಾರೆ. ಬಿಗ್‌ಬಾಸ್‌ ವೀಕ್ಷಕರು ಇದನ್ನ ಯಾವ ರೀತಿಯಲ್ಲಿ ಸ್ವೀಕಾರ ಮಾಡ್ತಾರೆ ಅನ್ನೋದು ಮುಖ್ಯವಾಗಿರುತ್ತೆ.

ಗಿಲ್ಲಿ ಅತಿರೇಕ, ಅಶ್ವಿನಿಗೆ ಪ್ಲಸ್‌ ಆಗ್ತಾ ಇದೆಯಾ?

ಬಿಗ್‌ಬಾಸ್‌ ಆರಂಭದಿಂದಲೂ ಸ್ಟ್ರಾಂಗ್‌ ಅಭ್ಯರ್ಥಿಗಳು ಯಾರು ಅಂದ್ರೆ ಕೇಳಿಬರ್ತಾ ಇದ್ದಿದ್ದು ಎರಡೇ ಹೆಸ್ರು. ಒಂದು ಗಿಲ್ಲಿ, ಇನ್ನೊಂದ್‌ ಅಶ್ವಿನಿ ಗೌಡ. ಇಬ್ಬರಿಗೂ ಹಾವು ಮುಂಗುಸಿ ಬಾಂಧವ್ಯ ಅನ್ನೋದ್‌ ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಫ್ಯಾಮಿಲಿ ವೀಕ್‌ ಆದ್ಮೇಲೆ ಅಶ್ವಿನಿ ಗೌಡ ಅವರನ್ನ ಗಿಲ್ಲಿ ರೇಗಿಸ್ತಾ ಇರೋದು. ಕೀ ಕೊಟ್ಟು ಟ್ರಿಗರ್‌ ಮಾಡ್ತಾ ಇರೋದು ಎಲ್ಲೋ ಗಿಲ್ಲಿಗೆ ಮೈನಸ್‌ ಆಗಿ ಕಾಣಿಸ್ತಿದೆ.
ಬಿಗ್‌ ಮನೆಯಲ್ಲಿ ನಿಧಾನಕ್ಕೆ ಅಶ್ವಿನಿ ಗೌಡ ಹವಾ ಶುರುವಾಗಿದೆ ಅನ್ನೋದು ಕಾಣಿಸ್ತಿದೆ. ಯಾಕಂದ್ರೆ ಅಶ್ವಿನಿ ಗಿಲ್ಲಿಯ ಹಿಂದೆ ಕನಿಕರದ ಮಾತು ಆಡ್ತಿದ್ದಾಳೆ. ಹಾಗೇ ಫ್ಯಾಮಿಲಿ ಬಂದಾಗ ತಮ್ಮ ಫ್ಯಾಮಿಲಿ ಜೊತೆ ಗಿಲ್ಲಿಯನ್ನ ಕರೆಯಿಸಿ ಫೋಟೋ ತೆಗೆಸ್ಕೊಂಡಿದ್ರು. ಹಾಗೇ ಗಿಲ್ಲಿ ಕ್ಯಾಪ್ಟನ್‌ ಆದಾಗ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದ್ದು ಅಶ್ವಿನಿ ಗೌಡ. ಇದೆಲ್ಲವೂ ಅಶ್ವಿನಿಯ ವ್ಯಕ್ತಿತ್ವ ಬದಲಾಗಿದೆ ಅನ್ನೋದನ್ನ ತೋರಿಸ್ತಿದೆ. ಹಾಗೇ ಗಿಲ್ಲಿಗೆ ಮೈನಸ್‌ ಆಗ್ತಿರೋದು ನೇರವಾಗಿಯೇ ಕಾಣಿಸ್ತಿದೆ.

ಇದನ್ನೂ ಓದಿ: ಗಿಲ್ಲಿಗೂ? ಅಶ್ವಿನಿಗೂ? ಪದೇ ಪದೇ ಪೈಟು.. ಏನೀ ರಹಸ್ಯ? ಏನ್ ಜೋಡಿ ಗುರೂ..!

Gilli and Ashwini

ಬಿಗ್‌ಬಾಸ್‌ ಇನ್ನೂ ಮೂರುವಾರ ಇರುತ್ತೆ. ಹೀಗಾಗಿ ಯಾವ ಸಂದರ್ಭದಲ್ಲಿ ಟರ್ನ್‌ ತೆಗೆದುಕೊಳ್ಳುತ್ತೆ. ಯಾರ ಮುಖವಾಡ ಕಳಜಿ ಬೀಳುತ್ತೆ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಅಂತಿಮ ಹಂತದವರೆಗೂ ಕಾದು ನೋಡೋಣ. ಅಂತಿಮವಾಗಿ ಗೆಲ್ಲಿ ಗೆಲ್ತಾನಾ? ಇಲ್ಲವೇ ಅಶ್ವಿನಿ ಕಪ್‌ ಎತ್ತಿ ಹಿಡಿತಾಳಾ? ಇಲ್ಲವೇ ಇವರಿಬ್ಬರನ್ನು ಬೀಟ್‌ ಮಾಡಿ ಮೂರನೆಯವರು ಬರ್ತಾರಾ? ಅನ್ನೋದಕ್ಕೆ ಕಾಲವೇ ಉತ್ತರ ಕೊಡುತ್ತೆ.

ಗಿಲ್ಲಿ ಶೋ ಆರಂಭದಿಂದ ಇಲ್ಲಿಯವರೆಗೂ ಹಾಗೇ ಇದ್ದಾನೆ. ಅಶ್ವಿನಿ ತಮ್ಮ ವ್ಯಕ್ತತ್ವವನ್ನ ನಿಧಾನಕ್ಕೆ ಬದಲಾವಣೆ ಮಾಡಿಕೊಳ್ತಾ ಇರೋದು ಕಾಣಿಸ್ತಿದೆ. ಅಂತಿವಾಗಿ ಜನ ಯಾರಿಗೆ ಮಣೆ ಹಾಕ್ತಾರೆ? ಯಾರನ್ನ ಗೆಲ್ಲಿಸ್ತಾರೆ? ಅನ್ನೋದನ್ನ ಕಾದು ನೋಡೋಣ.

ಇದನ್ನೂ ಓದಿ:  ಶಾಲೆಯಲ್ಲಿ ಸೈಲೆಂಟು.. ಈಗ ವೈಲೆಂಟು.. ‘ಗಿಲ್ಲಿ’ ಗಲ್ಲಿ ಜರ್ನಿ ಹೇಳಿದ ಸ್ಕೂಲ್​ ಮೆಸ್ಟ್ರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kavya gowda Bigg Boss Kannada 12 Ashwini Gowda Bigg Boss Gilli Nata Bigg boss bigg boss kavya
Advertisment