/newsfirstlive-kannada/media/media_files/2025/12/09/ashwini-gowda-10-2025-12-09-14-47-21.jpg)
ಬಿಗ್ಬಾಸ್ ಗೇಮ್ ಕ್ಲೈಮ್ಯಾಕ್ಸ್‌ನಲ್ಲಿ ಹಾದಿ ತಪ್ಪುತ್ತಿದ್ಯಾ? ಕಂಟೆಸ್ಟೆಂಟ್‌ಗಳ ವರ್ತನೆ ವೀಕ್ಷಕರಿಗೆ ಬೇಸರ ತರಿಸಿದ್ಯಾ? ಗಿಲ್ಲಿ ಮತ್ತೆ ಮತ್ತೆ ಎಡವಿದ್ನಾ? ಅಶ್ವಿನಿ ಗೌಡ ತನ್ನ ವರ್ತನೆಯನ್ನ ಸರಿ ಮಾಡಿಕೊಳ್ಳಲಿಲ್ವಾ? ಹೀಗೇ ಹತ್ತಾರು ಪ್ರಶ್ನೆಗಳು, ಜನರಿಗೆ ಕಾಡ್ತಿದೆ. ಬಿಗ್ಬಾಸ್ ಫಿನಾಲೆ ಹತ್ತಿರ ಬರ್ತಿದೆ. ಆದ್ರೆ ಲೆಕ್ಕಾಚಾರಗಳು ಬದಲಾಗುತ್ತಾ ಹೋಗ್ತಿದೆ..
ಈ ವಾರದ ಗಿಲ್ಲಿ ಆಟ ಜನ್ರಿಗೆ ಇಷ್ಟವಾಗ್ತಿಲ್ಲ. ತುಂಬಾ ಜನ ಹಲವು ವೇದಿಕೆಗಳಲ್ಲಿ ಈ ಮಾತನ್ನ ಹೇಳ್ತಿದ್ದಾರೆ. ಕೇವಲ ಸೋಷಿಯಲ್ ಮೀಡಿಯಾ ಅಭಿಪ್ರಾಯವನ್ನ ಅಂತಿಮ ಅಂತಾ ಹೇಳೋದಿಕ್ಕೆ ಬರೋದಿಲ್ಲ. ಅದರ ಹೊರತಾಗಿರುವ ಜನರೇ ನಿರ್ಣಾಯಕರು. ಅವರು ಗಿಲ್ಲಿ ಮೇಲೆ ಕೋಪ ಮಾಡಿಕೊಂಡಿರೋ ಲಕ್ಷಣಗಳು ಕಾಣಿಸ್ತಿವೆ.
ಇದನ್ನೂ ಓದಿ: ಗಿಲ್ಲಿಗೂ? ಅಶ್ವಿನಿಗೂ? ಪದೇ ಪದೇ ಪೈಟು.. ಏನೀ ರಹಸ್ಯ? ಏನ್ ಜೋಡಿ ಗುರೂ..!
/filters:format(webp)/newsfirstlive-kannada/media/media_files/2026/01/02/ashwini-vs-gilli-2026-01-02-16-28-00.jpg)
ಗಿಲ್ಲಿ ಕ್ಯಾಪ್ಟನ್ ಆದಾಗ ಅದೆಷ್ಟು ಜನರು ಇಷ್ಟಪಟ್ಟರೋ.. ಗಿಲ್ಲಿ ತೆಗೆದುಕೊಂಡು ತೀರ್ಮಾನಗಳು, ಆತನ ವರ್ತನೆ, ಬಾಯಿ ಚಪಲಕ್ಕೆ ಆಡಿದ ಮಾತುಗಳು ಈ ವಾರ ಬಹುತೇಕರಿಗೆ ಇಷ್ಟವಾಗಿಲ್ಲ. ಅದರಲ್ಲೂ ಅಶ್ವಿನಿ, ಧ್ರುವಂತ್ ಜೊತೆ ಗಿಲ್ಲಿ ಆಡಿದ ಜಗಳ, ಹಲವರಿಗೆ ಬೇಸರ ಮೂಡಿಸಿರೋದು ಸುಳ್ಳಲ್ಲ.
ಗಿಲ್ಲಿಯ ಹಾಸ್ಯಪ್ರಜ್ಞೆಯನ್ನ ಕೋಟ್ಯಂತರ ಜನರು ಮೆಚ್ಚಿದ್ದಾರೆ. ಅದೆಷ್ಟೋ ವೀಕ್ಷಕರು ಗಿಲ್ಲಿಗಾಗಿಯೇ ಬಿಗ್‌ಬಾಸ್ ನೋಡೋರು ಇದ್ದಾರೆ. ಆದ್ರೆ, ದಿನ ಕಳೆದಂತೆ ಗಿಲ್ಲಿ ಮೆಚ್ಯುರಿಟಿ ತೋರಿಸಬೇಕಿತ್ತು, ಅನ್ನೋ ಅಭಿಪ್ರಾಯ ಹಲವರಲ್ಲಿ ಇದೆ. ಬಿಗ್‌ಬಾಸ್ ಹಂತಿಮ ಹಂತದಲ್ಲಿ ಪ್ರತಿ ಸ್ಪರ್ಧಿಯೂ ಮೆಚ್ಯುರಿಟಿ ತೋರಿಸಲೇಬೇಕು. ಅದು ಯಾಕೆ ಅನ್ನೋದು ಈ ಹಿಂದಿನ ಸೀಸನ್‌ಗಳನ್ನ ಮೆಲುಕು ಹಾಕಿದ್ರೆ ಗೊತ್ತಾಗುತ್ತೆ. ಈ ವಿಚಾರದಲ್ಲಿ ಗಿಲ್ಲಿ ಎಡವಟ್ಟು ಮಾಡಿದ್ದಾನೆ ಅನ್ನೋದು ಬಹುತೇಕ ವೀಕ್ಷಕರ, ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಶಾಲೆಯಲ್ಲಿ ಸೈಲೆಂಟು.. ಈಗ ವೈಲೆಂಟು.. ‘ಗಿಲ್ಲಿ’ ಗಲ್ಲಿ ಜರ್ನಿ ಹೇಳಿದ ಸ್ಕೂಲ್​ ಮೆಸ್ಟ್ರು..!
/filters:format(webp)/newsfirstlive-kannada/media/media_files/2025/12/09/ashwini-gowda-9-2025-12-09-14-47-07.jpg)
ಇನ್ನೊಂದೆಡೆ, ಅಶ್ವಿನಿ ಅವರ ಪರ ಸಣ್ಣ ಅಲೆಯೊಂದು ಎದ್ದಿದ್ದು ನಿಜ. ಬದಲಾವಣೆಯಿಂದ ಅವರ ಮೇಲೆ ಜನರಿಗೆ ಅನುಕಂಪ ಮೂಡಿದೆ. ಫ್ಯಾಮಿಲಿ ರೌಂಡ್ ನಂತರವಂತೂ ಈ ಸಂಖ್ಯೆ ಹೆಚ್ಚಾಗಿದೆ. ಗಿಲ್ಲಿ ಜೊತೆಗಿನ ಅವರ ಸಂಘರ್ಷ, ಮಾತು, ಭಾಷೆ , ಪದ ಬಳಕೆ ಮಾಡಿರೋದು ಮತ್ತೆ ಅವರಿಗೆ ಮೈನಸ್ ಆಗಿರುವ ಸಾಧ್ಯತೆ ಇದೆ.
ಗೆಲ್ಲುವ ಕುದುರೆ ಅಂತಾ ವೀಕ್ಷಕರು ಯಾರ ಮೇಲೆ ಕಣ್ಣಿಟ್ಟಿದ್ದಾರೋ ಅವರೆಲ್ಲಾ ಸ್ವಲ್ಪ ಮಟ್ಟಿಗೆ ಹಳಿ ತಪ್ಪುತ್ತಿದ್ದಾರೆ ಅನ್ನೋದು ಗೋಚರಿಸ್ತಿದೆ. ಹಾಗಾಗಿ ಒಂದು ವೇಳೆ ಇದೇ ಮುಂದುವರೆದರೆ ಮೂರನೇ ಗೆಲ್ಲುವ ಕುದುರೆ ಉದ್ಭವವಾದರೇ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ:ಗಿಲ್ಲಿ ಹುಟ್ಟೂರಿಗೆ ಕೀರ್ತಿ ಕಳಶ.. ಗಿಲ್ಲಿ ಬಗ್ಗೆ ತಿಳಿಯದ ರಹಸ್ಯಗಳು ರಿವಿಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us