ಶಾಲೆಯಲ್ಲಿ ಸೈಲೆಂಟು.. ಈಗ ವೈಲೆಂಟು.. ‘ಗಿಲ್ಲಿ’ ಗಲ್ಲಿ ಜರ್ನಿ ಹೇಳಿದ ಸ್ಕೂಲ್​ ಮೆಸ್ಟ್ರು..!

ಮೇಷ್ಟ್ರು ತಲೆಗೆ ಹೊಡೆದ್ರು, ಅಪ್ಪ ಕಾಲಿಗೆ ಹೊಡೆದ್ರು. ಗಟ್ಟಿಯಾಗಿ ನಿಂತಿದ್ದು ಮಾತ್ರ ತಾನು ನಡೆದ ದಾರಿಯಲ್ಲೇ. ಗಿಲ್ಲಿ ಬಗ್ಗೆ ತಾನೋದಿದ್ದ ಸ್ಕೂಲ್​ ಟೀಚರ್ಸ್​ ಮತ್ತಷ್ಟು ಇಂಟ್ರಸ್ಟಿಂಗ್​ ವಿಷ್ಯಗಳನ್ನ ಹೇಳಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ.

author-image
Ganesh Kerekuli
Advertisment

ಮೇಷ್ಟ್ರು ತಲೆಗೆ ಹೊಡೆದ್ರು, ಅಪ್ಪ ಕಾಲಿಗೆ ಹೊಡೆದ್ರು. ಗಟ್ಟಿಯಾಗಿ ನಿಂತಿದ್ದು ಮಾತ್ರ ತಾನು ನಡೆದ ದಾರಿಯಲ್ಲೇ. ಗಿಲ್ಲಿ ಬಗ್ಗೆ ತಾನೋದಿದ್ದ ಸ್ಕೂಲ್​ ಟೀಚರ್ಸ್​ ಮತ್ತಷ್ಟು ಇಂಟ್ರಸ್ಟಿಂಗ್​ ವಿಷ್ಯಗಳನ್ನ ಹೇಳಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ. 

ಈ ಕಲೆ ಅನ್ನೋದು ಗಿಲ್ಲಿಗೆ ಚಿಕ್ಕ ವಯಸ್ಸಿಂದ್ಲೇ ಅಂಟಿಕೊಂಡಿದೆ. ಅದು ನಿಜವಾದ ಕಲೆ ಅಂತ ಆ ದಿನ ಯಾರಿಗೂ ಅರ್ಥವಾಗಿರ್ಲಿಲ್ಲ. ಗಿಲ್ಲಿ ಸ್ಕೂಲಲ್ಲಿ ಇದ್ದಿದ್ದಕ್ಕೂ, ಈ ದಿನ ಈ ರೀತಿ ಅಬ್ಬರಿಸ್ತಿರೋದಕ್ಕೂ ಸಂಬಂಧವೇ ಇಲ್ಲವಂತೆ. 

ಮುಗ್ಧ.. ಸೈಲೆಂಟು.. ಯಾರ ಜೊತೆನೂ ಬರೆಯದ ಹುಡುಗ.. ಬಟ್​ ಈಗ ಒಂದು ದೊಡ್ಡ ಮನೆಯಲ್ಲಿ ಹುಲಿಯಂತೆ ಘರ್ಜಿಸ್ತಿದ್ದಾನೆ. ಇಡೀ ಕರ್ನಾಟಕವೇ ತಿರುಗಿ ನೋಡುವಂತೆ ಮಾಡ್ತಿದ್ದಾನೆ. ಅಷ್ಟಕ್ಕೂ ಈ ಕೆಲ ಕಲೆ ಗಿಲ್ಲಿಗೆ ಸ್ಕೂಲಲ್ಲೇ ಅಂಟಿತ್ತು. ಬಟ್​ ಯಾರಿಗೂ ಅರ್ಥವಾಗಿರ್ಲಿಲ್ಲ ಅಷ್ಟೇ.

ಇದನ್ನೂ ಓದಿ:ಗಿಲ್ಲಿ ಹುಟ್ಟೂರಿಗೆ ಕೀರ್ತಿ ಕಳಶ.. ಗಿಲ್ಲಿ ಬಗ್ಗೆ ತಿಳಿಯದ ರಹಸ್ಯಗಳು ರಿವಿಲ್..!

ಗಿಲ್ಲಿ ಬಗ್ಗೆ ಶಿಕ್ಷಕರ ಮೆಚ್ಚುಗೆ ಮಾತುಗಳು.. ತನ್ನ ಸ್ಕೂಲ್​​ ಅಂಗಳದಲ್ಲಿ ತಾನಾಡಿದ್ದ ದಿನಗಳು. ಗಿಲ್ಲಿಗೆ ತಲುಪುತ್ತಿಲ್ಲ ಬಟ್​ ಆತನ ನೆನಪು, ಆತನ ಗೆಲುವು, ಕಷ್ಟ ನಡೆದ ದಾರಿ ಎಲ್ಲಾ ಈ ಸ್ಕೂಲಿಗೆ ಸ್ಫೂರ್ತಿಯಾಗಿವೆ. ಗಿಲ್ಲಿ ಮಾತೇ ಅವ್ನ ಬಂಡವಾಳ ಅನ್ನೋ ಸತ್ಯವನ್ನ ಆತನ ಟೀಚರ್ಸ್​ ಕೂಡ ಒಪ್ಪಿಕೊಳ್ತಿದ್ದಾರೆ. 

ಗಿಲ್ಲಿ ಸ್ಕೂಲಲ್ಲಿದ್ದಾಗ ತುಂಬಾ ಭಯಸ್ಥನಂತೆ. ಕೀಟ್ಲೇ ಕೂಡ ಅಂತ ಟೀಚರ್ಸ್​ ಹೇಳ್ತಿದ್ದಾರೆ.  ಮಾರ್ಕ್ಸ್​ ತಿದ್ದೋದು.. ಹೋಮ್​​ ವರ್ಕ್​​ ಮಾಡದೇ ಇರೋದು ಎಲ್ಲಾವನ್ನೂ ಟೀಚರ್ಸ್​ ನೆನಪಿಸಿಕೊಳ್ತಿದ್ದಾರೆ. 

ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO

ಗೆದ್ದು ಬಾ ಗಿಲ್ಲಿ ಅಂತ ಹಾಡು ಹಾಡಿ ಹಾರೈಸಿದ ಶಿಕ್ಷಕ!

ತಮ್ಮ ಸ್ಟೂಡೆಂಟ್​ ಒಬ್ಬ ಇಡೀ ಊರಿಗೆ, ಸ್ಕೂಲಿಗೆ ಒಳ್ಳೇ ಹೆಸ್ರು ತಂದು ಕೊಡ್ತಿದ್ದಾನೆ ಅಂದ್ರೆ ಅದಕ್ಕೆ ಖುಷಿ ಇನ್ನೇನಿರುತ್ತೆ ಅಲ್ವಾ? ಅದೇ ಖುಷಿಯಲ್ಲಿ ಶಿಕ್ಷಕರೊಬ್ಬರು. ಗಿಲ್ಲಿಗಾಗಿ ಒಂದು ಹಾಡು ಡೆಡಿಕೇಟ್​ ಮಾಡಿದ್ದಾರೆ. ಗಿಲ್ಲಿ ಸ್ಟೇಜ್​ಗಳ ಮೇಲೆ ಪದ ಪೋಣಿಸ್ತಿದ್ರೆ.. ಶಿಕ್ಷಕರೇ ತನ್ನ ಸ್ಟೂಡೆಂಟ್​ಗಾಗಿ ಪದ ಕಟ್ಟಿ ಹಾಡಿದ್ದಾರೆ. ಮತ್ತೆ ಕೆಲ ಶಿಕ್ಷಕರಂತೂ.. ಗಿಲ್ಲಿ ಬಳಸೊ ಇಂಗ್ಲೀಷ್​ ಪದಗಳನ್ನ ಡಿಕ್ಷನರಿಯಲ್ಲಿ ಹುಡುಕಿದ್ರಂತೆ.
ಈ ಹಿಂದೆ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ನಲ್ಲಿ ಗಿಲ್ಲಿ ತನ್ನೂರಿನ ರಾಜಣ್ಣ ಅನ್ನೊ ಒಬ್ಬರ ಬಗ್ಗೆ ಹೇಳಿಕೊಂಡಿದ್ದ.. ಆತನ ಡ್ಯಾನ್ಸ್​ಗೆ ಗಿಲ್ಲಿನೇ ಫಿದಾ ಆಗ್ತಿದ್ನಂತೆ.. 

ರಾಜಣ್ಣವರೇ ಚಿಕ್ಕವಯಸ್ಸಲ್ಲಿ ಗಿಲ್ಲಿಗೆ ಡ್ಯಾನ್ಸ್​ ಕಲಿಸಿದ್ರಂತೆ. ನಾಗಿಣಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ರಾಜಣ್ಣ. ಗಣೇಶ ಮೆರವಣಿಗೆ, ಗ್ರಾಮದ ಹಬ್ಬಗಳಲ್ಲಿ ಗಿಲ್ಲಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ರಂತೆ. ಒಟ್ನಲ್ಲಿ ಇಡೀ ಊರಿಗೆ ಹೀರೋ ಆಗಿರೋ ಗಿಲ್ಲಿ. ಜನ ಕಟೌಟ್​ಗಳನ್ನ ಕಟ್ಟೋ ರೇಂಜ್​ಗೆ ಬೆಳೆದಿರೋ ಪ್ರತಿಭೆ. ಮಂಡ್ಯದ ಜನ ನಮ್​ ಹುಡುಗ ಅಂತ ಅಪ್ಪಿ.. ಬಿಗ್​ಬಾಸ್​ ಕಪ್​ ಗೆದ್ದು ಬರ್ಲಿ ಅಂತ ಹಾರೈಸ್ತಿದ್ದಾರೆ. 

ಇದನ್ನೂ ಓದಿ: ಕಲೆ ಯಾರ ಮನೆಯ ಆಸ್ತಿಯೂ ಅಲ್ಲ; ಆರಂಭದಲ್ಲಿ ಗಿಲ್ಲಿ ಜನರ ಮನಸ್ಸು ಗೆದ್ದಿದ್ದು ಹೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss Kannada 12 Gilli Nata Bigg boss
Advertisment