/newsfirstlive-kannada/media/media_files/2025/12/30/gilli-nata-17-2025-12-30-11-25-55.jpg)
ನಾಲಿಗೆ ಸರಿಯಾಗಿದ್ರೆ.. ಊರು ತುಂಬಾ ನೆಂಟ್ರಂತೆ. ಅದೇ ನಾಲಿಗೆ ಟ್ಯಾಲೆಂಟ್​ಗೆ ಬಳಸಿದ್ರೆ ರಾಜ್ಯದ​ ತುಂಬಾ ಫ್ಯಾನ್ಸಂತೆ. ಈ ಮಾತೀಗ ಗಿಲ್ಲಿ ನಟನಿಗೆ ಸರಿಯಾಗಿ ಕನೆಕ್ಟ್​ ಆಗ್ತಿದೆ. ಯಾಕಂದ್ರೆ ಮೈಸೂರಂದ್ರೆ ಪ್ಯಾಲೇಸು.. ಗಿಲ್ಲಿ ಇದ್ರೆ ಬಿಗ್​ಬಾಸು. ಗಿಲ್ಲಿ ಹಾಕೋ ಪಂಚಸ್ಸು, ಕಂಟೆಸ್ಟೆಲ್ಲಾ ಖಲ್ಲಾಸು. ಗಿಲ್ಲಿ ಗಿಲ್ಲಿ ಗಿಲ್ಲಕ್ಕು, ಪ್ರಾಸಗಳಿಂದ ಚಮಕ್ಕು. ಒಂದೊಂದು ಡೈಲಾಗ್​ ಬುಲ್ಲೆಟ್ಟು, ಇದೆ ಗಿಲ್ಲಿ ಟ್ಯಾಲೆಂಟು. ಮಾತ್​ ಮನೆ ಕೆಡಿಸಿದ್ರೆ.. ಅದೇ ಮಾತು ಗಿಲ್ಲಿನ ಬಿಗ್​ ಬಾಸ್​​ ಮನೆಯಲ್ಲಿ​ ಉಳಿಸಿದೆ. ಇಂಥಾ ಪ್ರಾಸಗಳು, ಪವರ್​ಫುಲ್​ ಡೈಲಾಗ್ಸು ಗಿಲ್ಲಿ ಮಾತಲ್ಲೇ ಚಂದ. ಆತನ ಒಂದೊಂದು ಸೀನ್ಸು ಫುಲ್​​​ ಫನ್​ ಮೀಲ್ಸು.
ಇದನ್ನೂ ಓದಿ: ಚೆನ್ನಾಗಿದ್ರೆ ದೋಸ್ತಿ, ಎದುರು ಹಾಕಿಕೊಂಡ್ರೆ ಉಡೀಸ್.. ಪಂಚ್ ಮಾಸ್ಟರ್ ಗಿಲ್ಲಿ ಸಕ್ಸಸ್‌ಗೆ 10 ಕಾರಣಗಳು..!
/filters:format(webp)/newsfirstlive-kannada/media/media_files/2025/12/28/gilli-nata-14-2025-12-28-14-29-22.jpg)
ನಟ..ಗಿಲ್ಲಿ ನಟ..ಸದ್ಯ ರಾಜ್ಯದ ಸೆನ್ಸೇಷನ್​..ಬಿಗ್​ ಬಾಸ್​ ಮನೆಯ ಅಟ್ರ್ಯಾಕ್ಷನ್​..ಬಿಗ್​ ಮನೆಯಲ್ಲಿ ತಾವು ಹೈಲೈಟ್​ ಆಗ್ಬೇಕು ಅಂತಾ ಅದೆಷ್ಟೇ ಕಿರಿಕ್ ಮಾಡಿದ್ರೂ, ಹೈಡ್ರಾಮಾ ಮಾಡಿದ್ರೂ...ಅಥವಾ ಇನ್ನೇನೇ ಶುರುಮಾಡಿದ್ರು..ಎಲ್ಲರನ್ನ ಮೀರಿ ಸಿಕ್ಕಾಪಟ್ಟೆ ಹೈಲೈಟ್ ಆಗ್ತಿರೋದು ಅಂದ್ರೆ ಅದು ಒಂದೇ ಹೆಸರು ಗಿಲ್ಲಿ ನಟ.. ಸಿಚುವೇಷನ್ ಎಂಥಾದ್ದೇ ಇರಲಿ, ಅಥವಾ ಯಾರೇ ಮೈಮೇಲೆ ಬೀಳಲಿ ತನ್ನ ಪಂಚಿಂಗ್​ ಡೈಲಾಗ್​ಗಳ ಮೂಲಕವೇ ಭರ್ಜರಿ ಕಮ್​​ಬ್ಯಾಕ್​ ಮಾಡೋ ಗಿಲ್ಲಿಗೆ ಹೊರಗಡೆ ಕಲ್ಪನೆಗೂ ಮೀರಿದ ಕ್ರೇಜ್​ ಶುರುವಾಗ್ಬಿಟ್ಟಿದೆ. ಈ ಸಾರಿ ಕಪ್​ ಗಿಲ್ಲಿಯದ್ದೇ ಅಂತಾ ಹಲವರ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ ಹಾಕ್ತಿದ್ದಾರೆ.
ಇದನ್ನೂ ಓದಿ: ಸೆಟ್​ಬಾಯ್​ ಕೆಲ್ಸದಿಂದ, ಕಲಾ ಪ್ರಪಂಚಕ್ಕೆ ಗಿಲ್ಲಿ ಎಂಟ್ರಿ ಆಗಿದ್ದೇಗೆ?
/filters:format(webp)/newsfirstlive-kannada/media/media_files/2025/12/28/gilli-nata-10-2025-12-28-14-30-46.jpg)
ಪ್ರಾಸ, ಪಂಚು..ಬಿಗ್​​ಬಾಸ್​​ ಗಿಲ್ಲಿಯ ಬಿಗ್​​ಸ್ಟ್ರೆಂಥು..ಹೌದು..ಇಡೀ ರಾಜ್ಯದಲ್ಲಿ ಇವತ್ತು ಗಿಲ್ಲಿ ಬಗ್ಗೆ ಇಷ್ಟೆಲ್ಲಾ ಹವಾ ಕ್ರಿಯೇಟ್​ ಆಗೋದಕ್ಕೆ ಮೇನ್ ಕಾರಣ ಆತನ ಮ್ಯಾನರಿಸಂ ಹಾಗೂ ಪಂಚಿಂಗ್​ ಡೈಲಾಗ್​​ಗಳು...ವೀಕ್ಷಕರೇ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡದಪುರ ಅನ್ನೋ ಕುಗ್ರಾಮದವರಾದ ಗಿಲ್ಲಿ ನಟ ಫೇಮಸ್​​ ಆಗಿದ್ದೇ ತಮ್ಮ ಊರಿಂದ ಅಂದ್ರೆ ನೀವು ನಂಬಲೇಬೇಕು.. ಅದು ಆಗಷ್ಟೇ ಡಿಜಿಟಲ್​ ದುನಿಯಾ ಬೂಮ್​ ಆಗ್ತಿದ್ದ ಕಾಲ ಅಂತಹ ಕಾಲದಲ್ಲಿ, ತನ್ನದೇ ಕಥೆ ಹಾಗೂ ನಿರ್ದೇಶನದಲ್ಲಿ ಊರಿನ ಜನರನ್ನೆಲ್ಲಾ ಒಟ್ಟುಗೂಡಿಸ್ತಿದ್ರು. ಕಾಮಿಡಿ ಸ್ಕಿಟ್​ಗಳನ್ ಮಾಡ್ತಿದ್ರು. ಹಾಗ್​ ಮಾಡಿ ಅವುಗಳನ್ನ ಯೂಟ್ಯೂಬ್​ ಹಾಗೂ ಫೇಸ್​​ಬುಕ್​ನಲ್ಲಿ ಅಪ್​ಲೋಡ್​ ಮಾಡ್ತಿದ್ರು. ಹೀಗೆ ಅಪ್​ಲೋಡ್​ ಮಾಡ್ತಿದ್ದ ಒಂದೊಂದೇ ಸ್ಕಿಟ್​ಗಳಿಗೆ ಮಿಲಿಯನ್​ಗಟ್ಟಲೆ ವೀವ್ಸ್​ ಬರೋದಕ್ಕೆ ಶುರುವಾಯ್ತು. ಅಲ್ಲಿಂದ ಗಿಲ್ಲಿಯ ಫ್ಯಾನ್ಸ್​ ಬೇಸ್​ ಬೆಳೆಯೋದಕ್ಕೆ ಶುರುವಾಯ್ತು. ಗಿಲ್ಲಿ ಕಿರುತೆರೆಗೆ ಕಾಲಿಡೋದಕ್ಕೆ ದೊಡ್ಡ ವೇದಿಕೆ ಸಿಕ್ಕಿತ್ತು. ಅಷ್ಟಕ್ಕೂ, ಹನಿಹನಿ ಸೇರಿದ್ರೆ ಹಳ್ಳ ಎಂಬಂತೆ ಅಲ್ಲಿಂದ ಇಲ್ಲಿವರೆಗೂ ಗಿಲ್ಲಿಯ ಫ್ಯಾನ್​​ಬೇಸ್​ ಇಷ್ಟು ದೈತ್ಯವಾಗಿ ಬೆಳೆಯೋದಕ್ಕೆ ಕಾರಣ ಗಿಲ್ಲಿ ಪಂಚಿಂಗ್ ಡೈಲಾಗ್​ಗಳಲ್ಲದೇ ಬೇರೇನೂ ಅಲ್ಲ..
/filters:format(webp)/newsfirstlive-kannada/media/media_files/2025/12/29/gilli-nata-16-2025-12-29-12-32-39.jpg)
ಗಿಲ್ಲಿ ನಟನ ರಾಂಗ್​ ಸೈಡ್​ ರಂಗನಾಥ ಅನ್ನೋ ಈ ಯ್ಯೂಟ್ಯೂಬ್ ಸ್ಕಿಟ್​​ಗೆ ಜನ ಸಿಕ್ಕಾಪಟ್ಟೆ ಫಿದಾ ಆಗಿ ಹೋಗಿದ್ರು. ರಾಮಾಚಾರಿ ವೆಡ್ಸ್​ ಮಾರ್ಗರೇಟ್​ ಅನ್ನೋ ಸ್ಕಿಟ್​ನ ನೋಡಿದ್ದ ಜನ ಕಮೆಂಟ್​ ಸೆಕ್ಷನ್​ ಬಾಕ್ಸಾಫೀಸ್​ನ ಧೂಳೀಪಟ ಮಾಡಿದ್ದರು. ನೀವೆಲ್ಲಾ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಅಶ್ವಥ್​ ಅಭಿನಯದ ಬ್ಲಾಕ್​ಬಸ್ಟರ್​​ ನಾಗರಹಾವು ಸಿನಿಮಾ ನೋಡಿದ್ದೀರಲ್ಲ, ಆ ಸಿನಿಮಾದ ಕಥೆಯ ತಿರುಳನ್ನೇ ಇಟ್ಕೊಂಡು ಗಿಲ್ಲಿ ರೆಡಿ ಮಾಡಿದ್ದ ಸ್ಕಿಟ್ಟೇ ರಾಮಾಚಾರಿ ವೆಡ್ಸ್​ ಮಾರ್ಗರೇಟ್​. ಗಿಲ್ಲಿ ನಟನ ಸೆನ್ಸ್​ ಆಫ್​ ಹ್ಯೂಮರ್ ಅದೆಷ್ಟು ಶಾರ್ಪ್​ ಇದೆ ಅನ್ನೋದಕ್ಕೆ ರಾಮಚಾರಿ ವೆಡ್ಸ್​ ಮಾರ್ಗರೇಟ್​ ಒಂದೊಳ್ಳೆ ಎಕ್ಸಾಂಪಲ್. ಅಂದಹಾಗೇ ವೀಕ್ಷಕರೇ, ಗಿಲ್ಲಿ ನಟ ಇವತ್ತು ಫೇಮಸ್​ ಆಗೋದಕ್ಕೆ ಇನ್ನೂ ಒಂದು ಬಲವಾದ ಕಾರಣವಿದೆ, ಅದೇನಪ್ಪ ಅಂದ್ರೆ, ಗಿಲ್ಲಿ ಯಾವತ್ತೂ ಒಂದೇ ರೀತಿಯ ಕಂಟೆಂಟ್​​ಗೆ ಒಗ್ಗಿಕೊಂಡಿದ್ದವನಾಗಿರಲಿಲ್ಲ, ಬದಲಾಗೆ ಯಾವ ಕಾಲಕ್ಕೆ, ಯಾವ ಟೈಮಿಗೆ ಯಾವ ರೀತಿಯ ಕಂಟೆಂಟ್ ಜನಕ್ಕೆ ಇಷ್ಟವಾಗ್ತಿದೆ ಅನ್ನೋದನ್ನ ತಿಳಿದುಕೊಂಡು ಅದರ ಮೇಲೆ ಕತೆ ರೆಡಿ ಮಾಡ್ತಿದ್ದ.
ಇದನ್ನೂ ಓದಿ: ಗಿಲ್ಲಿ PR ಟೀಂಗೆ ಎಚ್ಚರಿಕೆ ಕೊಟ್ಟ ರಜತ್.. ಯಾಕೆ..? -VIDEO
/filters:format(webp)/newsfirstlive-kannada/media/media_files/2025/11/16/gilli-nata-2025-11-16-13-09-03.jpg)
ಈ ರೀತಿಯ ಸೆನ್ಸ್​ ಆಫ್​ ಹ್ಯೂಮರ್ ಯಾರಿಗ್​ ತಾನೇ ಬರೋದಕ್ಕೆ ಸಾಧ್ಯ ಅಲ್ವಾ? ಸೆನ್ಸ್​ ಆಫ್​ ಹ್ಯೂಮರ್​ ಬಿಡ್ರಿ, ಗಿಲ್ಲಿ ಅಷ್ಟಷ್ಟುದ್ದ ಡೈಲಾಗ್​ನ ರೀಟೇಕ್​ ತಗೊಂಡಿರೋ ಉದಾಹರಣೆಯೇ ಸಿಕ್ಕಾಪಟ್ಟೆ ಕಡಿಮೆ. ಗಿಲ್ಲಿ ಸಿಂಗಲ್​ ಟೇಕ್​ನಲ್ಲೇ ರಸವತ್ತಾದ ಪ್ರಾಸದ ಜೊತೆಗೆ ಪಂಚ್​ಗಳನ್ನ ಹೊಡೀತಿದ್ದರಿಂದಾನೇ ಇವತ್ತು ರಾಜ್ಯದ ಮನೆ ಮಾತಾಗಿರೋದು..ಅದಕ್ಕೆ ಇನ್ನೊಂದು ಒಳ್ಳೆ ಉದಾಹರಣೆ ಅಂದ್ರೆ ಈ ಕುಡಕನ ಪಾತ್ರ
ಆವತ್ತು ಈ ರೀತಿ ರಸ್ತೆಯಲ್ಲಿ ಸ್ಕಿಟ್ ಮಾಡಿ ಯ್ಯೂಟ್ಯೂಬ್​ಗೆ ಹಾಕ್ತಿದ್ದ ಗಿಲ್ಲಿ, ಇವತ್ತು ರಾಜ್ಯದ ಮನೆ ಮಾತಾಗಿದ್ದಾರೆ.. ಅಷ್ಟೇ ಅಲ್ಲ, ಕನ್ನಡದ ಪ್ರತಿಷ್ಠಿತ ರಿಯಾಲಿಟಿ ಶೋ, ಕಿಚ್ಚ ಸುದೀಪ್​ರಂತಹ ದೈತ್ಯ ನಟ ಹೋಸ್ಟ್​ ಮಾಡೋ ಶೋ ಬಿಗ್​ಬಾಸ್​​ನ ಸೆಂಟರ್​​ ಆಫ್​ ಅಟ್ರ್ಯಾಕ್ಷನ್ ಆಗಿದ್ದಾರೆ. ಅದಕ್ಕೆ ಅಲ್ವಾ ಹೇಳೋದು, ಕಲೆ ಯಾರ ಮನೆ ಆಸ್ತಿಯೂ ಅಲ್ಲ ಅಂತಾ.
ಇದನ್ನೂ ಓದಿ: ಕ್ರೇಜಿಸ್ಟಾರ್ ಮುಂದೆ ಒನ್​ ವೇ ಲವ್ ಸ್ಟೋರಿ ಹೇಳಿದ ಗಿಲ್ಲಿ.. ಕುತೂಹಲದಿಂದ ಕೇಳಿದ ಕಾವ್ಯ VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us