/newsfirstlive-kannada/media/media_files/2025/12/29/gilli-nata-16-2025-12-29-12-32-39.jpg)
ಇಲ್ಲಿಯವರೆಗೂ ಕನ್ನಡದಲ್ಲಿ 11 ಬಿಗ್ ಪಾಸ್ ಶೋ ಕಂಪ್ಲೀಟ್ ಆಗಿದೆ. ಈಗ ನಡೀತಿರೋದು 12ನೇ ಬಿಗ್ ಬಾಸ್ ಶೋ. ಈ ಬಾರಿಯ ಶೋ ನೋಡಿ ಇಷ್ಟೊಂದು ಕ್ರೆಜ್. ಇಷ್ಟೊಂದು ಜನಪ್ರಿಯತೆ. ಇಷ್ಟೊಂದು ಚರ್ಚೆಯನ್ನ ನೋಡಿಯೇ ಇರ್ಲಿಲ್ಲ ಅಂತಾರೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು. ಇದಕ್ಕೆ ಕಾರಣವೇ ಬಿಗ್‌ಬಾಸ್ ಮನೆಯಲ್ಲಿ ಮೋಡಿ ಮಾಡ್ತಿರೋ ಗಿಲ್ಲಿ ನಟ ಅಂದ್ರೆ ಖಂಡಿತ ತಪ್ಪಾಗದು.
ಆತನಿಗೆ ಬಿಗ್‌ಬಾಸ್ ಶೋ ಹೇಗಿರುತ್ತೆ ಅನ್ನೋದು ಗೊತ್ತು? ತಾನು ಹೇಗೆ ಆಡ್ಬೇಕು ಅನ್ನೋದು ಗೊತ್ತು? ಎದುರಾಳಿಗೆ ಹೇಗೆ ಮಾಸ್ಟರ್ ಸ್ಟ್ರೋಕ್ ಕೊಡ್ಬೇಕು ಅನ್ನೋದು ಗೊತ್ತು? ಸೀರಿಯಸ್ ಟಾಸ್ಕ್‌ನಲ್ಲೂ ಜನರಿಗೆ ಹೇಗೆ ಮನರಂಜನೆ ಕೊಡ್ಬೇಕು ಅನ್ನೋದು ಗೊತ್ತು? ಒಂದೇ ಮಾತದಲ್ಲಿ ಹೇಳ್ಬೇಕು ಅಂದ್ರೆ ಸಕಲಕಲಾವಲ್ಲಭ.
ಇದನ್ನೂ ಓದಿ: ಸೆಟ್​ಬಾಯ್​ ಕೆಲ್ಸದಿಂದ, ಕಲಾ ಪ್ರಪಂಚಕ್ಕೆ ಗಿಲ್ಲಿ ಎಂಟ್ರಿ ಆಗಿದ್ದೇಗೆ?
/filters:format(webp)/newsfirstlive-kannada/media/media_files/2025/11/13/kavya-and-gilli-2025-11-13-08-51-32.jpg)
ಮಾತಲ್ಲೇ ಕ್ಷಿಪಣಿ ದಾಳಿ!
ಬಿಗ್ ಬಾಸ್ ಶೋ ನೋಡೋ ಪ್ರತಿಯೊಬ್ಬರ ಬಾಯಲ್ಲಿಯೂ ಕೇಳಿ ಬರೋ ಹೆಸ್ರು ಅಂದ್ರೆ ಗಿಲ್ಲಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರ ಬಾಯಲ್ಲೂ ಮನದಲ್ಲೂ ಗಿಲ್ಲಿ ಹೆಸ್ರು ಓಡಾಡ್ತಿದೆ. ಆತನ ಆಟದ ವೈಖರಿ. ವೀಕ್ಷಕರ ನಗು ತರಿಸೋ ಸಾಮರ್ಥ್ಯ ಇರೋ ನಟ. ಅದೆಂಥಾ ಗಂಭೀರ ಪರಿಸ್ಥಿತಿಯೇ ಎದುರಾಗಲಿ. ಅಲ್ಲಿಯೂ ಹಾಸ್ಯ ಮಾಡಿ ವೀಕ್ಷಕರಿಗೆ ಮನರಂಜನೆ ನೀಡ್ತಾನೆ. ಇದೇ ಕಾರಣಕ್ಕೆ ಗಿಲ್ಲಿ ಅಂದ್ರೆ ಜನರಿಗೆ ಎಲ್ಲಿಲ್ಲದ ಅಚ್ಚು ಮೆಚ್ಚು. ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಹವಾ ಹೇಗಿದೆಯೋ? ಹಾಗೇ ಹೊರಗಡೆಯೂ ಇದೆ. ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ಹವಾ ಬೆಂಕಿ ಬಿರುಗಾಳಿ.
/filters:format(webp)/newsfirstlive-kannada/media/media_files/2025/12/04/gilli-new-songs-2025-12-04-13-23-23.jpg)
ಗಿಲ್ಲಿ ಸಕ್ಸಸ್‌ಗೆ ಕಾರಣ-01
ಬಿಗ್‌ಬಾಸ್ ಮನೆಗೆ ಕಾಲಿಟ್ಟ ಡೇ ಒನ್ ಇಂದಲೂ ಗಿಲ್ಲಿ ನಟ ಡಿಫರೆಂಟ್. ಉಳಿದ ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದ್ರೆ ಗಿಲ್ಲಿ ವೇರಿ ವೇರಿ ಡಿಫರೆಂಟ್. ಮಾತಲ್ಲಿ, ಸ್ಟೈಲ್‌ನಲ್ಲಿ, ಪಂಚ್ ಮಾಡುವಲ್ಲಿ. ನಾಮಿನೇಟ್ ಮಾಡುವಲ್ಲಿ, ಸ್ಟ್ಯಾಂಡ್ ತೆಗೆದುಕೊಳ್ಳುವಲ್ಲಿ. ಎಲ್ಲದ್ರಲ್ಲಿಯೂ ಗಿಲ್ಲಿ ಡಿಫರೆಂಟ್ ಆಗಿ ತಮ್ಮನ್ನು ತೋರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಬನಿಯನ್ ಧರಿಸಿಕೊಂಡು. ಚಪ್ಪಲಿ ಹಾಕದೇ ಸಾದಾಸೀದಾ ಇರೋದೇ ಜಾಸ್ತಿ. ಅದು ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗಿ ಬಿಟ್ಟಿದೆ. ಅದೆಷ್ಟೇ ಗೇಮ್ ಆಡಿದ್ರೂ. ಮಾತಿನ ಚಾಲಕಿತನ ತೋರಿಸಿದ್ರೂ ಗಿಲ್ಲಿಗೆ 11 ವಾರಗಳ ಕಾಲ ಬಿಗ್‌ಬಾಸ್ ಮನೆಗೆ ಕ್ಯಾಪ್ಟನ್ ಸಿಕ್ಕಿರ್ಲಿಲ್ಲ. ತಾನು ಕ್ಯಾಪ್ಟನ್ ಆಗೋದೇ ಇಲ್ಲ ಅನ್ನೋ ಭಾವನೆ ಗಿಲ್ಲಿಗಿತ್ತು. ಬಟ್, 12ನೇ ವಾರದಲ್ಲಿ ಗಿಲ್ಲಿ ಆಸೆ ನೆರವೇರಿತು. ಮನೆಯ ಕ್ಯಾಪ್ಟನ್ ಆಗ್ತಾ ಇದ್ದಂತೆ ಡಿಫರೆಂಟ್ ವೇಷತೊಟ್ಟು. ರಾಜಗಾಂಭೀರ್ಯದಲ್ಲಿ ರೂಮ್ ಪ್ರವೇಶ ಮಾಡಿ ಬಗೆ ಬಗೆಯ ಲುಕ್ ಕೊಟ್ರು. ಇದುವೇ ಗಿಲ್ಲಿಯ ಶಕ್ತಿ.
ಗಿಲ್ಲಿ ಸಕ್ಸಸ್‌ಗೆ ಕಾರಣ-02
ಗಿಲ್ಲಿ ನಟನನ್ನ ಜನ ಯಾಕೆ ಇಷ್ಟೊಂದು ಇಷ್ಟ ಪಡ್ತಿದ್ದಾರೆ? ಕೋಟಿ ಕೋಟಿ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ? ಪ್ರತಿಯೊಬ್ಬರು ಮನೆ ಮಗನಂತೆ ಯಾಕೆ ನೋಡ್ತಾರೆ ಅಂತ ನೋಡ್ತಾ ಹೋದ್ರೆ ಕಾಣಿಸೋದು ಗಿಲ್ಲಿ ವ್ಯಕ್ತಿತ್ವ. ಬಿಗ್ ಬಾಸ್‌ವೊಂದು ವ್ಯಕ್ತಿತ್ವದ ಆಟ ಅನ್ನೋದನ್ನ ದೊಡ್ಮನೆ ಪ್ರವೇಶ ಮಾಡೋ ಮುನ್ನವೇ ಗಿಲ್ಲಿ ತಿಳ್ಕೊಂಡಿರ್ತಾರೆ. ಹಾಗೇ ಎಂಟ್ರಿಯಾಗ್ತಾ ಇದ್ದಂತೆ ತಮ್ಮ ವ್ಯಕ್ತಿತ್ವ ಹೇಗಿದೆಯೋ? ಹಾಗೇ ತೋರಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಎಲ್ಲಿಯೂ ಡ್ರಾಮಾ ಮಾಡೋದಕ್ಕೆ ಹೋಗೋದಿಲ್ಲ. ಶೋಗಾಗಿ ತಮ್ಮ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳೋದಕ್ಕೆ ಮುಂದಾಗೋದಿಲ್ಲ. ಇತರೆ ಸ್ಪರ್ಧಿಗಳ ಬಗ್ಗೆ ಹಿಂಬದಿಯಲ್ಲಿ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ. ಏನಾದ್ರೂ ಹೇಳೋದಿದ್ರೆ ನೇರಾನೇರ ಹೇಳ್ತಾರೆ ಗಿಲ್ಲಿ. ಇದು ಗಿಲ್ಲಿ ಕ್ರೇಜ್ ಜಾಸ್ತಿ ಆಗುವಂತೆ ಮಾಡಿದೆ.
ಇದನ್ನೂ ಓದಿ: ಗಿಲ್ಲಿ PR ಟೀಂಗೆ ಎಚ್ಚರಿಕೆ ಕೊಟ್ಟ ರಜತ್.. ಯಾಕೆ..? -VIDEO
/filters:format(webp)/newsfirstlive-kannada/media/media_files/2025/12/28/gilli-nata-13-2025-12-28-14-29-36.jpg)
ಗಿಲ್ಲಿ ಸಕ್ಸಸ್‌ಗೆ ಕಾರಣ-03
ಗಿಲ್ಲಿ ನಟ ಬಿಗ್‌ಬಾಸ್‌ನಲ್ಲಿ ಬೇರೆ ಸ್ಪರ್ಧಿಗಳಿಗೆ ಹೇಗೆ ಮಾಸ್ಟರ್ ಸ್ಟ್ರೋಕ್ ಕೊಡ್ತಿದ್ದಾರೆ. ಅವರೆಲ್ಲರನ್ನ ಹೇಗೆ ಆಡ ಆಡಿಸ್ತಿದ್ದಾರೆ ಅನ್ನೋದನ್ನ ಪ್ರೂವ್ ಮಾಡೋದಕ್ಕೆ. ನಾಮಿನೇಟ್ ಆಗಿರೋ ಸ್ಪರ್ಧಿಗಳಿಗೆ ಬಿಗ್ ಬಾಸ್‌ವೊಂದ್ ಅವಕಾಶ ಕೊಡ್ತಾರೆ. ಒಂದು ರೂಮ್‌ಗೆ ಕರ್ಕೊಂಡ್ ಹೋಗಿ ನಿಮ್ಮನ್ನ ಯಾರ್ ಯಾರ್ ನಾಮಿನೇಟ್ ಆಗ್ಬೇಕು ಅಂತ ಬಯಸುತ್ತಿದ್ದಾರೆ? ಯಾರು ನೀವು ಮನೆಯಿಂದ ಹೊರಹೋಗಬೇಕು ಅಂತ ಬಯಸ್ತಿದ್ದಾರೆ ಅನ್ನೋದನ್ನ ಜಡ್ಜ್ ಮಾಡಿ. ಸರಿಯಾಗಿ ಜಡ್ಜ್ ಮಾಡಿದ್ರೆ ನಾಮಿನೇಟ್‌ನಿಂದ ಪಾರಾಗ್ತೀರಿ ಅನ್ನೋ ಟಾಸ್ಕ್ ಕೊಡ್ತಾರೆ.
ರಾಶಿಕಾ ಶೆಟ್ಟಿಗೂ ಗಿಲ್ಲಿಗೂ ಆಗಿ ಬರೋದಿಲ್ಲ. ಹೀಗಾಗಿ ರಾಶಿಕಾ ಮೊದಲು ಹೇಳೋದು ಗಿಲ್ಲಿ ಹೆಸ್ರನ್ನ. ಆದ್ರೆ, ಚಾಣಕ್ಯ ಗಿಲ್ಲಿ ರಾಶಿಕಾನ ನಾಮಿನೇಟ್ ಮಾಡಿರೋದ್ರಿಲ್ಲ. ಪರಿಣಾಮ 5 ಹೆಸರು ಕರೆಕ್ಟ್ ಆಗಿ ಹೇಳಿ, ಒಂದನ್ನ ರಾಂಗ್ ಆಗಿ ಹೇಳಿದ್ದಕ್ಕೆ ರಾಶಿಕಾ ನಾಮಿನೇಟ್ ಆಗ್ತಾಳೆ. ಈ ಮಾಸ್ಟರ್ ಸ್ಟ್ರೋಕ್ ನೋಡಿ ದೊಡ್ಮನೆಯಲ್ಲಿದ್ದವರೇ ಶಾಕ್ ಆಗಿ ಹೋಗಿದ್ರು.
ಗಿಲ್ಲಿ ಸಕ್ಸಸ್‌ಗೆ ಕಾರಣ-04
ಬಿಗ್‌ಬಾಸ್ ಮನೆಯಲ್ಲಿರೋ ಅಶ್ವಿನಿ ಗೌಡ ಪ್ರಬಲ ಸ್ಪರ್ಧಿ. ಆಕೆಯ ಗತ್ತಿಗೆ ಇತರೆ ಸ್ಪರ್ಧಿಗಳು ಎದುರು ಮಾತಾಡೋದಕ್ಕೂ ಹಿಂದೆ ಮುಂದೆ ನೋಡ್ತಿದ್ರು ಆರಂಭದಲ್ಲಿ. ಗಿಲ್ಲಿ ಅದ್ಯಾವೂದಕ್ಕೂ ಕೇರ್ ಮಾಡಿಲ್ಲ. ಮನೆಯೊಳಗೆ ಹೋಗ್ತಾ ಇದ್ದಂತೆ ಗಿಲ್ಲಿ ಮೊದಲು ಎದುರಾಳಿಯಾಗಿ ಮಾಡಿಕೊಂಡಿದ್ದೇ ಅಶ್ವಿನಿ ಗೌಡ ಅವರನ್ನ. ಜಗಳಕ್ಕೆ ನಿಂತಾಗ ಮುಖಾಮುತಿ ನೋಡಿದೇ ತಿರುಗೇಟು ಕೊಡ್ತಾನೆ ಗಿಲ್ಲಿ. ಕಾಮೆಡಿ ಮಾಡೋವಲ್ಲಿ ಕಾಮೆಡಿ. ಜಗಳ ಮಾಡುವಲ್ಲಿ ಜಗಳ ಮಾಡ್ತಾನೆ ಗಿಲ್ಲಿ. ಇದು ವೀಕ್ಷಕರಿಗೆ ತುಂಬಾನೇ ಇಷ್ಟವಾಗಿ ಬಿಡುತ್ತೆ. ಬಿಗ್‌ಬಾಸ್ ಮನೆಯ ಹೀರೋ ಆಗಿ ಮರೆಯುವಂತೆ ಮಾಡುತ್ತೆ.
ಇದನ್ನೂ ಓದಿ: ಕ್ರೇಜಿಸ್ಟಾರ್ ಮುಂದೆ ಒನ್​ ವೇ ಲವ್ ಸ್ಟೋರಿ ಹೇಳಿದ ಗಿಲ್ಲಿ.. ಕುತೂಹಲದಿಂದ ಕೇಳಿದ ಕಾವ್ಯ VIDEO
/filters:format(webp)/newsfirstlive-kannada/media/media_files/2025/12/28/gilli-nata-14-2025-12-28-14-29-22.jpg)
ಗಿಲ್ಲಿ ಸಕ್ಸಸ್‌ಗೆ ಕಾರಣ-05
ಬಿಗ್ ಬಾಸ್ ಮನೆಯೊಳಗೆ ಮಾತುಕೊಟ್ಟಂತೆ ನಡೆದುಕೊಳ್ಳುವುದು ಸುಲಭದ ಮಾತು ಅಲ್ಲವೇ ಅಲ್ಲ. ವಾರ ಕಳೆದಂತೆ ಆಟದ ವೈಖರಿ ಬದಲಾಗುತ್ತಾ ಹೋಗುತ್ತೆ. ಸ್ನೇಹಿತರು ಶತ್ರುಗಳಾಗ್ತಾರೆ. ಶತ್ರುಗಳು ಸ್ನೇಹಿತರಾಗ್ತಾರೆ. ಕಾವ್ಯ ವಿಚಾರದಲ್ಲಿ ಗಿಲ್ಲಿ ಬಿಗ್‌ಬಾಸ್ ಮನೆಯ ಪ್ರವೇಶದ ವೇಳೆ ಏನು ಮಾತುಕೊಟ್ಟಿದ್ರೋ? ಹಾಗೇ ನಡೆದುಕೊಂಡಿದ್ದಾರೆ. ನಿನ್ನ ಜೊತೆ ನಾನು ನಿಲ್ತೀನಿ ಅಂದಿರೋ ಗಿಲ್ಲಿ ಇವತ್ತಿಗೂ ಕಾವ್ಯ ಪರ ಸ್ಟ್ಯಾಂಡ್ ತೆಗೆದುಕೊಳ್ತಾ ಇದ್ದಾರೆ. ಬಿಗ್‌ಬಾಸ್ ಸೀಕ್ರೆಟ್ ಟಾಸ್ಕ್ ಕೊಟ್ಟಾಗ ಮಾತ್ರ ಕಾವ್ಯಾ ಕಣ್ಣೀರು ಹಾಕಿಸಿದ್ದ. ತಾನೂ ಆ ನೋವಿನಲ್ಲಿ ಬಿರಿಯಾನಿ ಊಟ ಬಿಟ್ಟ. ಅದು ಫ್ರೆಂಡ್‌ಶಿಪ್‌ಗೆ ಕೊಡೋ ಬೆಲೆ ಅಂತ ಹೇಳಿ ಜನ ಗಿಲ್ಲಿಯನ್ನ ಮೆಚ್ಚಿಕೊಂಡ್ರು.
ಗಿಲ್ಲಿ ಸಕ್ಸಸ್‌ಗೆ ಕಾರಣ-06
ಸ್ಕ್ರಿಪ್ಟ್ ಇಟ್ಕೊಂಡು ಹಾಸ್ಯ ಮಾಡೋದು ಬೇರೆ. ಯಾವುದೇ ಸ್ಕ್ರಿಪ್ಟ್ ಇಲ್ಲದೇ ಸಮಯ ಸಂದರ್ಭವನ್ನೇ ಬಳಸಿಕೊಂಡು ಹಾಸ್ಯ ಮಾಡೋದು ಬೇರೆ. ಗಿಲ್ಲಿ ಎರಡನೇ ವರ್ಗಕ್ಕೆ ಸೇರೋ ನಟ. ಆತನಿಗೆ ಹಾಸ್ಯ ಮಾಡೋದಕ್ಕೆ ಸ್ಕ್ರಿಪ್ಟ್ ಬೇಕಾಗಿಯೇ ಇಲ್ಲ. ಜೊತೆಗಿದ್ದ ಸ್ಪರ್ಧಿಗಳ ನಡೆ ನುಡಿ ನೋಡಿಯೇ ಕಾಲು ಎಳೀತಾನೆ. ಸಖತ್ ಮನರಂಜನೆ ಕೊಡ್ತಾನೆ. ಆತನ ಮಾತಿಗೆ ಮನೆಯಲ್ಲಿದ್ದವ್ರು ನಕ್ಕಿದ್ರು. ಕರ್ನಾಟಕದ ಜನವೂ ನಗೆಯಲ್ಲಿ ತೇಲಾಡಿದ್ರು. ಆತನಿಗೆ ಇರೋ ಹಾಸ್ಯ ಪ್ರಜ್ಞೆ ನಿಜಕ್ಕೂ ಅದ್ಭುತ.
/filters:format(webp)/newsfirstlive-kannada/media/media_files/2025/12/28/gilli-nata-15-2025-12-28-14-27-14.jpg)
ಗಿಲ್ಲಿ ಸಕ್ಸಸ್‌ಗೆ ಕಾರಣ-07
ಬಿಗ್‌ಬಾಸ್ ಮನೆಯಲ್ಲಿ ಬೇರೆ ಸ್ಪರ್ಧಿಗಳಿಗೂ? ಗಿಲ್ಲಿಗೂ? ಇರೋ ವ್ಯತ್ಯಾಸವೇ ಇಲ್ಲಿದೆ ನೋಡಿ. ಬೇರೆ ಸ್ಪರ್ಧಿಗಳಲ್ಲಿ ಒಮ್ಮೆ ಜಗಳ ಆಯ್ತು ಅಂದ್ರೆ ಕನಿಷ್ಠ ಎರಡ್ಮೂರು ದಿನವಾದ್ರೂ ಮಾತಾಡೋದನ್ನ ಬಿಟ್ಟು ಬಿಡ್ತಾರೆ. ಹಿಂದೆ ಹೋಗಿ ಮಾತಾಡೋದಕ್ಕೆ ಶುರು ಮಾಡ್ತಾರೆ. ಗಿಲ್ಲಿ ಡಿಫರೆಂಟ್. ಮನೆಯಲ್ಲಿ ಎಲ್ಲರ ಜೊತೆಗೂ ಜಗಳ ಆಡಿದ್ದಾನೆ. ಯಾರ ಜೊತೆಗೂ ಮಾತು ಬಿಟ್ಟಿಲ್ಲ. ಹಾಗೇ ಮಾಡಿದ್ರೆ ತನ್ನ ಆಟಕ್ಕೆ ಏಟು ಬೀಳುತ್ತೆ ಅನ್ನೋದು ಗಿಲ್ಲಿಗೆ ಪಕ್ಕಾ ಗೊತ್ತು. ಜಗಳ ಆದ್ಮೇಲೆ ಹಿಂದೆ ಹೋಗಿ ಮಾತಾಡೋದು ಜಾಯಮಾನವೂ ಗಿಲ್ಲಿಗೆ ಇಲ್ಲ. ಇದೆಲ್ಲವೂ ಗಿಲ್ಲಿಗೆ ಪ್ಲಸ್ ಆಗ್ತಿದೆ.
ಗಿಲ್ಲಿ ಸಕ್ಸಸ್‌ಗೆ ಕಾರಣ-08
ಬಿಗ್‌ಬಾಸ್ ಆರಂಭದಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಇಬ್ಬರೂ ಸೇರಿ ರಾತ್ರಿ ಹೆಜ್ಜೆ ಅಲ್ಲಾಡಿಸ್ತಾರೆ. ಅದನ್ನ ರಕ್ಷಿತಾ ತೆಲೆಗೆ ಕಟ್ಟುತ್ತಾರೆ. ಅವರು ಮಾಡಿದ್ದು ತಮಾಷೆಗೆಯಾಗಿತ್ತು. ತಾನು ಮಾಡಿಲ್ಲ ಅಂತ ರಕ್ಷಿತಾ ಜಗಳಕ್ಕೆ ಹೋಗುತ್ತಾಳೆ. ಆ ಸಂದರ್ಭದಲ್ಲಿ ರಕ್ಷಿತಾ ಪರವಾಗಿ ಬೇರೆ ಯಾರೂ ನಿಲ್ಲೋದಿಲ್ಲ. ಯಾಕಂದ್ರೆ, ಅಶ್ವಿನಿ ಗೌಡ ಎದುರು ಜಗಳ ಆಡಿ ಗೆಲ್ಲೋದಕ್ಕೆ ಆಗೋದಿಲ್ಲ ಅನ್ನೋ ಭಾವನೆ ಅವರಿಗೆ ಇರುತ್ತೆ. ಬಟ್, ರಕ್ಷಿತಾ ಪರ ಸ್ಟ್ಯಾಂಡ್ ತೆಗೆದುಕೊಳ್ಳುವುದು ಗಿಲ್ಲಿ ಮಾತ್ರ. ಅದಕ್ಕಾಗಿಯೇ ಕಿಚ್ಚನ ಚಪ್ಪಳೆ ಗಿಲ್ಲಿಗೆ ಬರುತ್ತೆ.
ಇದನ್ನೂ ಓದಿ: ಗಿಲ್ಲಿ ರಿಯಾಲಿಟಿ ಕಿಂಗ್, ಕಾವ್ಯ ಬೆಂಕಿ! ಬಿಗ್​ ಬಾಸ್​ನಲ್ಲಿ ಯಾರು ಹೆಂಗೆಂಗೆ..?
/filters:format(webp)/newsfirstlive-kannada/media/media_files/2025/10/26/gilli-2025-10-26-19-15-21.jpg)
ಗಿಲ್ಲಿ ಸಕ್ಸಸ್‌ಗೆ ಕಾರಣ-09
ಬಿಗ್‌ಬಾಸ್ ಶೋದಲ್ಲಿ ವಾರದಲ್ಲಿ ಎರಡು ದಿನ ಕಿಚ್ಚ ಸುದೀಪ್ ಕಾಣಿಸ್ಕೊಳ್ತಾರೆ. ಆ ಸಂದರ್ಭದಲ್ಲಿ ಮನೆಯಲ್ಲಿ ತಪ್ಪು ಮಾಡಿದವ್ರಿಗೆ ತಿದ್ದಿಕೊಳ್ಳಲು ಸೂಚನೆ ಕೊಡ್ತಾರೆ. ಹಾಗೇ ಪ್ರತಿಭೆ ಇದ್ದವರಿಗೆ ವೇದಿಕೆಯನ್ನೂ ಒದಗಿಸ್ತಾರೆ. ಒಮ್ಮೆ ಖಾಲಿ ಪೇಪರ್ ಅನ್ನ ಗಿಲ್ಲಿ ಕೈಗೆ ಕೊಡಿಸ್ತಾರೆ. ಅದನ್ನ ನೋಡಿಕೊಂಡು ಗಿಲ್ಲಿ ಸಹ ಸ್ಪರ್ಧಿಗಳ ಬಗ್ಗೆ ಡಮಾ ಡುಮ್ಮಿ ಡಕ್ಕಾ ಅಂತ ಟಕ್ಕರ್ ಕೊಡ್ತಾರೆ. ಹಾಗೇ ರಜತ್, ಚೈತ್ರಾ ಮನೆಗೆ ಫೋನ್ ಮಾಡೋದಕ್ಕೆ ಅವಕಾಶ ಕೊಟ್ಟಾಗಲೂ ಗಿಲ್ಲಿ ಸೈ ಅನಿಸಿಕೊಳ್ತಾರೆ. ಗಿಲ್ಲಿ ಕಾಮೆಡಿಯನ್ನ ನೋಡಿ ಸ್ವತಃ ಸುದೀಪ್ ನಕ್ಕು ನಕ್ಕು ಸುಸ್ತಾಗುತ್ತಾರೆ.
ಗಿಲ್ಲಿ ಸಕ್ಸಸ್‌ಗೆ ಕಾರಣ-10
ಹೇಳಿ ಕೇಳಿ ಇದೋ ಸೋಷಿಯಲ್ ಮೀಡಿಯಾ ಯುಗ.. ಈ ಬಾರಿ ಸೋಷಿಯಲ್ ಮೀಡಿಯಾ ಕಂಟೆಂಟ್ ರೈಟರ್‌ಗಳ ಕಣ್ಣು ಬಿಗ್ ಬಾಸ್ ಮೇಲೆ ದೊಡ್ಡ ಪ್ರಮಾಣದಲ್ಲಿ ಬಿದ್ದಿದೆ. ಅವರಿಗೆ ಗಿಲ್ಲಿಯಿಂದ ಬರಪೂರ ಕಂಟೆಂಟ್ ಸಿಕ್ತಾ ಇದೆ. ಫ್ರೆಂಡ್‌ಶಿಪ್, ಲವ್, ಹಾಸ್ಯ, ಜಗಳ, ನಿಯತ್ತು. ಎಲ್ಲಾ ವಿಚಾರದಲ್ಲಿಯೂ ಗಿಲ್ಲಿಯಿಂದ ಕಂಟೆಂಟ್ ಸಿಕ್ತಾ ಇದೆ. ಹೀಗಾಗಿ ಗಿಲ್ಲಿ ಕ್ರೇಜ್ ಹೆಚ್ಚಾಗೋದಕ್ಕೆ ಸೋಷಿಯಲ್ ಮೀಡಿಯಾವೂ ಕಾರಣವಾಗ್ತಿದೆ.
ಅಂತಿಮವಾಗಿ ಗಿಲ್ಲಿ ಬಿಗ್ ಬಾಸ್ ಗೆಲ್ತಾರಾ ಅಂತ ಕೇಳಿದ್ರೆ ಸದ್ಯಕ್ಕೆ ಗಿಲ್ಲಿ ಕ್ರೇಜ್ ಇರೋದು ಸತ್ಯ. ವಿನ್ನಿಂಗ್ ರೇಸ್‌ನಲ್ಲಿ ಇರೋದು ಪಕ್ಕಾ. ಆಟ ಮುಗಿಯೋದಕ್ಕೆ ಇನ್ನೂ ಮೂರುವಾರ ಬಾಕಿ ಇದೆ. ಹೀಗಾಗಿ ಇನ್ಮೇಲಿನ ಆಟವೂ ಮಹತ್ವದಾಗಿರುತ್ತೆ.
ಇದನ್ನೂ ಓದಿ:ಗಿಲ್ಲಿಗೆ ಚಪಾತಿ ಕೊಡದ ರಘು.. ಅದಕ್ಕೆ ಅಭಿಷೇಕ್ ಕೊಟ್ಟ ರೀಷನ್ ಬೇರೆ..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us