ಸೆಟ್​ಬಾಯ್​ ಕೆಲ್ಸದಿಂದ, ಕಲಾ ಪ್ರಪಂಚಕ್ಕೆ ಗಿಲ್ಲಿ ಎಂಟ್ರಿ ಆಗಿದ್ದೇಗೆ?

ಗಿಲ್ಲಿ ಅಂದ್ರೆ ಕಚಗುಳಿ ಅನ್ನೋದು ಜನರಿಗೆ ಗೊತ್ತಾಗಿದೆ. ಸ್ಟ್ರೆಸ್​​ನಿಂದ ಮನೆಗೆ ಬಂದವರಿಗೆ ಗಿಲ್ಲಿ ರಿಲ್ಯಾಕ್ಸೇಷನ್​ ಅನ್ನುವಂತಾಗಿದೆ. ಸದ್ಯಕ್ಕೆ ಬಿಗ್​ಬಾಸ್​ನಲ್ಲಿ ಭರ್ಜರಿ ಎಂಟರ್​ಟೈನ್​ಮೆಂಟ್​ ಕೊಡ್ತಿರೋ ಗಿಲ್ಲಿ. ಈ ಸ್ಟೇಜ್​ಗೆ ಬರೋಕೆ ಪಟ್ಟ ಕಷ್ಟ ತುಂಬಾ ಇದೆ.

author-image
Ganesh Kerekuli
Gilli Nata (13)
Advertisment

ಗಿಲ್ಲಿ ಅಂದ್ರೆ ಕಚಗುಳಿ ಅನ್ನೋದು ಜನರಿಗೆ ಗೊತ್ತಾಗಿದೆ. ಸ್ಟ್ರೆಸ್​​ನಿಂದ ಮನೆಗೆ ಬಂದವರಿಗೆ ಗಿಲ್ಲಿ ರಿಲ್ಯಾಕ್ಸೇಷನ್​ ಅನ್ನುವಂತಾಗಿದೆ. ಸದ್ಯಕ್ಕೆ ಬಿಗ್​ಬಾಸ್​ನಲ್ಲಿ ಭರ್ಜರಿ ಎಂಟರ್​ಟೈನ್​ಮೆಂಟ್​ ಕೊಡ್ತಿರೋ ಗಿಲ್ಲಿ. ಈ ಸ್ಟೇಜ್​ಗೆ ಬರೋಕೆ ಪಟ್ಟ ಕಷ್ಟ ತುಂಬಾ ಇದೆ. ಆತನ ಪ್ರಾಪರ್ಟಿ ಕಾಮಿಡಿಗೆ.. ಆತನ ಇನ್ನೋಸೆನ್ಸ್​ಗೆ ಜನರ ಮೆಚ್ಚಿ ಅಭಿಮಾನಿಗಳಾಗಿದ್ದಾರೆ. ಆ ಅದ್ದೂರಿ ಕಥೆ ಇಲ್ಲಿದೆ. 

1996 ರಲ್ಲಿ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಅಲ್ಲೊಂದು ಮನೆಯಲ್ಲಿ ಹುಟ್ಟಿದ್ದ ಕೊನೆಯ ಒಬ್ಬ ಮಗ ಈ ಗಿಲ್ಲಿ. ಕುಳ್ಳಯ್ಯ ಸವಿತಾ ಅನ್ನೋ ದಂಪತಿಗೆ ಮೂವರು ಮಕ್ಕಳಿದ್ರು. ಅವ್ರಲ್ಲಿ ಕೊನೆ ಹುಡುಗನೇ ಈ ಗಿಲ್ಲಿ. ಊರಲ್ಲಿ ಮಾಮೂಲಿ ಕೃಷಿಕ ಕುಟುಂಬ ಅವ್ರದ್ದು. ಬೆಳೆಯುತ್ತಾ ಗಿಲ್ಲಿಗೆ ಕಲೆ ಕಡೆ ಗಮನ ಹರಿದಿತ್ತು. ಅದೇ ಆಸೆಯನ್ನ ಹೊತ್ತು ಮಹಾನಗರ ಬೆಂಗಳೂರಿನ ಕಡೆ ಹೆಜ್ಜೆ ಹಾಕಿದ್ದ. ಇಲ್ಲೇನೂ ಆತನಿಗೆ ರೆಡ್​ ಕಾರ್ಪೆಟ್​ ಹಾಕಿ ವೆಲ್​ಕಮ್​ ಹೇಳ್ಳಿಲ್ಲ. ಗಿಲ್ಲಿ ಮೊದಲಿಗೆ ಅಸಿಸ್ಟೆಂಟ್ ​​ ಡೈರೆಕ್ಟರ್​ ಆಗಿ.. ಆನಂತರ ಅದ್ರಲ್ಲಿ ಸಂಬಳ ಇಲ್ಲ ಅಂತ. ಸೆಟ್​ ಬಾಯ್​ ಆಗಿ ಕೆಲ್ಸ ಮಾಡಿದ್ರು. ಅದೇ ಸೆಟ್​ ಕೆಲ್ಸವನ್ನ ಕೆಲ ರಿಯಾಲಿಟಿ ಶೋಗಳಲ್ಲೂ ಮಾಡಿದ್ರು. ಆಗ ಅವ್ರಿಗೆ ಸಿಕ್ಕಿದ್ದೇ ಕಾಮಿಡಿ ಕಿಲಾಡಿಗಳಲ್ಲಿ ಚಾನ್ಸ್​​.

ಇದನ್ನೂ ಓದಿ: ಈ ಸ್ಪರ್ಧಿಗೆ ದುರಹಂಕಾರ -ರಜತ್ ಪ್ರಕಾರ ಬಿಗ್ ​ಬಾಸ್​ನಲ್ಲಿ ಯಾರು ಹೆಂಗೆಂಗೆ..?

Gilli Nata (14)

ಸೆಟ್​ ಬಾಯ್​ ಆಗಿ ಕೆಲ್ಸ ಮಾಡಿದ್ದ ಕಾಮಿಡಿ ಕಿಲಾಡಿಗಳು ಸೆಟ್​​. ಗಿಲ್ಲಿಗೆ ಭವಿಷ್ಯ ಬೆಳಗೋ ಸೆಟ್​ ಆಗ್ಬಿಡ್ತು. ಕೆಲ್ಸ ಮಾಡಿದ್ದ ನೆಲದಲ್ಲೇ ಸೆಟ್​ ಬಾಯ್​ ಆಗಿದ್ದ ಜಾಗದಲ್ಲೇ ಸ್ಟಾರ್​ ಆಗಿಬಿಟ್ಟ. ಅಲ್ಲಿಂದ ಗಿಲ್ಲಿ ತಿರುಗಿ ನೋಡಿದ್ದೇ ಇಲ್ಲ. ಅಭಿಮಾನಿಗಳನ್ನ ಸಂಪಾದಿಸಿಕೊಂಡ. ಮಂಡ್ಯದ ಜನ ನಮ್​ ಹುಡುಗ ಅಂತ ಅಪ್ಪಿದ್ರು. ಈಗ ಇಡೀ ಕರುನಾಡೇ ನಮ್ಮ ಹುಡುಗ ಅಂತಿದೆ.

ಪೋಸ್ಟರ್​ ಹಾಕ್ತಿದ್ದಾರೆ, ಹೂವಿನಹಾರ ಹಾಕ್ತಿದ್ದಾರೆ. ಜೈ ಗಿಲ್ಲಿ ಅಂತ ಕೂಗಾಡ್ತಿದಾರೆ. ಅಷ್ಟೇ ಅಲ್ಲ ಗಿಲ್ಲಿಯ ಹವಾ ಆಂಧ್ರದ ಕಡೆಯೂ ಬೀಸಿದೆ. ಅಲ್ಲೂ ಗಿಲ್ಲಿ ಬಗ್ಗೆ ಒಂದು ಸಾಂಗ್​ ಮಾಡಿ.. ಗಿಲ್ಲಿ ಅಂಟೇ ಗಿಲ್ಲಿ ಅಂತ ಡಿಜೆ ಹೊಡೆಸಿದ್ದಾರೆ. ಗಿಲ್ಲಿ ಚಿಕ್ಕ ಮಕ್ಕಳಿಗೂ ಸಖತ್​ ಇಷ್ಟ. ಪ್ರತಿ ರಿಯಾಲಿಟಿ ಶೋಗೂ ಗಿಲ್ಲಿಯನ್ನ ಕರೆಸ್ತಿದ್ರು. ಹಾಗೆ ಜೋಡಿ ನಂ 1 ಅನ್ನೊ ರಿಯಾಲಿಟಿ ಶೋನಲ್ಲಿ ಗಿಲ್ಲಿ ಕೊಟ್ಟಿದ್ದ ಪ್ರಾಪರ್ಟಿ ಕಾಮಿಡಿಗೆ.. ಇಡಿ ಕರ್ನಾಟಕ ಅಲ್ಲ.. ನೆರೆ ರಾಜ್ಯದ ಹಿರಿಯರು, ಮಕ್ಳು ಬಿದ್ದು ಬಿದ್ದು ನಕ್ಕಿದ್ರು.

ಇದನ್ನೂ ಓದಿ:ಫ್ಯಾಮಿಲಿರೌಂಡ್​ನಿಂದ ವೀಕ್ಷಕರ ಆಯ್ಕೆ ಮೇಲೆ ಪರಿಣಾಮ.. ಈ ಬಾರಿಯೂ ಮ್ಯಾಜಿಕ್ ಮಾಡುತ್ತಾ ‘ಅನುಕಂಪ’?

Gilli Nata (15)

ಗಿಲ್ಲಿಯ ಫೇಮ್​ ಈಗ ಮಾಮೂಲಿ ಸ್ಟಾರ್​ನಂತಲ್ಲ.. ದೊಡ್ಡ ಸ್ಟಾರ್​ ರೇಂಜ್​ನಲ್ಲಿದೆ. ಈಗ ಬಿಗ್​ಬಾಸ್​ನಲ್ಲಿರೋ ಗಿಲ್ಲಿ.. ಅಲ್ಲೂ ತನ್ನ ಟೈಮಿಂಗನ್ನ ಬಿಟ್ಟಿಲ್ಲ. ಟೈಮ್​ ಸಿಕ್ಕಾಗೆಲ್ಲಾ ಭಾರಿಸ್ತಲೇ ಇದ್ದಾರೆ. ಪಂಚ್​ಗಳಿಂದ ಗುಮ್ಮುತ್ತಲೇ ಇದ್ದಾರೆ.  ಬಿಗ್​ಬಾಸ್​ ಸೀಸನ್​ 12ನಲ್ಲಿ ಗಿಲ್ಲಿ ಇರೋದ್ರಿಂದ, ಈ ಸೀಸನ್​ ಹೆಚ್ಚೆಚ್ಚು ಜನರಿಗೆ ರೀಚ್ ಆಗಿದೆ ಅನ್ನೋ ಮಾತಿದೆ. ಯಾಕಂದ್ರೆ ನ್ಯಾಚ್ಯುರಲ್ಲಾಗಿ ಇದ್ದು ಪಂಚ್​ಗಳಿಂದ, ತನ್ನ ಆಟದ ವೈಖರಿಯಿಂದ ಗಿಲ್ಲಿ ಆಕರ್ಷಿಸ್ತಿದ್ದಾರೆ.
ರಿಯಾಲಿಟಿ ಶೋಗಳ ಸ್ಟೇಜ್​ ಮೇಲೆ ಗಗನ ಅನ್ನೋ ಯುವತಿ ಜೊತೆ ಪ್ರೇಮದಾಟ ಆಡ್ತಿದ್ದ ಗಿಲ್ಲಿ. ಬಿಗ್​ಬಾಸ್​ ಸೀಸನ್​ 12ರಲ್ಲೂ ಅದೇ ಆಟ ಆಡ್ತಿದ್ದಾರೆ. ಬಿಗ್​ಬಾಸ್​ಗೆ ತನ್ನ ತಂದೆ ತಾಯಿ ಬಂದಾಗ ಗಿಲ್ಲಿ ಮಗುವಾಗಿಬಿಟ್ಟಿದ್ರು. ಥೇಟ್​ ಮನೆಯಿಂದ ತಪ್ಪಿಸಿಕೊಂಡಿದ್ದ ಕುರಿಮರಿ ಹುಡುಕ್ತಾ ಬಂದಂತೆ ಗಿಲ್ಲಿ ತಂದೆ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ರು.

ಒಟ್ನಲ್ಲಿ ಫೇಸ್​ಬುಕ್​ ಲೈವ್​ ವೆಬ್​ಸಿರೀಸನ್ನ ಹುಲಿಯಂತೆ ಶುರು ಮಾಡಿದ್ದ ಗಿಲ್ಲಿ. ಎಣ್ಣೆ, ಹೆಣ್ಣು ಅಂತ ಪಂಚ್​ ಡೈಲಾಗ್​ ಹೊಡೆದಿದ್ದ ಗಿಲ್ಲಿ.. ಈ ದಿನ ಬಿಗ್​ಬಾಸ್​ ಮನೆಯಲ್ಲಿ ಹುಲಿಯಾಗಿದಾರೆ. ಇಡೀ ರಾಜ್ಯದಾದ್ಯಂತ ಫ್ಯಾನ್ಸ್​ ಸಂಪಾದಿಸಿದ್ದಲ್ಲದೇ ಬಿಗ್​ಬಾಸ್​ ಮನೆಯಲ್ಲೂ ಫ್ಯಾನ್ಸ್​​ ಹುಟ್ಟಿಕೊಳ್ಳವಂತೆ ಎಂಟರ್​ಟೈನ್​​ ಮಾಡ್ತಿದ್ದಾರೆ. 

ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್​ನ್ಯೂಸ್​.. ಕ್ಯಾಪ್ಟನ್​ ಆದ ಗಿಲ್ಲಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bigg Boss Kannada 12 Gilli Nata Bigg boss
Advertisment