/newsfirstlive-kannada/media/media_files/2025/12/26/bigg-boss-4-2025-12-26-14-23-21.jpg)
ಬಿಗ್‌ಬಾಸ್ ಫ್ಯಾಮಿಲಿ ರೌಂಡ್ ನಡೆದಿದೆ. ಈ ರೌಂಡ್ ವೀಕ್ಷಕರ ಮೇಲೆ ಹಲವು ಆಯಾಮಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಅಂತೂ ಇದೆ. ಕೆಲವೊಮ್ಮೆ ಗೇಮ್‌ನ ಗತಿಯನ್ನೇ ಬದಲಿಸಿರುವ ಉದಾಹರಣೆಗಳು ಇವೆ. ಫ್ಯಾಮಿಲಿರೌಂಡ್ ಬಳಿಕ ಜನರ ‘ಬಿಗ್’ ಆಯ್ಕೆ ಬದಲಾಗುತ್ತಾ?
ಫ್ಯಾಮಿಲಿ ರೌಂಡ್ ಪ್ರೇಕ್ಷಕರ ಆಯ್ಕೆಗಳ ಮೇಲೆ ಪರಿಣಾಮ ಬೀರುತ್ತಾ? ಈ ಹಿಂದಿನ ಎಲ್ಲಾ ಸೀಸನ್‌ಗಳನ್ನ ನೋಡ್ಕೊಂಡು ಬಂದಾಗ ಈ ಮಾತು ನಿಜ ಅನಿಸುತ್ತೆ. ಫ್ಯಾಮಿಲಿ ರೌಂಡ್ ಒಂದು ಎಮೋಷನಲ್ ರೌಂಡ್ ಮಾತ್ರವಲ್ಲ, ಆ ಸ್ಪರ್ಧಿಯ ಸಂಪೂರ್ಣ ಬ್ಯಾಕ್‌ಗ್ರೌಂಡ್ ತೆರೆದಿಡುತ್ತೆ. ಇದು ವೋಟಿಂಗ್ ಮೇಲೆ ಪರಿಣಾಮ ಬೀರೋ ಸಾಧ್ಯತೆಗಳು ಇವೆ. ಈ ಸೀಸನ್‌ನ ಫ್ಯಾಮಿಲಿ ರೌಂಡ್ ನಂತರ ಪ್ರೇಕ್ಷಕರ ಬಿಗ್ ಆಯ್ಕೆಗಳು ಬದಲಾಗುತ್ತಾ?
ಇದನ್ನೂ ಓದಿ:ಭಾವಿ ಪತಿ ಜೊತೆ ರಂಜನಿ ರಾಘವನ್ ಜಾಲಿ ಜಾಲಿ!
/filters:format(webp)/newsfirstlive-kannada/media/media_files/2025/12/26/bigg-boss-9-2025-12-26-14-24-46.jpg)
ನಿಮಗೆಲ್ಲಾ ನೆನಪಿದೆ... ಸೀಸನ್ 10ರ ಫ್ಯಾಮಿಲಿ ರೌಂಡ್ ಟೈಮ್‌ನಲ್ಲಿ ಕಾರ್ತಿಕ್ ಮಹೇಶ್ ತಂಗಿಯ ಅವರು ವಿಡಿಯೋ ಮೂಲಕ ಅಣ್ಣನಿಗೆ ವಿಶ್ ಮಾಡಿದ್ದರು. ಆಗ ತಾನೇ ಹುಟ್ಟಿದ್ದ ಮಗುವಿನ ಬಗ್ಗೆ ಮಾತನಾಡಿದ್ದರು. ಈ ವಿಡಿಯೋ ಯಾವ ಮಟ್ಟಿಗೆ ವೈರಲ್ ಆಯ್ತು ಅಂದ್ರೆ.. ಅಬ್ಬಬ್ಬಾ! ಅದೆಷ್ಟೋ ಬಿಗ್‌ಬಾಸ್ ವೀಕ್ಷಕರು ಇವತ್ತಿಗೂ ಈ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಅದೊಂದು ವಿಡಿಯೋ ಜನರ ಮನಸ್ಸು ಬದಲಿಸಿತು. ಕಾರ್ತಿಕ್ ಮಹೇಶ್‌ಗೆ ಹೆಚ್ಚೆಚ್ಚು ಜನರು ವೋಟ್ ಮಾಡಿದರು ಅನ್ನೋ ಅಭಿಪ್ರಾಯವೂ ಇದೆ. ಅದೇ ರೀತಿ ಡ್ರೋನ್ ಪ್ರತಾಪ್ ವಿಚಾರದಲ್ಲೂ ನಡೆಯಿತು.
ಈ ಹಿನ್ನೆಲೆಯಲ್ಲಿ ಈ ಸೀಸನ್‌ನ ಫ್ಯಾಮಿಲಿ ರೌಂಡ್ ನೋಡೋದಾದ್ರೆ ಹಲವರ ಬಗ್ಗೆ ಅಭಿಪ್ರಾಯಗಳು ಬದಲಾಗುವ ಸಾಧ್ಯತೆಯಂತೂ ಇದೆ. ಸ್ಪೆಷಲೀ, ಅಶ್ವಿನಿ ಅವರ ಬಗ್ಗೆ ಜನರಿಗಿದ್ದ ಆ ಕೋಪ ಕರಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಈಗಾಗ್ಲೇ ಸೋಷಿಯಲ್ ಮೀಡಿಯಾದಲ್ಲಿ ಅಶ್ವಿನಿ ಅವರ ಬಗ್ಗೆ ಅನುಕಂಪದ ಅಲೆ ಎದ್ದಿದೆ. ಅವರ ತಾಯಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಹಾಗಂತ ಅಶ್ವಿನಿ ಅವರಿಗೆ ಇದೊಂದು ದೊಡ್ಡ ಬ್ರೇಕ್‌ಥ್ರೂ ಆಗಬಹುದಾ ಅಂತಾ ಹೇಳೋದು ತುಸು ಕಷ್ಟವೇ.
ಇದನ್ನೂ ಓದಿ: ಕೊಹ್ಲಿ ಅಬ್ಬರಕ್ಕೆ ದಾಖಲೆಗಳು ಪುಡಿಪುಡಿ.. ಕಳೆದ 5 ಇನ್ನಿಂಗ್ಸ್​ನಲ್ಲಿ ಬೇರೆಯದ್ದೇ ಇತಿಹಾಸ..!
/filters:format(webp)/newsfirstlive-kannada/media/media_files/2025/12/26/bigg-boss-6-2025-12-26-12-58-45.jpg)
ನಿಮಗೆಲ್ಲಾ ಗೊತ್ತಿರಬಹುದು, ಗಿಲ್ಲಿ ಈ ಸೀಸನ್‌ನ ದಿ ಬೆಸ್ಟ್ ಎಂಟರ್‌ಟೈನರ್. ಹೊರಗೆ ಆತನ ಹವಾ ನೆಕ್ಸ್ಟ್ ಲೆವೆಲ್. ಗ್ರಾಮ ಗ್ರಾಮಕ್ಕೂ ಗಿಲ್ಲಿ ಇವತ್ತು ತಲುಪಿದ್ದಾನೆ. ಗಿಲ್ಲಿಯ ಹಾವಳಿ ಜೋರಿದೆ. ಬಹುಶಃ ಫ್ಯಾಮಿಲಿ ರೌಂಡ್ ಆದ್ಮೇಲೆ ಈ ಹವಾ ಜಾಸ್ತಿಯಾಗುವ ಎಲ್ಲಾ ಲಕ್ಷಣಗಳಿವೆ. ಇದರಲ್ಲಿ ಯಾವುದೇ ಸಂದೇಹ ಬೇಡ.
ಅದೇ ರೀತಿ ಸೂರಜ್ ಬಗೆಗಿನ ಅಭಿಪ್ರಾಯವೂ ಚೇಂಜ್ ಆಗವು ಲಕ್ಷಣಗಳು ಗೋಚರಿಸ್ತಿವೆ. ಅವರ ಫ್ಯಾಮಿಲಿಯ ಬಗ್ಗೆ ಸೂರಜ್ ಹೇಳಿದ ಒಂದೊಂದು ಮಾತುಗಳು ಕೂಡ ಮನಮುಟ್ಟುವಂತಿತ್ತು. ಹೀಗಾಗಿ ಸೂರಜ್ ಬಗ್ಗೆ ಜನರಿಗೆ ಒಂದು ಅನುಕಂಪವೂ ಈಗ ಇದೆ.
ನಿಮಗೆ ಒಂದ್ ಮಾತ್ ಹೇಳ್ಬೇಕು. ನಮ್ ಜನರಂತೂ ಪ್ರತಿಭಾವಂತರು ಮತ್ತು ಸ್ಚ್ರಾಚ್‌ಯಿಂದ ಬಂದವರಿಗೆ ಮಣೆ ಹಾಕಿರೋದೇ ಹೆಚ್ಚು. ಹೀಗಾಗಿ, ಅನುಕಂಪ ಇಲ್ಲಿ ವರ್ಕ್ ಆಗುತ್ತೆ ಅಂತಾ ಖಂಡಿತವಾಗಿಯೂ ಹೇಳ್ಬಹುದು. ಹಾಗಾಗಿ, ಫ್ಯಾಮಲಿ ರೌಂಡ್ ನಂತರ ಬಿಗ್‌ಬಾಸ್ ಗೇಮ್‌ನ ಡೈನಾಮಿಕ್ಸ್ ಬದಲಾಗುತ್ತೆ ಅನ್ನೋದು ಪಕ್ಕಾ.
ಇದನ್ನೂ ಓದಿ: ಬಿಗ್‌ಬಾಸ್ ಶೋನಲ್ಲಿ ಫ್ಯಾಮಿಲಿ ರೌಂಡ್.. ಆದರೆ ಜನರ ಪ್ರಶ್ನೆಯೇ ಬೇರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us