ಬಿಗ್‌ಬಾಸ್ ಶೋನಲ್ಲಿ ಫ್ಯಾಮಿಲಿ ರೌಂಡ್.. ಆದರೆ ಜನರ ಪ್ರಶ್ನೆಯೇ ಬೇರೆ..!

ಬಿಗ್‌ಬಾಸ್ ಶೋನಲ್ಲಿ ಫ್ಯಾಮಿಲಿ ರೌಂಡ್​ ನಡೆಯುತ್ತಿದೆ. ನಿಜಕ್ಕೂ ಪ್ರತಿ ಸೀಸನ್‌ನಲ್ಲೂ ಈ ಎಪಿಸೋಡ್ ನೋಡಲು ಜನರಂತೂ ಕಾಯ್ತಾ ಇರ್ತಾರೆ. ಪ್ರಶ್ನೆ ಏನಂದ್ರೆ, ಈ ರೌಂಡ್‌ ನಂತರ ಸ್ಪರ್ಧಿಗಳು ರಿಲ್ಯಾಕ್ಸ್ ಮೂಡ್‌ಗೆ ಬಂದ್ಬಿಡ್ತಾರಾ? ಶೋ ತನ್ನ ಖದರ್ ಕಳೆದುಕೊಂಡು ಬಿಡುತ್ತಾ?

author-image
Ganesh Kerekuli
bigg boss (10)
Advertisment

ಬಿಗ್‌ಬಾಸ್ ಶೋನಲ್ಲಿ ಫ್ಯಾಮಿಲಿ ರೌಂಡ್​ ನಡೆಯುತ್ತಿದೆ. ನಿಜಕ್ಕೂ ಪ್ರತಿ ಸೀಸನ್‌ನಲ್ಲೂ ಈ ಎಪಿಸೋಡ್ ನೋಡಲು ಜನರಂತೂ ಕಾಯ್ತಾ ಇರ್ತಾರೆ. ಪ್ರಶ್ನೆ ಏನಂದ್ರೆ, ಈ ರೌಂಡ್‌ ನಂತರ ಸ್ಪರ್ಧಿಗಳು ರಿಲ್ಯಾಕ್ಸ್ ಮೂಡ್‌ಗೆ ಬಂದ್ಬಿಡ್ತಾರಾ? ಶೋ ತನ್ನ ಖದರ್ ಕಳೆದುಕೊಂಡು ಬಿಡುತ್ತಾ?

ವಾರ ಬಿಗ್‌ಬಾಸ್ ಎಪಿಸೋಡ್ ನೋಡಿ ಜನರು ಕಣ್ಣೀರಿಟ್ಟಿದ್ದಾರೆ. ಯಾಕಂದ್ರೆ, ಸ್ಪರ್ಧಿಗಳು ತಮ್ಮ ಕುಟುಂಬ ಸದಸ್ಯರನ್ನ 80ಕ್ಕೂ ಹೆಚ್ಚು ದಿನಗಳ ನಂತರ ನೋಡಿ, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನ ನೋಡಿ ಬಿಗ್‌ಬಾಸ್‌ಗೆ ಅಡಿಕ್ಟ್ ಆಗಿರೋ ಜನರು ಭಾವುಕರಾಗಿದ್ದಾರೆ.

ಇದನ್ನೂ ಓದಿ: BSNL ಅಚ್ಚರಿ ಕೊಡುಗೆ.. ಹೊಸ ವರ್ಷಕ್ಕೆ ಭರ್ಜರಿ ರೀಚಾರ್ಜ್ ಪ್ಲಾನ್..!

bigg boss (4)

ತಮ್ಮ ಫ್ಯಾಮಿಲಿಯನ್ನ ಬಿಗ್‌ಬಾಸ್ ಅನ್ನೋ ದೊಡ್ಡ ಶೋಗೆ ಕರೆದುಕೊಂಡು ಬರ್ಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಈ ಹಲವು ಸ್ಪರ್ಧಿಗಳಿಗೆ ಇದು ಸಾಧ್ಯವಾಗಿದೆ. ತಮ್ಮ ಕುಟುಂಬದವರನ್ನ ಇಡೀ ಕರ್ನಾಟಕಕ್ಕೆ ಪರಿಚಯಿಸಿಕೊಟ್ಟ, ಹೆಮ್ಮೆ ಅವರಿಗಿದೆ.

bigg boss (6)

ಫ್ಯಾಮಿಲಿ ರೌಂಡ್ ಆದ್ಮೇಲೆ ಬಿಗ್‌ಬಾಸ್‌ ಮತ್ತೊಂದು ಮಜಲನ್ನ ತೆರೆದುಕೊಳ್ಳುತ್ತೆ. ಕುಟುಂಬ ಸದಸ್ಯರಿಂದ ಒಂದಷ್ಟು ಸುಳಿವಂತೂ ಅವ್ರಿಗೆ ಸಿಗುತ್ತೆ. ಈ ಸುಳಿವುಗಳ ಆಧಾರದ ಮೇಲೆ ತಮ್ಮ ಗೇಮ್ ಪ್ಲಾನ್ ಚೇಂಜ್ ಮಾಡ್ತಾರೆ. ಅದು ಪ್ರತಿ ಸೀಸನ್‌ನಲ್ಲೂ ನಾವು ಕಾಣ್ಬಹುದು. ಆದ್ರೆ, ಪ್ರಶ್ನೆ ಏನಂದ್ರೆ, ಫ್ಯಾಮಿಲಿ ರೌಂಡ್‌ ನಂತರ, ಮೊದಲಿನಂತೆ ತುಂಬಾನೇ ಅಗ್ರೆಸೀವ್‌ ಆಗಿ ಸ್ಪರ್ಧಿಗಳು ಇರ್ತಾರಾ ಅನ್ನೋದೇ ಈಗೀನ ಪ್ರಶ್ನೆ.

ಇದನ್ನೂ ಓದಿ:ಚಹಾ ಹೇಗೆ ಹುಟ್ಟಿಕೊಂಡಿತು..? ಒಂದು ಆಕಸ್ಮಿಕ ಘಟನೆ.. ಇಂದು ಜನಪ್ರಿಯ ಪಾನೀಯ!

bigg boss (9)

ಒಂದು ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮೂಡ್‌ಗೆ ಬಂದ್ರೆ ಬಿಗ್‌ಬಾಸ್ ಶೋ ತನ್ನ ಖದರ್ ಕಳೆದುಕೊಳ್ಳಲಿದೆ. ಯಾಕಂದ್ರೆ, ಗೇಮ್‌ ಇನ್ನೂ ಮುಗಿದಿಲ್ಲ. ಬಿಗ್‌ಬಾಸ್ ಫಿನಾಲೆ ನಡೆಯೋದು ಜನವರಿ 17 ಮತ್ತು 18ರಂದು. ಇನ್ನೂ 25 ದಿನಗಳ ಆಟ ಬಾಕಿಯಿದೆ. ಹಾಗಾಗಿ, ಮುಂದಿನ ದಿನಗಳ ಬಿಗ್‌ಬಾಸ್ ಯಾವ ರೀತಿ ಇರುತ್ತ ಅನ್ನೋದು ನಿಜಕ್ಕೂ ಕುತೂಹಲಕಾರಿಯಾಗಿದೆ. 

bigg boss (5)

ಈ ಹಿಂದೆ ನೋಡಿದ ಬಿಗ್‌ಬಾಸ್‌ ಸೀಸನ್‌ನಲ್ಲಿ ಫ್ಯಾಮಿಲಿ ರೌಂಡ್ ಆದ್ಮೇಲೆ ಮನೆ ಸೈಲೆಂಟಾಗಿದ್ದೇ ಹೆಚ್ಚು. ಎಮೋಷನಲೀ ಸ್ಪರ್ಧಿಗಳು ವೀಕ್ ಆಗಿದ್ದ ಉದಾಹರಣೆಗಳಿವೆ. ಹಾಗಂತಾ ಈ ಸೀಸನ್‌ನಲ್ಲೂ ಆಗುತ್ತೆ ಅಂತಲ್ಲ.  ಒಂದು ವೇಳೆ ಆದರೆ ಶೋ ತನ್ನ ಖದರ್ ಕಳೆದುಕೊಳ್ಳಬಹುದು. ಬಟ್ ಇದೆಲ್ಲದ್ದಕ್ಕೂ ಉತ್ತರ ಬಹುಶಃ ಮುಂದಿನ ವಾರ ಸಿಗ್ಬಹುದು ಏನಂತೀರಾ?

ಇದನ್ನೂ ಓದಿ: ಮನೆ ನಾಯಿಗೆ ದೀರ್ಘಕಾಲ ಅನಾರೋಗ್ಯ.. ನೊಂದು ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bigg Boss Kannada 12 Shubman Gill Bigg boss bigg boss dhruvanth
Advertisment