/newsfirstlive-kannada/media/post_attachments/wp-content/uploads/2023/08/VIRAT_KOHLI-1.jpg)
37ರ ವಯಸಿನಲ್ಲೂ ಕಿಂಗ್ ಕೊಹ್ಲಿ ದರ್ಬಾರ್ ನಡೆಸ್ತಿದ್ದಾರೆ. ಏಕದಿನ ಮತ್ತು ಲಿಸ್ಟ್ ಎ ಕ್ರಿಕೆಟ್​ನಲ್ಲಿ ವಿರಾಟ್​ರನ್ನ ಕಟ್ಟಿಹಾಕೋರೇ ಇಲ್ಲದಂತಾಗಿದೆ. ಕೊಹ್ಲಿ ಹೊಡೆಯೋ ಒಂದೊಂದು ರನ್ ದಾಖಲೆಯ ಪುಟಗಳಲ್ಲಿ ಸೇರುತ್ತಿವೆ. ಕೊಹ್ಲಿ ಅಬ್ಬರಕ್ಕೆ ದಾಖಲೆಗಳು ಪುಡಿ ಪುಡಿ ಆಗ್ತಿವೆ. ಡ್ರೀಮ್ ಫ್ರಾರ್ಮ್​​ನಲ್ಲಿರುವ ವಿರಾಟ್ ಅಭಿಮಾನಿಗಳಿಗೆ ಫುಲ್ ಕಿಕ್ ನೀಡ್ತಿದ್ದಾರೆ.
ಅದೆಷ್ಟೋ ದಾಖಲೆಗಳು! ಅದೆಷ್ಟೋ ಸಾಧನೆಗಳು! ನೆನಪಿಡುವಂತಹ ಅದೆಷ್ಟೊ ಇನ್ನಿಂಗ್ಸ್​ಗಳು. ನಿಜ, ಕೊಹ್ಲಿ ಮಾಡಿರೋ ರೆಕಾಡರ್ಸ್​ ಹತ್ತಿರ ಯಾರೂ ಬರೋಕೆ ಸಾಧ್ಯವಿಲ್ಲ. ಆದ್ರೂ ವಿರಾಟ್ ಕೊಹ್ಲಿಯ ದಾಹ, ಹಸಿವು ಕಿಂಚಿತ್ತು ಕಡಿಮೆ ಆಗ್ಲಿಲ್ಲ. ಲೆಕ್ಕವಿಲ್ಲದಷ್ಟು ದಾಖಲೆಗಳು ಬರೆದ್ರೂ ಇನ್ನೂ ಸಾಧನೆ ಮಾಡಬೇಕು ಅನ್ನೋ ಹಂಬಲ ಕಿಂಗ್ ಕೊಹ್ಲಿಯದ್ದು. ಈ ಮನಸ್ಥಿತಿಯಿಂದಲೇ ವಿರಾಟ್ ಶಿಖರದೆತ್ತರಕ್ಕೆ ಬೆಳೆದಿರೋದು.
/filters:format(webp)/newsfirstlive-kannada/media/media_files/2025/10/12/kohli-2025-10-12-12-36-38.jpg)
4 ತಿಂಗಳ ಬಳಿಕ 2 ಡಕೌಟ್..!
ಐಪಿಎಲ್ ಸೀಸನ್-18ರ ಬಳಿಕ ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭಿಸಿದ ವಿರಾಟ್ ಕೊಹ್ಲಿ, ಮೊದಲೆರಡು ಪಂದ್ಯಗಳಲ್ಲಿ ಡಕೌಟ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ರು. ಪರ್ತ್, ಅಡಿಲೇಡ್​ನಲ್ಲಿ ಯಡವಿದ ವಿರಾಟ್, ಒತ್ತಡದಿಂದಲೇ ಆಸಿಸ್ ಪ್ರವಾಸ ಶುರುಮಾಡಿದ್ರು.
ಇದನ್ನೂ ಓದಿ: BSNL ಅಚ್ಚರಿ ಕೊಡುಗೆ.. ಹೊಸ ವರ್ಷಕ್ಕೆ ಭರ್ಜರಿ ರೀಚಾರ್ಜ್ ಪ್ಲಾನ್..!
ಸಿಡ್ನಿ ಏಕದಿನ ಪಂದ್ಯದಲ್ಲಿ ವಿರಾಟ್, ಆಸಿಸ್​​ನ ಡೇಂಜರಸ್ ಬೌಲರ್​ಗಳಿಗೆ ನೀರು ಕುಡಿಸಿದ್ರು. ಮಿಚ್ಚೆಲ್ ಸ್ಟಾರ್ಕ್, ಜೋಷ್ ಹೇಝಲ್​ವುಡ್, ಜೋಷ್ ಇಂಗ್ಲಿಸ್, ಌಡಂ ಝ್ಯಾಂಪರಂತಹ ಸೂಪರ್​ಸ್ಟಾರ್ ಬೌಲರ್​ಗಳಿಗೆ ದಿಟ್ಟ ಉತ್ತರ ನೀಡಿದ್ರು. 81 ಎಸೆತಗಳಲ್ಲಿ ಅಜೇಯ 74 ರನ್​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ರು.
/filters:format(webp)/newsfirstlive-kannada/media/media_files/2025/12/25/virat-kohli-4-2025-12-25-15-14-48.jpg)
ಕಿಂಗ್ ಕೊಹ್ಲಿ ರಾಕ್ಸ್
ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ವಿರಾಟ್ ಅಬ್ಬರಿಸಿದ್ರು. ರಾಂಚಿಯಲ್ಲಿ ಆಫ್ರಿಕನ್ನರ ದಾಳಿಯನ್ನ ಚಿಂದಿ ಉಡಾಯಿಸಿದ ಕೊಹ್ಲಿ, 135 ರನ್​​​​​ ದಾಖಲಿಸಿದ್ರು.11 ಬೌಂಡರಿ, 7 ಸಿಕ್ಸರ್​ಗಳು ಕೊಹ್ಲಿ ಬ್ಯಾಟ್​ನಿಂದ ದಾಖಲಾಗಿತ್ತು. ಛತ್ತೀಸ್​ಗಢದ ರಾಜಧಾನಿ ರಾಯ್​ಪುರ್​ನಲ್ಲಿ ಕಿಂಗ್ ಕೊಹ್ಲಿ, ರಾಯಲ್ ಇನ್ನಿಂಗ್ಸ್ ಆಡಿದ್ರು. ಹರಿಣ ಬೌಲರ್​ಗಳ ಬೇಟೆಯಾಡಿದ ವಿರಾಟ್, 102 ರನ್​ ಕಲೆಹಾಕಿದ್ರು. ಟೂರ್ನಿಯಲ್ಲಿ ಸತತ 2ನೇ ಶತಕ ಸಿಡಿಸಿ ಮಿಂಚಿದ್ರು.
ವಿಶಾಖಪಟ್ಟಣಂ ಏಕದಿನ ಪಂದ್ಯದಲ್ಲೂ ಕೊಹ್ಲಿ ದರ್ಬಾರ್ ನಡೆಸಿದ್ರು. ವೈಜಾಗ್​ನಲ್ಲಿ ಆಫ್ರಿಕನ್ನರ ಎದುರು ವೀರಾವೇಶ ತೋರಿದ ಕೊಹ್ಲಿ, ಬಿರುಸಿನ ಬ್ಯಾಟಿಂಗ್ ನಡೆಸಿದ್ರು. ಕೇವಲ 45 ಎಸೆತಗಳಲ್ಲಿ 65 ರನ್ ಬಾರಿಸಿದ್ರು. ಮೊನ್ನೆಯಷ್ಟೇ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ವಿರಾಟ್ ಜಬರ್​ದಸ್ತ್ ಬ್ಯಾಟಿಂಗ್ ಪ್ರದರ್ಶಿಸಿದ್ರು. 83 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕೊಹ್ಲಿ 101 ಎಸೆತಗಳಲ್ಲಿ 131 ರನ್​ ಚಚ್ಚಿದ್ರು. ಸೂಪರ್ಬ್ ಚೇಸ್ ಮಾಡಿದ ಕೊಹ್ಲಿ, ಮತ್ತೆ ಚೇಸ್ ಮಾಸ್ಟರ್ ಅನ್ನೋದನ್ನ ಪ್ರೂವ್ ಮಾಡಿದ್ರು.​
ಇದನ್ನೂ ಓದಿ: ಅಂದು ಅಶಿಸ್ತಿನಿಂದಾಗಿ ಅವಮಾನ, ಇಂದು ದಾಖಲೆ ವೀರನಿಗೆ ಸನ್ಮಾನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us