ಅಭಿಮಾನಿಗಳಿಗೆ ಗುಡ್​ನ್ಯೂಸ್​.. ಕ್ಯಾಪ್ಟನ್​ ಆದ ಗಿಲ್ಲಿ!

ಬಿಗ್​ ಬಾಸ್​ ಸೀಸನ್​ 12 ಆರಂಭದಿಂದಲೇ ಗಿಲ್ಲಿ ಕ್ರೇಜ್​ ಹೆಚ್ಚಾಗ್ತಲೇ ಇದೆ. ಒಮ್ಮೆಯಾದ್ರು ಗಿಲ್ಲಿ ಕ್ಯಾಪ್ಟನ್​ ಆಗಲಿ ಅಂತ ಫ್ಯಾನ್ಸ್​ ಕಾಯುತ್ತಿದ್ರು. ಅದರಂತೆ ಗಿಲ್ಲಿ ಕ್ಯಾಪ್ಟನ್​ ಪಟ್ಟವನ್ನ ಗಿಟ್ಟಿಸಿಕೊಂಡಿದ್ದಾರೆ.

author-image
Ganesh Kerekuli
Gilli Nata (1)

ಕೊನೆಗೂ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಗಿಲ್ಲಿ ನಟ

Advertisment
  • ಕೊನೆಗೂ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಗಿಲ್ಲಿ ನಟ
  • ಗಿಲ್ಲಿ ನಟನಿಗೆ ಬಿಗ್ ಬಾಸ್ ಹೊರಗೆ ಭಾರಿ ಸಂಖ್ಯೆಯ ಅಭಿಮಾನಿಗಳು

ಅಬ್ಬಾ.. ಕೊನೆಗೂ ಗಿಲ್ಲಿನಟ ಬಿಗ್ ಬಾಸ್ ಕನ್ನಡ ಸೀಸನ್ 12ರ ಕ್ಯಾಪ್ಟನ್‌ ಆಗಿದ್ದಾರೆ. ಈಗಂತೂ ಎಲ್ಲರ ಬಾಯಲ್ಲೂ ಇರೋ ಒಂದೇ ಒಂದು ಹೆಸರಂದ್ರೆ ಅದು ಗಿಲ್ಲಿ ನಟ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ  ಕ್ರೇಜ್​ ಕಡಿಮೆ ಅನ್ನೋ ಮಾತೇ ಇಲ್ಲ. ಬಿಗ್​ ಬಾಸ್​ನಲ್ಲಿ ನಿಮಗ್ಯಾರೂ ಫೇವ್​ರೇಟ್​ ಅಂದ್ರೆ ಅತಿ ಹೆಚ್ಚು ಹೆಸರು ಬರೋದೇ ಗಿಲ್ಲಿ ಅಂತ. ಅದ್ರಂತೆ ಬಿಗ್‌ ಬಾಸ್‌ ಮನೆ ಹೊರಗೆ ಗಿಲ್ಲಿ ಕ್ಯಾಪ್ಟನ್‌ ಆದ್ರೆ ಹೇಗಿರುತ್ತೆ ಎಂದು ಜನರಲ್ಲಿ ಒಂದು ಕೂತುಹಲ ಇತ್ತು. ಸದ್ಯ ಇದೀಗ ಆ ಕುತೂಹಲಕ್ಕೆ ಬ್ರೇಕ್​  ಬಿದ್ದಿದೆ. ಕೊನೆಗೂ ಗಿಲ್ಲಿನಟ ಕ್ಯಾಪ್ಟನ್‌ ಆಗಿದ್ದಾರೆ.

ಈ ವಾರ ಫ್ಯಾಮಿಲಿ ವೀಕ್‌ ಇತ್ತು..ಕಂಟೆಸ್ಟೆಂಟ್‌ಗಳ ಕುಟುಂಬದವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಮನೆಯವರೊಂದಿಗೆ ಊಟ ಮಾಡಿ, ಟಾಸ್ಕ್‌ಗಳನ್ನು ಆಡಿ ಎಂಜಾಯ್‌ ಮಾಡಿದ್ರು. ಜೊತೆಗೆ ಅವರಿಗೆ ಈ ಬಾರಿ ಕ್ಯಾಪ್ಟನ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಕ್ಕು ಅನ್ನು ಬಿಗ್​ ಬಾಸ್​ ನೀಡಿದ್ರು. ಈ ಪೈಕಿ ಕಂಟೆಸ್ಟೆಂಟ್‌ಗಳ ಕುಟುಂಬದವರು ಹೆಚ್ಚಿನ ಮತಗಳನ್ನ  ಗಿಲ್ಲಿ ಮತ್ತು ಅಶ್ವಿನಿಗೆ ನೀಡಿದ್ರು. ಅದರಲ್ಲೂ ಗಿಲ್ಲಿಗೆ ಹೆಚ್ಚು ಮತ ಬಿದ್ದಿತ್ತು. ಅವರೇ ಕ್ಯಾಪ್ಟನ್‌ ಆಗ್ತಾರೆ ಅಂತ ಎಲ್ಲರೂ ಅಂದು ಕೊಂಡಿದ್ದರು.ಆದ್ರೆ ಬಿಗ್​ ಬಾಸ್​​ ಅಂದ್ರೆ ಟ್ವಿಸ್ಟ್ ಇರಲೇ ಬೇಕಲ್ವಾ... ಹೌದು ಗಿಲ್ಲಿನೇ ಕ್ಯಾಪ್ಟನ್‌ ಅಂತಾ ಎಂದುಕೊಂಡಿದ್ದ ಎಲ್ಲರಿಗೂ ಬಿಗ್​ ಬಾಸ್​ ಟ್ವಿಸ್ಟ್‌ ಕೊಟ್ಟಿತ್ತು.... ಗಿಲ್ಲಿ ಮತ್ತು ಅಶ್ವಿನಿ ಗೌಡಗೆ ಒಂದು ಟಾಸ್ಕ್‌ ನೀಡಲಾಗಿತ್ತು.. ಆ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದಾರೆ.

ಕ್ಯಾಪ್ಟನ್‌ ಆಗ್ತಿದಂತೆ ಮಾಸ್​ ಲುಕ್​ನಲ್ಲಿ ಮಿಂಜಿದ ಗಿಲ್ಲಿ!

ಇನ್ನೂ, ಕ್ಯಾಪ್ಟನ್‌ ಆಗ್ತಿದಂತೆ ಗಿಲ್ಲಿ ಸಖತ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಗೆ ತಿಲಕ ಇಟ್ಕೊಂಡು, ಕತ್ತು ಮತ್ತು ಕೈಗೆ ಬೆಳ್ಳಿ ಚೈನ್‌ ಹಾಕ್ಕೊಂಡು, ಪಂಚೆ ಉಟ್ಕೊಂಡು ಕ್ಯಾಪ್ಟನ್ಸಿ ರೂಮ್‌ಗೆ ಗಿಲ್ಲಿ ಖಡಕ್‌ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಗಿಲ್ಲಿ ಕ್ಯಾಪ್ಟನ್‌ ಆಗಿರೋದು ಅಭಿಮಾನಿಗಳಿಗೆ ಸಂತೋಷ ಕೊಟ್ಟಿದೆ. ಆದ್ರೆ ಗಿಲ್ಲಿ ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸ್ತಾರೆ. ಎಲ್ಲರನ್ನೂ ಹೇಗೆ ಕಂಟ್ರೋಲ್‌ ಮಾಡ್ತಾರೆ  ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಸುದೀಪ್ - ದರ್ಶನ್ ಅಭಿಮಾನಿಗಳ ಫ್ಯಾನ್ಸ್ ವಾರ್.. ನಟಿ ತಾರಾ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Colors kannada BIG BOSS 12 SEASON Gilli Nata
Advertisment