ಕ್ರೇಜಿಸ್ಟಾರ್ ಮುಂದೆ ಒನ್​ ವೇ ಲವ್ ಸ್ಟೋರಿ ಹೇಳಿದ ಗಿಲ್ಲಿ.. ಕುತೂಹಲದಿಂದ ಕೇಳಿದ ಕಾವ್ಯ VIDEO

‘ಪ್ಯಾರ್’ ಎಂಬ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಈ ಚಿತ್ರದಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಮಾತ್ರವಲ್ಲ, ರವಿಚಂದ್ರನ್ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಸಂಬಂಧ ರವಿಚಂದ್ರನ್ ಹಾಗೂ ಚಿತ್ರದ ಹೀರೋ ಭರತ್ ಬಿಗ್​ಬಾಸ್ ಮನೆಗೆ ಆಗಮಿಸಿದ್ದಾರೆ.

author-image
Ganesh Kerekuli
Ravichandran in bigg boss (4)
Advertisment

ಟಾಸ್ಕ್​, ಸೀಕ್ರೆಟ್ ಟಾಸ್ಕ್​ಗಳ ಮಧ್ಯೆ ಬಿಗ್​ ಬಾಸ್​ (Bigg Boss) ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಯಾಗಿದೆ. ವಿಶೇಷ ಅತಿಥಿಯಾಗಿ ರವಿಚಂದ್ರನ್ ಬಿಗ್​ಬಾಸ್ ಮನೆಗೆ ಆಗಮಿಸಿದ್ದು, ಈ ಸಂಚಿಕೆಯು ಶೀಘ್ರದಲ್ಲೇ ಪ್ರಸಾರವಾಗಲಿದೆ. 

ವೈರಲ್ ಆಗಿರುವ ಕೆಲವು ವಿಡಿಯೋದಲ್ಲಿ ಗಿಲ್ಲಿ, ರವಿಚಂದ್ರನ್ ಮುಂದೆ ತಮ್ಮ ಕಾಲೇಜು ಲವ್ ಸ್ಟೋರಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ ಗಿಲ್ಲಿ, ತಮ್ಮ ಮನದಾಳದ ಮಾತುಗಳನ್ನ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ವನತಾರದಲ್ಲಿ ಕಳೆದುಹೋದ ಲಿಯೋನಲ್ ಮೆಸ್ಸಿ.. ಧ್ಯಾನ, ಪೂಜೆ, wow!

Ravichandran in bigg boss (2)

ಏನಂದ್ರು ಗಿಲ್ಲಿ..? 

ಕಾಲೇಜಿಗೆ ಹೋಗುವಾಗ ಒಂದು ಹುಡುಗಿ ಮೇಲೆ ಕ್ರಷ್ ಆಗಿತ್ತು. ಆದರೆ ಆಕೆ ನನ್ನನ್ನು ಅಣ್ಣ ಎಂದು ಕರೆಯಲು ಶುರುಮಾಡಿದ್ದಳು. ಅದಕ್ಕೆ ನಾನು ವಾರ್ನಿಂಗ್ ಮಾಡಿಸಿದ್ದೆ. ಅಣ್ಣಾ ಎಂದು ಕರೆಯಬಾರದು ಅಂತಾ ಹೇಳು. ಅಣ್ಣಾ ಎಂದು ಕರೆದರೆ ತುಂಬಾ ಬೇಸರ ಆಯ್ತದೆ ಎಂದಿದ್ದೆ. ಅದಕ್ಕೆ ಹಿಂದೆ ಕೂತಿದ್ದ ನಮ್ಮ ಇನ್ನೊಬ್ಬ ಸ್ನೇಹಿತ, ಅಣ್ಣಾ ಅನ್ನದೇ ಮಾವ ಎಂದು ಕರೆಯಬೇಕಾ ಅಂತಾ ಕೇಳಿದ್ದೆ. ಅದಕ್ಕೆ ನಾನು ಕರೆಕ್ಟ್ ಎಂದು ಹೇಳಿ ಸುಮ್ಮನೆ ಕೂತೆ. 

ಇದನ್ನೂ ಓದಿ:ಬಿಗ್​ ಬಾಸ್​ ಮನೆಯಲ್ಲಿ ಬಿಗ್ ಸರ್ಪ್ರೈಸ್.. ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ..! VIDEO

Ravichandran in bigg boss

ಎರಡು ವರ್ಷಗಳ ಕಾಲ ನಾನು ಹುಡುಗಿಯ ಹಿಂದೆ ಮುಂದೆ ಸುತ್ತಿದೆ. ಕಾಲೇಜಿಗೆ ಹೋಗುವಾಗ ಫಾಲೋ ಮಾಡುತ್ತಿದ್ದೆ. ಸುಮಾರು ಎರಡು ವರ್ಷಗಳ ಕಾಲ ಒನ್​ ವೇನಲ್ಲೇ ನನ್ನ ಲವ್ ಸ್ಟೋರಿ ಮುಗಿದು ಹೋಗಿದೆ ಎಂದಿದ್ದಾರೆ. ಅದಕ್ಕೆ ರವಿಚಂದ್ರನ್, ಆ ಹುಡುಗಿಗೆ ನೀನು ಹೇಳಿಲ್ವಾ ಎಂದು ಕೇಳಿದ್ದಾರೆ. ಅದಕ್ಕೆ ಆ ಹುಡುಗಿಗೂ ಗೊತ್ತಿತ್ತು. ಎರಡು ವರ್ಷಗಳ ಕಾಲ ಆಕೆಯ ಹಿಂದೆ ಸುತ್ತಿ, ಕೊನೆಗೆ ನನ್ನ ಹಣೆಬರವೇ ಇಷ್ಟು ಎಂದು ಬೆಂಗಳೂರಿಗೆ ಬಂದೆ ಎಂದಿದ್ದಾರೆ.  

ರವಿಚಂದ್ರನ್ ಬಿಗ್​ ಬಾಸ್​ ಮನೆಗೆ ಯಾಕೆ ಬಂದ್ರು?  

‘ಪ್ಯಾರ್’ ಎಂಬ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಈ ಚಿತ್ರದಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಮಾತ್ರವಲ್ಲ, ರವಿಚಂದ್ರನ್ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಸಂಬಂಧ ರವಿಚಂದ್ರನ್ ಹಾಗೂ ಚಿತ್ರದ ಹೀರೋ ಭರತ್ ಕೂಡ ಆಗಮಿಸಿದ್ದಾರೆ. ಇನ್ನು, ಬಿಗ್​​ಬಾಸ್ ವೇದಿಕೆಯಲ್ಲೇ ಚಿತ್ರದ ಸಾಂಗ್ ಒಂದು ರಿಲೀಸ್ ಆಗಲಿದೆ ಎಂದು ರವಿಚಂದ್ರನ್ ಹೇಳಿದ್ದಾರೆ. 
‘ಪ್ಯಾರ್’ ಚಿತ್ರತಂಡವು ಬಿಗ್ ಬಾಸ್​ ಮನೆಗೆ ಬಂದಿರೋದು ಇನ್ನೂ ಟೆಲಿಕಾಸ್ಟ್ ಆಗಿಲ್ಲ. ಶೀಘ್ರದಲ್ಲೇ ಆ ಸಂಚಿಕೆಯು ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಮಧ್ಯೆ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata Bigg boss bigg boss kavya Kavya Shaiva crazy star ravichandran
Advertisment