/newsfirstlive-kannada/media/media_files/2025/12/18/ravichandran-in-bigg-boss-2025-12-18-12-43-56.jpg)
ಟಾಸ್ಕ್​, ಸೀಕ್ರೆಟ್ ಟಾಸ್ಕ್​ಗಳ ಮಧ್ಯೆ ಬಿಗ್​ ಬಾಸ್​ (Bigg Boss) ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಯಾಗಿದೆ. ವಿಶೇಷ ಅತಿಥಿಯಾಗಿ ರವಿಚಂದ್ರನ್ ಬಿಗ್​ಬಾಸ್ ಮನೆಗೆ ಆಗಮಿಸಿದ್ದು, ಈ ಸಂಚಿಕೆಯು ಶೀಘ್ರದಲ್ಲೇ ಪ್ರಸಾರವಾಗಲಿದೆ.
ಇದನ್ನೂ ಓದಿ:‘ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್ಮು..’ ರಕ್ಷಿತಾ, ಧ್ರುವಂತ್ ಕಚ್ಚಾಟ ಮಜವಾಗಿದೆ.. VIDEO
ರವಿಚಂದ್ರನ್ ಬಿಗ್​ ಬಾಸ್​ ಮನೆಗೆ ಯಾಕೆ ಬಂದ್ರು?
‘ಪ್ಯಾರ್’ ಎಂಬ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಈ ಚಿತ್ರದಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಮಾತ್ರವಲ್ಲ, ರವಿಚಂದ್ರನ್ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಸಂಬಂಧ ರವಿಚಂದ್ರನ್ ಹಾಗೂ ಚಿತ್ರದ ಹೀರೋ ಭರತ್ ಕೂಡ ಆಗಮಿಸಿದ್ದಾರೆ. ಇನ್ನು, ಬಿಗ್​​ಬಾಸ್ ವೇದಿಕೆಯಲ್ಲೇ ಚಿತ್ರದ ಸಾಂಗ್ ಒಂದು ರಿಲೀಸ್ ಆಗಲಿದೆ ಎಂದು ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: ಮಾಸ್ಕ್​ ಮ್ಯಾನ್ ಚಿನ್ನಯ್ಯ ಜೈಲಿನಿಂದ ರಿಲೀಸ್; ತಿಮರೋಡಿ ಮತ್ತೆ ಗಡಿಪಾರು..!
/filters:format(webp)/newsfirstlive-kannada/media/media_files/2025/12/18/ravichandran-in-bigg-boss-2-2025-12-18-12-45-25.jpg)
‘ಪ್ಯಾರ್’ ಚಿತ್ರತಂಡವು ಬಿಗ್ ಬಾಸ್​ ಮನೆಗೆ ಬಂದಿರೋದು ಇನ್ನೂ ಟೆಲಿಕಾಸ್ಟ್ ಆಗಿಲ್ಲ. ಶೀಘ್ರದಲ್ಲೇ ಆ ಸಂಚಿಕೆಯು ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಮಧ್ಯೆ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವೈರಲ್ ಆಗಿರುವ ಕೆಲವು ವಿಡಿಯೋದಲ್ಲಿ ಗಿಲ್ಲಿ, ರವಿಚಂದ್ರನ್ ಮುಂದೆ ತಮ್ಮ ಕಾಲೇಜು ಲವ್ ಸ್ಟೋರಿ ಹೇಳಿಕೊಂಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ರವಿಚಂದ್ರನ್, ಪ್ಯಾರ್ ಸಿನಿಮಾ ಬಗ್ಗೆ ಮಾತನ್ನಾಡುತ್ತಿದ್ದಾರೆ. ಇನ್ನು ಮನೆಯಿಂದ ಬೀಳ್ಕೊಡುವ ವೇಳೆ ರವಿಚಂದ್ರನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರೋ ಫೋಟೋಗಳು ಕೂಡ ಹರಿದಾಡುತ್ತಿವೆ.
ಇದನ್ನೂ ಓದಿ:ವನತಾರದಲ್ಲಿ ಕಳೆದುಹೋದ ಲಿಯೋನಲ್ ಮೆಸ್ಸಿ.. ಧ್ಯಾನ, ಪೂಜೆ, wow!
I m so happy for rashi 😭❤️
— Janu janu (@Janujanu142630) December 17, 2025
Finally some known people came
Ravichandran rishvin came to BB house to promote their movie and rashi is the actress of it 🤭💓
I wish the best for this movie 🧿🫂#BBK12#rashikashettypic.twitter.com/nB6hTBPDVB
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us