/newsfirstlive-kannada/media/media_files/2025/12/16/rakshitha-and-dhruvant-2025-12-16-13-31-22.jpg)
ಸ್ಪರ್ಧಿಗಳ ಲೆಕ್ಕಾಚಾರ ಏನೇ ಇದ್ರೂ ಬಿಗ್ ಬಾಸ್​ ಆಡಿಸೋ ಆಟದ ಮುಂದೆ ಎಲ್ಲಾ ಲೆಕ್ಕಾಚಾರ ಉಲ್ಟಪಲ್ಟಾ ಆಗುತ್ತೆ. ಹಲವು ವರ್ಷಗಳ ನಂತರ ಸೀಕ್ರೆಟ್​ ರೂಮ್​​ ಬಾಗಿಲು ತೆರೆದಿದೆ. ಬಿಗ್​ಬಾಸ್​ ಧ್ರುವಂತ್​ ಹಾಗೂ ರಕ್ಷಿತಾಗೆ ಬಿಗ್​ ಶಾಕ್​ ಜೊತೆಗೆ ಖುಷಿ ವಿಚಾರವನ್ನು ಕೊಟ್ಟಿದ್ದಾರೆ. ಈ ಇಬ್ಬರೂ ಎಲಿಮಿನೇಟ್ ಆಗಿಲ್ಲ. ಬದಲಿಗೆ ಸೀಕ್ರೆಟ್​ ರೂಮ್​ಗೆ ಎಂಟ್ರಿ ಕೊಟ್ಟಿದ್ದಾರೆ.
ಮನೆಯವರು ಊಹಿಸದ ರೀತಿಯಲ್ಲಿ ಈ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದ್ದು, ಸೀಕ್ರೆಟ್​ ರೂಮ್​ನಿಂದಲೇ ಎಲ್ಲವನ್ನೂ ಕೇಳಿಸಿಕೊಂಡು ಪ್ರತಿಯೋಬ್ಬರನ್ನ ವೀಕ್ಷಸುತ್ತಿದ್ದಾರೆ. ರಕ್ಷಿತಾ ಕುರಿತು ಎಲ್ಲರೂ ಪಾಸಿಟಿವ್​ ಅಭಿಪ್ರಾಯ ನೀಡಿದ್ದು, ಈ ಬಗ್ಗೆ ಭಾವುಕರಾಗಿದ್ರು. ಧ್ರುವಂತ್​ಗೂ ರಕ್ಷಿತಾಗೂ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಪರಸ್ಪರ ಜೊತೆಗೆ ಇರೋದೇ ದೊಡ್ಡ ಸವಾಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೊದಲೇ ಹೇಳಿದ ಹಾಗೇ ಬಹಳ ವರ್ಷಗಳ ನಂತರ ಸೀಕ್ರೆಟ್​ ರೂಮ್​ ಬಾಗಿಲು ತೆಗೆದಿದೆ. ಸೀಸನ್​ 3 ರಲ್ಲಿ ಪೂಜಾ ಗಾಂಧಿ ಸೀಕ್ರೆಟ್​ ರೂಮ್​ಗೆ ಹೋಗಿದ್ರು. ನಂತರ ಹೆಚ್ಚು ಸೀಕ್ರೆಟ್​ ರೂಮ್​ ತೆಗೆದಿದ್ದು ಸೀಸನ್​ 4ರಲ್ಲಿ. ಶಾಲಿನಿ ಹಾಗೂ ಶೀತಲ್​ ಶೆಟ್ಟಿ ಇಬ್ಬರೂ ಸೀಕ್ರೆಟ್​ ರೂಮ್​ನಲ್ಲಿ ಕೆಲ ವಾರಗಳಿದ್ರು. ಅದೇ ಸೀಸನ್​ನ ಕೊನೆ ಕೊನೆ ವಾರದಲ್ಲಿ ಪ್ರಥಮ್​ ಹಾಗೂ ಮಾಳವಿಕಾ ಅಶ್ಚರ್ಯ ಎಂಬಂತೆ ಎಲಿಮಿನೇಟ್​ ಆಗಿ ಸೀಕ್ರೆಟ್​ ರೂಮ್​ ಸೇರಿದ್ದರು.
ಸೀಸನ್​ 5 ರಿಂದ ಸೀಕ್ರೆಟ್ ರೂಮ್​ ಕಾನ್ಸೆಪ್ಟ್​ಗೆ ಕತ್ತರಿ ಬಿದ್ದಿತ್ತು. ಸುಮಾರು 6 ಸೀಸನ್​ಗಳ ನಂತರ ಧ್ರುವಂತ್​ ಹಾಗೂ ರಕ್ಷಿತಾಗೆ ಸೀಕ್ರೆಟ್​ ರೂಮ್​ ತೆರೆದಿದ್ದು, ಕೂತುಹಲ ಹೆಚ್ಚಿಸಿದೆ. ಇಬ್ಬರಿಗೂ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲ. ಇಬ್ಬರ ನಡುವಿನ ಸಂಭಾಷಣೆ ನಿನ್ನೆ ಪ್ರಸಾರವಾಗಿದೆ. ಇವರ ಕಚ್ಚಾಟ ಹಾಗೂ ವಾಗ್ವಾದಗಳು ವೀಕ್ಷಕರ ನಗಿಸುವಲ್ಲಿ ಯಶಸ್ವಿಯಾಗಿದೆ..
ಸೀಕ್ರೆಟ್ ರೂಮಿನಲ್ಲೂ ಕಿರಿಕಿರಿ ಶುರು...
— Colors Kannada (@ColorsKannada) December 16, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/y3qq8w3Gw3
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us