ಮಾಸ್ಕ್​ ಮ್ಯಾನ್ ಚಿನ್ನಯ್ಯ ಜೈಲಿನಿಂದ ರಿಲೀಸ್; ತಿಮರೋಡಿ ಮತ್ತೆ ಗಡಿಪಾರು..!

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಇಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಇತ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

author-image
Ganesh Kerekuli
Mask man chinnayya timarodi
Advertisment

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ (Mask man Chinnaiah) ಇಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ಚಿನ್ನಯ್ಯನ ಕರೆದೊಯ್ಯಲು ಆತನ ಪತ್ನಿ ಮಲ್ಲಿಕಾ ಬಂದಿದ್ದರು. ಡ್ರೈವರ್ ಸೇರಿದಂತೆ ಇನ್ನೋವಾ ಕಾರಿನಲ್ಲಿ ಒಟ್ಟು ಐವರ ಜೊತೆ ಬಂದಿದ್ದರು. ಈ ವೇಳೆ ಚಿನ್ನಯ್ಯ ಪತ್ನಿ ಕ್ಯಾಮೆರಾಗಳನ್ನ ನೋಡಿದ ಕೂಡಲೇ ಸೆರಗಿನಿಂದ ಮುಖ ಮುಚ್ಚಿಕೊಂಡು ಕರೆದುಕೊಂಡು ಊರಿಗೆ ತೆರಳಿದ್ದಾರೆ.
ಇತ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ನೀಡಿದ್ದಾರೆ.

ತಿಮರೋಡಿಗೆ ಗಡೀಪಾರಿಗೆ ನೋಟಿಸ್ ನೀಡಲಾಗಿತ್ತು. ತಮ್ಮನ್ನ ಯಾಕೆ ಗಡೀಪಾರು ಮಾಡಬಾರದು ಅಂತಾ ಕಾರಣ ಕೇಳಿ ನೋಟಿಸ್ ನೀಡಿದ್ದರು. ಡಿಸೆಂಬರ್ 7ರಂದು ಸಹಾಯಕ ಆಯುಕ್ತರ ಗಡಿಪಾರು ನೋಟಿಸ್​ಗೆ ಮಹೇಶ್ ಶೆಟ್ಟಿ ಆಕ್ಷೇಪ ಸಲ್ಲಿಸಿದ್ದರು. ಗಡಿಪಾರು ನೋಟಿಸ್ ವಿರುದ್ಧ ವಕೀಲರ ಮೂಲಕ ವಾದ ಮಂಡಿಸಿದ್ದರು. 

ಇದನ್ನೂ ಓದಿ:2 ಪೆಗ್ ವಿಸ್ಕಿ ಕುಡಿದ್ದೀವಿ, 2 ಪೀಸ್ ಮಾಂಸ ತಿಂದಿದ್ದೀವಿ -ಡಿನ್ನರ್ ಮೀಟಿಂಗ್ ಬಗ್ಗೆ ರಾಜಣ್ಣ ಮಾತು

mask man dharamasthala 011

ವಾದ-ಪ್ರತಿವಾದ ಆಲಿಸಿ ತಿಮರೋಡಿ ವಿರುದ್ಧ ಮತ್ತೆ ಗಡೀಪಾರು ಆದೇಶ ಮಾಡಲಾಗಿದೆ. ದಕ್ಷಿಣ ಕನ್ನಡ  ಜಿಲ್ಲಾ ಪೊಲೀಸರು ತಿಮರೋಡಿ ಗಡೀಪಾರಿಗೆ ಸೂಕ್ತ ಕಾರಣವನ್ನ ನೀಡಿ ವರದಿ ಸಲ್ಲಿಸಿದ್ದರು. ಪೊಲೀಸ್ ವರದಿ ಆಧಾರದಲ್ಲಿ ತಿಮರೋಡಿಗೆ ಮತ್ತೆ ಗಡೀಪಾರು ಅದೇಶ ಮಾಡಲಾಗಿದೆ. ತಿಮರೋಡಿ ವಿರುದ್ಧದ ಈ ಹಿಂದಿನ ಕೇಸ್​ಗಳ ಜೊತೆಗೆ ಹಾಲಿ ಕೆಲವು ಕೇಸ್​ಗಳನ್ನೂ ಸೇರಿಸಿ ಗಡೀಪಾರು ಮಾಡಲಾಗಿದೆ. 
ಕಳೆದ ಸೆಪ್ಟೆಂಬರ್ 18 ರಂದು ತಿಮರೋಡಿಯನ್ನು ಗಡೀಪಾರು ಮಾಡಿ ಆದೇಶ ನೀಡಲಾಗಿತ್ತು. 18-09-2025 ರಿಂದ 17-09-2026 ರವರೆಗೆ ಒಂದು ವರ್ಷ ಅವಧಿಗೆ ಗಡೀಪಾರು ಮಾಡಲಾಗಿತ್ತು. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಿ ಆದೇಶ ಮಾಡಲಾಗಿತ್ತು. ಅದರೆ ಗಡಿಪಾರು ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. 

MAHESH SHETTY THIMMAROODI

ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಗಡಿಪಾರು ಆದೇಶವನ್ನು ರದ್ದು ಮಾಡಿ, ಕೆಲವು ಶಿಫಾರಸು ಮಾಡಿತ್ತು. ಕಾನೂನು ಪ್ರಕಾರ ಹೊಸ ಪ್ರಕ್ರಿಯೆ ನಡೆಸಿ ಆದೇಶ ಮಾಡಲು ಹೈಕೋರ್ಟ್ ಸೂಚಿಸಿತ್ತು. ಸೆಕ್ಷನ್ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಎಸಿಗೆ ಸೂಚನೆ ನೀಡಿತ್ತು. ಅದರಂತೆ ಕೆಲ ಕಾನೂನಾತ್ಮಕ ಪ್ರಕ್ರಿಯೆ ಅಡಿಯಲ್ಲಿ ತಿಮರೋಡಿ ಗಡೀಪಾರು ಪ್ರಕ್ರಿಯೆ ಆರಂಭಿಸಿದ್ದರು ಪುತ್ತೂರು ಎಸಿ. 

ಇದನ್ನೂ ಓದಿ:ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಕಂಬ್ಯಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case Mahesh Shetty thimarody
Advertisment