ಗಿಲ್ಲಿ PR ಟೀಂಗೆ ಎಚ್ಚರಿಕೆ ಕೊಟ್ಟ ರಜತ್.. ಯಾಕೆ..? -VIDEO

ಬಿಗ್​ ಬಾಸ್​ನಲ್ಲಿ ಗಿಲ್ಲಿ ನಟ ವೀಕ್ಷಕರ ಎಂಟರ್ಟೈನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್​ ಬಾಸ್​ ಮನೆಯ ಆಚೆ ಕೂಡ ಗಿಲ್ಲಿ ಹವಾ ಜೋರಾಗಿದೆ. ಈ ನಡುವೆ ಗಿಲ್ಲಿ ಪಿಆರ್​​ಗಳಿಗೆ ರಜತ್ ಕಿಶನ್ ಎಚ್ಚರಿಕೆ ನೀಡಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ನಲ್ಲಿ ಗಿಲ್ಲಿ ನಟ ವೀಕ್ಷಕರ ಎಂಟರ್ಟೈನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್​ ಬಾಸ್​ ಮನೆಯ ಆಚೆ ಕೂಡ ಗಿಲ್ಲಿ ಹವಾ ಜೋರಾಗಿದೆ. ಈ ನಡುವೆ ಗಿಲ್ಲಿ ಪಿಆರ್​​ಗಳಿಗೆ ರಜತ್ ಕಿಶನ್ ಎಚ್ಚರಿಕೆ ನೀಡಿದ್ದಾರೆ. 

ಬಿಗ್​ ಬಾಸ್​ ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಿದ್ದ ರಜತ್ ಕಳೆದ ವಾರ ಮನೆಯಿಂದ ಆಚೆ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ರಜತ್ ಮಾತನ್ನಾಡಿದರು. ಗಿಲ್ಲಿ ಎಲ್ಲವನ್ನೂ ನೇರವಾಗಿ ಹೇಳ್ತಾರೆ. ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳಲ್ಲ. ಅದು ಮನೆಯವರಿಗೆ ಡ್ರಾಮಾ ಎನಿಸಬಹುದು. ಆದರೆ ಅದು ಸತ್ಯ! 

ಇದನ್ನೂ ಓದಿ:ಕ್ರೇಜಿಸ್ಟಾರ್ ಮುಂದೆ ಒನ್​ ವೇ ಲವ್ ಸ್ಟೋರಿ ಹೇಳಿದ ಗಿಲ್ಲಿ.. ಕುತೂಹಲದಿಂದ ಕೇಳಿದ ಕಾವ್ಯ VIDEO

ಒಂದು ವಿಚಾರ ನಾನಿಲ್ಲಿ ಸ್ಪಷ್ಟಪಡಿಸ್ತೇನೆ. ಗಿಲ್ಲಿ ತಮ್ಮ ಪರ ಪ್ರಚಾರಕ್ಕೆ ಯಾವ ಪಿಆರ್​ಗೆ ವಹಿಸಿದ್ದಾರೆ ಗೊತ್ತಿಲ್ಲ. ಪಿಆರ್​ಗಳು ಸರಿಯಾಗಿ ಕೆಲಸ ಮಾಡಬೇಕು. ಗಿಲ್ಲಿಗೆ ಅವನ ಆಟವನ್ನು ಆಡಲು ಬಿಡಬೇಕು. ಪಿಆರ್​ ಗಳು ತಮ್ಮ ಕೆಲಸವನ್ನು ಮಾಡಬೇಕು. ಬಾಯಿಗೆ ಬಂದ್ಹಾಗೆ ಮಾತನ್ನಾಡಬಾರದು. ಮನಸ್ಸಿಗೆ ಕಂಡಂತೆ ಪೋಸ್ಟ್​​​ಗಳನ್ನ ಮಾಡಬಾರದು.

ಎಲ್ಲರಿಗೂ ಅಕ್ಕ, ತಮ್ಮ, ಹೆಂಡತಿ, ತಾಯಿ ಇರುತ್ತಾರೆ. ಪಿಆರ್​ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಧೈರ್ಯ ಇದ್ದರೆ, ನನ್ನ ಎದುರಿಗೆ ಬಂದು ಮಾತನ್ನಾಡಲಿ. ಬಾಯಿಗೆ ಬಂದ ಹಾಗೆ ಮಾತನ್ನಾಡೋದಲ್ಲ. ಅದಕ್ಕೆ ತೂಕ ಇರಬೇಕು. ನಮಗೂ ಬಾಯಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಜತ್, ಬಿಗ್​ಬಾಸ್ ಮನೆಗೆ ಹೋದಾಗ ಗಿಲ್ಲಿ ಜೊತೆ ನಡೆದುಕೊಂಡ ರೀತಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರ ಇಟ್ಕೊಂಡು ಗಿಲ್ಲಿ, ಪಿಆರ್​ಗಳು ರಜತ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಇದೆ. ರಜತ್ ಹೇಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.. 

ಇದನ್ನೂ ಓದಿ: ಕಾವ್ಯ ತುಂಬಾನೇ ಸ್ಮಾರ್ಟ್.. ಸೀಕ್ರೆಟ್ ರೂಮ್​ ಟಾಸ್ಕ್​ನ ರಹಸ್ಯ ಬಿಚ್ಚಿಟ್ರು..! VIDEO   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajath kishan, Akshita Rajath Bigg Boss Kannada 12 Gilli Nata Bigg boss
Advertisment