/newsfirstlive-kannada/media/media_files/2025/12/28/gilli-nata-15-2025-12-28-14-27-14.jpg)
ಟ್ಯಾಲೆಂಟ್​ ಅನ್ನೋದು ಯಾರೊ ಒಬ್ಬರ ಸ್ವತ್ತಲ್ಲ. ಅದು ನರನಾಡಿಯಲ್ಲಿದ್ರೆ ಕುರುನಾಡಿನ ಗಡಿಯನ್ನೂ ದಾಟಿಬಿಡುತ್ತೆ. ಹಾಗೆ ಸ್ವಯಂ ಕೃಷಿಯಿಂದ ಟ್ಯಾಲೆಂಟ್​ ಬಿತ್ತರಿಸಿಕೊಂಡಿದ್ದು ಗಿಲ್ಲಿ ನಟ. ಫೇಸ್​ಬುಕ್​ ಲೈವ್​ಗಳಿಂದ ಸೋಷಿಯಲ್​ ಮೀಡಿಯಾಗೆ ಕಿಚ್ಚಚ್ಚಿದ್ದ ಗಿಲ್ಲಿ. ರಿಯಾಲಿಟಿ ಶೋಗಳಲ್ಲಿ ಫುಲ್​ ಕಚಗುಳಿ ಇಟ್ಟಿದ್ದ. ಬಿಗ್​ಬಾಸ್​ ಸೇರಿದ್ಮೇಲೆ ಅಂತೂ ಗಿಲ್ಲಿಯ ಹವಾ ಮತ್ತಷ್ಟು ಜೋರಾಗಿದೆ. ಮಾತುಗಾರನ ಜರ್ನಿ ಹೇಗಿದೆ?
ಗಿಲ್ಲಿ.. ಯಾವಾಗ್ಲೋ ಚಿಕ್ಕ ಮಕ್ಕಳಾಗಿದ್ದಾಗ ಚಿನ್ನಿದಾಂಡು ಆಡುವಾಗ ಕೇಳ್ತಿದ್ದ ಈ ಹೆಸ್ರು. ಈಗ ರಾಜ್ಯವೆಲ್ಲಾ ಕೂಗಿ ಹೇಳ್ತಿದೆ. ಗಿಲ್ಲಿ ಅಂದ್ರೆ ಬರೀ ನಟ ಅಲ್ಲ. ಆತ ಮನೆಯ ಹುಡುಗ. ಎಂಥಾ ಸ್ಥಿತಿಯಲ್ಲಿದ್ರೂ ನಕ್ಕು ನಗಿಸೋ ಮುಗ್ಧ ಹುಡುಗ. ತನ್ನ ಮಾತಿನ ಶೈಲಿಯಲ್ಲೇ, ಪೋಲಿ ಪದಗಳಿಲ್ಲದೆ ಸ್ವಚ್ಛವಾದ ನಗು ತರಿಸೋ ಗಿಲ್ಲಿ.. ಇಡೀ ರಾಜ್ಯಕ್ಕೆ ಕೊಟ್ಟ ಕಚಗುಳಿ ಸಾಮಾನ್ಯದ್ದಲ್ಲ.
ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್​ನ್ಯೂಸ್​.. ಕ್ಯಾಪ್ಟನ್​ ಆದ ಗಿಲ್ಲಿ!
/filters:format(webp)/newsfirstlive-kannada/media/media_files/2025/12/28/gilli-nata-14-2025-12-28-14-29-22.jpg)
ಗಿಲ್ಲಿ ಅಂದ್ರೆ ಯಾರು ಅನ್ನೋದೇ ತಿಳಿಯದ ಜನ. ಈಗ ಗಿಲ್ಲಿ ಗಿಲ್ಲಿ ಅನ್ನೋ ಮಟ್ಟಕ್ಕೆ ಬೆಳೆಯೋದು ಗಿಲ್ಲಿಗೆ ಅಷ್ಟು ಈಸಿಯಾಗಿ ಸಾಧ್ಯವಾಗಿಲ್ಲ. ಆತ ಪಟ್ಟ ಪಾಡು.. ತಿರುಗಿದ ಊರು.. ಸವೆಸಿದ ಕಾಲು ಕಡಿಮೆಯೇನಲ್ಲ. ಬಿಗ್​ಬಾಸ್​.. ಸೀಸನ್​ 12. ಈ ಬಾರಿಯ ಬಿಗ್​ಬಾಸ್​​ಗೆ ಹೊಸ ಹುರುಪು ಸಿಕ್ಕಿದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ.. ಇಲ್ಲಿವರೆಗೂ ನಗರಗಳಲ್ಲಿ ಮಾತ್ರ ಸದ್ದು ಮಾಡ್ತಿದ್ದ ಬಿಗ್​ಬಾಸ್.. ಈಗ ಹಳ್ಳಿ ಹಳ್ಳಿಗಳಿಗೂ ತಲುಪಿದೆಯಂತೆ. ಅದು ಸಾಧ್ಯವಾಗಿದ್ದು ಗಿಲ್ಲಿಯಿಂದ ಅನ್ನೋದು ಮಾಹಿತಿ. ಗಿಲ್ಲಿಗೆ ಈ ಪರಿಯ ಫೇಮಸ್​.. ಈ ಪರಿಯ ಫ್ಯಾನ್ಸ್​​​ ಹುಟ್ಟಿಕೊಂಡಿದ್ಯಾಕೆ? ಈ ವಿಡಿಯೋ ನೋಡಿ ನಮ್ಗೆ ಗೊತ್ತಾಗುತ್ತೆ.
ಅದು ಫೇಸ್​ಬುಕ್​, ಟಿಕ್​ಟಾಕ್​, ಇನ್​ಸ್ಟಾ ಗ್ರಾಂಗಳದ್ದೇ ಹವಾ ಶುರುವಾದ ಟೈಮ್​. ಆ ಟೈಮ್​ನಲ್ಲೇ ಗಿಲ್ಲಿ ಶುರು ಮಾಡಿದ್ದ ಫೇಸ್​ಬುಕ್​ ಲೈವ್​ ವೆಬ್​ಸಿರಿಸ್​ ಅನ್ನೋ ಕಾನ್ಸೆಪ್ಟ್​ ತುಂಬಾ ಜನ್ರಿಗೆ ಇಷ್ಟವಾಗಿತ್ತು. ಹಾಗೆ ಮನೆಯಲ್ಲಿ ಯಾವಾಗ್ಲೂ ಫೋನ್ ಇಟ್ಕೊಂಡಿರೋದು.. ಅದ್ರಿಂದ ಗಂಡ ಹೆಂಡ್ತಿಗೆ ಜಗಳ ಬರೋದು ಕಾಮನ್​ ಆಗ್ಬಿಟ್ಟಿತ್ತು. ಆಗ ಗಿಲ್ಲಿ ಶುರು ಮಾಡಿದ್ದೇ ಈ ಲೈವ್​​.
ಇದನ್ನೂ ಓದಿ:ಫ್ಯಾಮಿಲಿರೌಂಡ್​ನಿಂದ ವೀಕ್ಷಕರ ಆಯ್ಕೆ ಮೇಲೆ ಪರಿಣಾಮ.. ಈ ಬಾರಿಯೂ ಮ್ಯಾಜಿಕ್ ಮಾಡುತ್ತಾ ‘ಅನುಕಂಪ’?
/filters:format(webp)/newsfirstlive-kannada/media/media_files/2025/12/28/gilli-nata-13-2025-12-28-14-29-36.jpg)
ಗಿಲ್ಲಿ ಈ ಲೈವ್​ ವೆಬ್​ಸಿರೀಸ್​​ಗೆ ಸೆಲೆಕ್ಟ್​ ಮಾಡ್ಕೊಳ್ತಿದ್ದ ಕಾನ್ಸೆಪ್ಟ್​ಗಳು. ವಾಸ್ತವತೆಗೆ ತುಂಬಾ ಹತ್ರವಾಗಿ ಇರ್ತಿದ್ವು.. ಬಹುಶಃ ಇದೆ ಕಾರಣಕ್ಕೆ ಏನೋ ಜನ ಮುಗಿ ಬಿದ್ದು ನೋಡ್ತಿದ್ರು. ಈಗೆಲ್ಲಾ ಆನ್ಲೈನದ್ದೇ ದರ್ಬಾರು.. ಅದನ್ನೇ ಬಂಡವಾಳ ಮಾಡ್ಕೊಳ್ಬೇಕು. ಅದನ್ನೇ ಬದುಕಿಗೆ ದಾರಿ ಮಾಡ್ಕೊಳ್ಬೇಕು ಅನ್ನೋ ಕಾತುರ ಯುವ ಜನರದ್ದು. ಬಟ್​ ಕೆಲವರು ಮಾತ್ರ ಆನ್ಲೈನ್​ನಲ್ಲೇ ಲವ್​ ವ್ಯವಹಾರ ನಡೆಸ್ತಿದಾರೆ. ಪ್ರೇಮ ವ್ಯಾಮೋಹ ಎಲ್ಲಾವೂ ಆನ್ಲೈನ್​ನಲ್ಲೇ ಇದೆ. ಅಂಥ ಕಾನ್ಸೆಪ್ಟ್​ ಕೂಡ ಗಿಲ್ಲಿ ಮಾಡಿದ್ದ.
ಇದೇ ಇಂಥಾ ಹಾಸ್ಯಮಯವಾದ ಪ್ರಸಂಗಗಳನ್ನ ಕ್ರಿಯೇಟ್​ ಮಾಡಿ ಮೆಲ್ಲಗೆ ಕರುತೆರೆ ಕಡೆ ಹೆಜ್ಜೆ ಹಾಕಿದ್ದ ಗಿಲ್ಲಿ. ಮೊದಲಿಗೆ ಕಾಮಿಡಿ ಕಿಲಾಡಿಗಳು ಸೀಸನ್​ 4ಗೆ ಗ್ರ್ರ್ಯಾಂಡ್​ ಆಗಿ ಎಂಟ್ರಿ ಕೊಡ್ತಾರೆ. ಅಲ್ಲಿಂದ ಗಿಲ್ಲಿಯ ಹವಾ.. ಆತನ ಕ್ರೇಜ್​ ಹುಚ್ಚೆದ್ದು ಓಡಿತ್ತು.
ಇದನ್ನೂ ಓದಿ: ಈ ಸ್ಪರ್ಧಿಗೆ ದುರಹಂಕಾರ -ರಜತ್ ಪ್ರಕಾರ ಬಿಗ್ ​ಬಾಸ್​ನಲ್ಲಿ ಯಾರು ಹೆಂಗೆಂಗೆ..?
/filters:format(webp)/newsfirstlive-kannada/media/media_files/2025/12/28/gilli-nata-12-2025-12-28-14-30-09.jpg)
ಗಿಲ್ಲಿಗೆ ಕಾಮಿಡಿ ಕಿಲಾಡಿಗಳು ಒಂದು ಒಳ್ಳೇ ಪ್ಲಾಟ್​ಫಾರಂ ಆಯ್ತು. ಅಲ್ಲಿಂದ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​.. ಭರ್ಜರಿ ಬ್ಯಾಚ್ಯುಲರ್ಸ್​.. ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭರ್ಜರಿಯಾಗಿನೇ ಕಾಣಿಸಿಕೊಂಡಿದ್ರು. ಅಲ್ಲಿಂದ ಗಿಲ್ಲಿ ಮತ್ತೊಂದು ಹಂತಕ್ಕೆ ತಲುಪಿದ್ರು. ಹೀಗೆ ಸ್ಟೇಜ್​ ಮೇಲೆ ಧೂಳೇಬ್ಬಿಸ್ತಿದ್ದ ಗಿಲ್ಲಿ. ನಂತರ ಮೆಲ್ಲಗೆ ಪ್ಲೇ ಬಾಯ್​ ಆಗಿಬಿಟ್ರು.. ಹುಡ್ಗಿರ ಜೊತೆ ಕೀಟ್ಲೆ.. ಸ್ಟೇಜ್​ ಮೇಲೆ ನಗೆ ಬುಗ್ಗೆ ಏಳಿಸ್ತಾ.. ಗಿಲ್ಲಿಯ ಆರ್ಭಟದ ವೇಗ ಮತ್ತಷ್ಟು ಹೆಚ್ಚಾಗಿತ್ತು.
ಇದನ್ನೂ ಓದಿ: ಕ್ರೇಜಿಸ್ಟಾರ್ ಮುಂದೆ ಒನ್​ ವೇ ಲವ್ ಸ್ಟೋರಿ ಹೇಳಿದ ಗಿಲ್ಲಿ.. ಕುತೂಹಲದಿಂದ ಕೇಳಿದ ಕಾವ್ಯ VIDEO
/filters:format(webp)/newsfirstlive-kannada/media/media_files/2025/12/28/gilli-nata-10-2025-12-28-14-30-46.jpg)
ಗಿಲ್ಲಿ ಫೇಸ್​ಬುಕ್​ನಲ್ಲಿ ರಿಯಲ್​ ಸ್ಟೋರಿಯಲ್ಲಿ ಕಾಣಿಸಿಕೊಂಡಂತೆ ಕಂಡು.. ರಿಯಾಲಿಟಿ ಶೋಗಳಲ್ಲಿ ಮಿಂಚಿ.. ದೊಡ್ಡ ಫ್ಯಾನ್​ ಬೇಸನ್ನೇ ಬೆಳೆಸಿಕೊಂಡಿದಾರೆ. ಅದು ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಾಗಿನಿಂದ ಆ ನಂಬರ್​ ಇನ್ನಷ್ಟು ಹೆಚ್ಚಾಗಿದೆ. ಗಿಲ್ಲಿ ಹವಾ ನೆರೆ ರಾಜ್ಯಗಳಿಗೂ ಹಬ್ಬಿದೆ ಅಂದ್ರೆ ನೀವು ನಂಬ್ಲೇಬೆಕು. ಇನ್ನೂ ಗಿಲ್ಲಿಯ ಪ್ರಾಪರ್ಟಿ ಕಾಮಿಡಿ.. ಆತನಿಗೆ ಜನ ಕಟ್ಟಿದ್ದ ಕೌಟ್​ಗಳ ಬಗ್ಗೆ ತಿಳಿದ್ರೆ ಮತ್ತಷ್ಟು ಅಚ್ಚರಿ..ಉಬ್ಬೇರಿಸಿಬಿಡುತ್ತೆ..
ಇದನ್ನೂ ಓದಿ:ಬಿಗ್‌ಬಾಸ್ ಶೋನಲ್ಲಿ ಫ್ಯಾಮಿಲಿ ರೌಂಡ್.. ಆದರೆ ಜನರ ಪ್ರಶ್ನೆಯೇ ಬೇರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us