/newsfirstlive-kannada/media/media_files/2026/01/02/gilli-nata-18-2026-01-02-11-34-48.jpg)
ಊರಿಗೆ ಕೀರ್ತಿ ತರೋನು ಯಾವತ್ತಿಗೂ ಊರಿಗೆ ಕೀರ್ತಿ ಕಳಶವೇ. ಸದ್ಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗ್ತಾ, ಮಂಡ್ಯದ ದಡದಪುರಕ್ಕೆ ಕೀರ್ತಿ ತಂದಿದ್ದು ಗಿಲ್ಲಿ ನಟ. ನಟ ಅಂದ್ರೆ ಮಾಮೂಲಿ ನಟ ಅಲ್ಲ.. ರೈಮಿಂಗ್​ನ ಟೈಮಿಂಗ್​ನಲ್ಲಿ ಹೇಳೋಕೋಗಿ ಟಂಗ್​ ಸ್ಲಿಪ್​ ಆಗೋ ನಟ ಅಲ್ಲ. ಮಾತಿನ ಈಟೆಯಿಂದ ಚುಚ್ಚಿ, ಮಾತಿನ ಮುಲಾಮ್​ ಹಚ್ಚೋ ನಟ. ಸದ್ಯ ಬಿಗ್​ಬಾಸ್​​ ಹೌಸ್​​ನಲ್ಲಿ ಗಿಲ್ಲಿಯ ಹವಾ ನಿಮ್ಗೆ ಗೊತ್ತು. ಬಟ್​ ಗಿಲ್ಲಿಯ ಊರಲ್ಲಿ ಗಿಲ್ಲಿ ಲೆವೆಲ್​ ಹೇಗಿದೆ.
ಗಿಲ್ಲಿ.. ಗಿಲ್ಲಿ.. ಗಿಲ್ಲಿ.. ಬಿಗ್​ ಹೌಸಲ್ಲಿ ಈ ಹೆಸ್ರನ್ನ ಎಷ್ಟೇ ಸಿಲ್ಲಿ ಅಂದ್ರೂ ಯಾಕೆ​ ಬಂದೆ ಇಲ್ಲಿ ಅಂತ ಕೀಟ್ಲೆ ಮಾಡಿದ್ರು. ಗಿಲ್ಲಿ ತವರಲ್ಲಿ, ಓದಿದ ಸ್ಕೂಲಲ್ಲಿ, ಅಣ್ತಮ್ಮಾರ ಮನಸಲ್ಲಿ, ಗಿಲ್ಲಿ ಯಾವತ್ತಿಗೂ ಅಲ್ಲಿ.. ನೆತ್ತಿಯಲ್ಲಿ.. ಊರಿನ ಕಳಶದಲ್ಲಿ ಇರ್ತಾನಂತೆ. ಸ್ಕೂಲಲ್ಲಿ ಸೈಲೆಂಟಾಗಿದ್ದ ಗಿಲ್ಲಿ, ಈಗ ಬಿಗ್​ಬಾಸ್​ನಲ್ಲಿ ವೈಲೆಂಟ್​ ಆಗಿರೋ ಹುಲಿ ಅಂತೆ. ಇಲ್ಲಿವರೆಗೂ ಗಿಲ್ಲಿ ಬಗ್ಗೆ ತನ್ನೂರು ಏನೂ ಹೇಳಿರ್ಲಿಲ್ಲ. ಬಟ್​ ಫಸ್ಟ್​ ಟೈಮ್​ ಆತನ ತವರು. ಮೇಷ್ಟ್ರು.. ದೋಸ್ತರು ಎಲ್ಲಾ ಮನಬಿಚ್ಚಿ ಮಾತನಾಡಿದ್ದಾರೆ.
ಟ್ಯಾಲೆಂಟ್​ ಅನ್ನೋದು ಯಾರೊ ಒಬ್ಬರ ಸ್ವತ್ತಲ್ಲ. ಅದು ನರನಾಡಿಯಲ್ಲಿದ್ರೆ ಕುರುನಾಡಿನ ಗಡಿಯನ್ನೂ ದಾಟಿಬಿಡುತ್ತೆ. ಹಾಗೆ ಸ್ವಯಂ ಕೃಷಿಯಿಂದ ಟ್ಯಾಲೆಂಟ್​ ಬಿತ್ತರಿಸಿಕೊಂಡಿದ್ದು ಗಿಲ್ಲಿ ನಟ. ಫೇಸ್​ಬುಕ್​ ಲೈವ್​ಗಳಿಂದ ಸೋಷಿಯಲ್​ ಮೀಡಿಯಾಗೆ ಕಿಚ್ಚಚ್ಚಿದ್ದ ಗಿಲ್ಲಿ. ರಿಯಾಲಿಟಿ ಶೋಗಳಲ್ಲಿ ಫುಲ್​ ಕಚಗುಳಿ ಇಟ್ಟಿದ್ದ. ಬಿಗ್​ಬಾಸ್​ ಸೇರಿದ್ಮೇಲೆ ಅಂತೂ ಗಿಲ್ಲಿಯ ಹವಾ ಮತ್ತಷ್ಟು ಜೋರಾಗಿದೆ. ಸೆಟ್​ಬಾಯ್​ ಕೆಲ್ಸದಿಂದ, ಕಲಾ ಪ್ರಪಂಚಕ್ಕೆ ಗಿಲ್ಲಿ ಎಂಟ್ರಿ.. ಮಾತುಗಾರನ ಜರ್ನಿ ಎಲ್ಲಾವನ್ನೂ ತನ್ನೂರಾದ ಮಂಡ್ಯದ ದಡದಪುರದ ಜನ.. ಫ್ರೆಂಡ್ಸು ತೆರೆದಿಟ್ಟಿದಾರೆ.
ಇದನ್ನೂ ಓದಿ: ಸೆಟ್​ಬಾಯ್​ ಕೆಲ್ಸದಿಂದ, ಕಲಾ ಪ್ರಪಂಚಕ್ಕೆ ಗಿಲ್ಲಿ ಎಂಟ್ರಿ ಆಗಿದ್ದೇಗೆ?
ಬಿಗ್​ಬಾಸ್​ ಸೀಸನ್​ 12. ಈ ಬಾರಿಯ ಬಿಗ್​ಹೌಸ್​ನಲ್ಲಿ ಒಂದೇ ಒಂದು ಸ್ಪೀಕರ್​ ಸೌಂಡ್​ ಹೆಚ್ಚಾಗಿ ಕೇಳಿ ಬರ್ತಿದೆ ಅದೇ ಗಿಲ್ಲಿಯದ್ದು. ಬಿಗ್​ಬಾಸ್​ ಮನೆಗೆ ಗಿಲ್ಲಿ ಸೇರಿದಾಗಿನಿಂದ ಈ ಸೀಸನ್​ ರಾಜ್ಯದ ಮೂಲೆ ಮೂಲೆಗೂ ರೀಚ್ ಆಗಿದೆಯಂತೆ. ಯಾಕಂದ್ರೆ ನ್ಯಾಚ್ಯುರಲ್ಲಾಗಿ ಇದ್ದು ಪಂಚ್​ಗಳಿಂದ, ತನ್ನ ಆಟದ ವೈಖರಿಯಿಂದ ಗಿಲ್ಲಿ ಆಕರ್ಷಿಸ್ತಿದ್ದಾರೆ. ದಿನ ದಿನಕ್ಕೂ ಗಿಲ್ಲಿಯ ಹವಾ ಹೆಚ್ಚಾಗ್ತಿದೆ ವಿನಃ ಕಮ್ಮಿಯಂತೂ ಆಗ್ತಿಲ್ಲ.
1996 ರಲ್ಲಿ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಅಲ್ಲೊಂದು ಮನೆಯಲ್ಲಿ ಹುಟ್ಟಿದ್ದ ಕೊನೆಯ ಒಬ್ಬ ಮಗ ಈ ಗಿಲ್ಲಿ. ಕುಳ್ಳಯ್ಯ ಸವಿತಾ ಅನ್ನೋ ದಂಪತಿಗೆ ಮೂವರು ಮಕ್ಕಳಿದ್ರು. ಅವ್ರಲ್ಲಿ ಕೊನೆ ಹುಡುಗನೇ ಈ ಗಿಲ್ಲಿ. ಊರಲ್ಲಿ ಮಾಮೂಲಿ ಕೃಷಿಕ ಕುಟುಂಬ ಅವ್ರದ್ದು. ಬೆಳೆಯುತ್ತಾ ಗಿಲ್ಲಿಗೆ ಕಲೆ ಕಡೆ ಗಮನ ಹರಿದಿತ್ತು. ಅದೇ ಆಸೆಯನ್ನ ಹೊತ್ತು ಮಹಾನಗರ ಬೆಂಗಳೂರಿನ ಕಡೆ ಹೆಜ್ಜೆ ಹಾಕಿದ್ದ. ಇಲ್ಲೇನೂ ಆತನಿಗೆ ರೆಡ್​ ಕಾರ್ಪೆಟ್​ ಹಾಕಿ ವೆಲ್​ಕಮ್​ ಹೇಳ್ಳಿಲ್ಲ. ಗಿಲ್ಲಿ ಮೊದಲಿಗೆ ಅಸಿಸ್ಟಂಟ್​​ ಡೈರೆಕ್ಟರ್​ ಆಗಿ.. ಆನಂತರ ಅದ್ರಲ್ಲಿ ಸಂಬಳ ಇಲ್ಲ ಅಂತ.. ಸೆಟ್​ ಬಾಯ್​ ಆಗಿ ಕೆಲ್ಸ ಮಾಡಿದ್ರು. ಅದೇ ಸೆಟ್​ ಕೆಲ್ಸವನ್ನ ಕೆಲ ರಿಯಾಲಿಟಿ ಶೋಗಳಲ್ಲೂ ಮಾಡಿದ್ರು.
ಇದನ್ನೂ ಓದಿ: ಚೆನ್ನಾಗಿದ್ರೆ ದೋಸ್ತಿ, ಎದುರು ಹಾಕಿಕೊಂಡ್ರೆ ಉಡೀಸ್.. ಪಂಚ್ ಮಾಸ್ಟರ್ ಗಿಲ್ಲಿ ಸಕ್ಸಸ್‌ಗೆ 10 ಕಾರಣಗಳು..!
ಜೀರೋದಿಂದ ಬೆಳೆಯದ್ರಲ್ಲಿ​ ಇರೋ ಮಜಾ ಬೇರೆ ಯಾವ ಸಕ್ಸಸ್ಸು ಕೊಡಲ್ಲ. ಅಂತ ಒಂದು ಆತ್ಮ ತೃಪ್ತಿಯ ಸಕ್ಸಸ್​​ ಗಿಲ್ಲಿಗೆ ಸಿಕ್ಕಿದೆ. ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿದ್ದವನು ಈ ದಿನ, ಹತ್ತು ಜನಕ್ಕೆ ಅನ್ನ ಹಾಕುವ ಮಟ್ಟಕ್ಕೆ ಬೆಳೆದಿದ್ದಾನೆ. ಸೆಟ್​ ಬಾಯ್​ ಆಗಿ ಕೆಲ್ಸ ಮಾಡಿ, ಅದೇ ಸೆಟ್​ ಮೇಲೆ ನಿಂತು ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಗಿಲ್ಲಿ.. ಈ ದಿನ ಕುಚಿಕುಗಳಿಗೆ ಖುಷಿ ಕೊಟ್ಟಿದೆ.
ಯಾವುದೋ ಮೂಲೆಯಲ್ಲಿ ಯಾರಿಗೂ ತನ್ನ ಹಳ್ಳಿಯ ಹೆಸರೇ ಗೊತ್ತಿಲ್ಲದೇ ಇದ್ದ ಊರು. ಈಗ ಗಿಲ್ಲಿ ಊರಾಗಿದೆ. ಮಂಡ್ಯದ ಮಳವಳ್ಳಿಯ ಮೂಲೆಯಲ್ಲಿದ್ದ ದಡದಪುರ ಅಂದ್ರೆ ಕಾಮಿಡಿ ಘಟ ಇರೋ ಊರು ಅನ್ನುವಂತಾಗಿದೆ. ಅಭಿಮಾನಿ ಇಲ್ಲದೆ ಹೀರೋ ಇರಲ್ಲ. ಅನುಚರರು ಇಲ್ಲೇ ಲೀಡರ್​ಗಳಿರಲ್ಲ. ಭಕ್ತರಿಲ್ಲದೇ ದೇವರುಗಳಿಲ್ಲ ಅನ್ನೋ ಹಾಗೆ. ಬಿಗ್​ ಮನೆಯಲ್ಲಿ ಗಿಲ್ಲಿ ಇಲ್ಲದೇ ಎಂಟರ್​ಟೈನ್​​ಮೆಂಟ್​ ಇಲ್ಲ ಅನ್ನುವಂತಾಗಿದೆ. ಹಾಗೆ ಗಿಲ್ಲಿ ಇಲ್ಲದೇ ಕಾವ್ಯ ಇಲ್ಲ ಅನ್ನೋ ಲೆವೆಲ್​ಗೆ ಇಬ್ಬರ ಕೆಮಿಸ್ಟ್ರಿ ವರ್ಕೌಟ್​ ಆಗಿದೆ.
ಮಂಡ್ಯದ ಮಳ್ಳವಳಿಯ ಸುತ್ತ ಮುತ್ತ.. ದಡದಪುರ ಪೂರ್ತಿ ಗಿಲ್ಲಿಯ ಫ್ಲೆಕ್ಸ್​ಗಳದ್ದೇ ಹವಾ. ಎಲ್ಲಾ ಕಡೆ ಗಿಲ್ಲಿಗೆ ವಿಶ್​ ಮಾಡಿ ಬ್ಯಾನರ್ಸ್​ ಹಾಕಿದ್ದಾರೆ. ಒಂದು ವೇಳೇ ಗಿಲ್ಲಿ ಗೆದ್ರೇ, ದೊಡ್ಡ ಮೆರವಣಿಗೆಯ ಪ್ಲ್ಯಾನೇ ಇದೆ.
ಇದನ್ನೂ ಓದಿ: ಕಲೆ ಯಾರ ಮನೆಯ ಆಸ್ತಿಯೂ ಅಲ್ಲ; ಆರಂಭದಲ್ಲಿ ಗಿಲ್ಲಿ ಜನರ ಮನಸ್ಸು ಗೆದ್ದಿದ್ದು ಹೇಗೆ..?
ಬಿಗ್ ಬಾಸ್ ಸೀಸನ್-12 ರಲ್ಲಿ ಮಂಡ್ಯ ಹೈದನ ಹವಾ ಮಾಮೂಲಿಯಾಗಿಲ್ಲ. ಇಡೀ ಕರುನಾಡಲ್ಲಿ ಫುಲ್ ಕ್ರೇಜ್ ಹುಟ್ಟು ಹಾಕಿದ ಗಿಲ್ಲಿ, ತನ್ನ ತವರಲ್ಲೂ ಮೇರು ಪ್ರೀತಿ ಪಡೆದಿದ್ದಾರೆರೆ. ಹುಟ್ಟೂರಿನ ಜನರೆಲ್ಲಾ ಗಿಲ್ಲಿ ಆಟಕ್ಕೆ ಫಿಧಾ ಆಗಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡದಪುರ ಜನ ಗಿಲ್ಲಿ ಗೆಲ್ಲೋದು ಫಿಕ್ಸ್ ಅಂತಿದ್ದಾರೆ.
ಗಿಲ್ಲಿ ಬಿಗ್​ಬಾಸ್​​ ಹೌಸ್​ನಲ್ಲಿ ಜಾಹ್ನವಿ. ಅಶ್ವಿನಿ ಇಬ್ಬರನ್ನೂ ಗಿಲ್ಲಿ ಕಾಲೆಳೆದಿರೋದು ಒಂದ್ಸರಿ ಅಲ್ಲ ಎರಡ ಸರಿ ಅಲ್ಲ.. ದೊಡ್ಡ ದೊಡ್ಡಮ್ಮ ದೋಸೆ ಕೊಡು ಚಿಕ್ಕಮ್ಮ ಚಿಕ್ಕಮ್ಮ ಚಟ್ನಿ ಕೊಡು ಅಂತ ಕೀಟ್ಲೇ ಮಾಡಿದ್ದು ಈಗಲೂ ಟ್ರೆಂಡ್​​ ಇದೇ ಡೈಲಾಗ್​ ಈಗ ಡಿಜೆ ಸಾಂಗು.. ಎಲ್ಲಾರ ಬಾಯಲ್ಲೂ ಹರಿದಾಡೋ ಚಿನ್ನಿದಾಂಡು. ಚಿಕ್ಕ ಮಕ್ಕಳಿಗೂ ಈ ಡೈಲಾಗ್​ ಮಿನಿ ರೈಮಿಂಗ್​ ಟೈಮಿಂಗ್​ ಆಗ್ಬಿಟ್ಟಿದೆ.
ಪಂಚ್​ ಹೊಡೆಯೋದ್ರಲ್ಲಿ ಪಂಟರ್​ ಆಗಿ. ರೋಸ್ಟ್​ ಮಾಡೋದ್ರಲ್ಲಿ ಮಾಸ್ಟರ್​ ಆಗಿ. ಗಿಲ್ಲಿ ಹಚ್ಚುವ ಕಿಚ್ಚು, ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳಿಗೆ ಹುಚ್ಚು. ಒಬ್ಬ ಸಾಮಾನ್ಯ ಹುಡುಗ, ಈ ಮಟ್ಟಕ್ಕೆ ಬೆಳೆಯೋದು ಅಷ್ಟು ಸುಲಭವಲ್ಲ.. ಅದ್ರಲ್ಲಿ ಕೃಷಿ ಇದೆ.. ಶ್ರಮವಿದೆ.. ಹಠ ಇದೆ.. ಹಸಿವಿದೆ ನೋವಿದೆ. ಇದೆಲ್ಲಾದಕ್ಕಿಂತ.. ಸರಸ್ವತಿ ಒಲವಿದೆ. ಇದೇ ಮಾತನ್ನ ಗಿಲ್ಲಿ ಶಿಕ್ಷಕರು ಹೇಳಿದ್ರು. ಸ್ಕೂಲಲ್ಲಿದ್ದ ಗಿಲ್ಲಿಗೂ.. ಬಿಗ್​ಬಾಸ್​ನಲ್ಲಿರೋ ಗಿಲ್ಲಿಗೂ ಸಂಬಂಧವೇ ಇಲ್ಲ ಅಂದಿದ್ರು. ಗಿಲ್ಲಿ ಬಗ್ಗೆ ತಿಳಿಯದ ಎಷ್ಟೋ ರಹಸ್ಯಗಳು ರಿವಿಲ್​ ಆಗ್ತಿವೆ.
ಇದನ್ನೂ ಓದಿ:ಮಕ್ಕಳಲ್ಲಿ ಅತಿಯಾದ ಮೊಬೈಲ್ ಚಟ.. ‘ಟೆಕ್ಸ್ಟ್ ನೆಕ್’ ಸಮಸ್ಯೆಗೆ ದಾರಿ.. ಪೋಷಕರೇ ಎಚ್ಚರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us