ಮಕ್ಕಳಲ್ಲಿ ಅತಿಯಾದ ಮೊಬೈಲ್ ಚಟ.. ‘ಟೆಕ್ಸ್ಟ್ ನೆಕ್’ ಸಮಸ್ಯೆಗೆ ದಾರಿ.. ಪೋಷಕರೇ ಎಚ್ಚರ!

ಇತ್ತೀಚಿನ ದಿನಗಳಲ್ಲಿ ಫೋನ್ ಆರನೇ ಬೆರಳಾಗಿ ಮಾರ್ಪಟ್ಟಿದೆ. ವಯಸ್ಕರ ಜೊತೆಗೆ ಚಿಕ್ಕ ಮಕ್ಕಳು ಕೂಡ ಅತಿಯಾಗಿ ಫೋನ್ ಬಳಸುತ್ತಿದ್ದಾರೆ. ಈ ಅತಿಯಾದ ಬಳಕೆಯು ವಯಸ್ಕರಿಗಿಂತ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

author-image
Ganesh Kerekuli
ಅತಿಯಾದ ಸ್ಕ್ರೀನ್ ಟೈಮ್ ತುಂಬಾ ಡೇಂಜರ್; ನಿಮ್ಮ ಮಗುವಿನ ಮೇಲೆ ಎಷ್ಟು ಕೆಟ್ಟ ಪರಿಣಾಮ ಆಗ್ತದೆ?
Advertisment

ಇತ್ತೀಚಿನ ದಿನಗಳಲ್ಲಿ ಫೋನ್ ಆರನೇ ಬೆರಳಾಗಿ ಮಾರ್ಪಟ್ಟಿದೆ. ವಯಸ್ಕರ ಜೊತೆಗೆ ಚಿಕ್ಕ ಮಕ್ಕಳು ಕೂಡ ಅತಿಯಾಗಿ ಫೋನ್ ಬಳಸುತ್ತಿದ್ದಾರೆ. ಈ ಅತಿಯಾದ ಬಳಕೆಯು ವಯಸ್ಕರಿಗಿಂತ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದು ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಮ್ಮ ಮಕ್ಕಳು ಕೂಡ ಅತಿಯಾಗಿ ಫೋನ್ ನೋಡುತ್ತಿದ್ದರೆ ಇವತ್ತೇ ಎಚ್ಚೆತ್ತುಕೊಳ್ಳಿ. ಯಾಕೆಂದರೆ ಮಕ್ಕಳಲ್ಲಿ ಫೋನ್ ನೋಡುವ ಅಭ್ಯಾಸವು ಕ್ರಮೇಣ ವ್ಯಸನವಾಗುತ್ತದೆ. ಇದರಿಂದ ಮಕ್ಕಳ ದಿನಚರಿ, ಅಧ್ಯಯನ, ಆಟಗಳು ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯು ಮಕ್ಕಳ ಗಮನ, ನಿದ್ರೆ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದೇ ಕಾರಣಕ್ಕೆ ನೀವು ಎಚ್ಚೆತ್ತುಕೊಳ್ಳಬೇಕಿದೆ. 

ಮಕ್ಕಳಿಗೆ ಏನೆಲ್ಲ ಸಮಸ್ಯೆ ಆಗುತ್ತದೆ..? 

ನಿರಂತರವಾಗಿ ಮೊಬೈಲ್ ಸ್ಕ್ರೀನ್ ನೋಡೋದ್ರಿಂದ ‘ಟೆಕ್ಸ್ಟ್ ನೆಕ್’ ನಂತಹ ಸಮಸ್ಯೆಗಳು ಉಂಟಾಗಬಹುದು. ಇದು ಕುತ್ತಿಗೆ, ಭುಜಗಳು ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಮೊಬೈಲ್ ಫೋನ್‌ಗಳಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳನ್ನು ಆಯಾಸಗೊಳಿಸುತ್ತದೆ. 

ಇದನ್ನೂ ಓದಿ:ಕ್ಯಾನ್ಸರ್​ಗೆ ಔಷಧಿ ಪತ್ತೆ ಆಗಿದೆ.. ಕಪ್ಪೆಯ ಹೊಟ್ಟೆಯಲ್ಲಿ ಪವಾಡ..!

ಒಂದು ಕಾಲ್​​ನಿಂದ ಬರೋಬ್ಬರಿ 1.2 ಕೋಟಿ ಕಳ್ಕೊಂಡ ಮಹಿಳೆ; ಮೊಬೈಲ್​ ಬಳಕೆದಾರರು ಓದಲೇಬೇಕಾದ ಸ್ಟೋರಿ!

ಕಣ್ಣುಗಳನ್ನು ಒಣಗಿಸುತ್ತದೆ ಮತ್ತು ದೃಷ್ಟಿಯನ್ನು ದುರ್ಬಲಗೊಳಿಸುತ್ತದೆ. ತಡರಾತ್ರಿ ಮೊಬೈಲ್ ಫೋನ್‌  ಬಳಸುವುದರಿಂದ ನಿದ್ರೆಯ ಹಾರ್ಮೋನ್ ‘ಮೆಲಟೋನಿನ್’ ಉತ್ಪಾದನೆ ಕಡಿಮೆಯಾಗುತ್ತದೆ. ಇದು ನಿದ್ರಾಹೀನತೆ, ಆಯಾಸ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೇ ಕುಳಿತುಕೊಳ್ಳುವುದರಿಂದ ದೈಹಿಕ ಚಟುವಟಿಕೆಯೂ ಕಡಿಮೆಯಾಗುತ್ತದೆ. ಇದು ಬೊಜ್ಜು ಮತ್ತು ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೊಬೈಲ್ ಚಟದಿಂದ ಹೊರ ಬರಲು ಏನು ಮಾಡಬೇಕು..?

  1. ಪೋಷಕರು ಮೊದಲು ತಮ್ಮ ಮಕ್ಕಳೊಂದಿಗೆ ಮಾತನಾಡಬೇಕು -ತಜ್ಞರು
  2. ಮೊಬೈಲ್ ಬಳಕೆಯ ಅನಾಹುತದ ಬಗ್ಗೆ ತಿಳಿಸಿಕೊಡಬೇಕು
  3. ಮಕ್ಕಳಿಗೆ ಸಮಯ ಮಿತಿಗಳನ್ನು ನಿಗದಿಪಡಿಸುವುದು ಅಗತ್ಯ
  4. ಇತರ ಆಸಕ್ತಿದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು
  5. ಆಟಗಳು, ಪ್ರವಾಸಗಳು, ಅಧ್ಯಯನಗಳು ಮತ್ತು ಕುಟುಂಬದೊಂದಿಗೆ ಹವ್ಯಾಸಗಳು 
  6. ಇವು ಮೊಬೈಲ್ ಫೋನ್‌ಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ
  7. ಪೋಷಕರು ಮೊಬೈಲ್ ಫೋನ್ ಬಳಕೆಯನ್ನು ಮಿತಿಗೊಳಿಸಬೇಕು
  8. ಮಕ್ಕಳನ್ನು ಅಲ್ಪಾವಧಿಗೆ ಮೊಬೈಲ್ ಫೋನ್ ಬಳಸಲು ಒಗ್ಗಿಸಿಕೊಳ್ಳಿ

ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Mobile Phone
Advertisment