ಕ್ಯಾನ್ಸರ್​ಗೆ ಔಷಧಿ ಪತ್ತೆ ಆಗಿದೆ.. ಕಪ್ಪೆಯ ಹೊಟ್ಟೆಯಲ್ಲಿ ಪವಾಡ..!

ಕ್ಯಾನ್ಸರ್.. ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ. ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳ್ತಿದ್ದಾರೆ. ಇವತ್ತಿ ಕಾಲದಲ್ಲಿ ಬದಲಾಗುತ್ತಿರುವ ಜೀವನಶೈಲಿಯೊಂದಿಗೆ, ಪ್ರಪಂಚದಾದ್ಯಂತ ಕೊಲೊರೆಕ್ಟಲ್ ಕ್ಯಾನ್ಸರ್ (colorectal cancer) ಪ್ರಕರಣಗಳು ಹೆಚ್ಚುತ್ತಿವೆ.

author-image
Ganesh Kerekuli
Tree frog and cancer
Advertisment

ಕ್ಯಾನ್ಸರ್.. ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ. ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳ್ತಿದ್ದಾರೆ. ಇವತ್ತಿ ಕಾಲದಲ್ಲಿ ಬದಲಾಗುತ್ತಿರುವ ಜೀವನಶೈಲಿಯೊಂದಿಗೆ, ಪ್ರಪಂಚದಾದ್ಯಂತ ಕೊಲೊರೆಕ್ಟಲ್ ಕ್ಯಾನ್ಸರ್ (colorectal cancer) ಪ್ರಕರಣಗಳು ಹೆಚ್ಚುತ್ತಿವೆ.

ವಿಶೇಷವಾಗಿ ಯುವಕರು ಈ ಗಂಭೀರ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಕೀಮೋಥೆರಪಿ ಮತ್ತು ಇಮ್ಯುನೊಥೆರಪಿಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳ ಹೊರತಾಗಿಯೂ, ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ. ಆದಾಗ್ಯೂ ಜಪಾನಿನ ವಿಜ್ಞಾನಿಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದಾದ ಆವಿಷ್ಕಾರ ಮಾಡಿದ್ದಾರೆ. ಇದು ಸಣ್ಣ ಕಪ್ಪೆ ಒಂದರ ಕರುಳಿನಲ್ಲಿ ಚಮತ್ಕಾರ ಮಾಡಿದ್ದಾರೆ. ಉಭಯಚರ ಜೀವಿಯಲ್ಲಿ ಕಂಡುಬಂದ ಒಂದು ಸಣ್ಣ ಸೂಕ್ಷ್ಮ ಜೀವಿ, ಬಿಗ್ ರಿಲೀಫ್ ನೀಡುವ ಸೂಚನೆ ಕೊಟ್ಟಿದೆ. 

ಇದನ್ನೂ ಓದಿ:ನಿಂಬೆ ಸಿಪ್ಪೆ ಮಾಡುತ್ತೆ ಮ್ಯಾಜಿಕ್​! ದಯವಿಟ್ಟು ಇನ್ಮೇಲೆ ಸಿಪ್ಪೆ ಎಸೆಯಬೇಡಿ..!

Tree frog

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ.. ಜಪಾನ್ ಅಡ್ವಾನ್ಸ್ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (JAIST)ನ ಸಂಶೋಧಕರು ಜಪಾನಿನ ಮರದ ಕಪ್ಪೆಗಳ ಕರುಳಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾವನ್ನು ಪರೀಕ್ಷಿಸಿದ್ದಾರೆ. ಜಪಾನಿನ ಮರದ ಕಪ್ಪೆಗಳು (tree frogs), ಫೈರ್ ಬೆಲ್ಲಿ ನ್ಯೂಟ್‌ಗಳು (fire belly newts) ಮತ್ತು ಹುಲ್ಲು ಹಲ್ಲಿಗಳು (grass lizards) ಸೇರಿದಂತೆ ಒಟ್ಟು 45 ವಿಭಿನ್ನ ಬ್ಯಾಕ್ಟೀರಿಯಾದ ಪ್ರಭೇದಗಳನ್ನು ಪರೀಕ್ಷೆಗೆ ಬಳಸಿದ್ದರು. 

ಅವರ ಉದ್ದೇಶ ಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾ ಕಂಡು ಹಿಡಿಯೋದಾಗಿತ್ತು. ಅದರಲ್ಲಿ ಕೆಲವು ಬ್ಯಾಕ್ಟೀರಿಯಾ ಪ್ರಭೇದಗಳು, ಕ್ಯಾನ್ಸರ್ ವಿರೋಧಿಗುಣಗಳನ್ನು ಹೊಂದಿರೋದನ್ನ ತಿಳಿದುಕೊಂಡಿದ್ದಾರೆ. ಈಗ ಪತ್ತೆ ಹಚ್ಚಿರುವ ಬ್ಯಾಕ್ಟೀರಿಯಾವು ಇಲಿಗಳಲ್ಲಿನ ಶೇಕಡಾ 100 ರಷ್ಟು ಕ್ಯಾನ್ಸರ್ ಗೆಡ್ಡೆಗಳನ್ನು ತೆಗೆದುಹಾಕಿದೆ. ಚಿಕಿತ್ಸೆಯ ನಂತರ, ಕ್ಯಾನ್ಸರ್​ಗೆ ಒಳಗಾಗಿದ್ದ ಕೋಶಗಳನ್ನು ಆರೋಗ್ಯಕರವಾಗಿದ್ದ ಇಲಿಗಳ ದೇಹಕ್ಕೆ ನೀಡಲಾಗಿತ್ತು. ಅಚ್ಚರಿ ಅಂದರೆ ಅದು ಮತ್ತೆ ಬೆಳೆಯಲಿಲ್ಲ. ಕ್ಯಾನ್ಸರ್ ಸಂಪೂರ್ಣ ಗುಣಮುಖ ಆಗಿರೋದೇ ಹೆಚ್ಚು ಎಂದು ಅಧ್ಯಯನ ಹೇಳಿದೆ. 

ಇದನ್ನೂ ಓದಿ: ಚಹಾ ಹೇಗೆ ಹುಟ್ಟಿಕೊಂಡಿತು..? ಒಂದು ಆಕಸ್ಮಿಕ ಘಟನೆ.. ಇಂದು ಜನಪ್ರಿಯ ಪಾನೀಯ!

ಸಂಶೋಧಕರು ಕಂಡುಕೊಂಡಿದ್ದು ಏನು?

  • colorectal ಕ್ಯಾನ್ಸರ್​ನಿಂದ ಬಳಲ್ತಿದ್ದ ಇಲಿಗಳ ಮೇಲೆ ಪ್ರಯೋಗ
  • ಬ್ಯಾಕ್ಟೀರಿಯಾಗಳು ಕ್ಯಾನ್ಸರ್ ಕೋಶಗಳನ್ನು ಸಾಯಿಸಿವೆ 
  • ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿವೆ
  • ಇದು ಉರಿಯೂತವನ್ನು ತಡೆದು ಹಾಕಿವೆ
  • ರಕ್ತ ಸೋರಿಕೆ ಮಾಡುವ ಬ್ಯಾಕ್ಟೀರಿಯಾನ್ನ 24 ಗಂಟೆಯಲ್ಲಿ ತೆಗೆದುಹಾಕಿವೆ
  • ಕಿಮೊಥೆರಪಿಯಂಥ ಗಂಭೀರ ಅಡ್ಡಪರಿಣಾಮಗಳಿಗೆ ಹೋಲಿಸಿದ್ರೆ ಬೆಸ್ಟ್
  • ಈ ಬ್ಯಾಕ್ಟೀರಿಯಾ ಕ್ಯಾನ್ಸರ್​​ ಗೆಡ್ಡೆಗೆ ಮಾತ್ರ ಸೇರುತ್ತದೆ, ಇತರ ಅಂಗಗಳಿಗೆ ಹರಡಲ್ಲ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ವರ್ಷ ಸುಮಾರು 150,000 ಜನರಿಗೆ ಕೊಲೊರೆಕ್ಟಲ್ ಕ್ಯಾನ್ಸರ್ ಇರೋರು ಪತ್ತೆಯಾಗುತ್ತಿದೆ. ಇದರ ಪ್ರಮಾಣ ವಿಶ್ವದಲ್ಲಿ ಹೆಚ್ಚಿದೆ. ಈ ರೋಗವು ವಯಸ್ಸಾದವರಲ್ಲಿ ಹೆಚ್ಚು ಪತ್ತೆಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಯುವಕರ ಮೇಲೂ ಅಟ್ಯಾಕ್ ಮಾಡ್ತಿದೆ.
ಮುಂದಿನ ದಿನಗಳಲ್ಲಿ ಸಂಶೋಧಕರು ಸ್ತನ ಮತ್ತು Pancreas ಕ್ಯಾನ್ಸರ್​​ನ ಮೇಲೆ ಪರೀಕ್ಷೆ ನಡೆಸಲಿದ್ದಾರೆ. ಈ ಕ್ಯಾನ್ಸರ್ ಮೇಲೆ ಬ್ಯಾಕ್ಟೀರಿಯಾದ ಪ್ರಯೋಗ ನಡೆಯಲಿದೆ. ಫ್ರ್ಯಾಕ್ಷನೇಶನ್ ಮತ್ತು ಡೈರೆಕ್ಟ್ ಟ್ಯೂಮರ್ ಇಂಜೆಕ್ಷನ್‌ನಂತಹ ಸುರಕ್ಷಿತ ವಿತರಣಾ ವಿಧಾನಗಳನ್ನ ಅನ್ವಯಿಸಲು ಎದುರು ನೋಡುತ್ತಿದ್ದಾರೆ. 

ಇದನ್ನೂ ಓದಿ: New year: ಬೆಂಗಳೂರಲ್ಲಿ ಮದ್ಯ ಪ್ರಿಯರಿಗೆ ಗುಡ್​ನ್ಯೂಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

cancer cancer from Egg tree frog
Advertisment