New year: ಬೆಂಗಳೂರಲ್ಲಿ ಮದ್ಯ ಪ್ರಿಯರಿಗೆ ಗುಡ್​ನ್ಯೂಸ್..!

ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರಲ್ಲಿ ಡಿಸೆಂಬರ್ 31 ರಂದು ಮದ್ಯ ಮಾರಾಟದ ಅವಧಿಯನ್ನ ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಮಹತ್ವದ ಆದೇಶ ಹೊರಡಿಸಿದ್ದಾರೆ.

author-image
Ganesh Kerekuli
Updated On
ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!
Advertisment

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಡಿಸೆಂಬರ್ 31 ರಂದು ಮದ್ಯ ಮಾರಾಟದ ಅವಧಿಯನ್ನ ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಸದ್ಯ ಮದ್ಯ ಪ್ರಿಯರಿಗಾಗಿ ಹೊಸ ವರ್ಷ ಆಗಮನಕ್ಕಾಗಿ ಡಿಸೆಂಬರ್ 31ರ ಬೆಳಗ್ಗೆ ಸೂರ್ಯೋದಯ ಆಗುವ ಮುನ್ನವೇ ಬಾರ್​​​​​ಗಳು ಓಪನ್ ಆಗಿರುತ್ತವೆ.

ಇದನ್ನೂ ಓದಿ:ನ್ಯೂ ಇಯರ್​ ವೆಲ್​ಕಮ್​ಗೆ ಬೆಂಗಳೂರು ಜನ ರೆಡಿ.. ಹೇಗಿದೆ ತಯಾರಿ..?

ಇನ್ನು, ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಪ್ರವೇಶ ಟಿಕೆಟ್​ ಹಾಗೂ ಪಾಸ್​ ವಿತರಿಸ್ಬೇಕು.. ಬಾಲಕ, ಬಾಲಕರಿಗೆ ಮದ್ಯ ಪೊರೈಸುವಂತಿಲ್ಲ.. ತಪಾಸಣೆ ಬಿಗಿಗೊಳಿಸಬೇಕು.. ಸಂಶಯಾಸ್ಪದ ವಸ್ತುಗಳು, ಹಾಗೂ ವ್ಯಕ್ತಿಗಳು ಕಂಡು ಬಂದ್ರೆ ಪೊಲೀಸರಿಗೆ ಮಾಹಿತಿ ನೀಡ್ಬೇಕು.. ಸೆಲೆಬ್ರೇಷನ್ಸ್​​ ಪ್ಲೇಸ್​​ನಲ್ಲಿ ಅಗ್ನಿ ನಿರೋಧಕ ಉಪಕರಣ ಅಳವಡಿಸಬೇಕು.. ಅಗ್ನಿ ಅವಘಡಗಳು, ಕಾಲ್ತುಳಿತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು..ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರೋ ಸ್ಥಳದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು.. ಪ್ರವೇಶದ್ವಾರ, ನಿರ್ಗಮನ ದ್ವಾರ, ವಾಹನ ನಪಾಕಿಂಗ್​ ಸ್ಥಳ ಹಾಗೂ ಕಾರ್ಯಕಚ್ರಮದ ಸ್ಥಳಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸ್ಬೇಕು.. ಕಾರ್ಯಕ್ರಮ ನಡೆಯಲು ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ದೃಶ್ಯಾವಳಿಗಳನ್ನ ಕನಿಷ್ಠ 30 ದಿನಗಳವರೆಗೆ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಅಂತ ಮಾಲೀಕರಿಗೆ ಸೂಚನೆ ನೀಡ್ಲಾಗಿದೆ.

ಇದನ್ನೂ ಓದಿ: ದರ್ಶನ್ ಪತ್ನಿಗೆ ಅಶ್ಲೀಲ ಸಂದೇಶ.. ಪೊಲೀಸರಿಗೆ ಮಹತ್ವದ ಹೇಳಿಕೆ ಕೊಟ್ಟ ವಿಜಯಲಕ್ಷ್ಮೀ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Happy new year Happy New Year 2026
Advertisment