/newsfirstlive-kannada/media/media_files/2025/12/27/new-year-bangalore-2025-12-27-23-34-46.jpg)
‘let's celebrate 2026’ ಈ ಕೋಟ್​​, ಟೈಟೆಲ್ಸ್​​, ಪೋಸ್ಟರ್ಸ್​​ ಸೋಶಿಯಲ್​ ಮೀಡಿಯಾದಲ್ಲಿ ಹೈ ಸ್ಪೀಡ್​ನಲ್ಲಿ ರನ್​ ಆಗ್ತಿದೆ.. ಹೋಟೆಲ್​​, ರೆಸಾರ್ಟ್​, ಲಾಡ್ಜ್​​​, ಪಬ್​​​​ ಆಲ್​​ಮೋಸ್ಟ್​ ರಿಸರ್ವೆಡ್​​ ಆಗಿದೆ..ಇನ್ನೇನಿದ್ರೂ ಸೇ ಬಾಯ್​ ಟು 2025 & ಸೇ ಹೆಲೋ ಟು 2026.. ಅನ್ನೋ ಕರ್ಟನ್​ ರೈಸ್​​ ಒಂದೇ ಬಾಕಿ.. ಆದ್ರೆ ಬೆಂಗಳೂರು ಸುತ್ತ ಇರೋ ಪ್ರೊಟೆಕ್ಷನ್​ ಮಾತ್ರ ಮರಿಬೇಡಿ..
ನ್ಯೂ ಇಯರ್​ 2026 ಸೆಲೆಬ್ರೇಷನ್​ಗೆ ಸಿಲಿಕಾನ್​ ಸಿಟಿ ಜನ ಕಂಪ್ಲೀಟ್​​ ಪ್ರಿಪರೇಷನ್ಸ್​ ಮಾಡಿ ವೆಯ್ಟ್​​​​​ ಮಾಡ್ತಾ ಇದ್ರೆ, ವಿ ಆರ್​​ ಆಲ್ಸೋ ಸೆಟ್​ ಅಂತ ಸಿಟಿ ಪೊಲೀಸರು ಗೈಡ್​​ಲೈನ್ಸ್​​ ರಿಲೀಸ್​ ಮಾಡಿ ರೂಲ್ಸ್​ ಫಾಲೋ ಮಾಡಿ ಅಂತಿದ್ದಾರೆ.. ಈ ವರ್ಷ ಪೊಲೀಸರ ಹದ್ದಿನ ಕಣ್ಣು ಹೇಗಿದೆ?
ಇದನ್ನೂ ಓದಿ: ಜಗತ್ತನ್ನೇ ಬೆರಗುಗೊಳಿಸಿದ ಚೀನಾದ ಹೈಪರ್​ ಲೂಪ್​ ಮ್ಯಾಗ್ಲೆವ್​ ರೈಲು !
‘ಬೆಂಗಳೂರು’ ಸುತ್ತ ಪ್ರೊಟೆಕ್ಷನ್​
1. ಸೆಲೆಬ್ರೇಷನ್​ಗೆ ಬರೋ ಮಕ್ಕಳು, ಮಹಿಳೆಯರ ಸುರಕ್ಷತೆಗೆ ಒತ್ತು
2. ಸುರಕ್ಷತಾ ಟೆಂಟ್​​ ನಿರ್ಮಾಣ ಆಂಬುಲೆನ್ಸ್​​, ವೈದ್ಯಕೀಯ ಸಿಬ್ಬಂದಿ
3. 12 ಗಂಟೆ ಕಳೆದ ಬಳಿಕ ಸ್ಥಳದಲ್ಲಿ ಇರುವಂತಿಲ್ಲ ಅಂತ ಸೂಚನೆ
4. ಬುಧವಾರ ರಾತ್ರಿ ನಗರದ ಎಲ್ಲಾ ಮೇಲ್ಸೇತುವೆ ಸಂಚಾರ ಬಂದ್​
5. ಎಂ. ಜಿ ರಸ್ತೆ, ಬ್ರಿಗೇಡ್​ ರಸ್ತೆಗೆ ಈ ಬಾರಿ ಮುಕ್ತ ಪ್ರವೇಶ ಇರುವುದಿಲ್ಲ
6. ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಬಂದರೆ ಪ್ರವೇಶದ್ವಾರ ಬಂದ್
7. ಹೆಚ್ಚಿನ ಜನ್ರು ಸೇರೋ ಪ್ರದೇಶಗಳಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಕೆ
ಪಬ್​, ಬಾರ್​ ಮಾಲೀಕರೇ ನೆನಪಿರಲಿ
ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಪ್ರವೇಶ ಟಿಕೆಟ್​ ಹಾಗೂ ಪಾಸ್​ ವಿತರಿಸ್ಬೇಕು.. ಬಾಲಕ, ಬಾಲಕರಿಗೆ ಮದ್ಯ ಪೊರೈಸುವಂತಿಲ್ಲ.. ತಪಾಸಣೆ ಬಿಗಿಗೊಳಿಸಬೇಕು.. ಸಂಶಯಾಸ್ಪದ ವಸ್ತುಗಳು, ಹಾಗೂ ವ್ಯಕ್ತಿಗಳು ಕಂಡು ಬಂದ್ರೆ ಪೊಲೀಸರಿಗೆ ಮಾಹಿತಿ ನೀಡ್ಬೇಕು.. ಸೆಲೆಬ್ರೇಷನ್ಸ್​​ ಪ್ಲೇಸ್​​ನಲ್ಲಿ ಅಗ್ನಿ ನಿರೋಧಕ ಉಪಕರಣ ಅಳವಡಿಸಬೇಕು.. ಅಗ್ನಿ ಅವಘಡಗಳು, ಕಾಲ್ತುಳಿತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು..ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರೋ ಸ್ಥಳದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು.. ಪ್ರವೇಶದ್ವಾರ, ನಿರ್ಗಮನ ದ್ವಾರ, ವಾಹನ ನಪಾಕಿಂಗ್​ ಸ್ಥಳ ಹಾಗೂ ಕಾರ್ಯಕಚ್ರಮದ ಸ್ಥಳಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸ್ಬೇಕು.. ಕಾರ್ಯಕ್ರಮ ನಡೆಯಲು ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ದೃಶ್ಯಾವಳಿಗಳನ್ನ ಕನಿಷ್ಠ 30 ದಿನಗಳವರೆಗೆ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಅಂತ ಮಾಲೀಕರಿಗೆ ಸೂಚನೆ ನೀಡ್ಲಾಗಿದೆ.
ಏನಿ ವೇ ಇಯರ್​ ಎಂಡ್​ ಬರ್ತಿದೆ.. ನ್ಯೂ ಇಯರ್​ ಸ್ಟಾರ್ಟ್​​ ಆಗ್ತಿದೆ.. ಸೋ ಬೀ ಸೇಫ್​.. ಜಸ್ಟ್​ ಫಾಲೋ ದಿ ರೂಲ್ಸ್​​.. ಹೆಲ್ಡಿಯಾಗಿ 2026 ವೆಲ್​ಕಮ್​ ಮಾಡೋಕೆ ರೆಡಿಯಾಗಿದೆ.
ಇದನ್ನೂ ಓದಿ: ‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us