/newsfirstlive-kannada/media/media_files/2026/01/02/ashwini-vs-gilli-2026-01-02-16-28-00.jpg)
ಇನ್ನೇನು ಮೂರು ವಾರದಲ್ಲಿ ಬಿಗ್‌ಬಾಸ್ ಮುಗಿಯುತ್ತೆ.. ಸದ್ಯ ಯಾರ ಹವಾ ಜಾಸ್ತಿ ಇದೆ ಅಂತ ನೋಡ್ತಾ ಹೋದ್ರೆ ಕಾಣಿಸೋದು ಗಿಲ್ಲಿ ಮತ್ತು ಅಶ್ವಿನಿ ಗೌಡ ಅವರದ್ದು. ಇಬ್ಬರದ್ದು ವಿಭಿನ್ನ ವ್ಯಕ್ತಿತ್ವ. ಇಬ್ಬರೂ ಎಣ್ಣೆ ಸೀಗೆಕಾಯಿ ಇದ್ದಂತೆ. ಆದ್ರೆ, ಈ ಜೋಡಿ ನಾನಾ ನೀನಾ ಅಂತ ಜಗಳ ಆಡೋದಕ್ಕೂ ಸೈ, ಡ್ಯಾನ್ಸ್ ಮಾಡೋದಕ್ಕೂ ಜೈ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಮುಗಿಸೋದಕ್ಕೂ ರೆಡಿ.
ಜಗಳಕ್ಕೆ ನಿಂತ್ರೆ ನಾನಾ, ನೀನಾ?
ಬಿಗ್‌ಬಾಸ್ 12ನೇ ಸೀಸನ್ ನೋಡುತ್ತಿರೋ ವೀಕ್ಷಕರಲ್ಲಿ ಪ್ರಮುಖವಾಗಿ ಎರಡೇ ಹೆಸ್ರು ಕೇಳಿಬರ್ತಾ ಇರೋದು. ಒಂದು ಪಂಚ್ ಮಾಸ್ಟರ್ ಗಿಲ್ಲಿ ನಟ. ಇನ್ನೊಂದು ಫೈರ್ ಬ್ರಾಂಡ್ ಅಶ್ವಿನಿ ಗೌಡ. ಬಿಗ್‌ಬಾಸ್ ಆರಂಭವಾದಾಗಿಂದ ಇಲ್ಲಿಯವರೆಗೂ ಇವರಿಬ್ಬರ ನಡುವೆ ನಾನಾ ನೀನಾ ಅನ್ನೋ ಯುದ್ಧ ನಡೆದಿದ್ದೇ ಜಾಸ್ತಿ. ಆದ್ರೂ ಕೆಲವೊಮ್ಮೆ ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ಒಬ್ಬರ ಬೆಂಬಲಕ್ಕೆ ಇನ್ನೊಬ್ಬರು ನಿಂತು ಅಚ್ಚರಿ ಮೂಡಿಸಿದ್ದಾರೆ. ಇನ್ನೇನು ಎರಡ್ಮೂರು ವಾರದಲ್ಲಿ ಫೈನಲ್ ನಡೆಯುತ್ತೆ. ಈ ಸಂದರ್ಭದಲ್ಲಿಯೂ ಚಾಂಪಿಯನ್ ಪಟ್ಟಕ್ಕೂ ಇವರಿಬ್ಬರೇ ಮುಖ್ಯ ರೇಸ್‌ನಲ್ಲಿದ್ದಾರೆ ಅನ್ನೋ ಮಾತುಗಳನ್ನ ಬಿಗ್‌ಬಾಸ್ ವೀಕ್ಷಕರು ಹೇಳ್ತಿದ್ದಾರೆ.
ಇದನ್ನೂ ಓದಿ:ಗಿಲ್ಲಿ ಹುಟ್ಟೂರಿಗೆ ಕೀರ್ತಿ ಕಳಶ.. ಗಿಲ್ಲಿ ಬಗ್ಗೆ ತಿಳಿಯದ ರಹಸ್ಯಗಳು ರಿವಿಲ್..!
/filters:format(webp)/newsfirstlive-kannada/media/media_files/2025/12/09/ashwini-gowda-9-2025-12-09-14-47-07.jpg)
ಈ ಬಾರಿಯ ಬಿಗ್‌ಬಾಸ್‌ಗೆ ಗಿಲ್ಲಿ ಮತ್ತು ಕಾವ್ಯಾ ಜಂಟಿಯಾಗಿ ಎಂಟ್ರಿಯಾಗಿದ್ರೆ ಅಶ್ವಿನಿ ಗೌಡ ಒಂಟಿಯಾಗಿ ಎಂಟ್ರಿಯಾಗಿದ್ರು. ಆ ಸಂದರ್ಭದಲ್ಲಿ ರಾಜಮಾತೆಯಾಗಿ ಕಾಣಿಸ್ಕೊಂಡಿದ್ದ ಅಶ್ವಿನಿ ಗೌಡ ವಿರುದ್ಧ ಇತರೆ ಸ್ಪರ್ಧಿಗಳು ಜಗಳ ಮಾಡೋದಕ್ಕೆ, ವಾದ ಮಾಡೋದಕ್ಕೆ ಹಿಂದೇಟು ಹಾಕ್ತಾ ಇದ್ರು. ಆ ಸಂದರ್ಭದಲ್ಲಿ ಅಶ್ವಿನಿ ಗೌಡ ಅನ್ನ ಎದುರು ಹಾಕಿಕೊಂಡು ಪಂಚ್ ಡೈಲಾಗ್‌ಗಳನ್ನ ಹೊಡೆದಿದ್ದು ಗಿಲ್ಲಿ. ಇದೊಂದ್ ರೀತಿಯಲ್ಲಿ ಗಿಲ್ಲಿಯನ್ನ ರಾತ್ರಿ ಬೆಳಗಾಗೋದ್ರಲ್ಲಿ ಹೀರೋ ಮಾಡಿ ಬಿಡ್ತು. ಬಿಗ್‌ಬಾಸ್ ವೀಕ್ಷಕರಿಗೆ ಅಂದೇ ಗಿಲ್ಲಿ ಇಷ್ಟವಾಗಿ ಬಿಟ್ಟ. ಅಲ್ಲಿಂದ ಶುರುವಾಗಿದ್ದ ಇಬ್ಬರ ಕಾದಾಟ ಬಿಗ್‌ಬಾಸ್ ಮನೆಯಲ್ಲಿ ಇವತ್ತಿಗೂ ನಿಂತಿಲ್ಲ. ಹೀಗಾಗಿ ಗಿಲ್ಲಿಯಿಂದ ಅಶ್ವಿನಿನಾ? ಇಲ್ಲವೇ ಅಶ್ವಿನಿಯಿಂದ ಗಿಲ್ಲಿನಾ? ಅನ್ನೋದಕ್ಕಿಂತ ಇಬ್ಬರಿಂದ ಮನರಂಜನೆ ಅಂದ್ರೆ ಖಂಡಿತ ತಪ್ಪಾಗದು.
ನಾನಾ ನೀನಾ ಫೈಟ್-01: ನಿರ್ಣಯ ನೀಡುವಲ್ಲಿ ತನ್ನತನ ಬಿಡದ ಗಿಲ್ಲಿ!
ಗಿಲ್ಲಿಗೆ ಬಿಗ್‌ಬಾಸ್ ಮನೆಗೆ ಬಂದಾಗಿಂದ ತಾನು ಕ್ಯಾಪ್ಟನ್ ಆಗ್ಬೇಕು ಅನ್ನೋ ಆಸೆಯಿತ್ತು. ಆದ್ರೆ, ಆ ಆಸೆ ನೆರವೇರಿದ್ದು 12ನೇ ವಾರದಲ್ಲಿ. ಅದು ಅಶ್ವಿನಿ ಗೌಡ ವಿರುದ್ಧ ಫೈನಲ್ ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್ ಪಟ್ಟಕ್ಕೇರುತ್ತಾರೆ. ಹೀಗಾಗಿ ಈ ವಾರ ನಡೆಯೋ ಗೇಮ್‌ನಲ್ಲಿ ಗಿಲ್ಲಿಯದ್ದೇ ಉಸ್ತುವಾರಿಯಾಗಿರುತ್ತೆ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಗಿಲ್ಲಿಗೆ ರಾಜನ ಪಟ್ಟ ನೀಡಿದ್ರೆ, ಅಶ್ವಿನಿ ಗೌಡಗೆ ರಾಣಿ ಪಟ್ಟ ನೀಡುತ್ತೆ. ಇವರಿಬ್ಬರ ಉಸ್ತುವಾರಿಯಲ್ಲಿ ಕ್ಯಾಪ್ಟನ್ ರೇಸ್‌ಗಾಗಿ ಬಕೆಟ್‌ಗೆ ನೀರು ತುಂಬಿಸೋ ಗೇಮ್ ನಡೆಯುತ್ತೆ. ಆ ಸಂದರ್ಭದಲ್ಲಿ ಸ್ಪಂದನ ಬಕೆಟ್‌ನಲ್ಲಿ ಜಾಸ್ತಿ ನೀರು ಇರೋದ್ ಕಾಣಿಸ್ತಾ ಇತ್ತು. ಆದ್ರೆ, ಅಶ್ವಿನಿ ಗೌಡ ಮಾತನ್ನ ತಾನೇಕೆ ಕೇಳ್ಬೇಕು ಅಂತ ತನ್ನ ತನ ಬಿಟ್ಟಿಲ್ಲ ಗಿಲ್ಲಿ.. ಆ ದೃಶ್ಯ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದೆ.
ಇದನ್ನೂ ಓದಿ:ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO
/filters:format(webp)/newsfirstlive-kannada/media/media_files/2025/11/18/ashwini-gowda-3-2025-11-18-15-51-14.jpg)
ನಾನಾ ನೀನಾ ಫೈಟ್-02: ಮನೆ ಕ್ಲೀನ್ ಮಾಡೋ ವಿಚಾರದಲ್ಲೂ ಜಗಳ!
ಬಿಗ್‌ಬಾಸ್ ಶುರುವಾದಾಗಿಂದ ಗಿಲ್ಲಿ ಮೇಲೆ ಇರೋ ಆರೋಪ ಅಂದ್ರೆ ಕೊಟ್ಟ ಕೆಲ್ಸ ಸರಿಯಾಗಿ ಮಾಡೋದಿಲ್ಲ. ಕ್ಲೀನ್ ಮಾಡೋದಿಲ್ಲ ಅನ್ನೋದು ಇತ್ತು. ಹೀಗಾಗಿ ಕ್ಯಾಪ್ಟನ್ ಆದವ್ರು ಗಿಲ್ಲಿ ಕೈಯಲ್ಲಿ ನಿಂತು ಕೆಲ್ಸ ಮಾಡಿಸ್ಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದ್ರೆ, ಗಿಲ್ಲಿ ಕ್ಯಾಪ್ಟನ್ ಆದ್ಮೇಲೆ ಆತನೇ ಬೇರೆಯವರ ಕೈಯಲ್ಲಿ ಕೆಲಸ ಮಾಡಿಸ್ಬೇಕಾಗುತ್ತೆ. ಆವಾಗ ಅಶ್ವಿನಿ ಗೌಡಗೂ? ಗಿಲ್ಲಿಗೂ? ಬೆಂಕಿ ಹತ್ತಿಕೊಳ್ಳುತ್ತೆ.
ನಾನಾ ನೀನಾ ಫೈಟ್-03: ಉಸ್ತುವಾರಿಯಾದಾಗ ಮಾರಾಮಾರಿ ಕಾಳಗ!
ಬಿಗ್‌ಬಾಸ್ ಮನೆಯಲ್ಲಿ ಎಲ್ಲಾ ಬಾರಿಯೂ ಕ್ಯಾಪ್ಟನ್ ಆದವರಿಗೆ ಉಸ್ತುವಾರಿ ಸಿಗುತ್ತೆ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಕೆಲವು ಬಾರಿ ಕ್ಯಾಪ್ಟನ್ ಅಲ್ಲದ ಸ್ಪರ್ಧಿಗಳಿಗೂ ಗೇಮ್ಸ್‌ನ ಉಸ್ತುವಾರಿಯನ್ನ ನೀಡಲಾಗುತ್ತೆ. ಹಾಗೇ ಒಂದು ವಾರ ಕೆಲವು ಗೇಮ್‌ಗಳಿಗೆ ಗಿಲ್ಲಿಗೂ? ಅಶ್ವಿನಿ ಗೌಡಗೂ? ಉಸ್ತುವಾರಿ ನೀಡಲಾಗುತ್ತೆ. ಇಬ್ಬರೂ ಮೊದಲೆ ಹಾವು ಮುಂಗುಸಿ ಇದ್ದಂತೆ. ಹೀಗಾಗಿ ಇಬ್ಬರಿಗೂ ಜಗಳ ನಡೆಯೋದು ಗ್ಯಾರಂಟಿ ಅನ್ನೋ ನಿರೀಕ್ಷೆ ಬಿಗ್ ಬಾಸ್ ಜವಾಬ್ದಾರಿ ನೀಡಿದಾಗಲೇ ಇತ್ತು. ನಿರೀಕ್ಷೆ ಅಂತೆ ಮಾರಾಮಾರಿ ಜಗಳ ನಡೆದೆ ಹೋಯ್ತು...
ಇದನ್ನೂ ಓದಿ: ಕಲೆ ಯಾರ ಮನೆಯ ಆಸ್ತಿಯೂ ಅಲ್ಲ; ಆರಂಭದಲ್ಲಿ ಗಿಲ್ಲಿ ಜನರ ಮನಸ್ಸು ಗೆದ್ದಿದ್ದು ಹೇಗೆ..?
/filters:format(webp)/newsfirstlive-kannada/media/media_files/2025/10/26/ashwini-gowda-9-2025-10-26-21-47-12.jpg)
ನಾನಾ ನೀನಾ ಫೈಟ್-04: ಏನ್ ದಬ್ಬಾಕಿದ್ದೀಯಾ ಅಂದಿದ್ದಕ್ಕೇ ಅಲ್ಲೇ ಪಂಚ್!
ಬಿಗ್‌ಬಾಸ್ ಆರಂಭವಾಗಿ ನಾಲ್ಕೈದು ವಾರದ ನಂತರ ಸ್ಪರ್ಧಿಗಳಿಗೆ ಒಂದ್ ಟಾಸ್ಕ್ ನೀಡಿಲಾಗಿತ್ತು. ಅದ್ರಲ್ಲಿ ಕೆಲವರನ್ನ ಪತ್ರಕರ್ತರಾಗಿ ಮಾಡಿದ್ರೆ, ಇನ್ನು ಕೆಲವರನ್ನ ಉತ್ತರ ಕೊಡೋದಕ್ಕೆ ನಿಲ್ಲಿಸಲಾಗಿತ್ತು. ಯಾರು ಸಮರ್ಥ ಉತ್ತರ ಕೊಡ್ತಾರೋ ಅವರು ನಾಮಿನೇಷನ್‌ನಿಂದ ಪಾರಾಗ್ತಾ ಇದ್ರು. ಆವಾಗ ಗಿಲ್ಲಿ ಉತ್ತರ ನೀಡೋದಕ್ಕೆ ಬಂದಾಗ ಅಶ್ವಿನಿ ಗೌಡ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ರು. ಅದಕ್ಕೆ ಗಿಲ್ಲಿ ಅಲ್ಲಿಯೇ ಪಂಚ್ ಮೇಲೆ ಪಂಚ್ ಡೈಲಾಗ್ ಹೊಡೆದು ಮಾಸ್ಟರ್ ಸ್ಟ್ರೋಕ್ ನೀಡಿದ್ರು.
/filters:format(webp)/newsfirstlive-kannada/media/media_files/2025/11/17/gilli-nata-1-2025-11-17-10-29-49.jpg)
ನಾನಾ ನೀನಾ ಫೈಟ್-05: 'ದೊಡ್ಡವ್ವ ದೊಡ್ಡವ್ವ ದೋಸೆ ಕೊಡು' ವೈರಲ್!
ಹೇಳಿ ಕೇಳಿ ಇದು ಸೋಷಿಯಲ್ ಮೀಡಿಯಾ ಕಾಲ... ಒಳ್ಳೆಯ ಕಂಟೆಂಟ್ ಸಿಕ್ತು ಅಂದ್ರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋದು ಗ್ಯಾರಂಟಿ. ಇಲ್ಲಿಯವರೆಗಿನ ಬಿಗ್‌ಬಾಸ್‌ಗೆ ಹೋಲಿಸಿದ್ರೆ ಈ ಬಾರಿಯ ಬಿಗ್ ಬಾಸ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಾ ಇರೋದು ಜಾಸ್ತಿ. ಅದ್ಕೆ ಮುಖ್ಯ ಕಾರಣ ಗಿಲ್ಲಿ ನಟ ಅಂದ್ರೆ ಖಂಡಿತ ತಪ್ಪಾಗದು. ಯಾಕಂದ್ರೆ, ಗಿಲ್ಲಿ ಹೇಳೋ ಪಂಚ್ ಡೈಲಾಗ್‌ಗಳು... ಹಾಡುಗಳು ಸೋಷಿಯಲ್ ಮೀಡಿಯಾದವರಿಗೆ ಒಳ್ಳೆಯ ಕಂಟೆಂಟ್ ಆಗ್ತಾ ಇದೆ. ಹಾಗೇ ಅಶ್ವಿನಿ ಗೌಡ ಕುರಿತು ದೊಡ್ಡವ್ವ ದೊಡ್ಡವ್ವ ದೋಸೆ ಕೊಡು ಅಂದಿದ್ದು ಭಾರೀ ವೈರಲ್ ಆಗಿತ್ತು.
ಗಿಲ್ಲಿಗೆ ಅಶ್ವಿನಿ ಗೌಡನೇ ಟಾರ್ಗೆಟ್ ಅನ್ನೋದ್ ಎಲ್ಲರಿಗೂ ಗೊತ್ತಿರೋ ವಿಚಾರ. ಯಾಕಂದ್ರೆ, ಅಶ್ವಿನಿಯವರನ್ನ ಟ್ರಿಗರ್ ಮಾಡಿದ್ರೆ ಜಗಳ ಆಗುತ್ತೆ ಅನ್ನೋದು ಗಿಲ್ಲಿಗೆ ಗೊತ್ತು. ಹೀಗಾಗಿ ಸಮಯ ಸಿಕ್ಕಾಗ ತಮಾಷೆನೂ ಮಾಡಿದ್ದಾನೆ ಜಗಳವನ್ನ ಮಾಡಿದ್ದಾನೆ ಗಿಲ್ಲಿ.
ಇದನ್ನೂ ಓದಿ:ಚೆನ್ನಾಗಿದ್ರೆ ದೋಸ್ತಿ, ಎದುರು ಹಾಕಿಕೊಂಡ್ರೆ ಉಡೀಸ್.. ಪಂಚ್ ಮಾಸ್ಟರ್ ಗಿಲ್ಲಿ ಸಕ್ಸಸ್‌ಗೆ 10 ಕಾರಣಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us