ಬರೀ ಜಗಳ ಒಂದೇ ಅಲ್ಲ.. ಗಿಲ್ಲಿ, ಅಶ್ವಿನಿ ಜೋಡಿ ವೀಕ್ಷಕರ ಹೃದಯ ಗೆದ್ದಿದ್ದು ಹೇಗೆ..?

ಈ ಬಾರಿಯ ಬಿಗ್‌ಬಾಸ್‌ ಶೋದಲ್ಲಿ ಅತೀ ಹೆಚ್ಚು ಜಗಳ ಆಗಿರೋದೇ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ. ಅದ್ರಲ್ಲಿ ಕೆಲವೊಂದನ್ನ ತೋರಿಸಿದ್ದೇವೆ. ಹಾಗೇ ನಿನ್ನ ಆಟಕ್ಕೆ ನಾನು? ನನ್ನ ಆಟಕ್ಕೆ ನೀನು? ಅಂತ ಹೆಜ್ಜೆ ಹಾಕಿದ್ದು ಇದೆ.

author-image
Ganesh Kerekuli
Gilli and Ashwini
Advertisment

ಬಿಗ್‌ ಬಾಸ್‌ ಮನೆಯಲ್ಲಿ ಸೈಲೆಂಟ್‌ ಇದ್ರೆ ಆಗೋದಿಲ್ಲ.. ಕೇವಲ ಟಾಸ್ಕ್‌ ಆಡ್ಕೊಂಡ್‌ ಇರ್ತೀನಿ ಅಂದ್ರೂ ನಡೆಯೋದಿಲ್ಲ.. ಅಲ್ಲಿ ಏನಾದ್ರೂ ಕಂಟೆಂಟ್‌ ಕೊಡ್ತಾ ಇರ್ಬೇಕು.. ಹಾಗಾದ್ರೆ ಮಾತ್ರ ವೀಕ್ಷಕರ ಮನಸ್ಸನ್ನ ಗೆದ್ದು ಮನೆಯಲ್ಲಿ ಕೊನೆಯವರೆಗೂ ಉಳಿದ್ಕೊಳ್ಳಲು ಸಾಧ್ಯ. ಸದ್ಯ ಗಿಲ್ಲಿ ಮತ್ತು ಅಶ್ವಿನಿ ಕೊನೆಯವರೆಗೂ ಉಳಿದುಕೊಳ್ಳುವ ಭರವಸೆ ಮೂಡಿಸಿದ್ದಾರೆ. ಹಾಗೇ ಗಿಲ್ಲಿ ಮತ್ತು ಅಶ್ವೀನಿ ನಡುವಿನ ಪಂಚು.. 

ಗಿಲ್ಲಿ ನಟನಿಗೆ ಇರೋ ಪ್ಲಸ್‌ ಏನು ಅಂದ್ರೆ ಆತ ಸ್ಕ್ರಿಪ್ಟ್‌ ನೋಡಿ ಕಾಮೆಡಿ ಮಾಡೋವವನಲ್ಲ.. ಸಮಯ ಸಂದರ್ಭದಲ್ಲಿ ಏನ್‌ ಕಾಣಿಸುತ್ತೋ? ಯಾವ್‌ ಬೆಳವಣಿಗೆಯಾಗುತ್ತೋ? ಎದುರಾಳಿಗಳ ನಡೆ ನುಡಿ ಹೇಗಿರುತ್ತೋ? ಅದನ್ನೆ ಇಟ್ಕೊಂಡು ಕಾಮೆಡಿ ಮಾಡ್ತಾನೇ ಗಿಲ್ಲಿ ನಟ. ಇದೇ ಕಾರಣಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ದೊಡ್ಡ ಪ್ರಮಾಣದಲ್ಲಿ ಸಕ್ಸಸ್‌ ಆಗ್ತಾ ಇರೋದು. ಹಾಗೇ ಗಿಲ್ಲಿಯ ಪಂಚ್‌ ಡೈಲಾಗ್‌ಗಳು ವೈರಲ್‌ ಆಗ್ತಾ ಇರೋದು. ಇನ್ನು ಅಶ್ವಿನಿ ವಿಚಾರದಲ್ಲಿ ಹೇಳ್ಬೇಕು ಅಂದ್ರೆ ಆಟವನ್ನ ಚೆನ್ನಾಗಿ ಆಡ್ತಾ ಇದ್ದಾರೆ. ಜಗಳಕ್ಕೆ ನಿಂತರು ಅಂದ್ರೆ ಎದುರಾಗಿ ಅದೆಷ್ಟೇ ಬಲಶಾಲಿ ಆಗಿದ್ರೂ ಬಿಡೋದಿಲ್ಲ. ಅಲ್ಲಿಯೇ ಕೌಂಟರ್‌ ಕೊಡ್ತಾರೆ. ಹೀಗಾಗಿ ಗಿಲ್ಲಿ ಮತ್ತು ಅಶ್ವಿನಿ ಜಗಳ ವೈರಲ್‌ ಆಗ್ತಿವೆ.

ಇದನ್ನೂ ಓದಿ: ಗಿಲ್ಲಿ ಹುಟ್ಟೂರಿಗೆ ಕೀರ್ತಿ ಕಳಶ.. ಗಿಲ್ಲಿ ಬಗ್ಗೆ ತಿಳಿಯದ ರಹಸ್ಯಗಳು ರಿವಿಲ್..!

Ashwini vs Gilli

ಅಶ್ವಿನಿ ಅಂದ್ರೆ ತಾಕತ್ತು, ತಾಕತ್ತು ಅಂದ್ರೆ ಅಶ್ವಿನಿ!

ಗಿಲ್ಲಿ ಹೇಗೆ ಪಂಚ್‌ ಡೈಲಾಗ್‌ಗಳನ್ನ ಹೊಡೀತಾರೋ? ಹಾಗೇ ಅಶ್ವಿನಿ ಗೌಡ ಸಹ ಪಂಚ್‌ ಡೈಲಾಗ್‌ ಹೊಡೆಯೋದ್ರಲ್ಲಿ ಪಂಟರ್‌. ಸಮಯ ಸಂದರ್ಭ ನೋಡಿ ಅವರು ಡೈಲಾಗ್‌ಗಳನ್ನ ಹೊಡೀತಾರೆ. ಅಂತಹ ಸಂದರ್ಭದಲ್ಲಿ ಗಿಲ್ಲಿ ಅದನ್ನ ಕಾಮೆಡಿ ಮಾಡಿ ಪ್ರಭಾವ ಕುಗ್ಗಿಸುವಲ್ಲಿ ಯಾಶಸ್ವಿಯಾಕ್ತಿದ್ದಾರೆ. ಒಮ್ಮೆ ಬಿಬಿ ಕಾಲೇಜ್‌ ಅನ್ನೋ ಕಾನ್ಪೆಪ್ಟ್‌ ಮಾಡಲಾಗಿತ್ತು. ಆವಾಗ ಪ್ರಿನ್ಸಿಪಾಲ್‌ ಆದವರು ಡೇರಿಂಗ್‌ ಅಂದ್ರೆ ಏನು ಅಂತ ಪ್ರಶ್ನೆ ಮಾಡ್ತಾರೆ. 

ಗಿಲ್ಲಿ, ಅಶ್ವಿನಿ ಡ್ಯಾನ್ಸ್‌ ವೈರಲ್‌!

ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಾಗಿಂದ ಗಿಲ್ಲಿಗೂ? ಅಶ್ವಿನಿ ಗೌಡಗೂ? ಎಣ್ಣೆ ಸೀಗೆಕಾಯಿ ಸಂಬಂಧ. ಪ್ರತಿಯೊಂದು ವಿಚಾರದಲ್ಲಿ ಒಬ್ಬರ ಅಭಿಪ್ರಾಯವನ್ನ ಇನ್ನೊಬ್ಬರು ಒಪ್ಪುವುದೇ ಇಲ್ಲ. ಒಬ್ಬರು ಹೇಳಿದ್ದನ್ನ ಇನ್ನೊಬ್ಬರು ಸ್ವೀಕಾರ ಮಾಡೋದೇ ಇಲ್ಲ. ಆದ್ರೆ, ಇವರಿಬ್ಬರ ಕಾಂಬಿನೇಷನ್‌ನಲ್ಲಿ ಡ್ಯಾನ್ಸ್‌ ಮಾಡಿಸಿದಾಗ ವೀಕ್ಷಕರು ಅಕ್ಷರಶಃ ಫಿದಾ ಆಗಿ ಹೋಗಿದ್ರು. 

ಇದನ್ನೂ ಓದಿ: ಶಾಲೆಯಲ್ಲಿ ಸೈಲೆಂಟು.. ಈಗ ವೈಲೆಂಟು.. ‘ಗಿಲ್ಲಿ’ ಗಲ್ಲಿ ಜರ್ನಿ ಹೇಳಿದ ಸ್ಕೂಲ್​ ಮೆಸ್ಟ್ರು..!

Gilli Nata (9)

ಗೆಸ್ಟ್‌ ಬಂದಾಗ ಗಿಲ್ಲಿ ಪರ ನಿಂತಿದ್ದ ಅಶ್ವಿನಿ!

ಈ ಬಾರಿ ಬಿಗ್‌ಬಾಸ್‌ ಮನೆೆಗೆ ಮಾಜಿ ಸ್ಪರ್ಧಿಗಳನ್ನು ಗೆಸ್ಟ್‌ ಆಗಿ ಕರೆಯಿಸಲಾಗಿತ್ತು. ಕಳೆದ ಸೀಸನ್‌ನಲ್ಲಿ ಇದ್ದವರು ಈ ಬಾರಿ ಗೆಸ್ಟ್‌ ಆಗಿದ್ರು. ಆ ಸಂದರ್ಭದಲ್ಲಿ ಗೆಸ್ಟ್‌ಗಳಿಗೆ ಒಂದ್‌ ಟಾಸ್ಕ್‌ ನೀಡಲಾಗಿತ್ತು. ಅದೇನ್‌ ಅಂದ್ರೆ, ಅದೆಷ್ಟು ಸಾಧ್ಯವೋ? ಅಷ್ಟು ಸ್ಪರ್ಧಿಗಳಿಂದ ಹೋಟೆಲ್‌ ಸೇವೆ ಪಡೆಯೋದಾಗಿತ್ತು. ಆ ಸಂದರ್ಭದಲ್ಲಿ ಗೆಸ್ಟ್‌ಗಳಿಗೂ? ಗಿಲ್ಲಿಗೂ ಕಿರಿಕ್‌ ಆಗಿತ್ತು. ಅಂತಹ ಸಂದರ್ಭದಲ್ಲಿ ಗಿಲ್ಲಿ ಜೊತೆ ಅಶ್ವಿನಿ ಗೌಡ ನಿಂತುಕೊಂಡಿದ್ರು. ಅದೊಂದು ರೀತಿಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಹೊಸ ಚಿತ್ರಣವನ್ನೇ ತೋರಿಸಿತ್ತು.

ಇಬ್ಬರೂ ಜೊತೆಯಾಗಿ ಸೀಕ್ರೆಟ್‌ ಟಾಸ್ಕ್‌ ಮುಗ್ಸಿದ್ರು!

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ, ಅಶ್ವಿನಿ ಗೌಡ ಅಂದ್ರೆ ಕೇವಲ ಜಗಳ ಅಷ್ಟೇ ಅಲ್ಲ.. ಮನರಂಜನೆ ಅಷ್ಟೇ ಅಲ್ಲ... ಟಾಸ್ಕ್‌ ವಿಚಾರದಲ್ಲಿ ಇಬ್ಬರೂ ಗಂಭೀರ ಅನ್ನೋದು ಸತ್ಯ.  ಒಮ್ಮೆ ಬಿಗ್‌ಬಾಸ್‌ ಮನೆಯೊಳಗೆ ವಿಲನ್‌ ಇಬ್ಬರಿಗೂ ಸೀಕ್ರೆಟ್‌ ಟಾಸ್ಕ್‌ ನೀಡಿರ್ತಾರೆ. ಆ ಸಂದರ್ಭದಲ್ಲಿ ಇಬ್ಬರೂ ತಮ್ಮಲ್ಲಿರೋ ಭಿನ್ನಾಭಿಪ್ರಾಯವನ್ನ ಬಿಟ್ಟು ಟಾಸ್ಕ್‌ ಕಂಪೀಟ್‌ ಮಾಡೋ ಜವಾಬ್ದಾರಿ ತೆಗೆದ್ಕೊಳ್ತಾರೆ. ಅದ್ರಲ್ಲಿ ಯಶಸ್ವಿಯೂ ಆಗ್ತಾರೆ.

ಇದನ್ನೂ ಓದಿ:ಗಿಲ್ಲಿಗೂ? ಅಶ್ವಿನಿಗೂ? ಪದೇ ಪದೇ ಪೈಟು.. ಏನೀ ರಹಸ್ಯ? ಏನ್ ಜೋಡಿ ಗುರೂ..!

Ashwini Gowda (3)

ರಾಣಿ ಪಟ್ಟ ನೀಡುವಾಗ ರೇಗಿಸಿದ ಗಿಲ್ಲಿ!

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿಗೆ ಹೇಗೆ ಜೀವಿಸ್ಬೇಕು ಅನ್ನೋದ್‌ ಚೆನ್ನಾಗಿಯೇ ಗೊತ್ತು. ಹಾಗೇ ಇತರೆ ಸ್ಪರ್ಧಿಗಳಲ್ಲಿ ಯಾರು ಸ್ಟ್ರಾಂಗ್‌? ಯಾರು ವೀಕ್‌? ಅನ್ನೋದು ಗೊತ್ತು. ಹೀಗಾಗಿ ತಾನು ಯಾರ ಜೊತೆ ಜಗಳ ಆಡಿದ್ರೆ ಕಂಟೆಂಟ್‌ ಸಿಗುತ್ತೆ? ಯಾರ ಜೊತೆ ಸೈಲೆಂಟ್‌ ಇದ್ರೆ ಒಳ್ಳೆಯದು ಅನ್ನೋ ಅರಿವು ಇದೆ. ನಾವು ಈ ಮಾತು ಹೇಳೋದಕ್ಕೆ ಕಾರಣ, ಕ್ಯಾಪ್ಟನ್‌ ಆಗಿದ್ದ ಗಿಲ್ಲಿಗೆ ಅಶ್ವಿನಿಯವರನ್ನ ರಾಣಿಯಾಗಿ ಘೋಷಣೆ ಮಾಡೋ ಸಂದರ್ಭ ಬರುತ್ತೆ. 

ಗಿಲ್ಲಿ ಮತ್ತು ಅಶ್ವಿನಿ ಬಿಗ್‌ಬಾಸ್‌ನಲ್ಲಿ ನಾನಾ ನೀನಾ ಅಂತ ಸವಾಲು ಹಾಕಿ ನಡೀತಾ ಇರ್ಬಹುದು. ಆದ್ರೆ, ಇಬ್ಬರ ನಡುವಿನ ಜಗಳ ಆಗಿರ್ಬಹುದು.. ಡ್ಯಾನ್ಸ್‌ ಆಗಿರ್ಬಹುದು. ಟಾಸ್ಕ್‌ ಆಡೋ ರೀತಿಯಾಗಿರ್ಬಹುದು. ಎಲ್ಲವೂ ವೀಕ್ಷಕರಿಗೆ ಮನರಂಜನೆ ನೀಡ್ತಾ ಇದೆ.. ಜನ ಅದನ್ನ ಇಷ್ಟಪಡ್ತಾ ಇದ್ದಾರೆ ಅನ್ನೋದು ಸತ್ಯ. ರಿಯಾಲಿಟಿ ಶೋ ಅಂದ್ರೆ ಮನರಂಜನೆ ಇರ್ಬೇಕು. ಈ ನಿಟ್ಟಿನಲ್ಲಿ ಬಿಗ್‌ಬಾಸ್‌ ಶೋದಲ್ಲಿ ಗಿಲ್ಲಿ ಮತ್ತು ಅಶ್ವಿನಿ ಯಶಸ್ವಿಯಾಗ್ತಿದೆ. 

ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ashwini Gowda Bigg Boss Gilli Nata Bigg boss Ashwini Gowda
Advertisment