ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತಿದ್ದಾರಾ ಗಿಲ್ಲಿ..?

ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತಿದ್ದಾನಾ ‘ಕೀ ಮಾಸ್ಟರ್‌’ ಗಿಲ್ಲಿ? ಬಿಗ್‌ ಮನೆಯಲ್ಲಿ ನಿಧಾನಕ್ಕೆ ಅಶ್ವಿನಿ ಅಲೆ ಶುರುವಾಯ್ತಾ? ಕಾವ್ಯ ಪರ ಸ್ಟ್ಯಾಂಡ್‌.. ಗಿಲ್ಲಿಗೆ ಅದು ಮೈನಸ್‌ ಆಗುತ್ತಾ?. ಸಿಲ್ಲಿ ಬೇಡ ಗಿಲ್ಲಿ!

author-image
Ganesh Kerekuli
GillI Nata (21)
Advertisment
  • ಕ್ಲೈಮ್ಯಾಕ್ಸ್‌ನಲ್ಲಿ ಗಿಲ್ಲಿಗೆ ಮುಳುವಾಗ್ತಾ ಇರೋದು ಏನು?
  • ಕ್ಲೈಮ್ಯಾಕ್ಸ್‌ನಲ್ಲಿಯೂ ಅಶ್ವಿನಿಯನ್ನ ಟ್ರಿಗರ್‌ ಮಾಡಿದ್ದೇಕೆ?
  • 'ಕೀ ಮಾಸ್ಟರ್‌'ಗೆ ಅದುವೇ ಮುಳುವಾಗ್ತಾ ಇದೆಯಾ?

ರಿಯಾಲಿಟಿ ಶೋದಲ್ಲಿ ಸ್ಟ್ರಾಂಗ್‌ ಅಭ್ಯರ್ಥಿಗಲಾಗಿದ್ದವ್ರು, ಅವರೇ ಕಪ್‌ ಗೆಲ್ತಾರೆ ಅನ್ನೋ ಭರವಸೆ ಮೂಡಿಸಿದವ್ರು ಫೈನಲ್‌ನಲ್ಲಿ ಸೋತ ಬೇಕಾದಷ್ಟು ಮಂದಿ ಇದ್ದಾರೆ. ಅದ್ಕೆ ಕಾರಣ, ಕ್ಲೈಮ್ಯಾನ್ಸ್‌ನಲ್ಲಿ ಎಡವಿ ಬೀಳೋದು. ಅಷ್ಟಕ್ಕೂ ನಾವೇಕೆ ರಿಯಾಲಿಟಿ ಶೋ ಮತ್ತು ಕ್ಲೈಮ್ಯಾಕ್ಸ್‌ ಬಗ್ಗೆ ಹೇಳ್ತಿದ್ದೇವೆ ಅಂದ್ರೆ ಗಿಲ್ಲಿ. ಯೆಸ್‌, ಬಿಗ್‌ಬಾಸ್‌ನಲ್ಲಿ ವಿನ್ನಂಗ್‌ ರೇಸ್‌ನಲ್ಲಿರೋ ಗಿಲ್ಲಿ ಅಂತಿಮ ಘಟ್ಟದಲ್ಲಿ ಎಡವುತ್ತಿದ್ದಾರಾ? ಕೀ ಮಾಸ್ಟರ್‌ಗಿಂತ ಅಶ್ವಿನಿ ಗೌಡ ಹವಾ ಜಾಸ್ತಿ ಆಯ್ತಾ? ಎಂಬ ಪ್ರಶ್ನೆ ಶುರುವಾಗಿದೆ. 

ಬಿಗ್‌ ಬಾಸ್‌ ಅಂದ್ರೆ ಗಿಲ್ಲಿ.. ಗಿಲ್ಲಿ ಅಂದ್ರೆ ಬಿಗ್‌ ಬಾಸ್‌ ಅನ್ನೋ ರೇಂಜ್‌ಗೆ ಈ ಬಾರಿ ಸದ್ದು ಮಾಡ್ತಿರೋ ಸ್ಪರ್ಧಿ ಅಂದ್ರೆ ಒನ್‌ ಅಂಡ್‌ ಓನ್ಲಿ ಗಿಲ್ಲಿ ನಟ. ಇಲ್ಲಿಯವರೆಗೂ ಒನ್ ಮ್ಯಾನ್‌ ಶೋ ಅಂತಾನೇ ಹೇಳ್ತಿರೋದು ಬಿಗ್‌ ಬಾಸ್‌ ವೀಕ್ಷಕರು. ಆತ ಟೈಮ್‌ಗೆ ಸರಿಯಾಗಿ ಕೊಡ್ತಾ ಇದ್ದ ಕೌಂಟರ್‌, ಬೇರೆ ಸ್ಪರ್ಧಿಗಳನ್ನ ಕೀ ಕೊಟ್ಟು ರೇಗಿಸೋದು. ಹಾಸ್ಯ ಮಾಡೋದು ಜನರ ಹೃದಯಕ್ಕೆ ತಟ್ಟಿ ಬಿಟ್ಟಿತ್ತು. ಪರಿಣಾಮ ರೀಲ್ಸ್‌ ಓಪನ್‌ ಮಾಡಿದ್ರೆ ಸಾಕು ಗಿಲ್ಲಿ ಗಿಲ್ಲಿ ಗಿಲ್ಲಿ. ಈಗ ಬಿಗ್‌ ಬಾಸ್‌ ಕ್ಲೈಮ್ಯಾಕ್ಸ್‌ ಹಂತದಲ್ಲಿದೆ. ಇನ್ನೇನು ಮೂರುವಾರ ಮಾತ್ರ ಬಾಕಿ ಇರೋದು. ಇಂತಾ ಟೈಮ್‌ನಲ್ಲಿ ಗಿಲ್ಲಿ ಎಡವುತ್ತಿದ್ದಾನಾ? ಗಿಲ್ಲಿ ಅಂದ್ರೆ ಸಿಲ್ಲಿ ಅನ್ನೋ ಹಾಗೆ ಆಗಿ ಬಿಟ್ಟಿದೆಯಾ? ಇದರ ಲಾಭ ಅಶ್ವಿನಿ ಗೌಡಗೆ ಆಗ್ತಾ ಇದೆಯಾ?

ಇದನ್ನೂ ಓದಿ:ಬರೀ ಜಗಳ ಒಂದೇ ಅಲ್ಲ.. ಗಿಲ್ಲಿ, ಅಶ್ವಿನಿ ಜೋಡಿ ವೀಕ್ಷಕರ ಹೃದಯ ಗೆದ್ದಿದ್ದು ಹೇಗೆ..?

Gilli Nata (14)

ಕ್ಲೈಮ್ಯಾಕ್ಸ್‌ನಲ್ಲಿ ಗಿಲ್ಲಿಗೆ ಮುಳುವಾಗ್ತಾ ಇರೋದು ಏನು?

ಬಿಗ್‌ಬಾಸ್‌ನಲ್ಲಿ ಕ್ಲೈಮ್ಯಾಕ್ಸ್‌ ಹಂತದವರೆಗೂ ಉಳಿದ್ಕೊಳ್ಳುವುದು ಸುಲಭದ ಮಾತು ಅಲ್ಲವೇ ಅಲ್ಲ. ಯಾಕಂದ್ರೆ, ಅದೊಂದು ವ್ಯಕ್ತಿತ್ವದ ಆಟವನ್ನ ತೋರಿಸೋ ರಿಯಾಲಿಟಿ ಶೋ. ಒಂದು ವೇಳೆ ನಾಟಕ ಮಾಡಿದ್ರೂ ಎರಡುವಾರ ಇಲ್ಲವೇ ಮೂರುವಾರ ಮಾಡಬಹುದು ಅಷ್ಟೇ. ಆಮೇಲೆ ಸ್ಪರ್ಧಿಯ ನಿಜವಾದ ಮುಖವಾಡ ಹೊರ ಬಂದೇ ಬರುತ್ತೆ. ಈ ಬಾರಿಯ ಶೋದಲ್ಲಿ ವ್ಯಕ್ತಿತ್ವದ ಆಟದಲ್ಲಿ ಜನರ ಮನಸ್ಸನ್ನ ಬಹುದೊಡ್ಡ ಪ್ರಮಾಣದಲ್ಲಿ ಗೆದ್ದಿದ್ದು ಗಿಲ್ಲಿ. ಗಿಲ್ಲಿ ಕಾಮೆಡಿಯನ್ನ ನೋಡ್ಬೇಕು, ಆತನ ಆಟವನ್ನ ಎಂಜಾಯ್‌ ಮಾಡ್ಬೇಕು ಅಂತಾನೇ ಬಿಗ್‌ಬಾಸ್‌ಗೆ ಈ ಬಗ್ಗೆ ಅದೆಷ್ಟೋ ಹೊಸ ವೀಕ್ಷಕರು ಹುಟ್ಕೊಂಡಿದ್ದಾರೆ. ಬಿಗ್‌ ಬಾಸ್‌ನಲ್ಲಿ ಕ್ಲೈಮ್ಯಾಕ್ಸ್‌ ಸಹ ಇನ್‌ಫಾರ್ಟೆಂಟ್‌ ಆಗಿರುತ್ತೆ. ಆ ಸಂದರ್ಭದಲ್ಲಿಯೂ ಸ್ಪರ್ಧಿಯ ನಡೆ ನುಡಿ ಮಹತ್ವದಾಗಿರುತ್ತೆ. ಈ ವಿಚಾರದಲ್ಲಿ ಗಿಲ್ಲಿ ಎಡವುತ್ತಿದ್ದಾನೆ ಅನ್ನೋ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬರ್ತಾ ಇದೆ. ಗಿಲ್ಲಿಯ ಯಾವ ನಡೆ ವೀಕ್ಷಕರಿಗೆ ಇಷ್ಟ ಆಗ್ತಾ ಇಲ್ಲ? ಅದು ಇನ್ಯಾರಿಗೆ ಪ್ಲಸ್‌ ಆಗ್ತಾ ಇದೆ? ಅಂತ ನೋಡ್ತಾ ಹೋದ್ರೆ ಗಿಲ್ಲಿ ಅಭಿಮಾನಿಗಳಿಗೆ ಶಾಕ್‌ ಆಗೋದು ಗ್ಯಾರಂಟಿ.

ಇದನ್ನೂ ಓದಿ:ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!

Ashwini vs Gilli

ಸಿಲ್ಲಿ ಬೇಡ ಗಿಲ್ಲಿ!

ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ ಫೈಟ್‌ ನಡೆಯೋದು ಅಂದ್ರೆ ಗಿಲ್ಲಿ ಮತ್ತು ಅಶ್ವಿನಿ ಗೌಡಗೆ ನಡುವೆ ಮಾತ್ರ. ಆರಂಭದಿಂದಲೂ ಇಬ್ಬರೂ ಸಾಕಷ್ಟು ಜಗಳ ಮಾಡಿಕೊಂಡೇ ಬಂದಿದ್ದಾರೆ. ಆ ಎಲ್ಲಾ ಸಂದರ್ಭದಲ್ಲಿ ತಾಳ್ಮೆ ತಪ್ಪಿದ ಅಶ್ವಿನಿ ಗೌಡ ಬಾಯಿಗೆ ಬಂದಹಾಗೇ ಮಾತಾಡಿದ್ದಾರೆ. ಅದ್ಕೆ ಗಿಲ್ಲಿ ನಯವಾಗಿಯೇ ಕೌಂಟರ್‌ ಮಾಡಿದ್ದಾರೆ. ಇದು ಗಿಲ್ಲಿಗೆ ಇಲ್ಲಿಯವರೆಗೂ ಪ್ಲಸ್‌ ಆಗಿತ್ತು. 

ಬಿಗ್​ ಬಾಸ್‌ ಮನೆಯಲ್ಲಿ ಇಲ್ಲಿಯವರೆಗೂ ಒಂದ್‌ ಚಾಪ್ಟರ್‌ ಆಗಿ ಕಾಣಿಸ್ಕೊಂಡಿದ್ರೆ, ಇದೀಗ ಇನ್ನೊಂದು ಚಾಪ್ಟರ್‌ ಓಪನ್‌ ಆದಂತೆ ಕಾಣಿಸ್ತಿದೆ. ಗಿಲ್ಲಿ ಕ್ಯಾಪ್ಟನ್‌ ಆದ್ಮೇಲೆ ಅದಕ್ಕೆ ಇನ್ನೊಂದು ಚಾಪ್ಟರ್‌ಗೆ ಮುನ್ನುಡಿ ಬರೆಯಲಾಗಿದೆ. ಅಷ್ಟಕ್ಕೂ ಗಿಲ್ಲಿ ಕ್ಯಾಪ್ಟನ್‌ ಆಗೋದಕ್ಕೆ ಬಹುಮುಖ್ಯ ಕಾರಣ ಬಿಗ್‌ಬಾಸ್‌ ಮನೆಗೆ ಬಂದಿದ್ದ ಫ್ಯಾಮಿಲಿ ವಿಸೀಟ್‌. ಬಂದಿರೋ ಬಹುತೇಕ ಫ್ಯಾಮಿಲಿಗಳು ಗಿಲ್ಲಿಗೆ ವೋಟ್‌ ಮಾಡಿದ್ವು. ವಿಶೇಷ ಅಂದ್ರೆ, ಅಶ್ವಿನಿ ಗೌಡಗೂ? ಗಿಲ್ಲಿಗೂ? ಹಾವು ಮುಂಗುಸಿ ಫೈಟ್‌ ಇದ್ರೂ ಅಶ್ವಿನಿ ಗೌಡ ಫ್ಯಾಮಿಲಿ ವೋಟ್‌ ಮಾಡಿದ್ದು ಗಿಲ್ಲಿಗೆ.  ಹಾಗೇ ಧ್ರುವಂತ್‌ ಫ್ಯಾಮಿಲಿ, ರಘು ಫ್ಯಾಮಿಲಿ, ಧನು ಫ್ಯಾಮಿಲಿ, ರಕ್ಷಿತಾ ಫ್ಯಾಮಿಲಿ... ಇವರೆಲ್ಲ ಗಿಲ್ಲಿಗೆ ವೋಟ್‌ ಮಾಡಿದ್ರು. ಕೊನೆಯಲ್ಲಿ ಅಶ್ವಿನಿ ಗೌಡ ವಿರುದ್ಧ ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದಾರೆ ಗಿಲ್ಲಿ. ಈಗಲೂ ಅಶ್ವಿನಿ ಗೌಡಗೆ ಕೀ ಕೊಟ್ಟು ಜಗಳ ಮಾಡ್ತಾನೇ ಗಿಲ್ಲಿ.

ಇದನ್ನೂ ಓದಿ:ಗಿಲ್ಲಿಗೂ? ಅಶ್ವಿನಿಗೂ? ಪದೇ ಪದೇ ಪೈಟು.. ಏನೀ ರಹಸ್ಯ? ಏನ್ ಜೋಡಿ ಗುರೂ..!

Gilli Nata (17)

ಇದು ಬೇಡವಾಗಿತ್ತು ಅಂತಿದ್ದಾರೆ ಬಿಗ್‌ಬಾಸ್‌ ಪ್ರೇಮಿಗಳು ಅಷ್ಟೇ ಅಲ್ಲ, ಗಿಲ್ಲಿ ಫ್ಯಾನ್ಸ್‌ ಸಹ ಇದೆಲ್ಲ ಬೇಡವಾಗಿತ್ತು ಅಂತಿದ್ದಾರೆ. ಯಾಕಂದ್ರೆ ಸುಮ್ಮನೆ ಇರೋ ಅಶ್ವಿನಿ ಗೌಡ ಅನ್ನ ಗಿಲ್ಲಿ ರೇಗಿಸ್ತಾನೆ ಇದ್ದಾರೆ. ಅಶ್ವಿನಿ ಜಗಳಕ್ಕೆ ಬರುವಂತೆ ಮಾಡ್ತಿದ್ದಾರೆ. ಇದನ್ನ ನೋಡ್ತಾ ಇದ್ರೆ ಕ್ಲೈಮ್ಯಾಕ್ಸ್‌ನಲ್ಲಿಯೂ ಗಿಲ್ಲಿ ಅಶ್ವಿನಿಯನ್ನ ಟಾರ್ಗೆಟ್‌ ಮಾಡಿದ್ದಾರೆ ಅನ್ನೋದು ಹಂಡ್ರೆಡ್‌ ಪರ್ಸೆಂಟ್‌ ಗ್ಯಾರಂಟಿ. ಇದುವೇ ಗಿಲ್ಲಿಗೆ ಉಲ್ಟಾ ಹೊಡೆಯುತ್ತಿದೆ ಅಂತಿದ್ದಾರೆ ಜನ. ಗಿಲ್ಲಿ ಕಂಟೆಂಟ್‌ ಆಗಿ ಹಾಗೇ ಮಾಡ್ತಿದ್ದಾರೆ. ಗಿಲ್ಲಿ ಹಾಗೆ ಮಾಡಿಲ್ಲ ಅಂದ್ರೆ ಬಿಗ್‌ ಬಾಸ್‌ ಮನೆ ಸಪ್ಪೆಯಾಗಿರುತ್ತೆ ಅನ್ನೋ ಅಭಿಮಾನಿಗಳಿದ್ದಾರೆ. 

ಬಕೆಟ್‌ಗೆ ನೀರು ತುಂಬಿಸೋ ಸ್ಪರ್ಧೆ

ಬಿಗ್‌ಬಾಸ್‌ ವಾರ ವಾರ ಹೊಸ ಹೊಸ ಟಾಸ್ಕ್‌ಗಳನ್ನ ಕೊಡ್ತಾನೇ ಇರ್ತಾರೆ. ಎಲ್ಲಾ ಟಾಸ್ಕ್‌ಗಳಲ್ಲಿ ಗೆಲ್ಲುತ್ತಾ? ಫೈನಲ್‌ಗೆ ಹೋಗಿ ಅಲ್ಲಿಯೂ ಗೆದ್ದವ್ರು ಮನೆಯ ಕ್ಯಾಪ್ಟನ್‌ ಆಗಿ ಒಂದು ವಾರ ಇರ್ತಾರೆ.  ಗಿಲ್ಲಿ ಕ್ಯಾಪ್ಟನ್‌ ಆದ್ಮೇಲೆ ಬುಕೆಟ್‌ಗೆ ನೀರು ತುಂಬಿಸೋ ಟಾಸ್ಕ್‌ ನೀಡಲಾಗಿರುತ್ತೆ. ಅದರ ಉಸ್ತುವಾರಿ ರಾಜಾ ಗಿಲ್ಲಿ ಮತ್ತು ರಾಣಿ ಅಶ್ವಿನಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಆಟದಿಂದ ಕಾವ್ಯಾಳನ್ನ ಹೊರಗಿಡೋದಾ? ಸ್ಪಂದಲಾಳನ್ನ ಹೊರಗಿಡೋದಾ? ಅನ್ನೋದನ್ನ ಜಡ್ಜ್‌ ಮಾಡೋದಕ್ಕೆ ಯಾರ ಬಕೆಟ್‌ನಲ್ಲಿ ನೀರು ಜಾಸ್ತಿ ಇದೆ ಅನ್ನೋದನ್ನ ನೋಡಿ ನಿರ್ಧಾರ ಮಾಡ್ಬೇಕಾಗುತ್ತೆ. ಅದು ಹೇಗೆ ನೋಡಿದ್ರೂ ಸ್ಪಂದನಾ ಬಕೆಟ್‌ನಲ್ಲಿ ನೀರು ಜಾಸ್ತಿ ಇರೋದು ಕಾಣಿಸುತ್ತೆ. ಅನೌನ್ಸ್‌ ಮಾಡುವಾಗ ಗಿಲ್ಲಿ ಮಾಡೋ ಸರ್ಕಸ್‌ ನಗೆ ತರಿಸಿತ್ತು. ಹಾಗೇ ಕೆಲವರ ಕೆಂಗಣಿಗೂ ಗುರಿಯಾಗಿತ್ತು.

ಇದನ್ನೂ ಓದಿ: ಶಾಲೆಯಲ್ಲಿ ಸೈಲೆಂಟು.. ಈಗ ವೈಲೆಂಟು.. ‘ಗಿಲ್ಲಿ’ ಗಲ್ಲಿ ಜರ್ನಿ ಹೇಳಿದ ಸ್ಕೂಲ್​ ಮೆಸ್ಟ್ರು..!

Gilli Nata (18)

ಇದು ಗಿಲ್ಲಿಗೆ ಮೈನಸ್‌ ಮಾಡಿದಂತೆ ಕಾಣಿಸ್ತಿದೆ. ಗೆಲ್ಲಿ ಓಟಕ್ಕೆ ಬ್ರೇಕ್‌ ಹಾಕಿಸಿದಂತೆ ಕಾಣಿಸ್ತಿದೆ. ಯಾಕಂದ್ರೆ ಸಡನ್‌ ಆಗಿ ನಿರ್ಧಾರ ಕೈಗೊಳ್ಳಬಹುದಾಗಿತ್ತು. ಕಾವ್ಯಾಳಿಗಾಗಿ ಅಷ್ಟೊಂದು ಲೇಟ್‌ ಮಾಡಿದ್ದಾನೆ ಅನ್ನೋದನ್ನ ವೀಕ್ಷಕರು ಆರೋಪಿಸ್ತಿದ್ದಾರೆ. ಅಂತಿಮವಾಗಿ ಸ್ಪಂದನಾ ಮುಂದಿನ ಸುತ್ತಿಗೆ ತೇರ್ಗಡೆಯಾಗಿದ್ದಾಳೆ ಅನ್ನೋದನ್ನ ಗಿಲ್ಲಿ ಅನೌನ್ಸ್‌ ಮಾಡ್ತಾರೆ.

ಅಂತಿಮವಾಗಿ ಕಾವ್ಯಾಳನ್ನ ಗಿಲ್ಲಿ ಹೊರಗಿಡ್ತಾನೆ ಅನ್ನೋದ್‌ ನಿಜ. ವೀಕ್ಷಕರು ಮಾತ್ರ ಗಿಲ್ಲಿ ಮೀನಮೇಷ ಏಣಿಸಿದ್ದು ಸರಿಯಲ್ಲ ಅಂತಿದ್ದಾರೆ. ಇಲ್ಲಿ ಇನ್ನೊಂದು ರೀತಿಯಲ್ಲಿ ವಾದ ಮಾಡೋ ಗಿಲ್ಲಿ ಅಭಿಮಾನಿಗಳು ಇದ್ದಾರೆ. ಅದೇನು ಅಂದ್ರೆ ಸ್ಪಂದನಾ ಗೆಲುವು ಅಂತ ಅಶ್ವಿನಿ ಗೌಡ ಅಲ್‌ರೆಡಿ ಹೇಳಿ ಬಿಟ್ಟಿದ್ರು. ಹೀಗಾಗಿ ಅಶ್ವಿನಿ ಮಾತನ್ನ ಅಷ್ಟು ಬೇಗ ಕೇಳ್ಬಾರದು ಅನ್ನೋ ಹಿನ್ನೆಲೆಯಲ್ಲಿ ಗಿಲ್ಲಿ ಸ್ವಲ್ಪ ಸಮಯ ಮುಂದೂಡಿಕೆ ಮಾಡಿದ್ದಾನೆ ಅಂತಿದ್ದಾರೆ. ಗಿಲ್ಲಿ ಹಾಗೇ ಮಾಡಿದ್ದು ಕಂಟೆಂಟ್‌ಗಾಗಿ ಅನ್ನೋ ಮಾತುಗಳು ಕೇಳಿಬರ್ತಾ ಇವೆ. ಒಟ್ಟಾರೆಯಾಗಿ ನೋಡಿದಾಗ ಇದು ಗಿಲ್ಲಿಗೆ ಮೈನಸ್‌ ಆಗಿದೆ ಅನ್ನೋ ವಿಚಾರವೇ ಹೈಲೈಟ್‌ ಆಗಿ ಕಾಣಿಸ್ತಿದೆ.

ಇದನ್ನೂ ಓದಿ:ಗಿಲ್ಲಿ ಹುಟ್ಟೂರಿಗೆ ಕೀರ್ತಿ ಕಳಶ.. ಗಿಲ್ಲಿ ಬಗ್ಗೆ ತಿಳಿಯದ ರಹಸ್ಯಗಳು ರಿವಿಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Ashwini Gowda Bigg Boss Gilli Nata Bigg boss Ashwini Gowda
Advertisment