/newsfirstlive-kannada/media/media_files/2026/01/04/bigg-boss-kannada-2-2026-01-04-17-45-30.jpg)
ಬಿಗ್‌ಬಾಸ್ ಶೋದಲ್ಲಿ ಆಟ ಆಡಿದ್ರೆ ಟ್ರೋಫಿ ಸಿಗೋದಿಲ್ಲ. ಜಗಳ ಆಡಿದ್ರೆ ಕಿರೀಟ ಸಿಗೋದಿಲ್ಲ. ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ವಿಜಯ ಒಲಿಯುವುದಿಲ್ಲ. ಹಾಗಾದ್ರೆ ಏನ್ ಮಾಡ್ಬೇಕು? ಜನರ ಹೃದಯ ಗೆಲ್ಬೇಕು. ಆ ಕೆಲ್ಸ ಆಗ್ಬೇಕು ಅಂದ್ರೆ ವ್ಯಕ್ತಿತ್ವದ ಆಟ ಪ್ರದರ್ಶಿಸ್ಬೇಕು. ಆ ನಿಟ್ಟಿನಲ್ಲಿ ಈ ಬಾರಿಯ ವಿನ್ನಿಂಗ್ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಈ ಬಾರಿಯ ಬಿಗ್ ಬಾಸ್ ಸಖತ್ ಸದ್ದು ಮಾಡ್ತಿದೆ. ಕಾರಣ, ಶೋ ಹೋಸ್ಟ್ ಮಾಡ್ತಿರೋ ಕಿಚ್ಚ ಸುದೀಪ್ ಅವ್ರು ಸ್ಪರ್ಧಿಗಳಿಗೆ ವಾರ್ನಿಂಗ್ ನೀಡೋದು. ಖಡಕ್ ಸಂದೇಶ ರವಾನಿಸೋದು ಜನರಿಗೆ ಇಷ್ಟವಾಗಿ ಬಿಟ್ಟಿದೆ. ಹಾಗೇ ಹಾಸ್ಯ ಮಾಡೋ ಸಂದರ್ಭದಲ್ಲಿ ಸ್ಪರ್ಧಿಗಳಿಂದಲೇ ಹಾಸ್ಯ ತೆಗೆಸುತ್ತಾ ಇರೋರು ಜನರಿಗೆ ಅಚ್ಚುಮೆಚ್ಚು. ಇದರ ಜೊತೆ ಬಿಗ್‌ಬಾಸ್ ಮನೆಯೊಳಗೆ ಇರೋ ಕಂಟೆಸ್ಟೆಂಟ್‌ಗಳಿಂದಲೇ ಪಂಚ್ ಡೈಲಾಗ್‌ಗಳು ಬರ್ತಾ ಇವೆ. ಅವು ಸೋಷಿಯಲ್ ಮಾಡಿಯಾದಲ್ಲಿ ವೈರಲ್ ಆಗ್ತಿವೆ. ಹೀಗಾಗಿ ಈ ಬಾರಿಯ ಬಿಗ್‌ಬಾಸ್ ಇಲ್ಲಿಯವರೆಗಿನ ದಾಖಲೆಯನ್ನ ಮುರಿದು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಟಿಆರ್‌ಪಿಯಲ್ಲೂ ಇತಿಹಾಸ ಬರೆಯುತ್ತಿದೆ. ಈ ರಿಯಾಲಿಟಿ ಶೋ ಮುಗಿಯೋದಕ್ಕೆ ಇನ್ನೇನು ಮೂರು ವಾರ ಮಾತ್ರ ಬಾಕಿ ಇರೋದು. ಈಗಾಗಲೇ ವೀಕ್ ಕಂಟೆಸ್ಟೆಂಟ್‌ಗಳು ಮನೆಯಿಂದ ಹೊರಹೋಗಿದ್ದು ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳು ಮಾತ್ರ ಉಳ್ಕೊಂಡಿದ್ದಾರೆ. ಅವರಲ್ಲಿರೋ ಬಲ ಎಂಥಾದ್ದು? ವೀಕ್ ಪಾಯಿಂಟ್ ಏನು ಅನ್ನೋದ್ ಗೊತ್ತಾದ್ರೆ ಈ ಬಾರಿ ಬಿಗ್‌ಬಾಸ್ ಕಪ್ ಯಾರದ್ದು ಅನ್ನೋದು ಕನ್ಫರ್ಮ್ ಆಗಿ ಬಿಡುತ್ತೆ..
ಇದನ್ನೂ ಓದಿ: ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?
/filters:format(webp)/newsfirstlive-kannada/media/media_files/2025/10/30/ashwini-gowda-10-2025-10-30-13-00-39.jpg)
ಆ ಮೂವರ ಜೊತೆ ಇನ್ಯಾರು ಇದ್ದಾರೆ?
ಸ್ಪರ್ಧಿಗಳು ಅದೆಷ್ಟೇ ಇರ್ಲಿ. ಎಲ್ಲರಲ್ಲೂ ಗೆಲ್ಲೋ ಸಾಮರ್ಥ್ಯವೇ ಇರ್ಲಿ. ಆದ್ರೆ ಅಂತಿಮವಾಗಿ ಬಿಗ್‌ಬಾಸ್ ಕಪ್ ಎತ್ತಿ ಹಿಡಿಯೋದು ಒಬ್ಬರು ಮಾತ್ರ. ಬಿಗ್‌ಬಾಸ್ ಶೋದಲ್ಲಿ ಯಾರು ವ್ಯಕ್ತಿತ್ವದ ಆಟ ಪ್ರದರ್ಶಿಸುತ್ತಾರೋ? ಯಾರು ಜನರ ಮನಸ್ಸು ಗೆದ್ದಿರುತ್ತಾರೋ? ಅವರು ಕಪ್ ಗೆಲ್ಲೋದು ಗ್ಯಾರಂಟಿ. ಈ ಬಾರಿಯ ಸ್ಪರ್ಧಿಗಳಲ್ಲಿ ಟಾಪ್ 5 ಯಾರು ಅಂತ ನೋಡ್ತಾ ಹೋದ್ರೆ ಕಾಣಿಸೋದು. ಗಿಲ್ಲಿ, ಅಶ್ವಿನಿ ಗೌಡ, ರಕ್ಷಿತಾ, ಧನು ಮತ್ತು ರಘು. ಸದ್ಯ ಕ್ಲೈಮ್ಯಾಕ್ಸ್ ಹಂತದಲ್ಲಿರೋ ಬಿಗ್ ಬಾಸ್‌ನಲ್ಲಿ ಈ ಐವರು ಟಾಪ್ 5 ಆಗೋ ಸಾಧ್ಯತೆ ಕಾಣಿಸ್ತಿದೆ. ಹಾಗಂತ ಇದೇ ಫೈನಲ್ ಅಂತ ಅಲ್ಲ. ಇನ್ನೂ ಎರಡ್ಮೂರುವಾರದಲ್ಲಿ ಗೇಮ್ ಹೇಗೆ ಬೇಕಾದ್ರೂ ಟರ್ನ್ ತೆಗೆದುಕೊಳ್ಳಬಹುದು. ಸದ್ಯಕ್ಕೆ ಈ ಐವರು ಮಾತ್ರ ಮುಖ್ಯ ರೇಸ್‌ನಲ್ಲಿದ್ದಾರೆ ಅನ್ನೋ ಲೆಕ್ಕಾಚಾರವಿದೆ.
ಇದನ್ನೂ ಓದಿ:ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತಿದ್ದಾರಾ ಗಿಲ್ಲಿ..?
/filters:format(webp)/newsfirstlive-kannada/media/media_files/2025/11/22/ashwini-gowda-6-2025-11-22-09-55-39.jpg)
ದೊಡ್ಮನೆಯಲ್ಲಿ ಗೇಮ್ ಚೆನ್ನಾಗಿ ಆಡ್ತೀನಿ ಅನ್ನೋ ಮಾತ್ರಕ್ಕೆ ಟ್ರೋಫಿ ಗೆಲ್ಲೋದು ಪಕ್ಕಾ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಹಾಗೆಯೇ ಬಿಗ್‌ಬಾಸ್ ಟಾಸ್ಕ್‌ಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸ್ತೀನಿ ಅನ್ನೋ ಮಾತ್ರಕ್ಕೆ ಗಿರೀಟ ಸಿಗುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಹಾಸ್ಯ ಮಾಡ್ತೀನಿ, ಜನರಿಗೆ ಮನರಂಜನೆ ನೀಡ್ತೀನಿ ಅಂದ ಮಾತ್ರಕ್ಕೆ ಕಪ್ ತನ್ನದೇ ಅನ್ನೋ ಹಾಗೂ ಇಲ್ಲ. ಪ್ರತಿ ದಿನ ಕಂಟೆಂಟ್ ಕೊಡ್ತೀನಿ ಅಂತ ತಾನೇ ಬಿಗ್‌ಬಾಸ್ ಅಂತ ಅಂದುಕೊಳ್ಳುವ ಹಾಗೂ ಇಲ್ಲ. ಗೆಲ್ಲೋದಕ್ಕೆ ಇದೆಲ್ಲವೂ ಮ್ಯಾಟರ್ ಆಗುತ್ತೆ. ಅದನ್ನ ಮರೆಯೋ ಹಾಗೇ ಇಲ್ಲವೇ ಇಲ್ಲ.
ಗಿಲ್ಲಿ ನಟ
ಈ ಬಾರಿಯ ಬಿಗ್‌ಬಾಸ್ ಶುರುವಾಗಿದ್ದ ಫಸ್ಟ್ ವೀಕ್‌ನಲ್ಲಿಯೇ ವೀಕ್ಷಕರಿಗೆ ಅರ್ಥವಾಗಿದ್ದು ಏನು ಅಂದ್ರೆ ಗಿಲ್ಲಿ ನಟ ಫೈನಲ್ ಹೋಗೋದು ಗ್ಯಾರಂಟಿ ಅಂತ. ಹಾಗೇ ವಾರ ಕಳೀತಾ ಹೋದಂತೆ ಗಿಲ್ಲಿ ಹವಾ ಜೋರಾಯ್ತು. ಆತನ ಹಾಸ್ಯದ ಟೈಮಿಂಗ್‌ಗೆ, ಎದುರಾಳಿಗಳಿಗೆ ಕೊಡ್ತಾ ಇದ್ದ ಕೌಂಟರ್‌ಗೆ, ಗೇಮ್ ಚೇಂಜರ್ ಆಗಿ ಕಾಣಿಸ್ಕೊಂಡಿರೋ ರೀತಿಗೆ, ಪಂಚ್ ಡೈಲಾಗ್‌ಗಳಿಗೆ ಜನ ಫಿದಾ ಆಗಿ ಹೋಗಿದ್ರು. ಹೀಗಾಗಿ ಈ ಬಾರಿ ಗಿಲ್ಲಿ ಟಾಪ್ 5 ರೇಸ್‌ನಲ್ಲಿದ್ದಾರೆ ಅಂತ ಹೇಳಲಾಗ್ತಿದೆ. ಕ್ಲೈಮ್ಯಾಕ್ಸ್ ಸಂದರ್ಭದಲ್ಲಿ ಗಿಲ್ಲಿಗೆ ಇರೋ ಸಾಮರ್ಥ್ಯ ಏನು? ದೌಬರ್ಲ್ಯದತ್ತ ದೃಷ್ಟಿ ನೆಟ್ಟರೆ ಗಿಲ್ಲಿ ಅಭಿಮಾನಿಗಳಿಗೆ ಶಾಕ್ ಆದ್ರೂ ಅಚ್ಚರಿಯಿಲ್ಲ.
ಇದನ್ನೂ ಓದಿ: ಬರೀ ಜಗಳ ಒಂದೇ ಅಲ್ಲ.. ಗಿಲ್ಲಿ, ಅಶ್ವಿನಿ ಜೋಡಿ ವೀಕ್ಷಕರ ಹೃದಯ ಗೆದ್ದಿದ್ದು ಹೇಗೆ..?
/filters:format(webp)/newsfirstlive-kannada/media/media_files/2025/12/28/gilli-nata-12-2025-12-28-14-30-09.jpg)
ಪ್ಲಸ್ ಏನು? ಮೈನಸ್ ಎಂಥಾದ್ದು?
ಗಿಲ್ಲಿ ಗೇಮ್ ಮಾಸ್ಟರ್ ಅನ್ನೋದಕ್ಕೆ ಇದೊಂದು ಸೀನ್ ಸಾಕು. ತನ್ನನ್ನ ಯಾರು ಯಾರು ನಾಮಿನೇಟ್‌ಗೆ ಸೂಚಿಸಿದ್ದಾರೆ ಅಂತ ಬಿಗ್‌ಬಾಸ್ ಕೇಳಿದಾಗ ರಾಶಿಕಾ ಹೇಳಿದ್ದ ಮೊದಲು ಹೆಸ್ರು ಗಿಲ್ಲಿಯದ್ದು. 6 ಮಂದಿಯಲ್ಲಿ ಗಿಲ್ಲಿ ಹೆಸ್ರನ್ನ ಮಾತ್ರ ತಪ್ಪು ಹೇಳಿದ್ದಕ್ಕೆ ರಾಶಿಗೆ ನಾಮಿನೇಟ್‌ನಿಂತ ಪಾರಾಗೋದಕ್ಕೆ ಸಾಧ್ಯವಾಗಿಲ್ಲ. ವಿಶೇಷ ಅಂದ್ರೆ ಆ ಸಂದರ್ಭದಲ್ಲಿ ವರ್ಕ್ ಆಗಿದ್ದು ಗಿಲ್ಲಿಯ ಚತುರತೆ. ರಾಶಿಗೂ? ತನಗೂ? ಬಿಗ್‌ಮನೆಯಲ್ಲಿ ವೈರತ್ವ ಇದೆ. ಹೀಗಾಗಿ ರಾಶಿಕಾ ತನ್ನ ಹೆಸರನ್ನ ಗೊತ್ತು ಮಾಡೋದು ಪಕ್ಕಾ ಅಂತ ನಿರ್ಧರಿಸಿದ ಗಿಲ್ಲಿ ಆಕೆಯ ಹೆಸರನ್ನ ನಾಮಿನೇಟ್‌ಗೆ ಸೂಚನೆ ಕೊಡುವುದಿಲ್ಲ. ಇದೊಂದು ಗಿಲ್ಲಿ ಹೇಗ್ ಆಡ್ತಿದ್ದಾನೆ ಅನ್ನೋದಕ್ಕೆ ಎಕ್ಸಾಂಪಲ್ ಅಷ್ಟೇ. ಹಾಗೇ ಆತನ ಹಾಸ್ಯ, ಪಂಚ್ ಡೈಲಾಗ್, ಕಾವ್ಯ ಜೊತೆ ಬಾಂಡಿಂಗ್ ಅದೆಲ್ಲವೂ ಗಿಲ್ಲಿಗೆ ಪ್ಲಸ್ ಆಗ್ತಿದೆ.
ಬಿಗ್‌ಬಾಸ್ ವೀಕ್ಷಕರಿಗೆ ಇಷ್ಟವಾಗೋ ಗಿಲ್ಲಿ ಕೆಲವೊಮ್ಮೆ ಅತೀರೇಕ ಮಾಡಿ ಬಿಡ್ತಾರೆ. ಅದು ಕೆಲವೊಮ್ಮೆ ವೀಕ್ಷಕರಿಗೂ ಬೇಸರ ತರಿಸುವಂತಿರುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಅಶ್ವಿನಿ ಗೌಡ ಅನ್ನ ಟಾರ್ಗೆಟ್ ಮಾಡೋದು. ಅತೀರೇಕದ ಮಾತಾಡೋದು ಬೇಕಾಗಿಯೇ ಇರಲಿಲ್ಲ ಅಂತಾರೆ ವೀಕ್ಷಕರು. ಹಾಗೇ ಗೇಮ್‌ಗಳನ್ನ ಸೀರಿಯೆಸ್ ಆಗಿ ತೆಗೆದ್ಕೊಂದು ಆಟ ಆಡೋದಿಲ್ಲ. ಅಲ್ಲಿಯೂ ಹಾಸ್ಯ ಮಾಡೋದಕ್ಕೆ ಹೋಗಿ ಸೋಲ್ತಿದ್ದಾರೆ ಅಂತನೂ ಬಿಗ್‌ಬಾಸ್ ವೀಕ್ಷಕರು ಹೇಳ್ತಿದ್ದಾರೆ. ಹೀಗಾಗಿ ಇದೆಲ್ಲವೂ ಗಿಲ್ಲಿಗೆ ಮೈನಸ್ ಪಾಯಿಂಟ್ ಆಗಿ ಕಾಣಿಸ್ಕೊಳ್ತಿದೆ.
ಇದನ್ನೂ ಓದಿ: ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!
/filters:format(webp)/newsfirstlive-kannada/media/media_files/2026/01/03/gilli-and-ashwini-2026-01-03-19-44-29.jpg)
ಅಶ್ವಿನಿ ಗೌಡ
ಈ ಬಾರಿಯ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಗಿಲ್ಲಿ ಬಿಟ್ರೆ ಇನ್ನೊಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಯಾರು ಅಂತ ಕೇಳಿದ್ರೆ ಕೇಳಿಬರ್ತಾ ಇದ್ದ ಹೆಸ್ರು ಅಶ್ವಿನಿ ಗೌಡ. ಯೆಸ್, ತನ್ನದೇ ಆದ ವಿಭಿನ್ನ ಶೈಲಿಯ ಆಟದಿಂದ ಅಶ್ವಿನಿ ಗೌಡ ಗುರ್ತಿಸಿಕೊಂಡಿದ್ದಾರೆ. ಜಗಳ ಶುರುವಾಯ್ತು ಅಂದ್ರೆ ತಮ್ಮದೇ ಆದ ಗತ್ತು ತೋರಿಸ್ತಾರೆ. ಅದು ಕೆಲವರಿಗೆ ಇಷ್ಟ ಆದ್ರೆ, ಇನ್ನು ಕೆಲವರಿಗೆ ಇಷ್ಟ ಆಗದೇ ಇರಬಹುದು. ಆದ್ರೆ, ಕಪ್ ಗೆಲ್ಲೋ ರೇಸ್‌ನಲ್ಲಿ ಅಶ್ವಿನಿ ಗೌಡ ಸಹ ಇರೋದು ಪಕ್ಕಾ.
ಅಶ್ವಿನಿಗೆ ಇರೋ ಪ್ಲಸ್ ಏನು? ಮೈನಸ್ ಎಂಥಾದ್ದು?
ಅಸ್ವಿನಿ ಗೌಡಗೆ ಇರೋ ಪ್ಲಸ್ ಏನು ಅಂದ್ರೆ ಬಿಗ್‌ಬಾಸ್ ಕೊಡೋ ಟಾಸ್ಕ್‌ಗಳನ್ನ ಸೀರಿಯಸ್ ಆಗಿ ತೆಗೆದ್ಕೊಂಡ್ ಚೆನ್ನಾಗಿ ಆಡ್ತಾರೆ. ಕೊಟ್ಟ ಜವಾಬ್ದಾರಿಯನ್ನ ಸರಿಯಾಗಿ ನಿಭಾಯಿಸ್ತಾರೆ. ಗೇಮ್‌ನಲ್ಲಿ ಗೆದ್ದಾಗ ಬಹುತೇಕ ವೇಳೆ ಬೇರೆ ಸ್ಪರ್ಧಿಗಳು ನಾಮಿನೇಟ್‌ನಿಂದ ಪಾರಾಗೋದಕ್ಕೆ ಅವಕಾಶ ನೀಡಿದ್ದಾರೆ. ಅದು ಈಗಲೂ ಅಶ್ವಿನಿಗೆ ಪ್ಲಸ್ ಆಗಿ ಕಾಣಿಸ್ಕೊಳ್ತಾ ಇದೆ. ಇನ್ನೊಂದು ಅಂದ್ರೆ ಧೈರ್ಯ ಅಂದ್ರೆ ಅಶ್ವಿನಿ.. ಅಶ್ವಿನಿ ಅಂದ್ರೆ ಧೈರ್ಯ ಅನ್ನೋ ರೀತಿಯಲ್ಲಿ ಶೋದಲ್ಲಿ ಕಾಣಿಸ್ಕೊಳ್ತಾ ಇರೋದು ವೀಕ್ಷಕರಿಗೆ ಇಷ್ಟ ಆಗ್ತಾ ಇರ್ಬಹುದು.
ಅಶ್ವಿನಿ ಗೌಡಗೆ ಇರೋ ಮೈನಸ್ ಪಾಯಿಂಟ್ ಏನು ಅಂದ್ರೆ ಯಾರಾದ್ರೂ ಕೀ ಕೊಟ್ಟರೆ ಸಾಕು ದಿಢೀರ್ ಅಂತ ಜಗಳಕ್ಕೆ ಹೋಗಿ ಬಿಡ್ತಾರೆ. ಆ ಸಂದರ್ಭದಲ್ಲಿ ಕೆಲವು ಬೇಡದ ಪದಗಳನ್ನ ಬಳಕೆ ಮಾಡಿ ಬಿಡ್ತಾರೆ. ಆ ಮೇಲೆ ತಮ್ಗೆ ಹೇಗೆ ಬೇಕೋ ಹಾಗೇ ತಿರುಚುವ ಕೆಲ್ಸವನ್ನು ಮಾಡ್ತಾರೆ ಅನ್ನೋ ಆರೋಪ ವೀಕ್ಷಕರಿಂದ ಕೇಳಿಬರ್ತಾ ಇದೆ. ಏನೇ ಆದ್ರೂ ಅಶ್ವಿನಿ ಗೌಡ ಟಾಪ್ 5 ರಲ್ಲಿ ಇರ್ತಾರೆ ಅನ್ನೋದು ಅವರ ಅಭಿಮಾನಿಗಳಲ್ಲಿ ಅಚಲವಾದ ವಿಶ್ವಾಸವಿದೆ.
ಇದನ್ನೂ ಓದಿ: ಗಿಲ್ಲಿಗೂ? ಅಶ್ವಿನಿಗೂ? ಪದೇ ಪದೇ ಪೈಟು.. ಏನೀ ರಹಸ್ಯ? ಏನ್ ಜೋಡಿ ಗುರೂ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us