/newsfirstlive-kannada/media/media_files/2025/11/10/gilli-dhruvant-1-2025-11-10-15-58-22.jpg)
ಫಿನಾಲೆ ಹತ್ರ ಹತ್ರ ಬಂದ್ರು ಮನೆಯಲ್ಲಿನ ಗಲಾಟೆ ಯಾಕೋ ಕಡಿಮೆಯಾಗೋ ಲಕ್ಷಣಗಳೇ ಇಲ್ಲ. ಕಳೆದ ವಾರದಿಂದ ಅಶ್ವಿನಿ-ಧ್ರುವಂತ್ ವರ್ಸಸ್ ಅದರ್ಸ್ ಥರಾ ಆಗ್ಬಿಟ್ಟಿದೆ. ಅದರಲ್ಲೂ ಗಿಲ್ಲಿ, ಅಶ್ವಿನಿ ಮತ್ತು ಧ್ರುವಂತ್‌ನ ಹಿಯಾಳಿಸಿಬಿಟ್ಟಿದ್ದಾನೆ. ಕ್ಯಾಪ್ಟನ್ಸಿ ವಿಚಾರಕ್ಕಂತೂ ಕೇಳ್ಲೇಬೇಡಿ. ಟಾಪ್ -6 ಟಾಸ್ಕ್‌ನಲ್ಲಿ ಗಿಲ್ಲಿ ವರ್ಸಸ್ ಧ್ರುವಂತ್ ಗೇಮ್ ಇತ್ತು. ಆ ಗೇಮ್‌ನಲ್ಲಿ ಧ್ರುವಂತ್ ಗೆದ್ದಿದ್ದಾರೆ.
ವಾರಪೂರ್ತಿ ಕುಳಿತುಕೊಳ್ಳಬೇಕು ಅನ್ನೋದಕ್ಕಿಂತ ಧ್ರುವಂತ್ ಜೊತೆ ಸೋತ್ರೆ ಹೇಂಗಪ್ಪಾ! ಅಶ್ವಿನಿ ಮತ್ತು ಧ್ರುವಂತ್ ನನ್ನನ್ನ ರೇಗಿಸಿಬಿಡ್ತಾರೆ ಅನ್ನೋ ಭಯವೂ ಗಿಲ್ಲಿಯ ಮುಖದಲ್ಲಿತ್ತು. ಅದು ಸಹಜ ಯಾಕಂದ್ರೆ ಆ ಗೇಮ್ ಶುರು ಮಾಡಿದ್ದೇ ಗಿಲ್ಲಿ. ಕ್ಯಾಪ್ಟನ್ ಆಗಿಲ್ಲ.. ಕ್ಯಾಪ್ಟನ್ ಆಗಿಲ್ಲ ಅಂತಾನೇ ರೇಗಿಸಿ ರೇಗಿಸಿ ಈ ಸ್ಥಿತಿಗೆ ಬಂದಿರೋದು.
/filters:format(webp)/newsfirstlive-kannada/media/media_files/2026/01/06/gilli-nata-20-2026-01-06-12-36-45.jpg)
ಅದ್ಯಾಕೋ ಏನೋ.. ಗಿಲ್ಲಿ ಕೊನೆಗೂ ಈ ಗೇಮ್‌ನಲ್ಲಿ ಸೋತು ಬಿಟ್ಟ. ಧ್ರುವಂತ್ ಮುಂದೆ ಗಿಲ್ಲಿಯ ಆಟ ನಡೆಯಲೇ ಇಲ್ಲ. ಈ ಆಟದ ಫಲಿತಾಂಶ ಕೇವಲ ಗಿಲ್ಲಿಯ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಎಂಟೈರ್ ಟೀಮ್ ಮೇಲೆ ಎಫೆಕ್ಟ್ ಆಗಿದೆ ಅಂದ್ರೆ ತಪ್ಪಾಗೋಲ್ಲ. ಗಿಲ್ಲಿ ಆಟದ ವೇಳೆ ಪುಶ್ ಮಾಡ್ತಿದ್ದ ಕಾವ್ಯಾ ಮುಖ ಕೂಡ ಗೇಮ್ ಆದ್ಮೇಲೆ ನೋಡೋಕೆ ಆಗ್ಲಿಲ್ಲ. ಧ್ರುವಂತ್ ಅಂಡ್ ಅಶ್ವಿನಿ, ಗಿಲ್ಲಿನಾ ಸರಿಯಾಗಿ ಕಾಡಿಸುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಯಾಕೋ ಅವರಿಬ್ಬರು ಆ ರೀತಿ ಮಾಡ್ಲಿಲ್ಲ. ಹಾಗಂತ, ಮುಂದೆ ಮಾಡಲ್ಲ ಅಂತಾ ಅಲ್ಲ. ಪಕ್ಕಾ ಈ ವಿಚಾರವನ್ನ ಧ್ರುವಂತ್ ಅಂಡ್ ಅಶ್ವಿನಿ ಸಮಯ ಬಂದಾಗ ಪಕ್ಕಾ ತೀರಿಸಿಕೊಳ್ತಾರೆ. ಆಗ ಗಿಲ್ಲಿ ಯಾವ ರೀತಿ ಕೌಂಟರ್ ಕೊಡ್ತಾನೆ ಅಂತಾ ನೋಡ್ಬೇಕು.
ಟಾಪ್ 6 ಸ್ಪರ್ಧೆಯಲ್ಲಂತೂ ಪ್ರತಿಯೊಬ್ಬರು ಸೀರಿಯಸ್ ಆಗಿದ್ದಾರೆ. ಯಾರು ಸ್ಮಾರ್ಟ್ ಆಗಿ ಆಡ್ತಾರೋ ಅವ್ರು ಮಾತ್ರ ಗೆಲ್ತಾರೆ ಅನ್ನೋದಂತೂ ಸ್ಪಷ್ಟ. ಆ ಮೇಲೆ ಊಹಿಸೋಕು ಅಸಾಧ್ಯವಾದ ಸನ್ನಿವೇಶಗಳು ಈಗಾಗ್ಲೇ ಕ್ರಿಯೇಟ್ ಆಗಿವೆ. ಇದು ಸ್ಪರ್ಧಿಗಳನ್ನ ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ:ಗಿಲ್ಲಿ ಬಿಗ್​ ಗೇಮ್​ನಲ್ಲಿ ಪರಕಾಯ ಪ್ರವೇಶ.. ಆಟದ ರಹಸ್ಯ ಬಿಟ್ಟುಕೊಟ್ಟ ಗಿಲ್ಲಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us