/newsfirstlive-kannada/media/media_files/2025/08/11/rajat-patidar-2025-08-11-18-42-24.jpg)
ರಜತ್ ಪಾಟೀದಾರ್, ಆರ್ಸಿಬಿ ಕ್ಯಾಪ್ಟನ್ Photograph: (ಆರ್ಸಿಬಿ ಟ್ವಿಟರ್)
ಐಪಿಎಲ್ ಸೀಸನ್-19ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಸೆಟ್ ಬ್ಯಾಕ್​ ಆಗಿದೆ. ತಂಡದ ನಾಲ್ವರು ಪ್ರಮುಖ ಆಟಗಾರರು, ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಸೂಪರ್​ಸ್ಟಾರ್ ಆಟಗಾರರು ಐಪಿಎಲ್ ವೇಳೆಗೆ ಫಿಟ್ ಆಗೋ ವಿಶ್ವಾಸದಲ್ಲಿದ್ದಾರೆ.
ಡಿಫೆಂಡಿಂಗ್ ಚಾಂಪಿಯನ್ಸ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಐಪಿಎಲ್ ಸೀಸನ್-19, ಶುರುವಾಗೋದಕ್ಕೂ ಮುನ್ನ ಆರ್​ಸಿಬಿ ತಂಡದ ನಾಲ್ವರು ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಆ ಮೂಲಕ ಮೆಗಾ ಟೂರ್ನಿ ಹತ್ತಿರವಾಗುತ್ತಿರುವಾಗಲೇ ಟೀಮ್ ಮ್ಯಾನೇಜ್ಮೆಂಟ್ ಮತ್ತು ಫ್ರಾಂಚೈಸಿ ಮಾಲೀಕರು ತಲೆಕೆಡಿಸಿಕೊಂಡಿದ್ದಾರೆ.
ನಾಲ್ಕು ಮಂದಿ ಇಂಜುರಿ
ಆರ್​ಸಿಬಿ ಕೋಚ್ ಌಂಡಿ ಫ್ಲವರ್ ಮತ್ತು ಸಪೋರ್ಟಿಂಗ್ ಸ್ಟಾಫ್ ಚಿಂತೆಗೀಡಾಗಲು ಇದೇ ಕಾರಣ. ತಂಡದ ನಾಯಕ ರಜತ್ ಪಟಿದಾರ್, ಪವರ್ ಹಿಟ್ಟರ್ ಟಿಮ್ ಡೇವಿಡ್, ಡಿಸ್ಟ್ರಕ್ಟೀವ್ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್​ ಮತ್ತು ಅನುಭವಿ ವೇಗಿ ಜೋಷ್ ಹೇಝಲ್​ವುಡ್ ಗಾಯಗೊಂಡಿರೋ ಪ್ರಮುಖ ಆಟಗಾರರಾಗಿದ್ದಾರೆ. ನಾಲ್ವರು ಆಟಗಾರರ ಇಂಜುರಿ, ಆರ್​ಸಿಬಿ ಮ್ಯಾನೇಜ್ಮೆಂಟ್ ಬ್ಲೆಡ್ ಪೆಷರ್ ಹೆಚ್ಚಿಸಿದೆ.
ಆಸ್ಟ್ರೇಲಿಯಾ ತಂಡದ ಪವರ್​ಹಿಟ್ಟರ್ ಟಿಮ್ ಡೇವಿಡ್, ಬಿಗ್​ಬ್ಯಾಷ್ ಟಿ-20 ಲೀಗ್ ವೇಳೆ ಗಾಯಗೊಂಡಿದ್ದಾರೆ. ಸದ್ಯ ಗ್ರೇಡ್-2 ಹ್ಯಾಮ್​ಸ್ಟ್ರಿಂಗ್ ಇಂಜುರಿಗೆ ತುತ್ತಾಗಿರುವ ಟಿಮ್ ಡೇವಿಡ್, ಸಂಪೂರ್ಣ ಚೇತರಿಸಿಕೊಳ್ಳಲು 8 ರಿಂದ 10 ವಾರಗಳ ಅವಶ್ಯಕತೆ ಇದೆ. ಹಾಗಾಗಿ ಟಿಮ್, ಐಪಿಎಲ್​ ಆರಂಭಿಕ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳೋ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಸಿಸಿಐನಲ್ಲಿ ಭಾರೀ ಬೆಳವಣಿಗೆ.. ಗಂಭೀರ್ ತಲೆದಂಡಕ್ಕೆ ಮುಹೂರ್ತ ಫಿಕ್ಸ್..!
/filters:format(webp)/newsfirstlive-kannada/media/post_attachments/wp-content/uploads/2025/04/SALT_RCB.jpg)
ಸಾಲ್ಟ್​​ಗೆ ಬ್ಯಾಕ್ ಇಂಜುರಿ
ಇಂಗ್ಲೆಂಡ್​​ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಫಿಲ್ ಸಾಲ್ಟ್, ಇಂಟರ್​ನ್ಯಾಷನಲ್ ಲೀಗ್ ಟಿ-ಟ್ವೆಂಟಿ ಟೂರ್ನಿಯ ವೇಳೆ ಗಾಯಗೊಂಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯನ್ನ ಎದುರಿಸುತ್ತಿರುವ ಸಾಲ್ಟ್, ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮತ್ತೊಂದೆಡೆ ಸಾಲ್ಟ್​ ಆದಷ್ಟು ಬೇಗ ಇಂಜುರಿಯಿಂದ ರಿಕವರಿ ಆಗದೇ ಇದ್ರೆ, ಟಿ-ಟ್ವೆಂಟಿ ವಿಶ್ವಕಪ್ ಮತ್ತು ಐಪಿಎಲ್ ಪ್ರಿಪರೇಷನ್ಸ್​ಗೆ ಹಿನ್ನಡೆ ಉಂಟಾಗಲಿದೆ.
ಹೇಜಲ್​ವುಡ್​​ ಇಂಜುರಿ
ಆಸಿಸ್​​​ನ ಅನುಭವಿ ವೇಗಿ ಜೋಷ್ ಹೇಜಲ್​ವುಡ್ ಗಾಯದ ಸುಳಿಯಲ್ಲಿ ಸಿಲುಕಿದ್ದಾರೆ. ಹೇಜಲ್​ವುಡ್​​ ಹ್ಯಾಮ್​ಸ್ಟ್ರಿಂಗ್ ಇಂಜುರಿ, ಬ್ಯಾಕ್ ಇಂಜುರಿಯಿಂದ ಬಳಲುತ್ತಿದ್ದಾರೆ. ರಿಹ್ಯಾಬ್ ವೇಳೆ ಹೇಜಲ್​ವುಡ್​​​ಗೆ ಮತ್ತೆ ಫ್ರೆಶ್ ಇಂಜುರಿ ಆದ ಕಾರಣ, ಌಶಸ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ರು. ಇದೆಲ್ಲದರ ನಡುವೆ ಹಳೇ ಗಾಯಗಳು, ಹೇಜಲ್​ವುಡ್​​ರನ್ನ ಪದೇ ಪದೇ ಕಾಡುತ್ತಲೇ ಇವೆ.
ಇದನ್ನೂ ಓದಿ: RCBಗೆ ಹೊಸ ಸುಂದರಿಯ ಎಂಟ್ರಿ.. ಸೆನ್ಸೇಷನ್ ಸೃಷ್ಟಿಸಿದ ವಿಡಿಯೋ
/filters:format(webp)/newsfirstlive-kannada/media/media_files/2025/08/11/rajath_kohli-2025-08-11-12-27-03.jpg)
ರಜತ್ ಪಟಿದಾರ್​ಗೆ ಫಿಂಗರ್ ಇಂಜುರಿ
ಆರ್​ಸಿಬಿ ನಾಯಕ ರಜತ್ ಪಟಿದಾರ್, ವಿಜಯ್ ಹಜಾರೆ ಟೂರ್ನಿಯ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದಾರೆ. ಸದ್ಯ ಪಟಿದಾರ್ ಗಾಯದ ನಡುವೆಯೇ, ಟೂರ್ನಿಯಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಪಟಿದಾರ್ ಕೈಬೆರಳಿನ ಗಾಯದ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ರೆ ಆರ್​ಸಿಬಿ ನಾಯಕ ರಿಸ್ಕ್ ತೆಗೆದುಕೊಂಡು, ತಮ್ಮ ರಾಜ್ಯದ ತಂಡವನ್ನ ಮುನ್ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಪಟಿದಾರ್, ಮಂಡಿ ನೋವಿನಿಂದ ಬಳಲುತ್ತಿದ್ರು. ರಿಹ್ಯಾಬ್ ನಂತರ ಚೇತರಿಸಿಕೊಂಡಿದ್ರು.
ಟಿಮ್ ಡೇವಿಡ್, ಫಿಲ್ ಸಾಲ್ಟ್, ಜೋಷ್ ಹೇಜಲ್​ವುಡ್ ಮತ್ತು ರಜತ್ ಪಟಿದಾರ್, ಐಪಿಎಲ್ ಟೂರ್ನಿಗೂ ಮುನ್ನ ಫಿಟ್ ಆಗೋ ವಿಶ್ವಾಸ ಇದೆ. ಒಂದು ವೇಳೆ ಈ ನಾಲ್ವರು ಆಟಗಾರರ ಪೈಕಿ ಒಬ್ಬ ಆಟಗಾರ ಅನ್​ಫಿಟ್ ಆಗಿದ್ದೇ ಆದ್ರೆ, ಆರ್​ಸಿಬಿ ಟೀಮ್ ಸ್ಟ್ರಾಟಜಿ ಮೇಲೆ ಭಾರೀ ಇಂಪ್ಯಾಕ್ಟ್ ಆಗೋ ಸಾಧ್ಯತೆ ಇದೆ. ಹಾಗಾಗಿ ಆರ್​ಸಿಬಿಯ ಈ ಸೂಪರ್​​ಸ್ಟಾರ್ ಆಟಗಾರರು, ಅದಷ್ಟು ಬೇಗ ಚೇತರಿಸಿಕೊಳ್ಳಲಿ. ಐಪಿಎಲ್ ವೇಳೆಗೆ ಆರ್​ಸಿಬಿ ತಂಡವನ್ನ ಸೇರಿಕೊಳ್ಳಲಿ ಅನ್ನೋದೇ ರಾಜ್ಯ ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ:ಈಜುವಾಗ ಮೀನುಗಳು ಹೇಗೆ ಮಲಗುತ್ತವೆ? ಅವುಗಳ ನಿದ್ರೆಯ ಮ್ಯಾಜಿಕ್ ಏನು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us