/newsfirstlive-kannada/media/media_files/2026/01/06/lauren-bell-11-2026-01-06-15-59-18.jpg)
ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4ರ ಆರಂಭಕ್ಕೆ ಕೌಂಟ್​​ಡೌನ್ ಸ್ಟಾರ್ಟ್​ ಆಗಿದೆ. ಅದಕ್ಕೂ ಮುನ್ನ ಆರ್​​ಸಿಬಿಯ ಫುಲ್​ ಜೋರಾಗಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಆರ್​​ಸಿಬಿಯ ಸುಂದರಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದಾಳೆ. ಅಸಲಿ ಆಟ ಆರಂಭಕ್ಕೂ ಮುನ್ನ ಆರ್​​ಸಿಬಿ ಹಂಚಿಕೊಂಡಿರೋ ಒಂದೇ ಒಂದು ಪುಟ್ಟ ವಿಡಿಯೋ ನೋಡಿ ರೆಡ್​ ಆರ್ಮಿಯ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.
ಮಹಿಳಾ ಪ್ರೀಮಿಯರ್​ ಲೀಗ್​ ಬಂತಂದ್ರೆ ಸಾಕು.. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸಖತ್​ ಪೀಕ್​ನಲ್ಲಿರುತ್ತೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್.. ಆನ್​ ಫೀಲ್ಡ್​ ಆಟದ ವಿಚಾರ ಬಿಟ್​ ಬಿಡಿ. ಆಫ್​ ದ ಫೀಲ್ಡ್​ನಲ್ಲೂ ಆರ್​​ಸಿಬಿಯ ದರ್ಬಾರ್​ ಜೋರಾಗಿ ನಡೆಯುತ್ತೆ. ಈ ಬಾರಿಯೂ ಅಷ್ಟೇ.. ಆರ್​​ಸಿಬಿಯ ಹವಾ ಸಿಕ್ಕಾಪಟ್ಟೆ ಜೋರಾಗಿದೆ.
ಇದನ್ನೂ ಓದಿ: ಚೀನಾಬ್ ನದಿಯ ನಾಲ್ಕು ಹೈಡ್ರೋಪವರ್ ಪ್ರಾಜೆಕ್ಟ್ ಗಳಿಗೆ ವೇಗ : ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ
/filters:format(webp)/newsfirstlive-kannada/media/post_attachments/wp-content/uploads/2025/03/WPL-RCB.jpg)
ಸೀಸನ್​ 4ಕ್ಕೆ ಸಿದ್ಧತೆ ಆರಂಭಿಸಿರೋ ಆರ್​​ಸಿಬಿ, ಮುಂಬೈನಲ್ಲಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದೆ. ಅಭ್ಯಾಸದ ಕಣದಲ್ಲಿ ಆಟಗಾರ್ತಿಯರು ಬೆವರಿಳಿಸ್ತಾ ಇದ್ದಾರೆ. ಇದ್ರ ನಡುವೆ ರಾಯಲ್​ ಚಾಲೆಂಜರ್ಸ್​ ಆರ್ಮಿಯ ಭರ್ಜರಿ ಫೋಟೋಶೂಟ್​ ಕೂಡ ನಡೆದಿದೆ. ಈ ವಿಡಿಯೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಆರ್​​ಸಿಬಿ ಶೇರ್​ ಮಾಡಿದೆ. ಈ ಪೈಕಿ ಒಂದು ವಿಡಿಯೋ ಸೆನ್ಸೇಷನ್​ ಸೃಷ್ಟಿಸಿದೆ. ಆರ್​​ಸಿಬಿಗೆ ಎಂಟ್ರಿ ಕೊಟ್ಟಿರೋ ಹೊಸ ಸುಂದರಿ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹತ್ತಿಸಿದ್ದಾಳೆ.
RCB ತಂಡಕ್ಕೆ ಸುರ ಸುಂದರಿಯ ಎಂಟ್ರಿ.!
ಈ ಬಾರಿ ಮೆಗಾ ಆಕ್ಷನ್​ನಲ್ಲಿ ಆರ್​​ಸಿಬಿ ಪಾಲಾಗಿದ್ದ ಇಂಗ್ಲೆಂಡ್​ ವೇಗಿ ಲಾರೆನ್​ ಬೆಲ್ ತಂಡವನ್ನ ಕೂಡಿಕೊಂಡಿದ್ದಾರೆ. ಎಂಟ್ರಿ ಕೊಟ್ಟ ಬೆನ್ನಲ್ಲೇ ರೆಡ್​ ಜೆರ್ಸಿಯನ್ನ ತೊಟ್ಟು ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಲಾರೆಲ್​ ಬೆಲ್​ ಫೋಟೋಶೂಟ್​ ವಿಡಿಯೋ ಫ್ಯಾನ್ಸ್​ ಎದೆಯ ಬೆಲ್​ ಅನ್ನೇ ಒತ್ತಿದಂತಿದೆ. ಆರ್​​ಸಿಬಿ ಹಂಚಿಕೊಂಡ ಪೋಸ್ಟ್​​ಗೆ ಲೈಕ್ಸ್,​ ಕಮೆಂಟ್ಸ್​ ಸುರಿಮಳೆ ಹರಿದಿದೆ. ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.
ಅಭಿಮಾನಿಗಳ ಹೃದಯ ಗೆದ್ದಿದ್ದ ಚೆಲುವೆ ಆಸಿಸ್​ ಆಲ್​​ರೌಂಡರ್​ ಎಲ್ಲಿಸ್​ ಪೆರ್ರಿ ಈ ಸೀಸನ್​ನಿಂದ ಹಿಂದೆ ಸರಿದಿದ್ದಾರೆ. WPL​ ಬಂತಂದ್ರೆ ಸಾಕು ಇನ್ಸ್​​ಸ್ಟಾಗ್ರಾಂನಲ್ಲಿ SHERRY SHERRY LADY ರೀಲ್ಸ್​ಗಳೇ ಹಲ್​ಚಲ್​ ಎಬ್ಬಿಸ್ತಿದ್ವು. ಆದ್ರೆ, ಈ ಬಾರಿ ಪೆರ್ರಿ ಇಲ್ಲಾ ಅಂತಾ ಫ್ಯಾನ್ಸ್​​ ಬೇಸರಗೊಂಡಿದ್ರು. ಇದೀಗ ಲಾರೆನ್​ ಬೆಲ್​ ಎಂಟ್ರಿ ಆ ಬೇಸರವನ್ನ ತೊಡೆದುಹಾಕಿದೆ. ಎಲ್ಲಿಸ್​ ಪೆರ್ರಿ ಹೋದಳು.. ಲಾರೆನ್​ ಬೆಲ್ ಬಂದ್ಲು ಅಂತಿರೋ ಫ್ಯಾನ್ಸ್​, ಈಕೆ ನಮ್ಮ ಹೊಸ ಕ್ರಷ್​ ಎಂದುಕೊಂಡೆ ತಿರುಗಾಡ್ತಿದ್ದಾರೆ.
ಲಾರೆನ್ ಬೆಲ್ ವಿಡಿಯೋ ವೈರಲ್​ ಆಗ್ತಿದ್ದಂತೆ,​​ ಈಕೆಯ ಬಗ್ಗೆ ಫ್ಯಾನ್ಸ್​ ಹುಡುಕಾಟ ನಡೆಸಿದ್ದಾರೆ. ಗೂಗಲ್​ನಲ್ಲಿ ಸರ್ಚ್​ ಮಾಡಿದ ಫ್ಯಾನ್ಸ್,​ ಲಾರೆನ್​ ಬೆಲ್​ ಕ್ಯೂಟ್​ನೆಸ್​, ಚಾರ್ಮ್​, ಸ್ಟನ್ನಿಂಗ್​ ಫೋಟೋಸ್​ಗಳಿಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. reason to watch WPL 2026 ಎಂದೇ ಲಾರೆನ್​ ಬೆಲ್​ ಸದ್ಯ ಟ್ರೆಂಡ್​ ಆಗ್ತಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ.. ಮುಂದಿನ ದೇವರಾಜ ಅರಸು.. ಯಾಕೆ? : ಅರಸು ದಾಖಲೆ ಬ್ರೇಕ್ ಮಾಡಿದ ಸಿದ್ದು
ಈ ಲಾರೆನ್​ ಬೆಲ್​ನ ಸೌಂದರ್ಯಕ್ಕೆ ಸೀಮಿತವಾಗಿ ನೋಡೋಕೆ ಹೋಗಬೇಡಿ. ಖತರ್ನಾಕ್​ ಬೌಲಿಂಗ್​ ಮಾಡೊ ಕಲಾಕಾರೆ ಈಕೆ. ಬರೋಬ್ಬರಿ 6.2 ಅಡಿ ಎತ್ತರದ ಲಾರೆನ್​, ಸ್ವಿಂಗ್​ & ಪೇಸ್​ ಅಸ್ತ್ರದಿಂದಲೇ ಎದುರಾಳಿ ಬ್ಯಾಟರ್ಸ್​ಗೆ ಕಾಟ ಕೊಡ್ತಾರೆ. ಪವರ್​​ ಪ್ಲೇ ಹಾಗೂ ಡೆತ್​ ಓವರ್​​ನಲ್ಲಿ ಪವರ್​ ಫುಲ್​ ಸ್ಪೆಲ್ ಹಾಕೋ ಸಾಮರ್ಥ್ಯ ಈಕೆಗಿದೆ. ವಿಶ್ವದ ವುಮೆನ್ಸ್​​ ಟಿ20 ಬೌಲರ್​​ ಱಂಕಿಂಗ್​ನಲ್ಲಿ 4ನೇ ಸ್ಥಾನದಲ್ಲಿದ್ದಾರೆ ಅಂದ್ರೆ ನೀವೆ ಅರ್ಥ ಮಾಡಿಕೊಳ್ಳಿ ಸಾಮರ್ಥ್ಯ ಏನು ಅನ್ನೋದನ್ನ.!
Lauren Bell arrival video by RCB pic.twitter.com/tV29qPhOFp
— RCBIANS OFFICIAL (@RcbianOfficial) January 5, 2026
ಮಿನಿ ಹರಾಜಿನಲ್ಲಿ ಆರ್​​​ಸಿಬಿ ಖರೀದಿಸಿದ ಚೀಪ್​ & ಬೆಸ್ಟ್​ ಆಟಗಾರ್ತಿ ಈಕೆ ಅಂದ್ರೆ ತಪ್ಪಿಲ್ಲ. ಈವರೆಗೆ ಇಂಗ್ಲೆಂಡ್​ ಪರ 36 ಟಿ20 ಪಂದ್ಯಗಳನ್ನಾಡಿರೋ ಲಾರೆಲ್​ ಬೆಲ್ 50 ವಿಕೆಟ್​ ಬೇಟೆಯಾಡಿದ್ದಾರೆ. 7.40ರ ಎಕಾನಮಿ ಹೊಂದಿದ್ದಾರೆ. ಇನ್ನು, ದಿ 100 ಲೀಗ್​ನಲ್ಲೂ ಧೂಳೆಬ್ಬಿಸಿರೋ ಬೆಲ್ 41 ಮ್ಯಾಚ್​ನಲ್ಲಿ 60 ವಿಕೆಟ್​ ಉರುಳಿಸಿ ಕಮಾಲ್​ ಮಾಡಿದ್ದಾರೆ. 6.81​ರ ಉತ್ತಮ ಎಕಾನಮಿಯನ್ನ ಕಾಯ್ದುಕೊಂಡಿದ್ದಾರೆ.
ಸ್ವೀಡನ್​ನಲ್ಲಿ ಹುಟ್ಟಿದ ಈಕೆ ಕ್ರಿಕೆಟರ್​ ಆಗೋಕೆ ಮುನ್ನ ಆರಂಭದಲ್ಲಿ ಫುಟ್ಬಾಲ್​ ಪ್ಲೇಯರ್​ ಆಗಿದ್ದವಳು. ಅಂಡರ್​ 16 ವರೆಗೆ ಫುಟ್ಬಾಲ್ ಆಡ್ತಿದ್ದ ಈಕೆ ಆ ಬಳಿಕ ಅಪ್ಪನ ಒತ್ತಾಯದ ಮೇಲೆ ಕ್ರಿಕೆಟ್​ಗೆ ಬಂದಿದ್ದು. ಕ್ರಿಕೆಟ್​ ಆಯ್ದುಕೊಂಡ ಕೆಲವೇ ವರ್ಷಕ್ಕೆ ಇಂಗ್ಲೆಂಡ್​ ಪರ ಡೆಬ್ಯೂ ಮಾಡಿದ ಲಾರೆನ್​ ಬೆಲ್​, ತನ್ನ ಸಾಲಿಡ್​ ಪರ್ಫಾಮೆನ್ಸ್​ನ ಬಲದೊಂದಿಗೆ ಆರ್​​ಸಿಬಿ ಸೇರಿದ್ದಾರೆ. ರೆಡ್​ ಆರ್ಮಿಗೆ ಎಂಟ್ರಿಕೊಟ್ಟಿಕೊಟ್ಟಿರೋ ಅಭಿಮಾನಿಗಳ ನಯಾ ಕ್ರಶ್, ಆರ್​​ಸಿಬಿ ಪರವೂ ಬೊಂಬಾಟ್​ ಪ್ರದರ್ಶನ ನೀಡಲಿ.
ಇದನ್ನೂ ಓದಿ:ಇದು ‘Uva Meridian’ ಎಂಬ ಮಾಯಾಲೋಕ.. ಸ್ವರ್ಗದಂತಿರೋ ಈ ‘ಆತಿಥ್ಯ ತಾಣ’ದ ಬಗ್ಗೆ ನಿಮ್ಗೆಷ್ಟು ಗೊತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us