ಇದು ‘Uva Meridian’ ಎಂಬ ಮಾಯಾಲೋಕ.. ಸ್ವರ್ಗದಂತಿರೋ ಈ ‘ಆತಿಥ್ಯ ತಾಣ’ದ ಬಗ್ಗೆ ನಿಮ್ಗೆಷ್ಟು ಗೊತ್ತು?

ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನೇ ಪುಡಿಗಟ್ಟಿದ ಚಿತ್ರ ಕಾಂತಾರದ ಪ್ರೀಕ್ವೆಲ್​ನ ಚಿತ್ರೀಕರಣಕ್ಕೆ ಹೊಂಬಾಳೆ ಫಿಲ್ಮ್ಸ್ ಆಯ್ಕೆ ಮಾಡಿಕೊಂಡದ್ದು ಯುವ ಮೆರಿಡಿಯನ್ ಎಂಬ ಭೂಸ್ವರ್ಗವನ್ನು. ಇದರ ಖ್ಯಾತಿ ಎಂಥದ್ದು ಎಂಬುದಕ್ಕೆ ಇದೊಂದು ಚಿಕ್ಕ ನಿದರ್ಶನವಷ್ಟೇ. ಅದು ಎಲ್ಲಿದೆ, ಹೇಗಿದೆ ಎಂಬ ವಿವರ ಇಲ್ಲಿದೆ..

author-image
Ganesh Kerekuli
Uva Meridian (13)
Advertisment

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿರುವ ಯುವ ಮೆರಿಡಿಯನ್ ಬೇ ರೆಸಾರ್ಟ್​ನ (UVA Meridian Bay Resort) ಜನಪ್ರಿಯತೆ ಸಾಕಷ್ಟು ಹೆಚ್ಚುತ್ತಿದೆ. ಪ್ರವಾಸಿಗರ ಪ್ರಮುಖ ಆಕರ್ಷಿಣೀಯ ತಾಣವಾಗಿ ಬೆಳೆದಿರುವ ಈ ತಾಣವು ಸ್ವರ್ಗದ ಅನುಭವ ನೀಡುತ್ತಿದೆ. 

ಇದನ್ನೂ ಓದಿ: ಚೀನಾಬ್ ನದಿಯ ನಾಲ್ಕು ಹೈಡ್ರೋಪವರ್ ಪ್ರಾಜೆಕ್ಟ್ ಗಳಿಗೆ ವೇಗ : ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ

Uva Meridian (10)

ಕುಂದಾಪುರ ದಂಥ ಪುಟ್ಟ ಊರಿನ ಬಳಿ ಎಕರೆಗಟ್ಟಲೆ ಜಾಗದಲ್ಲಿ ನಿರ್ಮಾಣ ಗೊಂಡಿರುವ ‘ಯುವ ಮೆರಿಡಿಯನ್ ಬೇ’ ನಿಜಕ್ಕೂ ಒಂದು ಸ್ವರ್ಗ. ದೇಶದ ಯಾವ ರೆಸಾರ್ಟ್​​ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಸೆಡ್ಡು ಹೊಡೆಯುವಂತೆ ತಲೆ ಎತ್ತಿ ನಿಂತಿದೆ. ಕರ್ನಾಟಕದ ಹೆಮ್ಮೆಯ ಆತಿಥ್ಯ ತಾಣವಾಗಿರುವ ‘ಯುವ ಮೆರಿಡಿಯನ್ ಬೇ’ ಬೆಳವಣಿಗೆಯೇ ಒಂದು ರೋಚಕ.
 
ಕರ್ನಾಟಕದಲ್ಲಿ ಅತ್ಯಾಧುನಿಕ ಫಿಲ್ಮ್‌ ಸ್ಟುಡಿಯೋ ಇಲ್ಲ ಎಂಬ ಕೊರಗನ್ನೂ ನೀಗಿಸುವಂತಹ ಸೌಲಭ್ಯಗಳು ಇಲ್ಲಿವೆ. ಯುವ ಮೆರಿಡಿಯನ್ ಸ್ಟುಡಿಯೋ, ಅತ್ಯುತ್ತಮ ಅಮ್ಯೂಸ್‌ಮೆಂಟ್ ಪಾರ್ಕ್, ವಾಟರ್ ಪಾರ್ಕ್ ಹೊಂದಿರುವ ಇಲ್ಲಿನ ವೈಶಿಷ್ಟ್ಯವೇ ಒಂದು ಅದ್ಭುತ..

Uva Meridian (9)

ಎಂಥೆಂಥ ಉಂಟು..? 

  • ತೊಯ್ದಷ್ಟು ತೊಯ್ಯಬೇಕೆನಿಸುವ ಕೃತಕ ಸಮುದ್ರದ ಅಲೆ
  • ಬೆಚ್ಚಿ ಬೀಳುವಂಥ ಅನುಭವ ನೀಡುವ ಭೂತದ ಪಾರ್ಕ್
  • ಮಕ್ಕಳಿಗೆ ತುಂಬಾನೇ ಇಷ್ಟವಾಗುವ ವಾಟರ್ ಪಾರ್ಕ್ 
  • ವಯೋವೃದ್ಧರ ಮನರಂಜನೆಗೆ ತ್ರಿಡಿ ಎಫೆಕ್ಟ್ ಹಾಲ್ 
  • ಕೈಗೆಟುಕುವ ಬೆಲೆಯಲ್ಲಿ ಸೀಸನ್​ ಹಣ್ಣುಗಳ ರಾಶಿ ರಾಶಿ
  • ಸುಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ 
  • ಸ್ಪಾ, ದೇಹದಣಿಸಿ ಮನಸ್ಸು ಅರಳಿಸುವ ಈಜುಕೊಳ
  • ಸರ್ವ ರೀತಿಯ ರುಚಿಕರ ನೀಡುವ ಬಗೆ ಬಗೆಯ ಆಹಾರಗಳು
  • ವಾಕಿಂಗ್​ಗೆ ಹಸಿರು ಮಾರ್ಗ, ಸಾವಿರಾರು ಜಾತಿಯ ಗಿಡಮರ
  • ಆಟ ಆಡಲು ಬೇಕಾದಷ್ಟು ಜಾಗದ ವ್ಯವಸ್ಥೆ ಇದೆ
  • ಡೆಸ್ಟಿನೇಷನ್ ವೆಡ್ಡಿಂಗ್ ಆಗೋಕೂ ಹೇಳಿ ಮಾಡಿಸಿದ ಜಾಗ
  • ಸಂಗೀತ ಕಛೇರಿ, ಮ್ಯೂಸಿಕಲ್ ನೈಟ್, ಬರ್ತ್ ಡೇ ಪಾರ್ಟಿಗೆ ವೇದಿಕೆ
  • 49 ಲಕ್ಸುರಿ ರೂಮ್,  ರೆಸಾರ್ಟ್‌ನಲ್ಲಿ ಜಿಮ್, ಸ್ಪಾ,
  • ಸ್ಮಿಮ್ಮಿಂಗ್ ಫೂಲ್, ಮೂರ್ನಾಲ್ಕು ರೆಸ್ಟೋರೆಂಟ್‌ಗಳು
  • ಫೈವ್ ಸ್ಟಾರ್ ಹೊಟೇಲ್ ವ್ಯವಸ್ಥೆ ಲಭ್ಯವಿದೆ

ಅಷ್ಟೇ ಅಲ್ಲ.. 

ದೊಡ್ಡ ದೊಡ್ಡ ಗಣ್ಯರು ಕೂಡ ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಬಹುದು. ಕಾಪ್ಟರ್ ಲ್ಯಾಂಡ್ ಮಾಡುಲು ಹೆಲಿಪ್ಯಾಡ್ ವ್ಯವಸ್ಥೆಯೂ ಇದೆ. ಘಮಘಮಿಸುವ ವಾತಾವರಣದ ನಡುವೆ ಶುಚಿರುಚಿ ಊಟತಿಂಡಿ, ಅತಿಸ್ವಚ್ಛ ಶೌಚಾಲಯಗಳು, ಶುದ್ಧ ನೀರಿನ ವ್ಯವಸ್ಥೆಯೂ ಇದೆ. 

ಇದನ್ನೂ ಓದಿ:BCCI ಮುಂದೆ ಗಿಲ್ ‘ಪಾಲಿಸಿ ಅಸ್ತ್ರ’.. ಬಲಿಷ್ಠ ತಂಡ ಕಟ್ಟಲು ಗಿಲ್ ಹೊಸ ಪ್ರಯೋಗ..!

Uva Meridian (9)

ಸಮಯ ಸಾಲಲ್ಲ

ಯುವ ಮೆರಿಡಿಯನ್ ಬೇ ನಿಜಕ್ಕೂ ಕೋಟೇಶ್ವರದಲ್ಲಿರುವ ಒಂದು ವಿಶ್ರಾಮ ಕೋಟೆ. ಈ ಕೋಟೆಯಲ್ಲಿ ಕೃತಕ ಸಮುದ್ರ, ಈಜುಕೊಳ, ಕಾಡು, ಒಳಗಡೆ ಹೊಕ್ಕರೆ ವಿಧವಿಧ ಆಟಗಳು ಇವೆ. ಇಲ್ಲಿಗೆ ಯಾರೇ ಬಂದರೂ ಮತ್ತೆ ಹೊರಡುವ ಮನಸ್ಸು ಮಾಡದ ರೀತಿಯಲ್ಲಿ ಆಕರ್ಷಣೀಯವಾಗಿದೆ. ಜೊತೆಗೆ ಇಲ್ಲಿ ಸಮಯ ಕಳೆದದ್ದೇ ಗೊತ್ತಾಲ್ಲ. ಅಷ್ಟರ ಮಟ್ಟಿಗೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುತ್ತದೆ.. 

Uva Meridian (8)

ಸಿಕ್ಕಾಪಟ್ಟೆ ಫೇಮಸ್..!

ಉಡುಪಿ ಜಿಲ್ಲೆಯ ಕೋಟೇಶ್ವರ ಗ್ರಾಮವು ಮತ್ತಷ್ಟು ಪ್ರಸಿದ್ಧಿ ಪಡೆಯಲು ಕಾರಣ ಇಲ್ಲಿನ ಯುವ ಮೆರಿಡಿಯನ್ ಬೇ. ಗ್ರಾಮದ ಕೀರ್ತಿ ದೇಶ, ವಿದೇಶಗಳಿಗೂ ಹಬ್ಬಿದೆ. ಇಷ್ಟಕ್ಕೆಲ್ಲ ಕಾರಣ ಉದಯ್ ಕುಮಾರ್ ಶೆಟ್ಟಿ ಮತ್ತು ವಿನಯ್ ಕುಮಾರ್ ಶೆಟ್ಟಿ. 

ಇದನ್ನೂ ಓದಿ:ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್‌ : ಪ್ರೀಮಿಯಂ ಬಸ್ ಟಿಕೆಟ್ ದರ ಶೇ.10 ರಿಂದ ಶೇ.15 ರವರೆಗೂ ಇಳಿಕೆ!!

Uva Meridian (6)

ಯಾರು ಇವರು..? 

ಬೈಲೂರು ಉದಯ್ ಕುಮಾರ್ ಶೆಟ್ಟಿ ಮತ್ತು ಬೈಲೂರು ವಿನಯ್ ಕುಮಾರ್ ಶೆಟ್ಟಿ, ಇವರು ಮೂಲತಃ ಉಡುಪಿ ಜಿಲ್ಲೆಯವರು. UVA ಮೆರಿಡಿಯನ್ ಬೇ ಸಾಕಾರಗೊಂಡ ಕನಸಿನ ಹಿಂದೆ ಈ ಸಹೋದರರ ಅಪಾರ ಪರಿಶ್ರಮ ಇದೆ. ತಾಯಿಯ ಮಾತಿಗೆ ಬೆಲೆ ಕೊಟ್ಟು ಸ್ವಂತ ಊರಲ್ಲಿ ಸಾಧಿಸಬೇಕು ಎಂದು ಹೊರಟ ಅಣ್ತಾಮ್ಮಾಸ್​​ನ ಸಾಧನೆಯೇ ರೋಚಕ. 

Uva Meridian (2)

ಸ್ವಂತ ಊರಲ್ಲೇ ಉದ್ಯಮಕ್ಕೆ ಪಣ

UV ಬ್ರದರ್ಸ್​ಗೆ ಕೇವಲ ಹಣ ಗಳಿಸೋದೇ ಉದ್ಯಮ ಎಂದು ಭಾವಿಸಿದ್ದರೆ ಹಣ ಮಾಡಲು ಸಾಕಷ್ಟು ದಾರಿಗಳಿದ್ದವು. ಆದರೆ ಅವರು ಆತಿಥ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು.ಅಂತೆಯೇ ಇಂದು ಯುವ ಮೆರಿಡಿಯನ್ ಬೇ ಎಂಬ ಜಗತ್ತು ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಬಿಗ್​ ಗೇಮ್​ನಲ್ಲಿ ಪರಕಾಯ ಪ್ರವೇಶ.. ಆಟದ ರಹಸ್ಯ ಬಿಟ್ಟುಕೊಟ್ಟ ಗಿಲ್ಲಿ..!

Uva Meridian (5)

ಅಂದ್ಹಾಗೆ UVA ಬ್ರ್ಯಾಂಡ್ ಜನಿಸಿದ್ದು 2009ರಲ್ಲಿ. ಈ ಉದ್ಯಮಕ್ಕೂ ಮುನ್ನ ಸರಕಾರಿ ಗುತ್ತಿಗೆ ಕೆಲಸ ಮಾಡುತ್ತಿದ್ದ ಇವರು, ಬೃಹತ್ ನೀರಾವರಿ ಇಲಾಖೆಯ ಅಡಿಯಲ್ಲಿ ಮಹಾರಾಷ್ಟ್ರ, ಆಲಮಟ್ಟಿ ಸೇರಿದಂತೆ ವಿವಿಧೆಡೆ ಕೆಲಸ ಮಾಡಿದ ಅನುಭವ ಹೊಂದಿದ್ದರು. 2009ರಲ್ಲಿ ವಿಶಾಲ ಜಾಗದಲ್ಲಿ ಯುವ ಮೆರಿಡಿಯನ್ ಬೇ ಪ್ರಾರಂಭಿಸಿದರು. ಅಲ್ಲಿಂದ ಶುರುವಾದ ಪಯಣ ಇಲ್ಲಿಯವರೆಗೆ ಯಶಸ್ವಿಯಾಗಿ ಕರೆತಂದಿದೆ.

ಮೊದಲಿಗೆ ನಮ್ಮದೇ ದೊಡ್ಡ ಲ್ಯಾಂಡ್ ಇರುವ ಕಾರಣ ಅದನ್ನು ಸಾರ್ವಜನಿಕರಿಗೆ ಸಹಕಾರ ಆಗುವಂತೆ ಬಳಕೆ ಮಾಡಬೇಕು ಹಾಗೂ ನಮಗೂ ಬ್ಯುಸಿನೆಸ್ ಆಗಬೇಕು ಎಂಬ ಉದ್ದೇಶದಿಂದ ಮಾಡಿದ್ದೆವು. ಹಿಂದೆ ಕಾನ್ಫರೆನ್ಸ್ ಹಾಲ್ ರಿಸ್ಕ್ ತೆಗೆದುಕೊಂಡು ಮಾಡಿದ್ದೆವು. ಆದರೆ ನಮ್ಮ ಬಳಿ ರೂಮ್ ಇರಲಿಲ್ಲ. ಇದರಿಂದ ರೆಸಾರ್ಟ್ ಮಾಡಲಾಯಿತು. ಈಗ ನಮ್ಮ ಎರಡು ಮೂರು ಪ್ರಾಪರ್ಟಿ ಸೇರಿ 140 ರೂಮ್ ಗಳಿವೆ. ಇಂದು ಎರಡು ಮೂರು ಕನ್ವೆನ್ ಶನ್ ಹಾಲ್, ಓಪನ್ ಬ್ಯಾಂಕ್ವೆಟ್ ಹಾಲ್ ಗಳಿವೆ.

7-8 ಕಾರ್ಯಕ್ರಮಗಳನ್ನು ಒಮ್ಮೆಲೆ ಮಾಡಬಹುದಾಗಿದೆ. ಕುಂದಾಪುರಕ್ಕೆ ಬಂದಾಗ ಜನರಿಗೆ ಎಂಟರ್ಟೈನ್ಮೆಂಟ್ ಇರಲಿ ಎಂದು 2019ರಲ್ಲಿ ಅಮ್ಯೂಸ್ಮೆಂಟ್ ಪಾರ್ಕ್‌ ಸಹ ಇಲ್ಲಿಯೇ ಆರಂಭಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಸ್ವಲ್ಪ ಕಷ್ಟವಾಯಿತು. ಬಳಿಕ ಇಂದು ಈ ಭಾಗದಲ್ಲೇ ಒಂದು ಒಳ್ಳೆಯ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ. ಸಾವಿರಕ್ಕೂ ಅಧಿಕ ವಾಹನಕ್ಕೆ ಪಾರ್ಕಿಂಗ್ ಸಹ ಮಾಡಲಾಗಿದೆ.

ಉದಯ್ ಕುಮಾರ್ ಶೆಟ್ಟಿ ಮತ್ತು ವಿನಯ್ ಕುಮಾರ್ ಶೆಟ್ಟಿ, UVA ಮೆರಿಡಿಯನ್‌ ಬೇ ಸೃಷ್ಟಿಕರ್ತರು

Uva Meridian (4)

ಕಾಂತಾರ ಚಿತ್ರೀಕರಣ ಆಗಿರೋದು ಇಲ್ಲೇ.. 

ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಪ್ರೀಕ್ವೆಲ್‌ ಶೂಟಿಂಗ್‌ಗೆ ಆಗಿರೋದು UVA ಮೆರಿಡಿಯನ್‌ ಸ್ಟುಡಿಯೋದಲ್ಲಿ. ಇಲ್ಲಿ ಬರೋಬ್ಬರಿ 15 ತಿಂಗಳು ಕಾಂತಾರ ಚಿತ್ರಿಕರಣ ನಡೆಸಲಾಗಿದೆ. ಭವ್ಯವಾದ ಸೆಟ್ಟುಗಳನ್ನು ಹಾಕಿ ವೈಭವದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಕಲಾ ನಿರ್ದೇಶಕ ಅರುಣ್‌ ಸಾಗರ್‌ ಸೆಟ್‌ ಹಾಕುವ ಸಮಯದಲ್ಲಿ ರೆಸಾರ್ಟ್‌ನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. ಕಾಂತಾರ ಮಾತ್ರವಲ್ಲದೇ ಹಲವಾರು ಭಾಷೆಗಳ ಚಿತ್ರಗಳು ಇಲ್ಲಿ ಈಗ ಚಿತ್ರೀಕರಣಗೊಳ್ಳುತ್ತಿದೆ. ರವಿ ಬಸ್ರೂರ್ ಸಹ ಇಲ್ಲಿ ರೆಕಾರ್ಡಿಂಗ್ ಮಾಡಿದ್ದಾರೆ. 

ಇದನ್ನೂ ಓದಿ: ಗಿಲ್ಲಿ ಬಿಗ್​ ಗೇಮ್​ನಲ್ಲಿ ಪರಕಾಯ ಪ್ರವೇಶ.. ಆಟದ ರಹಸ್ಯ ಬಿಟ್ಟುಕೊಟ್ಟ ಗಿಲ್ಲಿ..!

Uva Meridian (3)

ಗಣ್ಯರ ಭೇಟಿ ಹೆಚ್ಚುತ್ತಿದೆ.. 

ಖ್ಯಾತ ಸಂಗೀತಗಾರ್ತಿ ಎಸ್.ಜಾನಕಿ ಅವರ ಅವಾರ್ಡ್ ಕಾರ್ಯಕ್ರಮ ಇಲ್ಲೇ ನಡೆದಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ನಟಿ ರುಕ್ಮಿಣಿ ವಸಂತ್‌, ನಟ ಗುಲ್ಶನ್‌ ದೇವಯ್ಯ, ಮಲಯಾಳಂ ಸ್ಟಾರ್‌ ನಟ ಜಯರಾಂ, ಕಾಂತಾರ ನಾಯಕ ರಿಷಬ್ ಶೆಟ್ಟಿ, ಸಿಂಗಂ ಖ್ಯಾತಿಯ ಅಣ್ಣಾಮಲೈ, ಗೋವಾ ಮಾಜಿ ಸಿಎಂ, ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ನೂರಾರು ಮಂದಿ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಅಂತೆಯೇ ಇಲ್ಲಿಗೆ ಬರೋರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೆಚ್ಚಿನ ಮಾಹಿತಿಗಾಗಿ +91 9448285020, +91 9449606060 ಅಥವಾ [email protected] ಸಂಪರ್ಕಿಸಬಹುದು. 

ಇದನ್ನೂ ಓದಿ:ಕಿಚ್ಚ ಕೇಳಿದಾಗ ಗಿಲ್ಲಿ ಬಾಯಿಯಿಂದ ಬಂತು ಕುತೂಹಲಕಾರಿ ಅಸಲಿ ವಿಷಯಗಳು..!

Uva Meridian (2)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UVA Meridian Bay Resort
Advertisment