/newsfirstlive-kannada/media/media_files/2026/01/06/gilli-nata-23-2026-01-06-12-41-33.jpg)
ಕಿಚ್ಚ ಸುದೀಪ್​ ಅವ್ರು ಪಂಚಾಯಿತಿಯಲ್ಲಿ ಹೇಳೋವರೆಗೂ, ಗಿಲ್ಲಿ ಬಾಯಿಬಿಟ್ಟು ಹೇಳೋವರೆಗೂ, ಗಿಲ್ಲಿ ಆಡೋ ಆಟದಲ್ಲಿ.. ಆತ ನಡೆದುಕೊಂಡ ರೀತಿಯಲ್ಲಿ ಬೇರೊಬ್ಬರ ಪರಕಾಯ ಪ್ರವೇಶ ಇದೆ ಅಂತ ಯಾರಿಗೂ ಅರ್ಥವಾಗಿರ್ಲಿಲ್ಲ. ಬಟ್​ ಕಳೆದ ಸೀಸನ್​ ವಿನ್ನರ್​ಗಳನ್ನೇ ಗಿಲ್ಲಿ ಕಾಪಿ ಮಾಡಿ, ಎಲ್ಲರ ಗಮನ ಸೆಳೆದಿದ್ದಾರಾ ಅನ್ನೋ ಪ್ರಶ್ನೆ ಈಗ ಎದ್ದಿದೆ.
ಇದನ್ನೂ ಓದಿ: ಗಿಲ್ಲಿ, ಅಶ್ವಿನಿ, ಧನು.. ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯೋಱರು?
/filters:format(webp)/newsfirstlive-kannada/media/media_files/2026/01/06/gilli-nata-20-2026-01-06-12-36-45.jpg)
ಗಿಲ್ಲಿ ಆಟ ಹಳ್ಳಿ ಸೊಗಡಿ ಪಾಠ. ಆ ಭಾಷೆ.. ಆ ಬಟ್ಟೆ.. ಆ ಸ್ಟೈಲು ಎಲ್ಲಾ ಪಕ್ಕಾ ಹಳ್ಳಿ ಹುಡುಗನ್ನದ್ದೇ. ಇದೇ ರೀತಿ ಈ ಹಿಂದೆ ಕಳೆದ ಸೀಸನ್​ನ್​ಲ್ಲಿ ಹನುಮಂತ ಬಳಸ್ತಿದ್ದ. ಗಿಲ್ಲಿ ಆಟವನ್ನ ಸರಿಯಾಗಿ ಗಮನಿಸಿದ್ರೆ, ಹನುಮಂತನಂಥ ಬಟ್ಟೆಗಳು. ನಾಲ್ಕನೇ ಸೀಸನ್​ನಲ್ಲಿ ಪ್ರಥಮ್​ನಂಥ ಮಾತುಗಳು ಕಾಣ್ತಿವೆ. ಅವೆಲ್ಲವೂ ಈಗ ಗಿಲ್ಲಿ ಒಬ್ಬನಲ್ಲೇ ಕಾಣ್ತಿವೆ ಅನ್ನೋ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಕಿಚ್ಚ ಗಿಲ್ಲಿ ಬಾಯಲ್ಲೇ ಹೇಳಿಸಿದ್ದ ಆ ಮಾತುಗಳು..
ಗಿಲ್ಲಿಗೆ ಸ್ಫೂರ್ತಿ ಯಾರು..?
ಬಿಗ್​ಬಾಸ್​ ನಾಲ್ಕನೇ ಸೀಸನ್​ನಲ್ಲಿ ಪ್ರಥಮ್​ ಮಾಡಿದ್ದ ಮೋಡಿ ಎಲ್ಲರಿಗೂ ಗೊತ್ತೇ ಇದೆ. ಬಿಗ್​ಬಾಸ್​ಗೆ ಎಂಟ್ರಿಯಾದಾಗಿನಿಂದ ಪ್ರಥಮ್​ ನಾನ್​ ಸ್ಟಾಪ್​ ಮಾತುಗಳಿಂದ.. ಜನರನ್ನ ಸೆಳೆದಿದ್ದ. ಇದು ನನ್ನ ಗೆಲುವಲ್ಲ ಕನ್ನಡಿಗರ ಗೆಲುವು.. ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಬೇಡಿ ನಾನ್ ಚೆನ್ನಾಗೆ ಇರ್ತೀನಿ.. ನನ್ನ ಉಳಿಸಿದ್ದಕ್ಕೆ ಥ್ಯಾಂಕ್ಸ್​ ಹೇಳಲ್ಲ ಅಂತ ಜನರಿಗೆ ಹೇಳ್ತಾ ಕೊನೆಗೆ ಆ ಸೀಸನ್​ ವಿನ್ನರ್​ ಆಗಿದ್ದ ಪ್ರಥಮ್​.
ಪ್ರಥಮ್​ ಆಟಕ್ಕೆ ಜನ ಫಿದಾ ಆಗಿದ್ರು. ಆತ ಮನಸ್ಸಲ್ಲೊಂದು ಹೊರಗೊಂದು ಇಟ್ಟಕೊಳ್ಳದೇ ಆಟ ಆಡಿದ್ದ ಅಂತ ಹೇಳಿದ್ರು. ಹಾಗೆ ಪ್ರಥಮ್​ ಒಳ್ಳೇ ಮಾತುಗಾರ. ಅದೇ ಪ್ರಥಮ್​ನನ್ನ ಫೈನಲ್​ಗೆ ತಂದು, ಬಿಗ್​ಬಾಸ್​ ಕಪ್ ಗೆಲ್ಲೋದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?
/filters:format(webp)/newsfirstlive-kannada/media/media_files/2026/01/06/gilli-nata-24-2026-01-06-12-41-49.jpg)
ಇನ್ನು, ಕಳೆದ ಸೀಸನ್​ ಅಂದ್ರೆ ಬಿಗ್​ಬಾಸ್​ ಹನ್ನೊಂದರಲ್ಲಿ ಹನುಮಂತ ಮೇನಿಯಾ ಸಾಮಾನ್ಯವಾಗಿರ್ಲಿಲ್ಲ. ಬರೀ ಹಾಡುಗಳಿಂದಲೇ ಎದುರಾಳಿಗಳಿಗೆ ಬೆಚ್ಚಿಬೀಳುವಂತ ಟಾಂಗ್​ ಕೊಡ್ತಿದ್ದ ಮುಗ್ಧ ಹನುಮಂತ. ಹನುಮಂತ ಮತ್ತು ಧನರಾಜ್​ ಜೋಡಿ ಇಡೀ ಬಿಗ್​ ಮನೆಗೆ ಎಂಟರ್​ಟೈನ್​ಮೆಂಟ್​ ಕಿಲಾಡಿ ಜೋಡಿಯಾಗಿತ್ತು. ಹನುಮಂತ ಧನು ಸೇರಿಕೊಂಡು ಮಾಡಿದ್ದ ಕೀಟ್ಲೇಗಳು ಒಂದಲ್ಲ ಎರಡಲ್ಲ.
ಹನುಮಂತನಿಗೆ ಲುಂಗಿ ಅಂಗಿ ತನ್ನತನವನ್ನ ಹಾಗೆ ಉಳಿಸಿತ್ತು. ಆತ ಪಕ್ಕಾ ಹಳ್ಳಿ ಹುಡುಗನಂತೆ ಇದ್ದು.. ಜನರನ್ನ ರಂಜಿಸಿ.. ಸಂದರ್ಭಕ್ಕೆ ತಕ್ಕ ಹಾಡುಗಳನ್ನ ಹಾಡ್ತಾ.. ಎದುರಾಳಿಗೆ ಪಂಚ್​ ಕೊಡ್ತಾ ಆ ಸೀಸನ್​ನ್ನ ವಿನ್ನರ್​ ಆಗಿದ್ದ. ಬಟ್​ ಈಗ ಈ ಇಬ್ಬರನ್ನ ಗಿಲ್ಲಿ ಕಾಪಿ ಮಾಡ್ತಿದ್ದಾನಂತೆ. ಹನುಮಂತನಲ್ಲಿನ ಇನ್ನೋಸೆನ್ಸ್, ವೇಷಭೂಷಣ.. ಪ್ರಥಮ್​ನಲ್ಲಿ ಮಾತುಗಾರಿಕೆ ಗಿಲ್ಲಿಗೆ ಒಲಿದಿದೆ. ಈ ಇಬ್ಬರ ಸ್ಫೂರ್ತಿಯಿಂದಲೇ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದಾಗಿ ಗಿಲ್ಲಿ ಸುದೀಪ್​ ಅವ್ರಿಗೆ ಹಿಂಟ್​ ಕೊಟ್ಟಿದ್ದಾನೆ.
ಇದನ್ನೂ ಓದಿ: ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತಿದ್ದಾರಾ ಗಿಲ್ಲಿ..?
/filters:format(webp)/newsfirstlive-kannada/media/media_files/2026/01/06/gilli-nata-26-2026-01-06-12-42-08.jpg)
ಗಿಲ್ಲಿ ಇಲ್ಲಿವರೆಗೂ ಎಲ್ಲಾ ಸೀಸನ್​ಗಳನ್ನ ನೋಡಿ. ಬಿಗ್​ಬಾಸ್​ ಮನೆಗೆ ಹೇಗೆ? ಅಲ್ಲಿ ಕಂಟೆಸ್ಟಂಟ್ಸ್​ ಏನ್​ ಮಾಡಿದ್ರೆ ಫೈನಲ್​ಗೆ ಹೋಗ್ತಾರೆ? ಎಲ್ಲಾವನ್ನೂ ನೊಡುತ್ತ.. ಈ ಸೀಸನ್​ ನಾಲ್ಕು.. ಸೀಸನ್​ ಹನ್ನೊಂದನ್ನ ಚೆನ್ನಾಗಿ ಸಾಣೆ ಹಿಡಿದು.. ಅಲ್ಲಿಗೆ ಮಾತಿನ ವೆಪನ್​ ಹಿಡಿದು ಹೋಗಿದ್ರು. ಹಾಗೆ ಪ್ರಥಮ್​ ಮತ್ತು ಹನುಮಂತ ಇಬ್ರನ್ನೂ ಪಾತ್ರದೊಳಗೆ ಅಳವಡಿಸಿಕೊಂಡಿದ್ನಂತೆ.
ಇಲ್ಲಿ ಗಿಲ್ಲಿಗೆ ಹನುಮಂತ ಮತ್ತು ಪ್ರಥಮ್​ನನ್ನ​​ ಇನ್ಸ್​​ಪಿರೇಷನ್ ಆಗಿ ತಗೊಂಡಿದ್ನಾ ಅಥ್ವಾ​​ ಇಬ್ರನ್ನೂ ಕಾಪಿ ಮಾಡ್ತಿದ್ದಾನಾ ಅನ್ನೋ ಡೌಟ್​ ಬಂದಿದೆ. ಆ ಇಬ್ರ ಗೆಲುವನ್ನ ನೋಡಿದ್ದ ಗಿಲ್ಲಿ. ಇಲ್ಲಿ ಹೇಗಿರ್ಬೇಕು ಅಂತ ತಿಳಿದು ಸ್ಟ್ರಾಟರ್ಜಿ ಬಳಸಿದ್ದಾನಂತೆ. ಅದು ಸುದೀಪ್​ ಅವ್ರಿಗೆ ಅರ್ಥವಾಗಿದೆ. ಬಟ್​ ಇಲ್ಲಿ ಗಿಲ್ಲಿ ಆಡಿದ್ದೇ ಅಸಲೀ ಗೇಮ್​ ಅನ್ನೋ ರೀತಿ ಕಿಚ್ಚ ಹೇಳಿಕೊಂಡಿದ್ದಾರೆ. ಬಿಗ್​ಬಾಸ್​ನ ಗಿಲ್ಲಿ ಮಾತ್ರವೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಒಟ್ನಲ್ಲಿ ಗಿಲ್ಲಿ ಈ ವಾರವೂ ಒಳ್ಳೆ ಮಾರ್ಕ್ಸ್​​ ಪಡೆದುಕೊಂಡತಾಗಿದೆ. ಯಾಕಂದ್ರೆ ಕಾವ್ಯಳನ್ನ ಬಿಟ್ಟುಕೊಡದೆ, ಕ್ಯಾಪ್ಟನ್ಸಿಯನ್ನ ಚೆನ್ನಾಗಿ ನಿಭಾಯಿಸ್ತಲೇ ಇಡೀ ಸ್ಪರ್ಧಿಗಳನ್ನ ಗೋಳೋಯ್ಕೊಳ್ತಲೇ.. ಕೊನೆಗೆ ತನ್ನ ಸ್ಟ್ರಾಟರ್ಜಿಯಲ್ಲಿ ತಪ್ಪೇ ಇಲ್ಲ ಅಂತ ಗೂಗ್ಲಿ ಹಾರಿಸ್ತಲೇ ಗಿಲ್ಲಿ ಹೊಡಿತಿದ್ದಾನೆ. ಏನೇ ಸ್ಟ್ರಾಟರ್ಜಿ ಮಾಡಿದ್ರೂ.. ಏನೇ ಗೂಗ್ಲಿ ಹೊಡೆದ್ರೂ.. ಗೆಲುವು ಯಾರ ಪರವಾಗುತ್ತೋ.. ಕಪ್​ ಯಾರ ಪಾಲಾಗುತ್ತೋ.. ಇನ್ನೆರಡು ವಾರಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ:ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us