BCCI ಮುಂದೆ ಗಿಲ್ ‘ಪಾಲಿಸಿ ಅಸ್ತ್ರ’.. ಬಲಿಷ್ಠ ತಂಡ ಕಟ್ಟಲು ಗಿಲ್ ಹೊಸ ಪ್ರಯೋಗ..!

ಭಾರತ ಟೆಸ್ಟ್ ತಂಡವನ್ನ ಬಲಿಷ್ಟಗೊಳಿಸಲು ಕ್ಯಾಪ್ಟನ್ ಶುಭ್ಮನ್ ಗಿಲ್ ಮುಂದಾಗಿದ್ದಾರೆ. ಇದಕ್ಕಾಗಿ ಗಿಲ್, ಬಿಗ್​ಬಾಸ್​ಗಳಿಗೆ ಹೊಸ ಸಲಹೆ ನೀಡಿದ್ದಾರೆ. ಗಿಲ್ ಹೊಸ ಪಾಲಿಸಿ ಕೇಳಿದ ಬಿಸಿಸಿಐ, ಸೆಲೆಕ್ಟರ್ಸ್​ ಮತ್ತು ಟೀಮ್ ಮ್ಯಾನೇಜ್ಮೆಂಟ್​​ ಫುಲ್ ಖುಷ್ ಆಗಿದೆ.

author-image
Ganesh Kerekuli
Updated On
GillI (6)
Advertisment
  • ಭಾರತ ಟೆಸ್ಟ್​ ತಂಡಕ್ಕೆ ಶುಭ್ಮನ್​​ ಗಿಲ್ ಹೊಸ ಬಾಸ್..!
  • ಬಿಸಿಸಿಐಗೆ ಟೆಸ್ಟ್ ನಾಯಕ ಗಿಲ್ ಕೊಟ್ಟ ಸಲಹೆ ಏನು..?
  • ಗಿಲ್ ಹೊಸ ಪಾಲಿಸಿಯಿಂದ ತಂಡಕ್ಕೆ ಲಾಭ ಇದಿಯಾ..?

ಒಂದಲ್ಲ.. ಎರಡು ಭಾರಿ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್​​ವಾಶ್. ನ್ಯೂಜಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ತೀವ್ರ ಮುಖಭಂಗದ ನಂತರ ಬಿಗ್​ಬಾಸ್​​​​​ಗಳಿಗೆ, ದಿಕ್ಕೇ ತೋಚದಂತಾಗಿತ್ತು. ಆದ್ರೀಗ ಬಿಸಿಸಿಐಗೆ ಟೆಸ್ಟ್ ತಂಡದ ಯುವ ನಾಯಕ ಶುಭ್ಮನ್ ಗಿಲ್, ಹೊಸ ಸಲಹೆ ನೀಡಿದ್ದಾರೆ. ಗಿಲ್ ಸಲಹೆಯಿಂದ ಬಿಗ್​ಬಾಸ್​​ಗಳು, ಫುಲ್ ಖುಷ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಗಿಲ್ ಹೊಸ ಪಾಲಿಸಿ ಅಳವಡಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಫೆಬ್ರವರಿಯಲ್ಲಿ ಧವನ್‌ಗೆ ಎರಡನೇ ಮದುವೆ -ಗಬ್ಬರ್‌ನ ಸೆಕೆಂಡ್‌ ಇನ್ನಿಂಗ್ಸ್‌ನ ಪಾರ್ಟ್ನರ್‌ ಯಾರು?

Gill (1)

ಶುಭ್ಮನ್​​ ಗಿಲ್ ಹೊಸ ಬಾಸ್

ಟೀಮ್ ಇಂಡಿಯಾ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಶುಭ್ಮನ್ ಗಿಲ್ ರಿಯಲ್ ಬಾಸ್. ಗಿಲ್​ಗೆ ಬಿಗ್​ಬಾಸ್​​ಗಳು ಫುಲ್ ಫ್ರಿಡಂ ನೀಡಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಜೊತೆಗೂಡಿ ತಂಡವನ್ನ ಕಟ್ಟೋಕೆ, ಜವಾಬ್ದಾರಿ ನೀಡಿದ್ದಾರೆ. ಟೆಸ್ಟ್, ಏಕದಿನ ತಂಡವನ್ನ ಬಲಿಷ್ಟಗೊಳಿಸಲು ಅವಶ್ಯಕತೆ ಇರೋದನ್ನ ಒದಗಿಸಲು, ಗಿಲ್​​ಗೆ ಬಿಗ್​ಬಾಸ್​ಗಳು ಸಾಥ್ ನೀಡ್ತಿದ್ದಾರೆ. ಗಿಲ್, ಸದ್ಯ ಹೊಸ ಹೊಸ ಐಡಿಯಾಗಳೊಂದಿಗೆ ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್​​​​​ಗೆ ಸಲಹೆ ನೀಡಲು ಮುಂದಾಗಿದ್ದಾರೆ.   

ಗಿಲ್ ಕೊಟ್ಟ ಸಲಹೆ ಏನು..?

ರೋಹಿತ್ ಶರ್ಮಾ ಬಳಿಕ ಟೆಸ್ಟ್ ತಂಡದ ಸಾರಥ್ಯವಹಿಸಿಕೊಂಡಿರೋ ಶುಭ್ಮನ್ ಗಿಲ್, ದಿನೇ ದಿನೇ ಕ್ಯಾಪ್ಟನ್ ಆಗಿ ಮೆಚ್ಯುರಿಟಿ ತೋರಿಸುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಪಾಠ ಕಲಿಯುತ್ತಿದ್ದಾರೆ. ಸೋಲು, ಗೆಲುವುಗಳನ್ನ ಸಮನಾಗಿ ಸ್ವೀಕರಿಸುತ್ತಿದ್ದಾರೆ. ನಾಯಕತ್ವದ ಗುಣಗಳನ್ನ ರೂಢಿಸಿಕೊಳ್ಳುತ್ತಿದ್ದಾರೆ. ಸದ್ಯ 9 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿರುವ ಗಿಲ್, ಬಿಗ್​ಬಾಸ್​​ಗಳಿಗೆ ಬಿಗ್ ಐಡಿಯಾ ನೀಡಿದ್ದಾರೆ. ಅದೇ 15 ದಿನಗಳ ಪ್ರಿಪರೇಟ್ರಿ ಕ್ಯಾಂಪ್ ಆಯೋಜನೆ ಪ್ಲಾನ್. 

ಇದನ್ನೂ ಓದಿ: ‌ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸೀರಿಸ್‌.. ಪಂತ್‌ನ ಡ್ರಾಪ್‌ ಮಾಡಿರುವ ಸಿಕ್ರೇಟ್‌ ರಿವೀಲ್..!

Suryakumar_Gill_IndvsAus

ಗಿಲ್ ಪಾಲಿಸಿಯಿಂದ ತಂಡಕ್ಕೆ ಲಾಭ ಇದ್ಯಾ?

ಗಿಲ್ ಕೊಟ್ಟಿರೋ ಪ್ರಿಪರೇಟ್ರಿ ಕ್ಯಾಂಪ್ ಐಡಿಯಾ, ಎಕ್ಸಲೆಂಟ್. ಇನ್ನು ಪ್ರಿರಿಪರೇಟ್ರಿ ಕ್ಯಾಂಪ್​ನಿಂದ ತಂಡಕ್ಕೆ ಸಾಕಷ್ಟು ಲಾಭಗಳಿವೆ. ಕ್ಯಾಂಪ್​ನಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಜೊತೆಗೆ ಫಿಟ್ನೆಸ್​​​ಗೆ ಹೆಚ್ಚು ಆಸಕ್ತಿ ನೀಡಬಹುದು. 15 ದಿನಗಳಲ್ಲಿ ಆಟಗಾರರ ಸ್ಟ್ರೆಂಥ್ ಌಂಡ್ ವೀಕ್ನೆಸ್ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಯಾವುದೇ ಟೆಸ್ಟ್ ಸರಣಿಗೂ ಮುನ್ನ ಇಂತಹ ಕ್ಯಾಂಪ್​​ಗಳಿಂದ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಲಿವೆ. ಜೊತೆಗೆ ಟೀಮ್ ಮ್ಯಾನೇಜ್ಮೆಂಟ್​ಗೂ, ಪ್ರತಿಯೊಬ್ಬ ಆಟಗಾರರ ಬಗ್ಗೆ ಕ್ಲಾರಿಟಿ ಸಿಗಲಿದೆ.   

ಕ್ಯಾಂಪ್ ಅವಶ್ಯಕತೆ ಇದ್ಯಾ?

15 ದಿನಗಳ ಪ್ರಿಪರೇಟ್ರಿ ಕ್ಯಾಂಪ್​ನಿಂದ ಕೋಚ್​ಗಳಿಗೆ ಸ್ಟ್ರಾಟಜಿ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಪಂದ್ಯಗಳ ವೇಳೆ ಕೋಚ್​ಗಳಿಗೆ, ಯಾವುದೇ ಗೊಂದಲಗಳು ಆಗೋದಿಲ್ಲ. ಕ್ಯಾಂಪ್​ ವೇಳೆ ಚಾಲೆಂಜಿಂಗ್ ಸೆಷನ್ಸ್​ ವೇಳೆ, ಆಟಗಾರರು ಒತ್ತಡ ನಿಭಾಯಿಸೋದನ್ನ ಕಲಿಯುತ್ತಾರೆ. ಜೊತೆಗೆ ಸೆಟ್​​ಬ್ಯಾಕ್​ಗಳಿಂದ ಕಮ್​ಬ್ಯಾಕ್ ಮಾಡೋದೇಗೆ ಅನ್ನೋದನ್ನ ತಿಳಿದುಕೊಳ್ಳಲಿದ್ದಾರೆ. ಇದೆಲ್ಲದರ ಜೊತೆಗೆ ತಮ್ಮ ಟೆಕ್ನಿಕ್ ಬಗ್ಗೆ ತಿಳಿದುಕೊಳ್ಳಲು ಪ್ರಿಪರೇಟ್ರಿ ಕ್ಯಾಂಪ್ ಸಹಕಾರಿಯಾಗಲಿದೆ. ಹಾಗಾಗಿ ಯಾವುದೇ ಟೆಸ್ಟ್ ಸರಣಿಗೂ ಮುನ್ನ ಪ್ರಿಪರೇಟ್ರಿ ಕ್ಯಾಂಪ್ ಬೇಕೇ ಬೇಕು.​​​​​

ಇದನ್ನೂ ಓದಿ: ಯಾವ ಕ್ರಿಕೆಟರ್​ ಬಳಿಯೂ ಇಲ್ಲ, ಇಷ್ಟು ದುಬಾರಿ ಕಾರು.. ಅಭಿಷೇಕ್ ಶರ್ಮಾ ಕಾರುಬಾರು!

Gill

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕನಾಗಿದ್ದಾಗ ಪ್ರಿಪರೇಟ್ರಿ ಕ್ಯಾಂಪ್ ಕಾನ್ಸೆಪ್ಟ್ ಆರಂಭಿಸಿದ್ರು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಗಂಗೂಲಿ ನಾಯಕತ್ವದ ಟೀಮ್ ಇಂಡಿಯಾ, ಸಾಕಷ್ಟು ಭಾರೀ ಕ್ಯಾಂಪ್ ನಡೆಸಿತ್ತು. ಪ್ರಿಪರೇಟ್ರಿ ಕ್ಯಾಂಪ್​​ನಿಂದ ಅಂದಿನ ಟೀಮ್ ಇಂಡಿಯಾಕ್ಕೆ ಭಾರೀ ನೆರವಾಯ್ತು. ವಿದೇಶಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಗಳನ್ನ ಗೆಲ್ಲಲು ಆರಂಭಿಸಿತು. ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ನ್ಯೂಜಿಲೆಂಡ್​​​​​​ನಲ್ಲಿ ಎದುರಾಳಿಗಳಿಗೆ ಟಫ್ ಫೈಟ್ ನೀಡಲು ಆರಂಭಿಸಿದ್ದೇ ಪ್ರಿಪರೇಟ್ರಿ ಕ್ಯಾಂಪ್ ನೆರವಿನಿಂದ. ಇದನ್ನ ಯಾರೂ ಬೇಕಾದ್ರೂ ಹೇಳ್ತಾರೆ.

ಯುವ ನಾಯಕ ಶುಭ್ಮನ್ ಗಿಲ್ ಕೊಟ್ಟ ಓಲ್ಡ್ ಸ್ಕೂಲ್ ಆಫ್ ಪಾಲಿಸಿ ಪ್ರಿಪರೇಟ್ರಿ ಕ್ಯಾಂಪ್ ಐಡಿಯಾ, ಖಂಡಿತ ವರ್ಕ್​ಔಟ್ ಆಗುತ್ತೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡೋದಕ್ಕಿಂತ, ಯುದ್ಧಕ್ಕೂ ಮುನ್ನವೇ ಶಸ್ತ್ರಾಭ್ಯಾಸ ಮಾಡಿದ್ರೆ, ಎದುರಾಳಿಗಳ ವಿರುದ್ಧ ದಿಟ್ಟ ಹೋರಾಟ ನಡೆಸಬಹುದು. ರಣಾಂಗಣದಲ್ಲಿ ಎದುರಾಳಿಗಳ ವಿರುದ್ಧ ಹೀನಾಯ ಸೋಲು ಗ್ಯಾರೆಂಟಿ.  

ಇದನ್ನೂ ಓದಿ: ಕೊಹ್ಲಿ, ರೋಹಿತ್​ ನಡುವೆ ಕಳೆದುಹೋದ ಬುಮ್ರಾ.. ಬಿಸಿಸಿಐ ‘ಸೈಲೆಂಟ್​ ಅಸ್ತ್ರ’ ಗೊತ್ತೇ ಆಗಲಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada Shubman Gill preparatory camp
Advertisment