ಫೆಬ್ರವರಿಯಲ್ಲಿ ಧವನ್‌ಗೆ ಎರಡನೇ ಮದುವೆ -ಗಬ್ಬರ್‌ನ ಸೆಕೆಂಡ್‌ ಇನ್ನಿಂಗ್ಸ್‌ನ ಪಾರ್ಟ್ನರ್‌ ಯಾರು?

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗಬ್ಬರ್ ಸಿಂಗ್ ಸದ್ಯದಲ್ಲೇ ಎರಡನೇ ಬಾರಿಗೆ ಮದುವೆ ಆಗಲಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ಐರ್ಲೆಂಡ್ ಮೂಲದ ಸೋಫಿ ಶೈನ್ ಜೊತೆ ಸಪ್ತಪದಿ ತಿಳಿಯಲಿದ್ದಾರೆ.

author-image
Ganesh Kerekuli
shikhar dhawan and sophie shine
Advertisment

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗಬ್ಬರ್ ಸಿಂಗ್ ಸದ್ಯದಲ್ಲೇ ಎರಡನೇ ಬಾರಿಗೆ ಮದುವೆ ಆಗಲಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ಐರ್ಲೆಂಡ್ ಮೂಲದ ಸೋಫಿ ಶೈನ್ ಜೊತೆ ಸಪ್ತಪದಿ ತಿಳಿಯಲಿದ್ದಾರೆ. ಇಬ್ಬರೂ ಬಹಳ ಸಮಯದಿಂದ ಒಟ್ಟಿಗೆ ಇದ್ದು, ಈಗ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. 

ದುಬೈನಿಂದ ಚರ್ಚೆ ಆರಂಭ 

ಶಿಖರ್ ಧವನ್ ಮತ್ತು ಸೋಫಿ ಶೈನ್ 2025ರಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಸಮಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ. ಆದರೂ ಕ್ರೀಡಾಂಗಣದಲ್ಲಿ ಅವರ ಉಪಸ್ಥಿತಿಯು ಊಹಾಪೋಹಗಳಿಗೆ ಕಾರಣವಾ‌ಗಿತ್ತು. ಕಳೆದ ಮೇ 2025 ರಲ್ಲಿ ಜೋಡಿ Instagram ನಲ್ಲಿ ಒಟ್ಟಿಗೆ ಇರುವ ಫೋಟೋವನ್ನು ಶೇರ್‌ ಮಾಡಿತ್ತು. 

ಇದನ್ನೂ ಓದಿ: ‌ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸೀರಿಸ್‌.. ಪಂತ್‌ನ ಡ್ರಾಪ್‌ ಮಾಡಿರುವ ಸಿಕ್ರೇಟ್‌ ರಿವೀಲ್..!

shikhar dhawan and sophie shine (1)

ಸೋಫಿ ಶೈನ್ ಯಾರು?

ಸೋಫಿ ಶೈನ್ ಐರ್ಲೆಂಡ್‌ನ ಉತ್ಪನ್ನ ಸಲಹೆಗಾರರಾಗಿದ್ದಾರೆ. ಅವರು ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಓದಿದ್ದಾರೆ. ಪ್ರಸ್ತುತ ಅಬುಧಾಬಿಯಲ್ಲಿ ಕಚೇರಿಗಳನ್ನು ಹೊಂದಿರುವ ಪ್ರಮುಖ ಹಣಕಾಸು ಸೇವೆಗಳ ಕಂಪನಿಯಾದ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಎರಡನೇ ಉಪಾಧ್ಯಕ್ಷರಾಗಿದ್ದಾರೆ.

ಧವನ್ ಕೂಡ ಫೌಂಡೇಶನ್‌ ಜೊತೆ ಸಂಬಂಧ 

ಸೋಫಿ ಶೈನ್ ಪ್ರಸ್ತುತ ಶಿಖರ್ ಧವನ್ ಫೌಂಡೇಶನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಫೌಂಡೇಶ್‌ನ ಪ್ರಮುಖ ಸದಸ್ಯರಾಗಿದ್ದಾರೆ. ಈ ಫೌಂಡೇಶನ್ ಧವನ್ ಅವರ ಸ್ಪೋರ್ಟ್ಸ್‌ ಗ್ರೂಪ್‌ ಡಾ ಒನ್ ಸ್ಪೋರ್ಟ್ಸ್‌ನೊಂದಿಗೆ ಸಂಬಂಧ ಹೊಂದಿರುವ ಸಾಮಾಜಿಕ ಸಂಸ್ಥೆಯಾಗಿದೆ. ಇದು ಕ್ರೀಡೆ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತದೆ. ಐಪಿಎಲ್ 2024ರ ಸಮಯದಲ್ಲಿ, ಪಂಜಾಬ್ ಕಿಂಗ್ಸ್‌ಗಾಗಿ ಆಡುತ್ತಿದ್ದಾಗ ಸೋಫಿ, ಶಿಖರ್ ಧವನ್ ಜೊತೆ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಪ್ರೀತಿಸಿ ಮದುವೆ.. ಯುವತಿ ಕುಟುಂಬಸ್ಥರಿಂದ ನವ ಜೋಡಿ ಮೇಲೆ ಅಟ್ಯಾಕ್..!

Shikhar_Dhawan_BAT

ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ

ಮಾಧ್ಯಮ ವರದಿಗಳ ಪ್ರಕಾರ.. ಧವನ್ ಮತ್ತು ಸೋಫಿ ಶೈನ್ ಅವರ ವಿವಾಹ ಫೆಬ್ರವರಿ ಮೂರನೇ ವಾರದಲ್ಲಿ ನಡೆಯಲಿದೆ. ಈ ವಿವಾಹವು ದೆಹಲಿ-ಎನ್‌ಸಿಆರ್‌ನಲ್ಲಿ ನಡೆಯಲಿದ್ದು, ನಿಕಟ ಕುಟುಂಬ ಸದಸ್ಯರು ಮತ್ತು ಆಯ್ದ ಸ್ನೇಹಿತರು ಭಾಗಿಯಾಗಲಿದ್ದಾರೆ. 

ಮೊದಲ ಮದುವೆ ಮತ್ತು ವಿಚ್ಛೇದನ

ಧವನ್ ಅವರು ಎರಡನೇ ವಿವಾಹವಾಗಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಮೊದಲ ವಿವಾಹ ಆಯೇಷಾ ಮುಖರ್ಜಿ ಅವರೊಂದಿಗೆ ಆಗಿತ್ತು. ಇಬ್ಬರೂ 2012 ರಲ್ಲಿ ವಿವಾಹವಾದರು. ಜೋರಾವರ್ ಎಂಬ ಮಗನ ಹೊಂದಿದ್ದಾರೆ. ಹೊಂದಾಣಿಕೆ ಸಮಸ್ಯೆ ಹಿನ್ನೆಲೆಯಲ್ಲಿ ಅಕ್ಟೋಬರ್ 2023 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. 

ಇದನ್ನೂ ಓದಿ: ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸೀರಿಸ್‌.. ಪಂತ್‌ನ ಡ್ರಾಪ್‌ ಮಾಡಿರುವ ಸಿಕ್ರೇಟ್‌ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shikhar Dhawan Sophie Shine
Advertisment