/newsfirstlive-kannada/media/media_files/2026/01/06/chikkaballapura-4-2026-01-06-12-01-59.jpg)
ಚಿಕ್ಕಬಳ್ಳಾಪುರ: ಪ್ರೀತಿಸಿ ಅಂತರ್ಜಾತಿ ಮದುವೆ ಬೆನ್ನಲ್ಲೇ ನವದಂಪತಿ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿರುವ ಘಟನೆ ಶಿಡ್ಲಘಟ್ಟ ನಗರದ ಮಯೂರಾ ಸರ್ಕಲ್ ಬಳಿ ನಡೆದಿದೆ.
ಆಗಿದ್ದೇನು..?
ಚಿಕ್ಕಬಳ್ಳಾಪುರ ಮೂಲದ ಎಸ್‌ಟಿ ಸಮುದಾಯದ ಸಂದೀಪ್ 24 ಮತ್ತು ಬಲಿಜಿಗ ಸಮುದಾಯದ ಕೀರ್ತನಾ (19) ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು. ಇವರ ಪ್ರೀತಿಗೆ ಕಳೆದ ಎರಡು ದಿನದ ಮನೆ ಬಿಟ್ಟು ದೇವಸ್ಥಾನಕ್ಕೆ ಬಂದು ಮದುವೆಯಾಗಿದ್ದರು. ಚಿಂತಾಮಣಿ ತಾಲೂಕಿನ ಕೋಟಗಲ್ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು.
ಇದನ್ನೂ ಓದಿ:ಅದ್ದೂರಿಯಾಗಿ ನೆರವೇರಿದ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ರಥೋತ್ಸವ..!
ಮನೆಯಲ್ಲಿ ಮಗಳ ಕಾಣದಿರುವ ಸಂಬಂಧ ಯುವತಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಇಂದು ಪೊಲೀಸ್ ಠಾಣೆಗೆ ಬರುತ್ತಿದ್ದ ವೇಳೆ ಕಾರಿನ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಕಾರಿನ ಗಾಜು ಪುಡಿಪುಡಿಯಾಗಿದೆ.
ಪೊಲೀಸರ ಮುಂದೆ ಮಗಳನ್ನ ವಾಪಸ್ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ ಯುವತಿ ನಾನು ಯಾವುದೇ ಕಾರಣಕ್ಕೂ ತಂದೆ-ತಾಯಿ ಜೊತೆ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಇದೀಗ ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಎರಡು ಕುಟುಂಬಸ್ಥರು ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಸ್ಪಂದನಾ ಪ್ರಕಾರ ಯಾಱರು ಹೆಂಗೆ..? ಗೆಲ್ಲಿ ಬಗ್ಗೆ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us