ಅದ್ದೂರಿಯಾಗಿ ನೆರವೇರಿದ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ರಥೋತ್ಸವ..!

ಅದು ಸಾಕ್ಷಾತ್ ಶ್ರೀರಾಮನೇ ಪ್ರತಿಷ್ಟಾಪಿಸಿದ ಲಿಂಗ. ಆ ಲಿಂಗ ಇರೋ ದೇವಾಲಯದಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಬನದ ಪೌರ್ಣಮಿಯಾದ ಆ ಪುಣ್ಯ ಕ್ಷೇತ್ರದಲ್ಲಿ ಅದ್ದೂರಿ ರಥೋತ್ಸವ ನೆರವೇರಿದೆ.

author-image
Ganesh Kerekuli
Ramalingeshwar temple (3)
Advertisment

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ದೇವಾಲಯದಲ್ಲಿ ರಥೋತ್ಸವ ನಡೆದಿದೆ. ತ್ರೇತಾಯುಗದಲ್ಲಿ ಶ್ರೀರಾಮ ವನವಾಸದಲ್ಲಿದ್ದಾಗ ಇಲ್ಲಿನ ಬೆಟ್ಟದ ಮೇಲೆ ನೆಲೆಸಿದ್ದರಂತೆ. ಆ ಸಂದರ್ಬದಲ್ಲಿ ಶಿವಲಿಂಗವನ್ನ ಪ್ರತಿಷ್ಟಾಪಿಸಿದ್ದರಂತೆ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ರಾಮಲಿಂಗೇಶ್ವರ ಕ್ಷೇತ್ರ ಅಂತಲೇ ಖ್ಯಾತಿಯಾಗಿದೆ. 

Ramalingeshwar temple (2)

ರಾಮಲಿಂಗೇಶ್ವರನ ದರ್ಶನ ಪಡೆಯಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ್ರು. ಈ ವೇಳೆ ಸಚಿವ ಡಾ.ಎಂ.ಸಿ. ಸುಧಾಕರ್, ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಬಾಗಿಯಾಗಿದ್ದರು. 

ಇದನ್ನೂ ಓದಿ: ಮೆಕ್ಕೆಜೋಳ ಬೆಳೆಗಾರರಿಗೆ ಗುಡ್​ನ್ಯೂಸ್ ನೀಡಿದ ರಾಜ್ಯ ಸರ್ಕಾರ

Ramalingeshwar temple (5)

ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮದ್ಯಾಹ್ನ 1.30 ರ ಸಮಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸಿ ನಂತರ ರಥದಲ್ಲಿ ಪರಶಿವನ ಪ್ರತಿಮೆಯನ್ನ ಪ್ರತಿಷ್ಟಾಪಿಸಿ, ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ಶಿವನಾಮಸ್ಮರಣೆ ಮಾಡುತ್ತಾ ರಥವನ್ನ ಎಳೆದು ತಮ್ಮ ಹರಕೆ ತೀರಿಸಿದ್ರು. ಈ ವೇಳೆ ಹಲವಾರು ಭಕ್ತರು ಹಾಗೂ ಸಮಾಜ ಸೇವಕರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ಹಾಗೂ ಊಟದ ವ್ಯವಸ್ಥೆಯನ್ನ ಮಾಡಿದ್ರು.

ಇದನ್ನೂ ಓದಿ: ಬೆಂಗಳೂರಿಗರ ಮನಸೂರೆಗೊಳಿಸಿದ ಚಿತ್ರ ಸಂತೆ.. ಕುಂಚದಲ್ಲಿ ಅರಳಿದ ಕಲಾ ಜಗತ್ತು..! Photos

Ramalingeshwar temple (4)

ಒಟ್ಟಾರೆ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ನೆರವೇರಿದ್ದು, ರಥೊತ್ಸವನ್ನ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ನೆರೆ ರಾಜ್ಯಗಳ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ವಿಶೇಷ  ವರದಿ: ಸುರೇಶ್ ಗುಡಿಬಂಡೆ, ನ್ಯೂಸ್​ಫಸ್ಟ್ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkaballapur Chikkaballapura news
Advertisment