‌ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸೀರಿಸ್‌.. ಪಂತ್‌ನ ಡ್ರಾಪ್‌ ಮಾಡಿರುವ ಸಿಕ್ರೇಟ್‌ ರಿವೀಲ್..!

ಅಂದು ಟೀಮ್ ಇಂಡಿಯಾದ ಬಹುಬೇಡಿಕೆಯ ಆಟಗಾರನಾಗಿದ್ದ ಪಂತ್ ಇಂದು ಯಾರಿಗೂ ಬೇಡವಾಗಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ-20 ಫಾರ್ಮೆಟ್​ಗಳಲ್ಲಿ ಸ್ಥಾನಕ್ಕಾಗಿ ಪರದಾಡ್ತಿದ್ದಾರೆ. ಟಿ-20 ತಂಡಕ್ಕೆ ಅನ್​ಫಿಟ್ ಆಗಿರುವ ಪಂತ್, ದಿನೇ ದಿನೇ ಎಲ್ಲಾ ಫಾರ್ಮಟ್​ಗಳಿಂದ ಮಾಯವಾಗ್ತಿದ್ದಾರೆ. ಈ ಸ್ಥಿತಿಗೆ ಕಾರಣವೇನು?

author-image
Ganesh Kerekuli
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • ವೈಟ್​ಬಾಲ್ ಸೆಟ್​ಅಪ್​ನಿಂದ ಪಂತ್ ದೂರ..?
  • ಆ ಪ್ರಭಾವಿಗೆ ಪಂತ್ ಬ್ಯಾಟಿಂಗ್​​​ ಸ್ಟೈಲ್ ಇಷ್ಟವಿಲ್ಲ..!
  • ಟ್ರೆಡೀಷನಲ್ ಬ್ಯಾಟಿಂಗ್​​​​​​​​ ಆಡಬೇಕಿತ್ತಾ ಪಂತ್..?

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್​ ಪಂತ್​ಗೆ ಅನ್ಯಾಯ ಆಗ್ತಿದ್ಯಾ..? ಪಂತ್​ರನ್ನ ಬೇಕಂತಲೇ ಟಾರ್ಗೆಟ್ ಮಾಡಲಾಗ್ತಿದ್ಯಾ..? ಬಿಗ್​ಬಾಸ್​ಗಳ ಒಳ ರಾಜಕೀಯಕ್ಕೆ ಸಿಲುಕಿ, ಪಂತ್ ಪರದಾಡ್ತಿದ್ದಾರಾ..? ಈ ಎಲ್ಲಾ ಪ್ರಶ್ನೆಗಳು ಕ್ರಿಕೆಟ್​​ ವಲಯದಲ್ಲಿ ಭಾರೀ ಚರ್ಚೆ ಆಗ್ತಿದೆ. ಪ್ರತಿಭಾವಂತ ಕ್ರಿಕೆಟಿಗ ಇದ್ದಕ್ಕಿದ್ದಂತೆ ಸ್ಥಾನಕ್ಕಾಗಿ ಪರದಾಡ್ತಿದ್ರೆ ಎಂಥಹವರಿಗೂ ಅನುಮಾನ ಮೂಡುತ್ತೆ.

T20 ಸೆಟ್​ಅಪ್​ನಿಂದ ಪಂತ್ ದೂರವಾಗಿದ್ದು ಯಾಕೆ..?

ವರ್ಷದ ಹಿಂದೆ ರಿಷಭ್ ಪಂತ್, ಟೆಸ್ಟ್, ಒಂಡೇ ಮತ್ತು ಟಿ-20! ಈ ಮೂರೂ ಫಾರ್ಮೆಟ್​​ ಆಡುವ ಆಟಗಾರನಾಗಿದ್ರು. ಆದ್ರೆ ಈಗ ಪಂತ್, ಯಾವುದೋ ಒಂದು ಫಾರ್ಮೆಟ್ ಆಡುವ ಸ್ಥಿತಿಗೆ ತಲುಪಿದ್ದಾರೆ. ಗಾಯದಿಂದ ಕಮ್​ಬ್ಯಾಕ್ ಮಾಡಿದ ಮೇಲೆ, ಪಂತ್ ತಂಡಕ್ಕೆ ಭಾರವಾಗಿದ್ದಾರೆ. ಅದ್ರಲ್ಲೂ T20 ಕ್ರಿಕೆಟ್​​ನಲ್ಲಿ ಮೋಸ್ಟ್ ಡೇಂಜರಸ್ ಪ್ಲೇಯರ್ ಎನಿಸಿಕೊಂಡಿದ್ದ ಪಂತ್, ಟಿ-ಟ್ವೆಂಟಿ ಸೆಟ್​ಅಪ್​​​ನಿಂದ ಇದಕ್ಕಿದ್ದಂತೆ ದೂರವಾಗಿದ್ದಾರೆ. ಇದಕ್ಕೆ ಕಾರಣ ಟೀಮ್ ಮ್ಯಾನೇಜ್ಮೆಂಟ್​​ನ ಒಬ್ಬ ಪ್ರಭಾವಿ ವ್ಯಕ್ತಿ. ಹೌದು.! ಆ ಪ್ರಭಾವಿ ವ್ಯಕ್ತಿಗೆ ರಿಷಭ್ ಪಂತ್ ಬ್ಯಾಟಿಂಗ್ ಸ್ಟೈಲ್ ಇಷ್ಟವಿಲ್ಲವಂತೆ. ಹಾಗಾಗಿ ಪಂತ್ ಟಿ20 ತಂಡದಿಂದ ಹೊರ ಬಿದ್ದಿದ್ದಾರೆ. ಏಕದಿನ ತಂಡದಲ್ಲಿದ್ರೂ ಆಡೋ ಅವಕಾಶಕ್ಕಾಗಿ ಕಾಯ್ತಿದ್ದಾರೆ.​

ಇದನ್ನೂ ಓದಿ: 150 ಗ್ರಾಂ ತೂಕದ ಮೂರು ಫಾಲ್ಕನ್‌ಗಳು ಜಸ್ಟ್‌ 5 ದಿನದಲ್ಲಿ 5000 ಕಿ.ಮೀ. ದೂರ ಹಾರಿವೆ.. ಇಂಡಿಯಾ ಟು ಆಫ್ರಿಕಾ ಜರ್ನಿ ರಹಸ್ಯ..!

RISHABH_PANT (5)

ಟ್ರೆಡೀಷನಲ್ ಬ್ಯಾಟಿಂಗ್​​​​​​​​ಗೆ ಪಂತ್ ಹೆಚ್ಚು ಒತ್ತು ಕೊಡಬೇಕಿತ್ತಾ..?

ರಿಷಭ್ ಪಂತ್ ನ್ಯಾಚ್ಯುರಲ್ ಆಗಿ ಅಗ್ರೆಸಿವ್ ಪ್ಲೇಯರ್. ಎದುರಾಳಿ ಬೌಲರ್​ಗಳನ್ನ ಡಾಮಿನೇಟ್ ಮಾಡೋದು, ಪಂತ್ ಸ್ಟೈಲ್. ಇದು ಪಂತ್​ರ ಸ್ಟ್ರೆಂಥ್ ಕೂಡ ಹೌದು. ಆದ್ರೆ ಇದ್ದಕ್ಕಿದ್ದಂತೆ ಅವರ ಸ್ಟ್ರೆಂಥ್ ಅನ್ನ ಬಿಡುವಂತೆ ಡಿಮ್ಯಾಂಡ್ ಮಾಡಿದ್ರೆ ಹೇಗೆ ಹೇಳಿ..? ಟೀಮ್ ಮ್ಯಾನೇಜ್ಮೆಂಟ್ ಪ್ರಕಾರ ಪಂತ್, ಟ್ರೆಡಿಷನಲ್ ಬ್ಯಾಟಿಂಗ್ ನಡೆಸಬೇಕಂತೆ. ಅಂದ್ರೆ ಸಮಯಕ್ಕೆ ತಕ್ಕ ಆಟ..! ಜವಾಬ್ದಾರಿ ಮೆರೆಯಬೇಕು ಅನ್ನೋದು ಮ್ಯಾನೇಜ್ಮೆಂಟ್ ಡಿಮ್ಯಾಂಡ್. ಪಂತ್​ಗೆ ಆ ಆಟ ಸೂಟ್ ಆಗಲ್ಲ ಅನ್ನೋದು ಗೊತ್ತಿದ್ರೂ, ಡಿಮ್ಯಾಂಡ್ ಮಾಡೋದು ಎಷ್ಟು ಸರಿ ಹೇಳಿ..?

2025ರಲ್ಲಿ ಒಂದು ಏಕದಿನ, T20 ಪಂದ್ಯ ಆಡಲೇ ಇಲ್ಲ..!

ಕಳೆದ ವರ್ಷ ರಿಷಭ್ ಪಂದ್ಯ ಒಂದೇ ಒಂದು ವೈಟ್ ಬಾಲ್ ಕ್ರಿಕೆಟ್ ಆಡಿಲ್ಲ. ಆಗಸ್ಟ್ 2024ರಂದು ಲಂಕಾ ವಿರುದ್ಧ ಪಂತ್ ಆಡಿದ್ದೇ ಕೊನೆಯ ಏಕದಿನ ಪಂದ್ಯ. ಹಾಗೆ ಟಿ-ಟ್ವೆಂಟಿ ಪಂದ್ಯ ಸಹ ಅದೇ ವರ್ಷ ಲಂಕಾ ವಿರುದ್ಧ ಆಡಿದ್ದು. ಫಿಟ್​​​​​​​​​​​​​​​​​​ ಇದ್ರೂ ಪಂತ್​​ಗೆ ಆಡಲು ಅವಕಾಶ ಸಿಗಲಿಲ್ಲ. ಆದ್ರೆ ಪಂತ್ ಬದಲು ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಹಿಂದೆ ಕಾರ್ಯನಿರ್ವಹಿಸಿದ್ರು.

ಇದನ್ನೂ ಓದಿ: ಯಾವ ಕ್ರಿಕೆಟರ್​ ಬಳಿಯೂ ಇಲ್ಲ, ಇಷ್ಟು ದುಬಾರಿ ಕಾರು.. ಅಭಿಷೇಕ್ ಶರ್ಮಾ ಕಾರುಬಾರು!

ಇಂದು ಬಲಿಷ್ಠ ಮುಂಬೈಗೆ ಲಕ್ನೋ ಸವಾಲ್​! ಉಭಯ ತಂಡಗಳಿಗೆ ಆರಂಭಿಕ ಆಟಗಾರರದ್ದೇ ಸಮಸ್ಯೆ!

ಕಮ್​​ಬ್ಯಾಕ್ ನಂತರ 1 ODI,T20 ಆಡಿದ ಪಂತ್

ಕಳೆದೆರಡು ವರ್ಷಗಳಲ್ಲಿ ರಿಷಭ್ ಪಂತ್, ಇಂಜುರಿ ಮೇಲೆ ಇಂಜುರಿ ಆಗ್ತಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆ FOOT FRACTURE ಮಾಡಿಕೊಂಡಿದ್ದ ಪಂತ್, ನಂತರ ಕೈ ಬೆರಳಿಗೆ ಗಾಯಮಾಡಿಕೊಂಡಿದ್ರು. ಸೌತ್ ಆಫ್ರಿಕಾ ಎ ವಿರುದ್ಧ ಆಡುವಾಗ, ಹಲವು ಬಾರಿ ಸಣ್ಣಪುಟ್ಟ ಗಾಯಕ್ಕೆ ತುತ್ತಾಗಾಗಿದ್ರು. ಇದು ಬಿಟ್ರೆ ಪಂತ್​ಗೆ ಯಾವ ಮೇಜರ್ ಇಂಜುರಿ ಕೂಡ ಆಗಿರಲಿಲ್ಲ. ಫೂಟ್ ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ಮೇಲೆ ಪಂತ್, ಕಳೆದ 18 ತಿಂಗಳಿಂದ ಅವಕಾಶಕ್ಕಾಗಿ ಕಾಯ್ತಿದ್ದಾರೆ.

T20ಯಲ್ಲಿ ಪಂತ್​ಗೆ ರೋಲ್ ಏನು..? ಕ್ಲಾರಿಟಿನೇ ಇಲ್ಲ..?

ವೈಟ್​ಬಾಲ್ ಕ್ರಿಕೆಟ್​ನಲ್ಲಿ ಪಂತ್, ಫಾರ್ಮ್ ಸಮಸ್ಯೆ ಎದುರಿಸ್ತಿರೋದು ನಿಜ. ಹಾಗಂತ ಪಂತ್ ವೈಟ್​ಬಾಲ್ ಕರಿಯರ್ರೇ ಮುಗಿಸಿದ್ರೆ ಹೇಗೆ ಹೇಳಿ..? ಟಿ-ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಪಂತ್, ಕೊನೆಗೆ ನಿರಾಸೆ ಅನುಭವಿಸಿದ್ರು. T20ಯಲ್ಲಿ ಪಂತ್​ಗೆ ರೋಲ್ ಬಗ್ಗೆ ಸರಿಯಾದ ಕ್ಲಾರಿಟಿ ಇಲ್ಲ. ಹಾಗಾಗಿ ಪಂತ್​ ಟಿ-ಟ್ವಂಟಿ ವಿಶ್ವಕಪ್​ ತಂಡದಲ್ಲಿ ಫಿಟ್ ಆಗ್ಲಿಲ್ಲ.

ಪಂತ್ ಸ್ಥಿತಿ ನೋಡ್ತಿದ್ರೆ ಎಲ್ಲವೂ ವಿಕೆಟ್ ಕೀಪರ್ ಬ್ಯಾಟರ್ ವಿರುದ್ಧವಾಗಿದೆ. ಫಾರ್ಮ್, ಫಿಟ್ನೆಸ್, ಕನ್ಸಿಸ್ಟೆನ್ಸಿಗಾಗಿ ಪರದಾಡ್ತಿರುವ ಪಂತ್, ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಪಂತ್ ಟಿ-ಟ್ವೆಂಟಿ ಕರಿಯರ್​ ಕ್ಲೋಸ್ ಮಾಡಿರುವ ಟೀಮ್ ಮ್ಯಾನೇಜ್ಮೆಂಟ್, ODI ಫಾರ್ಮೆಟ್ ಮುಗಿಸೋ ಸೂಚನೆ ಕೂಡ ನೀಡಿದೆ. ಪಂತ್ ವೈಟ್​ಬಾಲ್ ಕ್ರಿಕೆಟ್ ಕರಿಯರ್ ಮುಗಿಸೋಕೆ, ತೆರೆ ಹಿಂದೆ ಪ್ಲಾನ್ ಕೂಡ ಮಾಡಲಾಗ್ತಿದೆ. ರಿಷಭ್ ಪಂತ್ ಮೋಸ್ಟ್ ಸ್ಕಿಲ್ಡ್ ಌಂಡ್ ಟ್ಯಾಲೆಂಟೆಡ್ ಕ್ರಿಕೆಟರ್. ಆದ್ರೆ ಯಾರಿಗೋ ಫೇವರ್ ಮಾಡೋದಕ್ಕೆ, ಪಂತ್​​​ಗೆ ಅನ್ಯಾಯ ಮಾಡಬಾರದು. ಪಂತ್ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ನೂರು ಭಾರಿ ಯೋಚಿಸಬೇಕು. ಯಾಕಂದ್ರೆ ಪಂತ್​ರಂತಹ ಕ್ರಿಕೆಟರ್ಸ್​, ಜನರೇಷನ್​ಗೆ ಒಬ್ಬರು. 

ಇದನ್ನೂ ಓದಿ:ಪ್ರೀತಿಸಿ ಮದುವೆ.. ಯುವತಿ ಕುಟುಂಬಸ್ಥರಿಂದ ನವ ಜೋಡಿ ಮೇಲೆ ಅಟ್ಯಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada Rishabh Pant
Advertisment